Homeಅಂಕಣಗಳುಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

ಸಹಬಾಳ್ವೆ-ಸಾಮರಸ್ಯ; ಸ್ಪಷ್ಟತೆಯ ಹಾದಿಯಲ್ಲಿ ಸಂಕಷ್ಟದ ಕಲ್ಲುಮುಳ್ಳುಗಳು

- Advertisement -
- Advertisement -

ಉಡುಪಿಯ ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶಕ್ಕೆ ರಂಗ ಸಜ್ಜಾಗಿದೆ. ಸಹಪಂಕ್ತಿ ಭೋಜನವನ್ನು ಇನ್ನೂ ಮೈಗೂಡಿಸಿಕೊಳ್ಳದ, ಆದರೆ ದೇಶದ ರಾಜಕೀಯದಲ್ಲಿ ಅಧಿಕಾರಯುತವಾದ ಸ್ಥಾನ ಹೊಂದಿರುವ ಮಠ ನೆಲೆಸಿರುವ, ಮಡಿಮೈಲಿಗೆಗಳನ್ನು, ತಾರತಮ್ಯವನ್ನು ಸಿದ್ಧಾಂತವನ್ನಾಗಿಸಿ-ತತ್ವಶಾಸ್ತ್ರವನ್ನಾಗಿಸಿ ದೊಡ್ಡಮಟ್ಟದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸೆಕ್ಟ್ ಒಂದು ಪ್ರಭಾವಿಯಾಗಿರುವ, ರಾಜ್ಯದಲ್ಲಿ ಕೋಮು ವಿಷಮತೆಯ ಪ್ರಯೋಗಶಾಲೆಯಾಗಿರುವ ನೆಲದಿಂದ ಇಂತಹ ಸೌಹಾರ್ದತೆ ಸಾರುವ ಸಮಾವೇಶ ಈಗ ಮತ್ತೊಮ್ಮೆ ಚಾಲನೆ ಪಡೆದುಕೊಳ್ಳುತ್ತಿದೆ. ಈಗಿನ ಬಹುಸಂಖ್ಯಾತವಾದದಲ್ಲಿ ಮೂಲೆಗುಂಪಾಗುವ-ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿರುವ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಮತಧರ್ಮಗಳ ಕೆಲವು ವರ್ಗಗಳಲ್ಲಿ ಕೂಡ ಅವರವರ ಮತಧರ್ಮದ ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸುವ ವ್ಯಕ್ತಿಗಳು-ಗುಂಪುಗಳು ಇಲ್ಲವೆಂದಲ್ಲ. ಆದರೆ, ಸಮಾನತೆಯ ತಳಹದಿಯಲ್ಲಿ ಹೊಂದಾಣಿಕೆ-ಕೂಡುಬಾಳ್ವೆಯೆಡೆಗೆ ಇಲ್ಲಿಯವರೆಗೂ ಸಾಧಿಸಲು ಸಾಧ್ಯವಾಗಿದ್ದ ಚಲನೆಯನ್ನು ಇಂದು ನೆಲೆಸಿರುವ ದ್ವೇಷದ ರಾಜಕೀಯ ವಾತಾವರಣ ಮಣ್ಣುಮುಕ್ಕಿಸಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಹೊರಟಿರುವಾಗ, ಈ ಸಾಮರಸ್ಯ-ಸಹಬಾಳ್ವೆಯ ಪರಿಕಲ್ಪನೆಗಳಿಗೆ ಸಂದರ್ಭಾನುಸಾರ ವಿಶಾಲ ಅರ್ಥಗಳು ದೊರಕುವುದು ಸಹಜ.

