Homeಕರ್ನಾಟಕಮಾರಿಕೊಳ್ಳುವ ಶಾಸಕರ ಕುರಿತು ಪಿ.ಲಂಕೇಶ್ ಏನು ಹೇಳಿದ್ದರು?

ಮಾರಿಕೊಳ್ಳುವ ಶಾಸಕರ ಕುರಿತು ಪಿ.ಲಂಕೇಶ್ ಏನು ಹೇಳಿದ್ದರು?

- Advertisement -
- Advertisement -

“ಹಣಕ್ಕೆ ತನ್ನನ್ನು ತಾನು ಮಾರಿಕೊಂಡ ಶಾಸಕ ನೈತಿಕವಾಗಿ ತನ್ನ ಜನರನ್ನು ದುಗ್ಗಾಣಿಯ ಬೆಲೆಗೆ ಇಳಿಸುತ್ತಾನೆ. ಈತ ದಲ್ಲಾಳಿಗಳ ಕೈಗೆ ಸೇರಿ ಮಾರ್ಕೆಟ್ಟಿನಲ್ಲಿ ಸರಕಿನಂತೆ ಇಡಲ್ಪಟ್ಟಾಗಲೆ ಒಂದು ನೈಸರ್ಗಿಕ ಅಂಶವನ್ನು ವಿಕೃತಗೊಳಿಸಿರುತ್ತಾನೆ. ಮಾರಲಾಗದ ಹಲವು ವಸ್ತುಗಳಲ್ಲಿ ನಾಯಕತ್ವ ಒಂದು. ಹೆತ್ತ ತಾಯಿಯನ್ನು, ಆತ್ಮಗೌರವವನ್ನು, ಪ್ರೇಮ-ವಿಶ್ವಾಸವನ್ನು, ಕಾವ್ಯಶಕ್ತಿಯನ್ನು, ಮುಂಗಾರು ಹಿಂಗಾರುಗಳನ್ನು, ಪ್ರತಿಭೆಯನ್ನು ಮಾರಲಾಗುವುದಿಲ್ಲ, ಕೊಳ್ಳಲಾಗುವುದಿಲ್ಲ. ಹಾಗೆಯೇ ನಾಯಕತ್ವವನ್ನೂ ಕೂಡ. ಜನರು ನಂಬಿ ಪ್ರೀತಿ ತೋರಿ ಕೋಟ್ಯಾಂತರ ಹಣದ ಜವಾಬ್ದಾರಿಯನ್ನು ನೀಡಿ ನಾಯಕನನ್ನು ವಿಧಾನಸೌಧಕ್ಕೆ ಕಳಿಸಿರುತ್ತಾರೆ; ಕೋಟ್ಯಾಂತರ ಹಣದ ಹಿಂದಿರುವ ತಮ್ಮ ಆತ್ಮಗೌರವ, ಘನತೆ, ನೆಮ್ಮದಿಯ ಹೊಣೆಗಾರನನ್ನಾಗಿ ಆತನನ್ನು ಮಾಡಿರುತ್ತಾರೆ. ಅವರು ಈತನ ರಕ್ಷಣೆಗಾಗಿ, ನೆಮ್ಮದಿಗಾಗಿ ಹಣ ಮತ್ತು ವಿಶ್ವಾಸ ಎರಡನ್ನೂ ನೀಡಿರುತ್ತಾರೆ. ಶಾಸಕ ತನ್ನನ್ನು ತಾನು ಮಾರಾಟಕ್ಕಿಟ್ಟಾಗ ಜನರನ್ನು ಹರಾಜಿಗೆ ಹಾಕತೊಡಗುತ್ತಾನೆ.

ಇದೊಂದು ಸರಳವಾದ ಸತ್ಯ. ರಾಜಕೀಯ ನಾಯಕತ್ವವೆನ್ನುವುದು ಉದ್ಯಮವಲ್ಲ, ವ್ಯಾಪಾರವಲ್ಲ, ಕೈಗಾರಿಕೆಯಲ್ಲ. ಅದು ಒಂದು ಕಡೆ ಜನರ ಬೆವರು ನೀಡಿದ ಹಣದಿಂದ ರೂಪುಗೊಂಡಿದ್ದರೆ, ಇನ್ನೊಂದು ಕಡೆ ಅಪ್ಪಟ ನೈತಿಕ ಮುಖ ಪಡೆದಿರುತ್ತದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ದೊರೆಯದ ಪ್ರೀತಿ, ವಿಶ್ವಾಸ ಪಡೆದಿರುತ್ತದೆ. ಇದನ್ನು ಮರೆಯುವ ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಹೆತ್ತವಳನ್ನು ಮಾರುವ ಸನ್ನಾಹದಲ್ಲಿರುತ್ತಾನೆ.”

-ಪಿ.ಲಂಕೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...