Homeಮುಖಪುಟಪ್ಯಾಲೆಸ್ತೀನ್‌ ನಾಗರಿಕರಿಗೆ ಗಡಿಯನ್ನು ತೆರೆಯಲು ಈಜಿಪ್ಟ್ ನಿರಾಕರಿಸುತ್ತಿರುವುದೇಕೆ?

ಪ್ಯಾಲೆಸ್ತೀನ್‌ ನಾಗರಿಕರಿಗೆ ಗಡಿಯನ್ನು ತೆರೆಯಲು ಈಜಿಪ್ಟ್ ನಿರಾಕರಿಸುತ್ತಿರುವುದೇಕೆ?

- Advertisement -
- Advertisement -

ಇಸ್ರೇಲ್‌-ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಗಾಝಾ ಪಟ್ಟಿಯಿಂದ ದಕ್ಷಿಣಕ್ಕೆ ನಾಗರಿಕರನ್ನು ಸ್ಥಳಾಂತರಿಸಲು ಬಲವಂತದ ಹಿನ್ನೆಲೆ ಸುಮಾರು 1.5 ಮಿಲಿಯನ್ ಪ್ಯಾಲೆಸ್ತೀನ್‌ ನಾಗರಿಕರು ಪ್ರಸ್ತುತ ದಕ್ಷಿಣ ಗಾಝಾ ನಗರವಾದ ರಫಾದಲ್ಲಿ ನೆಲೆಯೂರಿದ್ದಾರೆ. ಇದೀಗ ರಫಾವನ್ನು ಕೂಡ ಟಾರ್ಗೆಟ್‌ ಮಾಡಿ ಇಸ್ರೇಲ್‌ ಬಾಂಬ್‌ ದಾಳಿ ನಡೆಸುತ್ತಿದ್ದು, ಅಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಜೀವ ರಕ್ಷಣೆಗೆ ತೆರಳಲು ಇರುವ ಎಲ್ಲಾ ದಾರಿಯು ಬಂದ್ ಆಗಿದೆ.

ಮೂಲತಃ 2,50,000 ಜನಸಂಖ್ಯೆಯನ್ನು ಹೊಂದಿದ್ದ ಗಾಝಾ ಪಟ್ಟಣವು ಈಗ ಗಾಝಾದ ಸಂಪೂರ್ಣ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ನೆಲೆಯಾಗಿದೆ. ಯುಎನ್‌ನ ಉನ್ನತ ನೆರವು ಅಧಿಕಾರಿಯು ಅಲ್ಲಿನ ಪರಿಸ್ಥಿತಿ ಹೀನಾಯ ಎಂದು ಕರೆದಿದ್ದು, ಅಲ್ಲಿ ರೋಗ ಹರಡುತ್ತಿದೆ ಮತ್ತು ಕ್ಷಾಮವು ತಲೆದೋರಿದೆ ಎಂದು ಹೇಳಿದ್ದಾರೆ.

ಇಸ್ರೇಲ್ ಗಾಝಾ ಪಟ್ಟಿಯಲ್ಲಿ ಇದುವರೆಗೆ 29,000ಕ್ಕೂ ಅಧಿಕ ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡಿದೆ. ರಫಾದ ಮೇಲೆ ಇಸ್ರೇಲ್‌ನ ನಿರೀಕ್ಷಿತ ದಾಳಿಯು ನಾಗರಿಕರನ್ನು ಈಜಿಪ್ಟ್‌ನ ಗಡಿ ಸಿನಾಯ್ ಪೆನಿನ್ಸುಲಾಕ್ಕೆ  ತೆರಳುವಂತೆ ಮಾಡಬಹುದು ಎಂಬ ಆತಂಕಗಳು ಹೆಚ್ಚಿವೆ. ಸುರಕ್ಷಿತ ವಲಯ ಎಂದು ಪರಿಗಣಿಸಲ್ಪಟ್ಟಿದ್ದ ರಫಾಹ್ ಈಗ ಇಸ್ರೇಲ್‌ನ ವೈಮಾನಿಕ ದಾಳಿಗೆ ಗುರಿಯಾಗುತ್ತಿದೆ. ಹಿಂಸಾಚಾರದಿಂದ ಜೀವ ರಕ್ಷಣೆಗೆ ಪಲಾಯನ ಮಾಡಬೇಕೆನ್ನುವವರಿಗೆ ಸುರಕ್ಷಿತ ದಾರಿಯೇ ಇಲ್ಲವಾಗಿದೆ.