ಸದರಿ ಸಮಾವೇಶದ ಬಗ್ಗೆ ಕೆಲವರು ಎತ್ತಿರುವ ಪ್ರಾಮಾಣಿಕ ಮತ್ತು ಕಾಳಜಿಯ ಪ್ರಶ್ನೆಗಳಿಗೆ ಮತ್ತು ಕುಹಕದ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳುವುದರ ಮೂಲಕ ನಮ್ಮ ಗುರಿಯನ್ನು ಹೆಚ್ಚು ಸ್ಪಷ್ಟತೆಯಿಂದ ತಲುಪಲು ಪ್ರಯತ್ನಿಸಬಹುದೇನೋ! ಸಾಮರಸ್ಯದ ಪರಿಕಲ್ಪನೆಯನ್ನೇ ತೆಗೆದುಕೊಂಡರೆ, ಅದನ್ನು ಹಲವು ಸಂದರ್ಭಗಳಲ್ಲಿ ಸಮಾನತೆಯ ವಿರುದ್ಧವಾಗಿ ಪ್ರತಿಪಾದಿಸಿರುವುದನ್ನು ನಾವು ನೋಡಬಹುದು. ಆರ್‌ಎಸ್‌ಎಸ್‌ನ ಸಂಸ್ಥಾಪಕ ಗೋಲ್ವಾಲ್ಕರ್ ಹೇಳುವ ಮಾತು ಹೀಗಿದೆ: “ನಮ್ಮ ಧರ್ಮ ಕಮ್ಯುನಿಸ್ಟರು ಹೇಳುವ ಸಮಾನತ್ವ (ಇಕ್ವಾಲಿಟಿ) ಅಲ್ಲ, ಸಾಮರಸ್ಯ (ಹಾರ್ಮೊನಿ). ಪ್ರತಿಯೊಬ್ಬನೂ ತನ್ನ ಸ್ವಧರ್ಮವನ್ನು (ಅದು ಬಾಂಡಲಿ ಹೊರುವುದಾಗಲೂ, ಕಾರಿನಲ್ಲಿ ಕುಳಿತು ತಿರುಗುವುದಾಗಲೀ) ನಿರ್ವಹಿಸುತ್ತಾ ಹೋದರೆ ಎಲ್ಲವೂ ಪ್ರಶಾಂತವಾಗಿ ಸಾಮರಸ್ಯದಿಂದ ಇರುತ್ತದೆ”. ಹೀಗೆ ಸಾಮರಸ್ಯದ ಕಲ್ಪನೆಯನ್ನು ಈ ನೆಲದ ಮುಖ್ಯ ಗುಣವಾಗಿದ್ದ ತಾರತಮ್ಯವನ್ನು ಸಮರ್ಥಿಸಿಕೊಳ್ಳಲು ಬಳಸಲಾಗಿತ್ತು. ಇಂತಹ ಕೃತಕ ಸಾಮರಸ್ಯವನ್ನು ಇಂದಿಗೂ ಪ್ರತಿಪಾದಿಸುವ ಸಂಘ ಪರಿವಾರದ ಸಿದ್ಧಾಂತಿಗಳಿಗೆ ಬರವೇನಿಲ್ಲ. ಆದರೆ ಸದರಿ ಸಮಾವೇಶ ಸಮಾನತೆಯನ್ನು ಪ್ರತಿಪಾದಿಸುವ, ಜಾತಿ-ಧರ್ಮ ಪ್ರೇರಿತ ತಾರತಮ್ಯವನ್ನು ಹೋಗಲಾಡಿಸುವ ಇರಾದೆ ಹೊಂದಿರುವ ಸಂವಿಧಾನವನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಕನಿಷ್ಠ ಅಂತಹ ನಂಬಿಕೆಯುಳ್ಳ ಮುಖಂಡರು ಈ ಸಮಾವೇಶದ ಅಂತರಂಗವಾಗಿದ್ದಾರೆ. ಆ ನಿಟ್ಟಿನಲ್ಲಿ ಬಾಹ್ಯ ಪ್ರಾತಿನಿಧ್ಯಕ್ಕೂ ಸಮಾನತೆಯ ಮೂಲಕ ಸಾಮರಸ್ಯ ಕಂಡುಕೊಳ್ಳುವ ಹಾದಿ ಹಿಡಿದಿರುವವರನ್ನು ಒಳಗೊಳ್ಳಲು ಸಮಾವೇಶ ಶ್ರಮಿಸುತ್ತಿದೆ. ಯಾರ ಬಗ್ಗೆ ಅಪಸ್ವರ ಬಂದಿದೆಯೋ ಅಂತಹವರ ಬಗ್ಗೆ ಮರುಚಿಂತನೆ ನಡೆಸುವುದಾಗಿ ಕೂಡ ಸಂಘಟಕರು ವಿನಮ್ರವಾಗಿ ಹೇಳಿದ್ದಾರೆ.

