Homeಬಹುಜನ ಭಾರತಸುಪ್ರೀಮ್ ತೀರ್ಪು- ಮೀಸಲಾತಿಗೆ ಮತ್ತೆ ಒದಗಿದ ಕುತ್ತು

ಸುಪ್ರೀಮ್ ತೀರ್ಪು- ಮೀಸಲಾತಿಗೆ ಮತ್ತೆ ಒದಗಿದ ಕುತ್ತು

ಕಠೋರ ವಾಸ್ತವದ ನಡುವೆಯೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗ ಆಗುತ್ತಿದೆ ಎಂಬುದಾಗಿ 2018ರಲ್ಲಿ ಸುಪ್ರೀಮ್ ಕೋರ್ಟ್ ಹೇಳಿದ್ದು ಗಾಯದ ಮೇಲೆ ಬರೆ ಎಳೆದದ್ದಕ್ಕಿಂತಲೂ ಕಡಿಮೆಯೇನೂ ಅಲ್ಲ.

- Advertisement -
- Advertisement -

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಬಡ್ತಿಯಲ್ಲಿ ಮೀಸಲಾತಿ ಕಡ್ಡಾಯ ಅಲ್ಲ ಎಂದು ಉತ್ತರಾಖಂಡದ ಪ್ರಕರಣವೊಂದರಲ್ಲಿ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಕಳವಳಕಾರಿ. ನೂರಾರು ವರ್ಷಗಳ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನವೊಂದಕ್ಕೆ ಆಗಿರುವ ಹಿನ್ನಡೆ. ಸಾಮಾಜಿಕ ನ್ಯಾಯ ನೀಡಿಕೆಯ ಪರಿಕಲ್ಪನೆಯ ಬೇರಿಗೆ ಬೀಸಿದ ಕೊಡಲಿಯೇಟು.

ಒಂದು ಅರ್ಥದಲ್ಲಿ ಮೀಸಲಾತಿ ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ ಎಂದುಬಿಟ್ಟಿದೆ. ಮೀಸಲಾತಿಯನ್ನು ನೀಡಬಯಸುವ ರಾಜ್ಯವು ಮೊದಲು ಆಯಾ ಜಾತಿಗಳು ಪಂಗಡಗಳು ಸರ್ಕಾರಿ ಸೇವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾತಿನಿಧ್ಯ ಪಡೆದಿಲ್ಲ ಎಂಬ ಅಂಕಿಅಂಶಗಳನ್ನು ಕಲೆಹಾಕಬೇಕು ಎಂದು ವಿಧಿಸಿದೆ.

ಮೀಸಲಾತಿ ಮೂಲಭೂತ ಹಕ್ಕು ಅಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೀಸಲಾತಿಯನ್ನು ನೀಡಬೇಕೆಂಬುದು ಕಡ್ಡಾಯವೇನೂ ಅಲ್ಲ ಎಂದೂ ನ್ಯಾಯಾಲಯ ಸಾರಿ ಹೇಳಿದೆ. ಆದರೆ ಸಂವಿಧಾನದ 16ನೆಯ ಅನುಚ್ಛೇದವು ಸಮಾನತೆಯ ಹಕ್ಕನ್ನೂ ನೀಡುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ದೊರೆಯದ ಗುಂಪುಗಳ ರಕ್ಷಣೆಗೆ ಧಾವಿಸುವುದು ಸರ್ಕಾರದ ಆದ್ಯ ಕರ್ತವ್ಯ ಎನ್ನುತ್ತಾರೆ ಸಂವಿಧಾನ ತಜ್ಞರು.