ಇಸ್ರೇಲ್‌ನ ಹೊರತಾಗಿ ಗಾಝಾದೊಂದಿಗೆ ಗಡಿಯನ್ನು ಹೊಂದಿರುವ ಏಕೈಕ ದೇಶವಾದ ಈಜಿಪ್ಟ್, ಇಸ್ರೇಲ್‌ನಿಂದ ಸ್ಥಳಾಂತರಿಸಲ್ಪಟ್ಟ ಪ್ಯಾಲೆಸ್ತೀನ್‌ ನಿರಾಶ್ರಿತರನ್ನು ಸ್ವೀಕರಿಸುವ ಬಗ್ಗೆ ಒತ್ತಡವನ್ನು ನಿರಾಕರಿಸಿದೆ. ಗಾಝಾದ ನಿರಾಶ್ರಿತರನ್ನು ಸ್ವೀಕರಿಸಲು ಈಜಿಪ್ಟ್‌ನ್ನು ಒತ್ತಾಯಿಸುವಂತೆ ಇಸ್ರೇಲ್‌ ಅಧಿಕಾರಿಗಳು ಅಂತರಾಷ್ಟ್ರೀಯ ಲಾಬಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಆದರೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಸಿನಾಯ್‌ಗೆ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ತೀನ್‌ ನಾಗರಿಕರ ಪ್ರವೇಶವನ್ನು ನಿರಾಕರಿಸುವಲ್ಲಿ ಅಚಲವಾಗಿದ್ದಾರೆ. ಅವರು ಅದನ್ನು “ಕೆಂಪು ಗೆರೆ” ಎಂದು ಕರೆದಿದ್ದಾರೆ. UNನ ನಿರಾಶ್ರಿತರ ಶಿಬಿರದ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ, ಈಜಿಪ್ಟ್‌ಗೆ ನಿರಾಶ್ರಿತ ಗಾಝಾದ ಜನರನ್ನು ಸ್ಥಳಾಂತರಿಸುವುದು ಈಜಿಪ್ಟ್ ಮತ್ತು ಪ್ಯಾಲೆಸ್ತೀನಿಯಾದವರಿಗೆ ವಿಪತ್ತು ಎಂದು ಕರೆದಿದ್ದಾರೆ.

ಈಜಿಪ್ಟ್, ಗಾಝಾದ ಹೊರಗೆ ಪ್ಯಾಲೆಸ್ತೀನ್‌ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಬಯಸುವುದಿಲ್ಲ. ಇಸ್ರೇಲ್‌ನ ಗುಪ್ತಚರ ಸಚಿವಾಲಯದ ಸೋರಿಕೆಯಾದ ದಾಖಲೆಯು, ಗಾಝಾದ 2.3 ಮಿಲಿಯನ್ ಜನಸಂಖ್ಯೆಯನ್ನು ಭೂಪ್ರದೇಶದಿಂದ ಮತ್ತು ಈಜಿಪ್ಟ್‌ನ ಸಿನಾಯ್ ಮರುಭೂಮಿಯ ಟೆಂಟ್ ನಗರಗಳಿಗೆ ಬಲವಂತವಾಗಿ ವರ್ಗಾಯಿಸಲು ಶಿಫಾರಸುಗಳನ್ನು ಒಳಗೊಂಡಿದೆ. ಸರ್ಕಾರದ ಮಂತ್ರಿಗಳಾದ ಬೆಜಲೆಲ್ ಸ್ಮೊಟ್ರಿಚ್ ಮತ್ತು ಇಟಮಾರ್ ಬೆನ್-ಗ್ವಿರ್ ಇಬ್ಬರೂ ಸಹ ಗಾಝಾದಿಂದ ಪ್ಯಾಲೆಸ್ತೀನಿಯನ್ನರನ್ನು ಹೊರಹಾಕುವುದನ್ನು ಬಹಿರಂಗವಾಗಿ ಪ್ರತಿಪಾದಿಸಿದ್ದಾರೆ. ಜನವರಿಯಲ್ಲಿ ಈ ಯೋಜನೆಗೆ ಕರೆ ನೀಡುವ ಇಸ್ರೇಲ್‌ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕ್ಯಾಬಿನೆಟ್‌ನ 11 ಸದಸ್ಯರು ಮತ್ತು 15 ಹೆಚ್ಚುವರಿ ಸಂಸತ್ತಿನ ಸದಸ್ಯರು ಭಾಗವಹಿಸಿದ್ದರು. ನೆತನ್ಯಾಹು ಕಳೆದ ತಿಂಗಳು ಇಸ್ರೇಲ್‌ಗೆ ಶಾಶ್ವತವಾಗಿ ಗಾಝಾವನ್ನು ಆಕ್ರಮಿಸಿಕೊಳ್ಳುವ ಉದ್ದೇಶವಿಲ್ಲ ಎಂದು ಹೇಳಿದ್ದರೂ, ಈ ಬಗೆಗೆನ ಇಸ್ರೇಲ್‌ ಬಯಕೆ ಗೌಪ್ಯವಾಗಿಲ್ಲ.