ಇದೇ ನೆಲೆಯಲ್ಲಿ ಏಳುವ ಮತ್ತೊಂದು ಪ್ರಶ್ನೆ, ಹಲವು ಧರ್ಮಗುರುಗಳದ್ದು. ಈ ದೇಶದ ಪ್ರತಿಯೊಬ್ಬ ನಿವಾಸಿಗೂ ತನ್ನ ಇಚ್ಛೆಯ ಧರ್ಮವನ್ನು ಅನುಸರಿಸುವುದಕ್ಕೆ, ಪ್ರಸರಿಸುವುದಕ್ಕೆ ನಮ್ಮ ಸಂವಿಧಾನ ಅವಕಾಶವನ್ನಂತೂ ನೀಡಿದೆ. ಈ ಸಮಯದಲ್ಲಿ ವಿವಿಧ ಜಾತಿ ಮತಗಳಿಗೆ ಸೇರಿದ ಧರ್ಮಗುರುಗಳ ಪಾತ್ರವೇನು? ಎಷ್ಟೋ ಜಾತಿ-ಧರ್ಮಗುರುಗಳು ವೇದಿಕೆಗೆ ತಕ್ಕಂತೆ ಮಾತನಾಡುವವರು. ಬಾಬ್ರಿಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ಕಟ್ಟಲೇಬೆಕೆಂದು ಕರೆನೀಡುವ, ಮತ್ತೊಂದು ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ರಂಗುರಂಗಾಗಿ ಬಣ್ಣಿಸುವ ಸ್ವಾಮಿಗಳು ಹಲವರು ಇದ್ದಾರೆ. ಸಾಮಾನ್ಯವಾಗಿ ಯಾವುದೇ ಜಾತಿ ಮತಗಳ ಧರ್ಮಗುರುಗಳು ಯಥಾಸ್ಥಿತಿಗೆ ಪುಷ್ಠಿ ನೀಡುವವರು. ಜಾತಿ-ಧರ್ಮ ಪಾರಮ್ಯವನ್ನು ಮೆರೆಯುವವರು. ಪ್ರಗತಿಯನ್ನು ತುಸು ಅನುಸರಿಸುವವರು ಕೆಲವರು ಇದ್ದಾರಾದರೂ, ಅವರ ತರಬೇತಿಯ ಕಾರಣಕ್ಕೆ, ತಮ್ಮ ಪರಂಪರೆಯನ್ನು ಸುಲಭವಾಗಿ ತ್ಯಜಿಸಲಾಗದ ಅವರ ಕೆಲಸದ ಸ್ವಭಾವದ ಕಾರಣಕ್ಕೆ ಅವರು ಎಲ್ಲ ಜನರ ಒಳಿತಿನ ಕಾಳಜಿಗಾಗಿ ದುಡಿಯಲಾರರು; ಪ್ರತಿ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಇಂಟಲೆಕ್ಚುಯಲ್ ಪಾತ್ರವನ್ನು ಅವರು ವಹಿಸಿರುವುದು ವಿರಳಾತಿ ವಿರಳ. ಆದರೂ ಜನಪ್ರಿಯ ವೇದಿಕೆಗಳನ್ನು ಸೃಷ್ಟಿಸುವಾಗ, ಹಲವು ರೀತಿಯಲ್ಲಿ ಜನರನ್ನು ಪ್ರಭಾವಿಸಬಲ್ಲ ಜನಪ್ರಿಯ ವ್ಯಕ್ತಿಗಳನ್ನು ಕರೆತರುವುದೂ ಮುಖ್ಯವಾದೀತು. ಆ ಮುಖಾಂತರ ಸಹಬಾಳ್ವೆಯ ಪ್ರಾಥಮಿಕ ಪಾಠಗಳನ್ನು ಈ ಕರಾಳ ದಿನಗಳಲ್ಲಿ ಮತ್ತೆಮತ್ತೆ ನೆನಪಿಸುವ ಕೆಲಸಕ್ಕೆ ಸಮಾವೇಶ ಮುಂದಾಗಬಹುದು.

