Homeಅಂಕಣಗಳುಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

ಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

- Advertisement -
- Advertisement -

ಗೋವು ತಿಂದು ಗೋವಿನಂತಾದವನು
ನಿಮ್ಮಂತೆ ಮನುಷ್ಯರನ್ನು ಕೊಂದು
ಮನುಷ್ಯನಾಗಲಾರೆ

ಇದು ಕವಿ ಎನ್. ಕೆ. ಹನುಮಂತಯ್ಯನವರ ಕವಿತೆಯೊಂದರ ಸಾಲುಗಳು. ಈ ಸಾಲುಗಳು 2002ರಲ್ಲಿ ಹರ್‍ಯಾಣದ ಜಜ್ಜಾರಿನಲ್ಲಿ ನಡೆದ ದಲಿತರ ಹತ್ಯಾಕಾಂಡಕ್ಕೆ ಪ್ರತಿರೋಧವಾಗಿ ಕಾಣುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋವಿನ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ದಲಿತರಿಗೆ ಒಪ್ಪಿಸಿ ಅಸ್ಪೃಶ್ಯತೆಗೊಂದು ಕಾರಣ ಹುಡುಕಿಕೊಂಡ ಹಿಂದೂ ಮೇಲ್ಜಾತಿಗಳು ಮುಸ್ಲಿಮರನ್ನು ಗುರಿ ಮಾಡಿಕೊಳ್ಳುವ ಮುಂಚೆ ದಲಿತರನ್ನು ಗುರಿಯಾಗಿಸಿಕೊಂಡಿದ್ದರು. ಅಂತಹ ಲಿಂಚಿಂಗ್ ಪ್ರಕರಣಕ್ಕೆ ಉದಾಹರಣೆ ’ಜಜ್ಜಾರ್ ಫೈಲ್’ ಆಗಿದೆ.

ಅದು 2002ನೇ ಇಸವಿಯ ಅಕ್ಟೋಬರ್ 15, ದಸರಾ ನಡೆಯುತ್ತಿದ್ದ ದಿನವದು. ಹರ್‍ಯಾಣದ ಜಜ್ಜಾರ್‌ನಲ್ಲಿಯೂ ಅಂದು ಸಂಜೆ ದಸರಾ ಮೆರವಣಿಗೆಯನ್ನು ಮುಗಿಸಿಕೊಂಡು ಮರಳುತ್ತಿದ್ದ ಒಂದಷ್ಟು ’ವಿಶ್ವ ಹಿಂದೂ ಪರಿಷತ್’ ಕಾರ್ಯಕರ್ತರು ಏಕಾಏಕಿ ಪೊಲೀಸ್ ಠಾಣೆಗೆ ಐವರು ದಲಿತರನ್ನು ಕರೆದುತಂದರು. ಆ ಐವರ ಮೇಲೆ ಅವರು ಹೊರಿಸಿದ ಆರೋಪ, ಜೀವಂತ ದನವನ್ನು ಕೊಂದು ಅದರ ಚರ್ಮವನ್ನು ರಸ್ತೆ ಪಕ್ಕದಲ್ಲಿಯೇ ಸುಲಿಯುತ್ತಿದ್ದರು ಎಂಬುದಾಗಿದೆ. ಹೀಗೆ ಠಾಣೆಗೆ ಕರೆದುಕೊಂಡು ಬಂದ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಗುಂಪು ಆ ಐವರ ಮೇಲೆ ಗೋ ಹತ್ಯಾ ನಿಷೇಧ ಕಾಯ್ದೆಯಡಿ ದೂರು ದಾಖಲಾಗುವಂತೆ ನೋಡಿಕೊಂಡಿದೆ. ಅಲ್ಲಿಂದ ಆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿ ಹಿಂದೂ ಸಂಘಟನೆಯವರು ಮನೆಗೆ ಮರಳಿದ್ದರೆ ಇಂದು ಈ ಲೇಖನವನ್ನು ಬರೆಯಬೇಕಾಗಿಯೇ ಬರುತ್ತಿರಲಿಲ್ಲ. ಅದಕ್ಕೆ ಬದಲಾಗಿ ಆ ಐವರು ದಲಿತರನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದುಕೊಂಡು ಬಂದ ಗುಂಪು ಥಳಿಸಿ, ಕ್ರೂರವಾಗಿ ಹಿಂಸಿಸಿ ಕೊಂದುಹಾಕಿತು.

