Homeನೂರರ ನೋಟಕ್ರಿಮಿನಲ್ ಎಂಪಿ, ಎಂಎಲ್‌ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ

ಕ್ರಿಮಿನಲ್ ಎಂಪಿ, ಎಂಎಲ್‌ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ

2009ರ ಲೋಕಸಭೆಯಲ್ಲಿ ಇದ್ದ 542 ಸದಸ್ಯರ ಪೈಕಿ 162 ಸದಸ್ಯರ ವಿರುದ್ಧ ಕೊಲೆ, ಕೊಲೆ ಪ್ರಯತ್ನ, ವ್ಯಕ್ತಿಗಳ ಅಪಹರಣ, ದರೋಡೆ ಮತ್ತು ಅತ್ಯಾಚಾರ ಕೇಸುಗಳು ಇವೆ.

- Advertisement -
- Advertisement -

2014 ರಲ್ಲಿ ಸರ್ವೋಚ್ಚ ನ್ಯಾಯಾಲಯ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಎಂಪಿಗಳು ಮತ್ತು ಎಂಎಲ್‌ಎಗಳ ಮೇಲೆ ಕೇಸುಗಳು ದಾಖಲಾದರೆ, ಅದರ ಚಾರ್ಜ್ ಶೀಟ್ ಹಾಕಿದ ನಂತರ, ವಿಚಾರಣೆಯನ್ನು ಒಂದು ವರ್ಷಗಳ ಒಳಗಾಗಿ ಪೂರೈಸಬೇಕೆಂದೂ, ಕೋರ್ಟ್ ಕಲಾಪಗಳನ್ನು ವಿಚಾರಣೆ ಮುಗಿಯುವವರೆಗೂ ಪ್ರತಿದಿನವೂ ನಡೆಸಬೇಕೆಂದು ಆಜ್ಞೆ ಮಾಡಿತು. ಈ ಆಜ್ಞೆ ದೂರಗಾಮಿ ಫಲವನ್ನು ನೀಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಮೂಲಕ ರಾಜಕೀಯ ಪಕ್ಷಗಳು ಕ್ರಿಮಿನಲ್‌ಗಳನ್ನು ಉಮೇದುದಾರರನ್ನಾಗಿ ನಿಲ್ಲಿಸುವ ದುಷ್ಟನೀತಿ ತಪ್ಪೀತೆಂದು ನ್ಯಾಯಾಲಯ ಆಶಿಸಿತು. ಯಾರಿಗೆ ನಂಬರ್‌ಗೇಮ್‌ನಲ್ಲಿ ಆಸಕ್ತಿ ಇದೆಯೋ ಯಾರಿಗೆ ಅಧಿಕಾರ ಹಿಡಿಯುವುದರಲ್ಲಿ ಆಸಕ್ತಿ ಇದೆಯೋ ಅಂತಹವರು ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುವುದಕ್ಕೆ ಹಿಂಜರಿಯಬಹುದು.

ಈ ಕೇಸು ದಾಖಲಿಸಿದ್ದ ಎನ್‌ಜಿಒ ಸಂಸ್ಥೆ 4 ಬೇಡಿಕೆಗಳನ್ನಿಟ್ಟಿದ್ದವು. 1) ದಾರುಣವಾದ ಕ್ರಿಮಿನಲ್ ಅಪರಾಧಗಳನ್ನು ಎಸಗಿದ ಚಾರ್ಜ್‌ಗಳನ್ನು ಎದುರಿಸುತ್ತಿರುವವರು ಚುನಾವಣೆಗೆ ನಿಲ್ಲದಂತೆ ಮಾರ್ಗಸೂಚಿಯನ್ನು ರೂಪಿಸಿ. 2) ಯಾವ ಕ್ರಿಮಿನಲ್‌ಗಳ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆಯೋ ಅಂತಹವನ ಬಗೆಗೆ ಆರು ತಿಂಗಳೊಳಗಾಗಿ ನ್ಯಾಯಾಲಯ ತನ್ನ ತೀರ್ಪನ್ನು ನೀಡಬೇಕು. 3) ಯಾರ ಮೇಲೆ ಗುರುತರವಾದ ಕ್ರಿಮಿನಲ್ ಅಪರಾಧಗಳನ್ನು ಹೊರಿಸಲಾಗಿದೆಯೋ ಅಂತಹವರನ್ನು ಲೋಕಸಭೆ, ವಿಧಾನಸಭೆಗಳ ಸದಸ್ಯತ್ವದಿಂದ ತೆಗೆದುಹಾಕುವ ಕಾನೂನುಗಳನ್ನು ರಚಿಸಬೇಕು. 4) 1951ರ Representation of the Peopleನ ಸೆಕ್ಷನ್ 8(4)ನ್ನು (ಟ್ರಯಲ್ ನ್ಯಾಯಾಲಯದಲ್ಲಿ ತಪ್ಪಿತಸ್ಥ ಎಂಬ ತೀರ್ಪು ನೀಡಲಾಗಿದ್ದರೂ, ಅದರ ವಿರುದ್ಧ ತಪ್ಪಿತಸ್ಥ ಎಂಪಿ, ಎಂಎಲ್‌ಎ ಅಥವಾ ಎಂಎಲ್‌ಸಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುತ್ತದೆ) ರಾಜ್ಯಾಂಗ ವಿರೋಧಿ ಎಂದು ಘೋಷಿಸಬೇಕು.

