ಟೀಕೆಗಳು ಪ್ರಜಾಪ್ರಭುತ್ವದ ಸಂಕೇತವಲ್ಲವೇ? ಭಾರತಕ್ಕೆ ಬ್ರಿಟೀಷ್ ಸಂಸದೆಯ ಪ್ರಶ್ನೆ

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತದ ನೀತಿಗಳನ್ನು ಟೀಕಿಸಿದ ಬ್ರಿಟಿಷ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ನಿನ್ನೆ ವಾಪಾಸು ಕಳುಹಿಸಲಾಗಿತ್ತು. ವಿಚಾರವಾಗಿ ಒಂದು ದಿನದ ನಂತರ ಸರ್ಕಾರ ಈ ಬಗ್ಗೆ ಸಮರ್ಥನೆ ನೀಡಿದ್ದು “ಭಾರತದ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧದ ಚಟುವಟಿಕೆಗಾಗಿ ಭಾರತಕ್ಕೆ ಪ್ರಯಾಣಿಸುವ ಮೊದಲು ಅವರ ಇ-ವೀಸಾವನ್ನು ರದ್ದುಪಡಿಸಲಾಗಿದೆ”ಎಂದಿದೆ. ಅಲ್ಲದೇ ಫೆಬ್ರವರಿ 14 ರಂದು ವೀಸಾವನ್ನು ತಿರಸ್ಕರಿಸಿದ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅಬ್ರಹಾಮ್ಸ್ “ಸ್ನೇಹಿತನೊಬ್ಬ ಇನ್ನೊಬ್ಬ ಸ್ನೇಹಿತನನ್ನು ಗೌರವದಿಂದ ಟೀಕಿಸಲು ಸಾಧ್ಯವಿಲ್ಲ ಎಂಬುದು ತುಂಬಾ ನಿರಾಶಾದಾಯಕವಾಗಿದೆ. ಇಂತಹಾ ಟೀಕೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತಮ್ಮ ವೀಸಾವೂ ಈ ವರ್ಷದ ಅಕ್ಟೋಬರ್ ವರೆಗೆ ಮಾನ್ಯವಾಗಿದೆ ಎಂದು ಸಾಬೀತುಪಡಿಸಲು ಟ್ವಿಟ್ಟರ‌ನಲ್ಲಿ ಅದರ ಫೋಟೋವನ್ನು ಕೂಡಾ ಹಾಕಿದ್ದಾರೆ.

ನಾನು ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ PRO ಆಗಿದ್ದೇನೆ. ನಿಯಂತ್ರಣ ರೇಖೆಯ ಎರಡೂ ಬದಿಗಳಲ್ಲಿ ಕಾಶ್ಮೀರಿಗಳು ಸೇರಿದಂತೆ ಈ ಹಕ್ಕುಗಳನ್ನು ಪಡೆಯದ ಜನರ ಪರವಾಗಿ ನಾನು ಯಾವಾಗಲೂ ಮಾತನಾಡುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಬ್ರಹಾಮ್ಸ್ ಅವರಿಗೆ ಅಕ್ಟೋಬರ್ 7, 2019 ರಂದು ಇ-ಬಿಸಿನೆಸ್ ವೀಸಾ ನೀಡಲಾಗಿತ್ತು, ಇದು ವ್ಯವಹಾರ ಸಭೆಗಳಿಗೆ ಹಾಜರಾಗಲು 2020ರ ಅಕ್ಟೋಬರ್ 5ರವರೆಗೆ ಮಾನ್ಯವಾಗಿತ್ತು.

ಸೋಮವಾರ ಡೆಬ್ಬಿ ಅಬ್ರಹಾಮ್ಸ್ ದುಬೈನಿಂದ ವಿಮಾನದಲ್ಲಿ ಬೆಳಿಗ್ಗೆ 8.50 ರ ಸುಮಾರಿಗೆ ದೆಹಲಿಗೆ ಬಂದಾಗ, ಅವರ ವೀಸಾವನ್ನು ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ನನ್ನನ್ನು ತುಂಬಾ ಕೆಟ್ಟದಾಗಿ ಮತ್ತು ಅಪರಾಧಿಗಳ ರೀತಿ ನಡೆಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here