ಆ ಐವರು ದಲಿತ ಯುವಕರಿಗೆ ಇನ್ನೂ 20 ತುಂಬಿರಲಿಲ್ಲ. ವೀರೆಂದರ್, ದಯಾನಂದ್, ತೋಟ ರಾಮ್, ರಾಜು ಮತ್ತು ಕೈಲಾಶ್ ಇವರೇ ಆ ನತದೃಷ್ಟ ದಲಿತ ಯುವಕರು. ಈ ಐವರ ಕೆಲಸ ಕಸಾಯಿ ಖಾನೆಯ ಪ್ರಾಣಿಗಳ ಮೂಳೆಯನ್ನು ಸಂಗ್ರಹಿಸುವುದು ಹಾಗೂ ಸತ್ತ ಪ್ರಾಣಿಗಳ ಚರ್ಮ ಸುಲಿದು ವ್ಯಾಪಾರ ಮಾಡುವುದು. ಈ ಕಾಯಕವನ್ನು ಸೊಹ್ನಾ ಪಂಚಾಯತ್ ಸಮಿತಿ ಹಾಗೂ ಆದರ್ಶ ಗೋಶಾಲೆಯು ಇವರಿಗೆ ಲೈಸೆನ್ಸ್ ನೀಡಿ ನಡೆಸುತ್ತಿತ್ತು. ಈ ಐವರು 35,000 ಹಣ ನೀಡಿ ಲೈಸೆನ್ಸ್ ಪಡೆದಿದ್ದರು. ಈ ಕಾಯಕವನ್ನು ಅವರ ಕುಟುಂಬ ಕಳೆದ 35 ವರ್ಷಗಳಿಂದ ಮಾಡಿಕೊಂಡು ಬರುತ್ತಿತ್ತು.

ಎಲ್ಲರಿಗೂ ತಿಳಿದಿರುವ ಸತ್ಯವೆಂದರೆ, ಸತ್ತ ಗೋವುಗಳ ಚರ್ಮವನ್ನು ದೂರದ ಕಾಡಿನಲ್ಲಿಯೋ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿಯೋ ಸುಲಿಯುತ್ತಾರೆ ಎಂಬುದು. ಆದರೆ ಅಕ್ಟೋಬರ್ 15ರ ಸಂಜೆ 6 ಗಂಟೆ ಸಮಯದಲ್ಲಿ ವ್ಯಾನ್ ಮೂಲಕ ಚರ್ಮವನ್ನು ಹೊತ್ತೊಯ್ಯುತ್ತಿದ್ದ ದಲಿತರನ್ನು ಅಡ್ಡಗಟ್ಟಿದ ವಿಹೆಚ್‌ಪಿಯವರಿಗೆ ದನದ ಚರ್ಮ ಇರುವುದು ಕಂಡುಬಂದಿದೆ. ಇದೇನು ಹೊಸ ಸುದ್ದಿಯಲ್ಲದಿದ್ದರೂ, ಉನ್ಮಾದದಲ್ಲಿದ್ದ ಗುಂಪಿಗೆ ಗಲಾಟೆ ಮಾಡಲು ಅಥವಾ ಗೋರಕ್ಷಕರಂತೆ ಪೋಸು ಕೊಡಲು ಅದಷ್ಟು ಸಾಕಾಗಿದೆ. ಥಳಿತದಲ್ಲಿ ಒಬ್ಬ ದಲಿತ ಅಲ್ಲಿಯೇ ಅಸುನೀಗಿದ್ದಾನೆ. ಆಗ ಈ ಪ್ರಕರಣಕ್ಕೆ ಗೋವನ್ನು ಕೊಂದು ಬಹಿರಂಗವಾಗಿ ಚರ್ಮ ಸುಲಿಯುತ್ತಿದ್ದವರನ್ನು ಥಳಿಸಲಾಗಿದೆ ಎಂಬ ಬಣ್ಣ ಹಚ್ಚಲಾಗಿದೆ. ನಂತರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರು ಸಹ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹಲವು ಪತ್ರಿಕೆಗಳು ಸಾಕ್ಷಿ ಸಮೇತ ಸಾಬೀತುಮಾಡಿವೆ. ಪೊಲೀಸರು, ಬಹುದೊಡ್ಡ ಗುಂಪು ಬಂದು ಆ ಐವರನ್ನು ಎಳೆದೊಯ್ದಿತು; ನಾವು ಏನು ಮಾಡಲಾಗಲಿಲ್ಲ ಎಂದು ಕೋರ್ಟಿನಲ್ಲಿ ಉತ್ತರಿಸಿದ್ದಾರಾದರೂ ಪೊಲೀಸ್ ಸ್ಟೇಷನ್ನಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಬಂದೂಕುಗಳಿರಲಿಲ್ಲವೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅತ್ಯಂತ ನೋವು ತರುವ ಹಾಗೂ ಕಣ್ಣು ಕೆಂಪಗಾಗಿಸುವ ವಿಚಾರವೇನೆಂದರೆ ದಲಿತರನ್ನು ವಿಹೆಚ್‌ಪಿಯವರು ಥಳಿಸುವಾಗ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರೊಂದಿಗೆ ಡೆಪ್ಯೂಟಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಹ ಅಲ್ಲಿದ್ದರು! ಅವರೆಲ್ಲರ ಸಮ್ಮುಖದಲ್ಲಿಯೇ ಐವರು ದಲಿತರನ್ನು ಥಳಿಸಿದರು. ಅದೆಷ್ಟರ ಮಟ್ಟಿಗೆ ಥಳಿಸಿದರೆಂದರೆ ನೆಲದ ಮೇಲೆ ಮೆತ್ತಿಕೊಂಡಿದ್ದ ರಕ್ತದ ಕಲೆಗಳು ಮಾಯವಾಗಲು ವಾರಗಳೇ ಬೇಕಾದವಂತೆ. ಇಬ್ಬರ ಕಣ್ಣು ಕಿತ್ತರು. ಇಬ್ಬರ ಮುಖದ ಮೇಲೆ ಪೆಟ್ರೋಲ್ ಸುರಿದು ಸುಡುತ್ತಾ ಕೇಕೆ ಹಾಕಿದರು. ಈ ಹತ್ಯಾಕಾಂಡ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದ್ದರೂ, ಅವರು ದಲಿತ ಯುವಕರ ಕುಟುಂಬಗಳಿಗೆ ತಿಳಿಸಿದ್ದು ಆಕ್ಸಿಡೆಂಟ್ ಆಗಿದೆ ಎಂದು. ಇಷ್ಟರಲ್ಲಿಯೇ ದಲಿತ ಕುಟುಂಬಗಳಿಗೆ ಅರ್ಥವಾಗಿ ಹೋಯಿತು. ತಮ್ಮ ಮಕ್ಕಳ ಹತ್ಯೆಯಲ್ಲಿ ಪೊಲೀಸರ ಪಾತ್ರವೂ ಸಹ ಇದೆ ಎಂಬುದು. ಇದನ್ನು ಕುಟುಂಬದವರು ಒಪ್ಪದಿದ್ದಾಗ ’ನಿಮ್ಮ ಮಕ್ಕಳನ್ನು ಮುಸ್ಲಿಮರೆಂದು ಭಾವಿಸಿ ಕೊಂದಿದ್ದಾರೆ’ ಎಂಬ ಸಬೂಬನ್ನೂ ನೀಡಿದರು. ಆದರೆ ದಲಿತ ಕುಟುಂಬಗಳು ಅದಕ್ಕೆ ಒಪ್ಪಲಿಲ್ಲ. ’ಮುಸ್ಲಿಮರೂ ನಮ್ಮಂತೆ ಮನುಷ್ಯರಲ್ಲವೇ’ ಎಂದು ಪೊಲೀಸರನ್ನೇ ಪ್ರಶ್ನಿಸಿದವು.

