ದೇಶವನ್ನೇ ಬೆಚ್ಚಿಬೀಳಿಸಿದ ಕೇರಳದ ಸರಣಿ ಹತ್ಯಾಕಾಂಡ ಪ್ರಕರಣ: ತನಿಖೆ ವೇಳೆ ಬಯಲಾಯ್ತು ಸತ್ಯ..!

ಕೇರಳದಲ್ಲಿ ನಡೆದಿರುವ ಸರಣಿ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿರುವ ಭೀಕರ ಘಟನೆ ಕಳೆದೆರಡು ದಿನಗಳಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆರು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ 47 ವರ್ಷದ ಜೋಲ್ಲಿಯಮ್ಮಾ ಜೋಸೆಫ್‍ರಿಂದ, ಕೇರಳದ ವಿವಿಧ ಭಾಗಗಳಲ್ಲಿ ನಡೆದ ಹತ್ಯೆ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡರು. 14 ವರ್ಷಗಳಲ್ಲಿ ಜೋಲ್ಲಿಯಮ್ಮಾ ಕೊಲೆಗೈದಿದ್ದಾರೆ.

ನೂರಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಜೋಲ್ಲಿಯಮ್ಮಾಳನ್ನು ಹಲವು ಪ್ರದೇಶಗಳಿಗೆ ಕರೆದೊಯ್ದು, ತನಿಖೆ ನಡೆಸಲಾಯ್ತು. ಈ ವೇಳೆ ಆರೋಪಿ ಜೋಲ್ಲಿಯಮ್ಮಳನ್ನು ನೋಡಲು ಜನರು ಮುಗಿಬಿದ್ದಿದ್ದರು. ಕೊಲೆಗಾಗಿ ಆರೋಪಿ ರಾಜ್ಯದ ಬಹುತೇಕ ಭಾಗಗಳಲ್ಲಿ ತಿರುಗಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಳ್ಳೆಯ ಮನೆತನಕ್ಕೆ ಸೇರಿರುವ ಜೋಲ್ಲಿಯಮ್ಮಾ ಕೆಟ್ಟದ್ದಾಗಿ ನಡೆದುಕೊಂಡಿರಲಿಲ್ಲ. ಅವಳೊಳಗೆ ಸರಣಿ ಹತ್ಯೆಗೈಯುವಂಥ ಕ್ರೂರತೆ ಇದೆ ಎಂಬುದು ಗೊತ್ತಾಗಲಿಲ್ಲ ಎಂದು ಜೋಲ್ಲಿಯಮ್ಮಾ ಪರಿಚಿತರು ತಿಳಿಸಿದ್ದಾರೆ. ಜೋಲ್ಲಿಯಮ್ಮಾ ತನ್ನ ಮಾಜಿ ಪತಿಯನ್ನು ಆಹಾರದಲ್ಲಿ ಸೈನೈಡ್ ವಿಷ ಹಾಕಿ ಕೊಲೆ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಲ್ಲಿಯಮ್ಮಾ, ಕೋಯಿಕ್ಕೋಡ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಎಲ್ಲರ ಬಳಿ ಹೇಳಿಕೊಂಡಿದ್ದಾರೆ. ದಿನನಿತ್ಯ ಕಾರು ತೆಗೆದುಕೊಂಡು ಹೊರಗೆ ಹೋಗುತ್ತಿದ್ದರು. ಜೋಲ್ಲಿಯಮ್ಮಾ ಬಳಿ ಪದವಿ ಪಡೆದ ನಕಲಿ ಪ್ರಮಾಣಪತ್ರ ಮತ್ತು ಎನ್‍ಐಟಿ ಕಾರ್ಡ್ ಇತ್ತು. ನಿತ್ಯವೂ ಚರ್ಚ್‍ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಅಲ್ಲದೇ ಹಣ ಮತ್ತು ಆಸ್ತಿಗಾಗಿ ಸರಣಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಜೋಲ್ಲಿಯಮ್ಮಳಿಗೆ ಸಹಾಯ ಮಾಡಿದ ಇನ್ನಿಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ. ತನ್ನ ಮಾಜಿ ಪತಿ ರಾಯ್ ಥಾಮಸ್‍ನನ್ನು ಕೊಲೆಗೈದಿರುವ ಆರೋಪದ ಮೇಲೆ ಜೋಲ್ಲಿಯಮ್ಮಳನ್ನು ಬಂಧಿಸಲಾಗಿದೆ. ಇನ್ನುಳಿದಂತೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here