ಇಂದು ಯಾವುದೇ ಸುಳ್ಳು ಸಮರ್ಥನೆಗಳೂ ಬೇಕಾಗದೆ, ಸಮಾಜದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸಲು ಸಾಧ್ಯವಾಗುತ್ತಿರುವಂತಹ ಸನ್ನಿವೇಶದಲ್ಲಿ, ಎಲ್ಲ ಆಯಾಮಗಳಲ್ಲಿ ’ಪರ್ಫೆಕ್ಟ್’ ಅಲ್ಲದೆ ಇರಬಹುದಾದರೂ ಜನಪ್ರಿಯ ಸಂಸ್ಕೃತಿ ಮಾದರಿಯ ಚಿಂತನೆಗಳನ್ನೂ ಹರಿದುಬಿಡಬೇಕಾದ ತುರ್ತಿನಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ಪಾರ್ಕ್‌ಗಳಾಗಲೀ, ಸಿನಿಮಾ ಮಂದಿರಗಳಾಗಲೀ, ಬೀಚ್ ಇನ್ನಿತರ ಸಾರ್ವಜನಿಕ ಪ್ರದೇಶಗಳು ಸೆಕ್ಯುಲರ್ ಆದ ಚಹರೆಯನ್ನು ಹೊಂದಿವೆ ಎನ್ನುವ ಮಾತುಗಳನ್ನು ಪದೇಪದೆ ನೆನಪಿಸಬೇಕಾಗುತ್ತದೆ. ಊರಹಬ್ಬಗಳು ಇಂದಿಗೂ ಕಟ್ಟಕಡೆಯ ದಮನಿತನನ್ನು ಒಳಗೊಳ್ಳದೆ ಹೋಗಿರುವ, ದೇವಸ್ಥಾನ ಪ್ರವೇಶಕ್ಕೆ ಇನ್ನೂ ಮುಕ್ತ ಅವಕಾಶ ನೀಡದಿರುವ ನೀಚ ತರತಮವನ್ನು ಮರೆಯದೆಯೂ, ಅಂತಹ ಹಬ್ಬಗಳಲ್ಲಿ ಹಲವು ಕೋಮುಗಳು ಸ್ವಲ್ಪಮಟ್ಟಿಗಾದರೂ ತರತಮತೆಯನ್ನು ತಗ್ಗಿಸಿಕೊಂಡು ಕೂಡಿ ಸಂಭ್ರಮಿಸುವ ಸಂಗತಿಯನ್ನು ಗುರುತಿಸಬೇಕಾಗಿದೆ ಅಲ್ಲವೇ? ಅಲ್ಲಿಂದ ಕನಿಷ್ಠ ಪಕ್ಷ ಇನ್ನೂ ಹಿಂದಕ್ಕೆ ಚಲಿಸದಂತೆ, ಇನ್ನಷ್ಟು ಪ್ರಗತಿಯತ್ತ ದಾಪುಗಾಲು ಇರಿಸಲು ಅನುವಾಗುವಂತೆ ಕೆಲಸಗಳಾಗಬೇಕಿವೆ.