ಇದಾದ ಮಾರನೇ ದಿನ ಅಂದರೆ ಅಕ್ಟೋಬರ್ 16ರಂದು ಜಜ್ಜಾರ್‌ನ ಬೀದಿಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಾಗೂ ಭಜರಂಗ ದಳದ ಕಾರ್ಯಕರ್ತರು ದಿಗ್ವಿಜಯದ ಮೆರವಣಿಗೆ ನಡೆಸಿದರು. ಅವರೆಲ್ಲರೂ ಬಹಿರಂಗವಾಗಿಯೇ ಐವರು ದಲಿತ ಯುವಕರ ಕೊಲೆಯನ್ನು ಸಮರ್ಥಿಸಿಕೊಂಡರು. ದೆಹಲಿಯ ವಿಹೆಚ್‌ಪಿಯ ಪ್ರಮುಖ ಮುಖಂಡ ಆಚಾರ್ಯ ಗಿರಿರಾಜ್ ಕಿಶೋರ್ ’ನಮಗೆ ದಲಿತರ ಜೀವಕ್ಕಿಂತ ಗೋವಿನ ಜೀವ ದೊಡ್ಡದು’ ಎಂದು ಬಹಿರಂಗವಾಗಿ ಹೇಳಿದ.

ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಯಿತು. ಆದರೆ ಅದರಿಂದ ಹೆಚ್ಚೇನು ಪ್ರಯೋಜನವಾಗಲಿಲ್ಲ. ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡರು. ಕೋರ್ಟುಗಳಿಗೆ ಸಾಕ್ಷಿ ಬೇಕು. ಆರೋಪಿಗಳು ಬೇಕು. ಆದರೆ ಪೊಲೀಸರೇ ದೊಂಬಿ ಎಂದ ಮೇಲೆ ಆರೋಪಿಗಳನ್ನು ಹಿಡಿದು ಕೊಡುವವರಾರು?


ಇದನ್ನೂ ಓದಿ: ಮಾತು ಮರೆತ ಭಾರತ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...