ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು ಜಾಗೃತಿಯ ಜಾಥಾ ನಡೆಸುತ್ತಿದೆ. ಇದರ ಭಾಗವಾಗಿ ಇಂದು ಕಲಬುರಗಿ ಜಿಲ್ಲೆಗೆ ಪ್ರವೇಶಿಸಿದ ಜಾಥಾ ತಂಡವು ವೀರಾಪುರ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿಯನ್ನು ಆರಂಭಿಸಿತ್ತು.
ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಾ ಅನಿಲ್ ತೆಂಗಳಿ ಸಂಧರ್ಬದಲ್ಲಿ ನಾವು ಮೈ ಮರೆತರೆ ನಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತೇವೆ. ಇದು ಕೇವಲ ಎದ್ದೇಳು ಕರ್ನಾಟಕ ಯಾವುದೂ ಒಂದು ಸಂಘಟನೆಯ ಕೆಲಸವಲ್ಲ ಇದು ಪ್ರತೀ ನಾಗರಿಕರ ಕರ್ತವ್ಯ. ಮತದಾರರನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ಕೆಲಸ ಮಾಡಲು ಚುನಾವಣಾ ಆಯೋಗಕ್ಕೆ ಒತ್ತಡ ತರಬೇಕಿದೆ ಎಂದ ಅಭಿಪ್ರಾಯಪಟ್ಟರು.
ಸಲೀಂ ಚಿತ್ತಾಪುರ, ಸತ್ತವರ ಹೆಸರನ್ನು ತೆಗೆಯಲು ನಮ್ಮ ವಿರೋಧವಿಲ್ಲ, ಆದರೆ ಯಾವುದೇ ಒಬ್ಬ ಅರ್ಹ ಮತದಾರರನ್ನು ಮತಪಟ್ಟಿಯಿಂದ ತೆಗೆದರೆ ನಾವು ಸುಮ್ಮನಿರುವುದಿಲ್ಲ, ಪಶ್ಚಿಮ ಬಂಗಾಳ ಮುಂತಾದ ಕಡೆಯಲ್ಲಿ ಚುನಾವಣಾ ಆಯೋಗ ನಡೆಸಿದ ಪ್ರಕ್ರಿಯೆಯನ್ನು ನಾವು ಕರ್ನಾಟಕದಲ್ಲಿ ನಡೆಯಲು ಬಿಡುವುದಿಲ್ಲ ಎಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸಲೀಂ ಚಿತ್ತಾಪುರ ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಈ ಹಿಂದೆ ನಡೆಸಿದ ಸಂವಿಧಾನ ವಿರೋಧಿ ನಡೆಯದ CAA NRC ಯನ್ನು ಜಾರಿಮಾಡಲು ವಿಫಲವಾದ್ದರಿಂದ ಈಗ SIR ಮೂಲಕ ಅದನ್ನು ಮರಳಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿ ತನಗೆ ಯಾರೆಲ್ಲ ಮತ ನೀಡುವುದಿಲ್ಲವೋ ಆ ಎಲ್ಲ ಜನರನ್ನು ಗುರಿಯಾಗಿಸಿಕೊಂಡು ಅವರನ್ನು ಮತದಾನದ ಹಕ್ಕಿನಿಂದ ಹೊರಗುಳಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದು ಸಂವಿಧಾನ ವಿರೋಧಿಯಾದ ಕೃತ್ಯ ಎಂದು ಸಿಖ್ ಸಮುದಾಯದ ಶೇಖರ್ ಸಿಂಗ್ ಅಭಿಪ್ರಾಯಪಟ್ಟರು.
ಜಾಥಾದ ಪ್ರಮುಖರಾದ ವೀರಸಂಗಯ್ಯ ಮಾತನಾಡುತ್ತಾ, ಇದು ನಾವು 30-40 ವರ್ಷಗಳಿಂದ ಇಲ್ಲೇ ಇಡೀ ನೆಲದಲ್ಲಿ ಬದುಕಿರುವವರು ನಾವು, ನಮ್ಮನೇ ಈ ದೇಶದ ಪ್ರಜೆಯಲ್ಲ ಎಂದು ಹೇಳಿದರೆ ನಾವು ಒಪ್ಪಿಕೊಳ್ಳಬೇಕ. ನಾವು ಈ ನೆಲದ ಮೂಲ ವಾರಸುದಾರರು, ನಮ್ಮನ್ನು ಈ ದೇಶದ ಪ್ರಜೆ ಅಲ್ಲ ಎಂದರೆ ಸಹಿಸುವುದಿಲ್ಲ. ಇದು ಕೇವಲ ದ್ವೇಷ ರಾಜಕಾರಣ ಮಾತ್ರವೇ ಆಗಿದೆ. ಮುಂದಿನ ದಿನಗಳಲ್ಲಿ ಬೃಹತ್ ಜನಾಂದೋಲನ ನಡೆಸಲಾಗುತ್ತದೆ ಎಂದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