ಇದೇ ಹಿನ್ನೆಲೆಯಲ್ಲಿ ಉಡುಪಿಯ ಸಮಾವೇಶವನ್ನೂ ಕಾಣಬಹುದೇ? ವೈಚಾರಿಕತೆಯಿಂದ ಜೀವನ ದೃಷ್ಟಿಯನ್ನು ಕಟ್ಟಿಕೊಂಡವನೊಬ್ಬನಿಗೆ ಹತ್ತಾರು ಸ್ವಾಮೀಜಿಗಳ ಉಪಸ್ಥಿತಿ ಕಸಿವಿಸಿಯನ್ನುಂಟುಮಾಡಬಲ್ಲದು. ಇಂತಹ ಸಾಮರಸ್ಯ ತೀವ್ರ ಮೇಲ್ಮಟ್ಟದ್ದು ಎಂಬ ಕಳವಳ ಉಂಟಾಗಬಹುದು. ಆದರೆ ಇಂತಹ ಸಮ್ಮೇಳನಗಳು ಕೂಡ ಜನಸಾಮಾನ್ಯರಲ್ಲಿ ಜನಪ್ರಿಯ ಮಟ್ಟದಲ್ಲಿ ಭರವಸೆ ತುಂಬಬಲ್ಲವು (ಇಂದಿನ ಮತೀಯ ಧ್ರುವೀಕರಣದಲ್ಲಿ ಶೋಷಣೆಗೆ ಒಳಗಾಗುತ್ತಿರುವವರಿಗೆ) ಮತ್ತು ವಿವೇಕವನ್ನೂ (ದ್ವೇಷ ಸಿದ್ಧಾಂತಕ್ಕೆ ಮರುಳಾಗುತ್ತಿರುವವರಿಗೆ). ಸಮಾಜದಲ್ಲಿ ಒಟ್ಟಾರೆಯಾಗಿ ಒಳಿತಿನ ಚಲನೆಯ ಕಡೆಗೆ ಒಲವಿರುವವರು ಎತ್ತುವ ಆಕ್ಷೇಪಗಳ ಜೊತೆಗೇ, ಅವುಗಳನ್ನೂ ಸಾಧ್ಯವಾದಷ್ಟು ಅಡ್ರೆಸ್ ಮಾಡುವುದರ ಜೊತೆಗೆ, ಈ ಸಹಬಾಳ್ವೆ ಸಮಾವೇಶ ಯಾವ ಗುರಿಯನ್ನು ಇಟ್ಟುಕೊಂಡಿದೆಯೋ ಅದನ್ನು ಸಾಧಿಸಬೇಕಿದೆ. ಆ ಗುರಿ, ಆಳುವ ಪ್ರಭುತ್ವ ಮತ್ತು ಅದರ ಸೈದ್ಧಾಂತಿಕ ಜತೆಗಾರರು ಸೃಷ್ಟಿಸುವ ಒಡಕಿಗೆ, ಧ್ರುವೀಕರಣಕ್ಕೆ ಇಲ್ಲಿನ ಸಾಮಾನ್ಯ ಜನ ಸಮ್ಮತಿಸುವುದಿಲ್ಲವೆಂದು ತೋರಿಸುವುದು. ಅವರ ಗುರಿಯಾಗಿರುವ ಅಲ್ಪಸಂಖ್ಯಾತ ಮುಸ್ಲಿಂ ಮತ್ತು ಇತರ ಸಮುದಾಯಗಳ ಜೊತೆಗೆ ನಾವಿದ್ದೇವೆ ಎಂಬುದನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಮತ್ತು ಕೃತಕವಾಗಿ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಲಾಗುತ್ತಿರುವ ಈ ಕೋಮುಗಳ ನಡುವೆ ಒಡನಾಟ, ಪರಸ್ಪರ ಬಳಕೆ ಮುಂದಿನ ದಿನಗಳಲ್ಲಿ ಹೆಚ್ಚಾಗುವಂತೆ ಮಾಡಲು ಕಾರ್ಯಪ್ರವೃತ್ತರಾಗುವುದು. ಇದಕ್ಕಾಗಿ ಎಲ್ಲರ ಒಳಿತಿಗೆ ತುಡಿಯುವ ನಾಡಿನ ಪ್ರಜ್ಞಾವಂತರೆಲ್ಲರೂ ಕೈಜೋಡಿಸಿದಲ್ಲಿ ಕಷ್ಟವಾಗಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...