Homeಮುಖಪುಟಭಾರತದಾದ್ಯಂತ 44% ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ!: ಎಡಿಆರ್ ವರದಿ

ಭಾರತದಾದ್ಯಂತ 44% ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ!: ಎಡಿಆರ್ ವರದಿ

- Advertisement -
- Advertisement -

ದೇಶದಾದ್ಯಂತ ರಾಜ್ಯ ವಿಧಾನಸಭೆಗಳ 4,001 ಶಾಸಕರಲ್ಲಿ 1,777 ಅಥವಾ 44%, ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದನ್ನು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಶನಿವಾರ ವರದಿಯಲ್ಲಿ ತಿಳಿಸಿದೆ. ‘

ಬಿಜೆಪಿಯ 479 (ಒಟ್ಟು ಶಾಸಕರ ಪೈಕಿ 35%), ಕಾಂಗ್ರೆಸ್ 334 (46%) ಮತ್ತು ದ್ರಾವಿಡ ಮುನ್ನೇತ್ರ ಕಳಗಂ 99 (76%) ಶಾಸಕರು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ಬಿಜೆಪಿಯು 337 (ಒಟ್ಟು ಶಾಸಕರಲ್ಲಿ 25%) ಅತಿ ಹೆಚ್ಚು ಶಾಸಕರನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಕಾಂಗ್ರೆಸ್ 194 (27%) ಮತ್ತು ತೃಣಮೂಲ ಕಾಂಗ್ರೆಸ್ 77 (34%) ಎಂದು ಹೇಳಲಾಗಿದೆ.

ಎಡಿಆರ್ ಗಂಭೀರ ಅಪರಾಧಗಳನ್ನು ಜಾಮೀನು ರಹಿತ ಅಪರಾಧಗಳೆಂದು ವ್ಯಾಖ್ಯಾನಿಸುತ್ತದೆ, ಅದು ಗರಿಷ್ಠ ಐದು ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ನೀಡುತ್ತದೆ. ಇವುಗಳು ಹಲ್ಲೆ, ಕೊಲೆ, ಅಪಹರಣ ಮತ್ತು ಅತ್ಯಾಚಾರ, ಹಾಗೆಯೇ ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಅಪರಾಧಗಳಾಗಿವೆ.

ಉತ್ತರ ಪ್ರದೇಶವು 2022ರಲ್ಲಿ 202(ಒಟ್ಟು ಶಾಸಕರ ಒಟ್ಟು 50%)ಕ್ಕೂ ಹೆಚ್ಚಿನ ಶಾಸಕರು ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರು. ನಂತರದ ಸ್ಥಾನದಲ್ಲಿ 2019ರಲ್ಲಿ ಮಹಾರಾಷ್ಟ್ರ 175 (62%) ಮತ್ತು 2020 ರಲ್ಲಿ ಬಿಹಾರ 161 (67%) ಶಾಸಕರು ಕ್ರಿಮಿನಲ್ ಮೊಕದ್ದಮೆಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.

ಸಂಪತ್ತಿನ ವಿಷಯದಲ್ಲಿ, 1,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡವರಲ್ಲಿ ಕಾಮಗ್ರೆಸ್‌ನಿಂದ ಮೂವರು ಶಾಸಕರಿದ್ದಾರೆ. ಡಿ.ಕೆ.ಶಿವಕುಮಾರ್, ಸ್ವತಂತ್ರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ, ಮತ್ತೆ ಪ್ರಿಯಾಕೃಷ್ಣ.

ಅತ್ಯಂತ ಕಡಿಮೆ ಆಸ್ತಿ ಘೋಷಿಸಿಕೊಂಡವರು: ಬಿಜೆಪಿಯ ನಿರ್ಮಲ್ ಕುಮಾರ್ ಧಾರಾ ಅವರು 1,700 ರೂ. ಘೋಷಿತ ಆಸ್ತಿ ಹೊಂದಿದ್ದಾರೆ. ಆನಂತರದಲ್ಲಿ ಸ್ವತಂತ್ರ ಅಭ್ಯರ್ಥಿ ಮಕರಂದ ಮುದುಲಿ 15,000 ರೂ. ಮತ್ತು ಆಮ್ ಆದ್ಮಿ ಪಕ್ಷದ ನರೀಂದರ್ ಪಾಲ್ ಸಿಂಗ್ ಸಾವ್ನಾ 18,370 ರೂ. ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಾನಹಾನಿ ಪ್ರಕರಣ: ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿದ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...