ಗಾಝಾ ಗಡಿಯಲ್ಲಿ ಈಜಿಪ್ಟ್‌ನ ವಿಶಾಲವಾದ ಕಡಿಮೆ ಜನಸಂಖ್ಯೆ ಹೊಂದಿರುವ ಸಿನೈ ಪ್ರದೇಶವಿದೆ, ಅಲ್ಲಿ ಭಾರೀ ಭದ್ರತಾ ವ್ಯವಸ್ಥೆ ಇದೆ. ಆದರೆ ಈಜಿಪ್ಟ್ ಗಾಝಾ ನಿರಾಶ್ರಿತರಿಗೆ ಗಡಿ ಪ್ರವೇಶಿಸದಂತೆ ಎಚ್ಚರಿಕೆ ನೀಡಿದೆ. ಇದು ಗಾಝಾಕ್ಕೆ ಮಾನವೀಯ ನೆರವು ನೀಡುತ್ತದೆ, ಆದರೆ ಗಾಝಾದಿಂದ ಈಜಿಪ್ಟ್‌ಗೆ ಪ್ಯಾಲೆಸ್ತೀನಿಯರ ಪಲಾಯನಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದೆ.

ಈಜಿಪ್ಟ್‌ನ ಮತ್ತೊಂದು ಪ್ರಮುಖ ಕಾಳಜಿ ಅದರ ಭದ್ರತೆಯಾಗಿದೆ. ಪ್ಯಾಲೆಸ್ತೀನಿಯನ್ನರಿಗೆ ಸಿನೈನಲ್ಲಿ ಭದ್ರತೆ ಒದಗಿಸಿದರೆ, ಈಜಿಪ್ಟ್ ಪ್ರದೇಶ ಪ್ರತಿರೋಧ ಕಾರ್ಯಾಚರಣೆಗೆ ಕಾರಣವಾಗಬಹುದು. ಇದು ಈಜಿಪ್ಟ್ ಮತ್ತು ಇಸ್ರೇಲ್‌ ನಡುವೆ ಮಿಲಿಟರಿ ಸಂಘರ್ಷಕ್ಕೆ ಕಾರಣವಾಗಬಹುದು. ನೆತನ್ಯಾಹು ಮುಂಬರುವ ವಾರಗಳಲ್ಲಿ ರಫಾದ ಮೇಲೆ ಆಕ್ರಮಣ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅದೇ ಸಮಯದಲ್ಲಿ ಈಜಿಪ್ಟ್ ತನ್ನ ಗಡಿಯನ್ನು ಬಲಪಡಿಸಲು ಮುಂದಾಗಿದೆ.

ಇದನ್ನು ಓದಿ: ಸಿಂಹಗಳ ಜೋಡಿಗೆ ಅಕ್ಬರ್-ಸೀತಾ ನಾಮಕರಣ ವಿವಾದ: ಹಿರಿಯ ಅರಣ್ಯಾಧಿಕಾರಿ ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...