ಮೀಸಲಾತಿ ನೀಡಬೇಕಿದ್ದರೆ ಆಯಾ ಜಾತಿ ಪಂಗಡಗಳ ಹಿಂದುಳಿದಿರುವಿಕೆಯನ್ನು ಸಾಬೀತುಪಡಿಸಬೇಕು ಎಂಬುದು ಸುಪ್ರೀಮ್ ಕೋರ್ಟ್ ಈ ಹಿಂದೆ ನಾಗರಾಜ್ ತೀರ್ಪಿನಲ್ಲಿ ವಿಧಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆಯು ಅವುಗಳನ್ನು ಸಂಸತ್ತು ಅಧ್ಯಕ್ಷೀಯ ಪಟ್ಟಿಗೆ ಸೇರಿಸಿದ ಕ್ಷಣವೇ ಸ್ಥಾಪಿತವಾಗಿರುತ್ತದೆ. ಜಾತಿ ಪಂಗಡಗಳು ಹಿಂದುಳಿದಿವೆ ಎಂಬುದನ್ನು ಒಮ್ಮೆ ಸಾರಿದ ನಂತರವೂ ಸರ್ಕಾರಗಳು ಅವುಗಳಿಗೆ ನೆರವು ನೀಡಕೂಡದು ಎಂದು ಹೇಳುವುದು ಅಸಂಬದ್ಧ. ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವುಗಳು ಎಂಬ ವರ್ಗೀಕರಣಕ್ಕೆ ಅರ್ಥವೇ ಇಲ್ಲವಾಗುತ್ತದೆ.

ಮೀಸಲಾತಿಯನ್ನು ನೀಡುವುದಿಲ್ಲವೆಂಬ ಉತ್ತರಾಖಂಡ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿಯುವ ಸುಪ್ರೀಮ್ ಕೋರ್ಟು, ಮೀಸಲಾತಿ ನಿರಾಕರಿಸುವ ರಾಜ್ಯ ಸರ್ಕಾರದ ವಿವೇಚನೆಯನ್ನು ಮಾನ್ಯ ಮಾಡುತ್ತದೆ. ಆದರೆ ಮೀಸಲಾತಿಯನ್ನು ನೀಡಲು ಮುಂದಾಗುವ ರಾಜ್ಯ ಸರ್ಕಾರವನ್ನು ಸಮಾನತೆಯ ಕಾರಣ ಮುಂದೆ ಮಾಡಿ ನಿರ್ಬಂಧಿಸುತ್ತದೆ. ರಾಜ್ಯ ಸರ್ಕಾರಗಳ ವಿವೇಚನಾ ಅಧಿಕಾರವನ್ನು ಮಾನ್ಯ ಮಾಡುವುದಿಲ್ಲ. ಈ ಮಾತಿಗೆ ಹಲವು ನಿದರ್ಶನಗಳಿವೆ.

ಜಾತಿವ್ಯವಸ್ಥೆಯ ಒಳಿತನ್ನು ಎತ್ತಿ ಹೇಳುವ ಮತ್ತು ಮೀಸಲಾತಿಯನ್ನು ಅಂತ್ಯಗೊಳಿಸುವ ಹಾಗೂ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಂದ್ರ ಸರ್ಕಾರದ ಒಳಗಿನಿಂದ ಮತ್ತು ಹೊರಗಿನಿಂದ ಕಾಲಕಾಲಕ್ಕೆ ಕೇಳಿಬರುತ್ತಿವೆ. ಭಯ ಮತ್ತು ಅಪಮಾನದ ಲಜ್ಜೆಯನ್ನು ಬದಿಗೊತ್ತಿರುವ ದಲಿತರು ಪ್ರತಿರೋಧದ ಮತ್ತು ತಿಳಿವಳಿಕೆಯ ಹಾದಿ ಹಿಡಿದಿರುವುದು ಮೇಲ್ಜಾತಿಗಳನ್ನು ಇನ್ನಷ್ಟು ಕೆರಳಿಸಿ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಅಧ್ಯಯನಗಳು ಸಾರಿವೆ. ಇಂತಹ ಕಠೋರ ವಾಸ್ತವದ ನಡುವೆಯೂ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗ ಆಗುತ್ತಿದೆ ಎಂಬುದಾಗಿ 2018ರಲ್ಲಿ ಸುಪ್ರೀಮ್ ಕೋರ್ಟ್ ಹೇಳಿದ್ದು ಗಾಯದ ಮೇಲೆ ಬರೆ ಎಳೆದದ್ದಕ್ಕಿಂತಲೂ ಕಡಿಮೆಯೇನೂ ಅಲ್ಲ.

ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 2007-17ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ.66ರಷ್ಟು ಹೆಚ್ಚಿದೆ. ದೇಶದಲ್ಲಿ ನಿತ್ಯ ಸರಾಸರಿ ಆರು ಮಂದಿ ದಲಿತ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತಿದೆ. ಈ ಹತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಇಮ್ಮಡಿಯಾಗಿವೆ. ವಿಚಾರಣೆಗೆ ಕಾದಿರುವ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಬಾಕಿಯ ಬೆಟ್ಟ ಬೆಳೆಯುತ್ತಿದೆ. ಸಜೆಯಲ್ಲಿ ಕೊನೆಯಾಗುವ ಪ್ರಕರಣಗಳ ಪ್ರಮಾಣ ಶೇ.28ಕ್ಕೆ ಕುಸಿದಿದೆ

2015ರಲ್ಲಿ ಸರಸಂಘ ಚಾಲಕ ಮೋಹನ್ ರಾವ್ ಭಾಗವತ್ ಜಾತಿ ಆಧಾರಿತ ಮೀಸಲಾತಿಯ ಅಗತ್ಯದ ಕುರಿತು ಸಂದೇಹ ಪ್ರಕಟಿಸಿದ್ದರು. ಪ್ರತಿಪಕ್ಷಗಳು ಹುಯಿಲೆಬ್ಬಿಸಿದ್ದವು. ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲು ಉಂಡಿತು. ನಿತೀಶ್ ಅವರ ಸಂಯುಕ್ತ ಜನತಾದಳ ಮತ್ತು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಒಟ್ಟುಗೂಡಿ ಅಧಿಕಾರ ಸೂತ್ರ ಹಿಡಿದವು. ಜಾತಿ ಆಧಾರಿತ ಮೀಸಲಾತಿ ಕುರಿತು ಸಾಮರಸ್ಯದ ವಾತಾವರಣದಲ್ಲಿ ಚರ್ಚೆ ನಡೆಯಬೇಕೆಂದು ಇತ್ತೀಚೆಗೆ ಮತ್ತೆ ಹೇಳಿದ್ದರು ಸರಸಂಘಚಾಲಕರು.

ಮೀಸಲಾತಿ ಎಂಬುದು ಅಭಿವೃದ್ಧಿಗೆ ಅಡ್ಡಿ ಎಂಬ ನಿರಂತರ ಪ್ರಚಾರವನ್ನು ಜಾರಿಯಲ್ಲಿ ಇಡಲಾಗಿದೆ. ನೂರಕ್ಕೆ ನೂರು ಮೀಸಲಾತಿ ಪಡೆಯುತ್ತ ಬಂದಿರುವ ಒಂದು ಸಂಘಟನೆಯ ಜನ ತಳವರ್ಗಗಳ ಮೀಸಲಾತಿಯನ್ನು ವಿರೋಧಿಸುತ್ತ ಬಂದಿದ್ದಾರೆ. ಅಂಬೇಡ್ಕರ್ ವಿಚಾರಗಳನ್ನು ಆಚರಣೆಯಲ್ಲಿ ಕೊಂದಿರುವವರು, ಬಾಯಿಮಾತಿನಲ್ಲಿ ಅವರನ್ನು ಕೊಂಡಾಡತೊಡಗಿದ್ದಾರೆ. ಅವರ ಹೆಸರಿನಲ್ಲಿ ಸ್ಥಾವರಗಳನ್ನು ಎಬ್ಬಿಸಿ ನಿಲ್ಲಿಸತೊಡಗಿದ್ದಾರೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಕೇಂದ್ರ ಮಂತ್ರಿಗಳೇ ಆಡತೊಡಗಿದ್ದಾರೆ. ಮೂಲ ಸಂವಿಧಾನದಲ್ಲಿ ಇರಲಿಲ್ಲವೆಂದು ಹೇಳಿ ಸೆಕ್ಯೂಲರ್ ಪದವನ್ನೇ ಸಂವಿಧಾನದ ಮುನ್ನುಡಿಯಿಂದ ಕೈ ಬಿಡುವ ಹುನ್ನಾರವೂ ಜರುಗಿತು. ಹಿಂದೂ ಬಹುಸಂಖ್ಯಾತ ರಾಷ್ಟ್ರವಾದ ವಿಜೃಂಭಿಸತೊಡಗಿದೆ. ಅಲ್ಪಸಂಖ್ಯಾತರು ದಲಿತರು ಆದಿವಾಸಿಗಳ ಬದುಕುಗಳು ದುರ್ಭರವಾಗಿವೆ. ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ತ್ರಿವಳಿ ತಲಾಖ್ ರದ್ದು ಮಾಡಿದ ಮಸೂದೆಗೆ ಅಂಗೀಕಾರ ದಕ್ಕಿಸಿಕೊಳ್ಳಲಾಯಿತು. ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಅಲ್ಲಿನ ಜನಪ್ರತಿಧಿನಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ರದ್ದು ಮಾಡಿ ಜೀರ್ಣಿಸಿಕೊಳ್ಳಲಾಗುತ್ತಿದೆ. ಮೀಸಲಾತಿಯ ಕಡುಬೆಂಬಲಿಗ ಶಕ್ತಿಗಳ ದನಿ ಕ್ಷೀಣವಾಗಿದೆ. ಕಬ್ಬಿಣ ಇಷ್ಟು ಬಿಸಿಯಾಗಿರುವ ಸನ್ನಿವೇಶವಿದು. ಇಂತಹ ಸನ್ನಿವೇಶದಲ್ಲಿ ಮೀಸಲಾತಿ ಕುರಿತು ಚರ್ಚೆ ಮಾಡಬೇಕೆಂದು ಸರಸಂಘಚಾಲಕರು ಕರೆ ನೀಡಿದ್ದು ಆಕಸ್ಮಿಕ ಆಗಿರಲಿಲ್ಲ.

ಮೀಸಲಾತಿಯನ್ನು ನಿಷ್ಪಕ್ಷಪಾತ ಜನರ ಸಮಿತಿಯೊಂದು ಮರುವಿಮರ್ಶೆಗೆ ಒಳಪಡಿಸಬೇಕು ಎಂಬ ಗೊತ್ತುವಳಿಯನ್ನು ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ 1981ರಲ್ಲೇ ಅಂಗೀಕರಿಸಿತ್ತು. 1985ರಲ್ಲಿ ಇದೇ ಗೊತ್ತುವಳಿಯನ್ನು ಆರೆಸ್ಸೆಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ಅಂಗೀಕರಿಸಲಾಗಿತ್ತು.

ಈ ಸಮಾಜದಲ್ಲಿ ಅಸಮಾನತೆ ಇರುವತನಕ ನಾವು ಮೀಸಲಾತಿಯನ್ನು ಬೆಂಬಲಿಸುತ್ತೇವೆ ಎಂಬ ಮಾತನ್ನು ಆಡುತ್ತಲೇ ಮರುವಿಮರ್ಶೆಯ ಕಿಡಿಯನ್ನೂ ಆರದಂತೆ ಕಾಪಾಡಿಕೊಂಡು ಬಂದಿದ್ದಾರೆ ಮೋಹನ್ ಭಾಗವತ್.

ಮೋದಿ-ಶಾ ಜೋಡಿಗೆ ಮೀಸಲಾತಿ ಕುರಿತು ಯಾವ ಸಹಾನುಭೂತಿಯೂ ಇಲ್ಲ. ಸಹಾನುಭೂತಿಯ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರೂ ಅಲ್ಲ. ಮೀಸಲಾತಿಗೆ ಮಂಗಳ ಹಾಡುವ ಕಾರ್ಯಸೂಚಿಯ ಹಿನ್ನೆಲೆ ಅವರದು. ಆದರೆ ಚುನಾವಣಾ ರಾಜಕಾರಣ ಅವರ ಕೈಗಳನ್ನು ಈಗಲೂ ಕಟ್ಟಿ ಹಾಕಿದೆ. ಹೀಗಾಗಿ ತಳವರ್ಗಗಳ ಮೀಸಲಾತಿಯನ್ನು ತರಾತುರಿಯಲ್ಲಿ ಕಿತ್ತು ಹಾಕಲು ಅವರು ಕೈಹಾಕುತ್ತಿಲ್ಲ. ಅನುಕೂಲಕರ ಸಮಯದ ನಿರೀಕ್ಷೆಯಲ್ಲಿದ್ದಾರೆ ಅವರು.

ಇಂತಹ ಸನ್ನಿವೇಶದಲ್ಲಿ ಹೊರಬಿದ್ದಿರುವ ಸುಪ್ರೀಮ್ ಕೋರ್ಟ್ ತೀರ್ಪಿನ ಬಳಕೆ-ದುರ್ಬಳಕೆ ಹೇಗೆಲ್ಲ ಆಗಲಿದೆ ಎಂಬುದು ಆತಂಕದಿಂದ ಕಾದು ನೋಡಬೇಕಿರುವ ಮತ್ತು ಹೋರಾಟಕ್ಕೆ ಸಜ್ಜಾಗಬೇಕಿರುವ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...