ಚುನಾವಣಾ ಕಮಿಷನ್ ಈ ನಾಲ್ಕು ಸಲಹೆಗಳನ್ನು ಒಪ್ಪಿಕೊಂಡಿತಾದರೂ ಕೇಂದ್ರ ಸರ್ಕಾರ ಇದಕ್ಕೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಿತು. ಇದು policy matter ಆಗಿದ್ದೂ ಪಾರ್ಲಿಮೆಂಟ್‌ನಿಂದ ಕಾನೂನು ರಚನೆಯಾಗಬೇಕಾಗಿರುವುದರಿಂದ ಈ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ಮಾಡುವಂತಿಲ್ಲ ಎಂದು ಮನವಿ ಮಾಡಿತು. ಆದರೆ ಸರ್ವೋಚ್ಚ ನ್ಯಾಯಾಲಯ ಸರ್ಕಾರದ ಈ ವಾದವನ್ನು ತಳ್ಳಿಹಾಕಿ ಈ ವಿಚಾರದಲ್ಲಿ ಲಾಕಮಿಷನ್‌ನ ಶಿಫಾರಸ್ಸು ಏನೆಂದು ಕೇಳಿತು.

2009ರ ಲೋಕಸಭೆಯಲ್ಲಿ ಇದ್ದ 542 ಸದಸ್ಯರ ಪೈಕಿ 162 ಸದಸ್ಯರ ವಿರುದ್ಧ ದಾರುಣವಾದ ಕ್ರಿಮಿನಲ್ ಕೇಸುಗಳಿದ್ದವು. ಕೊಲೆ, ಕೊಲೆ ಪ್ರಯತ್ನ, ವ್ಯಕ್ತಿಗಳ ಅಪಹರಣ, ದರೋಡೆ ಮತ್ತು ಅತ್ಯಾಚಾರ ಕೇಸುಗಳು ಅವರ ವಿರುದ್ಧ ಇವೆ. ಇವರ ವಿರುದ್ಧದ ಖಟ್ಳೆಗಳು 7 ವರ್ಷಗಳಷ್ಟು ಹಳೆಯದಾದರೂ ಇನ್ನೂ ಕೋರ್ಟ್ ವಿಚಾರಣೆ ಮುಗಿದಿಲ್ಲ ಎಂದು ಲಾಕಮಿಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕೇಸುಗಳು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವುದಕ್ಕೆ ಸಂಬಂಧಪಟ್ಟವು.

9 ಎಂಪಿಗಳ ಕೇಸುಗಳು 20 ವರ್ಷದಷ್ಟು ಹಳೆಯವಾದರೂ ಇನ್ನೂ ವಿಚಾರಣೆ ಮುಗಿದಿಲ್ಲ. ಹಣದ ಪ್ರಭಾವ, ಅಧಿಕಾರ ಪ್ರಭಾವ ಈ ಕ್ಯಾನ್ಸರ್ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಷ್ಟೆ ಅಲ್ಲದೆ ಕೇಸನ್ನು ಮುಂದಕ್ಕೆ ತಳ್ಳಲು ಇದೇ ಪ್ರಭಾವವನ್ನು ಬಳಸಲಾಗಿದೆ. 1951ರ ರಾಜ್ಯಾಂಗದ RPI Actನ ಸೆಕ್ಷನ್ 8(4), ಬೆಂಕಿಗೆ ತುಪ್ಪ ಸುರಿದಂತೆ ನ್ಯಾಯದಾನಕ್ಕೆ ಅಡ್ಡಗಾಲು ಹಾಕಿದೆ. 2013 ರಲ್ಲಿ ಸರ್ವೋಚ್ಚ ನ್ಯಾಯಾಲಯ ಸೆಕ್ಷನ್ 8(4)ನ್ನು ರಾಜ್ಯಾಂಗ ವಿರೋಧಿ ಸೆಕ್ಷನ್ ಎಂದು ತೀರ್ಪಿತ್ತಿತು. ಆದರೆ ಪಾರ್ಲಿಮೆಂಟ್ ಇದುವರೆಗೆ ರಾಜ್ಯಾಂಗದಿಂದ ಈ ಸೆಕ್ಷನ್ ತೆಗೆದುಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವೋಚ್ಚ ನ್ಯಾಯಾಲಯ ರಾಜ್ಯಾಂಗ ವಿರೋಧಿ ಎಂದು ಹೇಳಿ ಕೇಂದ್ರ ಸರ್ಕಾರ ಪಾರ್ಲಿಮೆಂಟಿನಲ್ಲಿ ಈ ವಿಷಯವನ್ನು ಮಂಡಿಸಿ ಆ ಸೆಕ್ಷನ್ ಕಿತ್ತು ಹಾಕಲು ಮೀನಾಮೇಷ ಎಣಿಸುತ್ತಿದೆ. ಹತ್ತಾರು ವರ್ಷಗಳ ಹಿಂದೆ ಕೋರ್ಟು ಆ ಸೆಕ್ಷನ್ನುಗಳನ್ನು ಕಿತ್ತು ಹಾಕಲು ಸರ್ಕಾರಕ್ಕೆ ತಿಳಿಸಿದ್ದರೂ ಈ ಕ್ರಿಮಿನಲ್ ಎಂಪಿಗಳನ್ನು ರಕ್ಷಿಸಿಕೊಂಡೇ ಬಂದಿದೆ.

ಆದ್ದರಿಂದ ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ಇಂತಿಷ್ಟು ತಿಂಗಳುಗಳಲ್ಲಿ ರಾಜ್ಯಾಂಗದಲ್ಲಿ ತಿದ್ದುಪಡಿ ತಂದು ಹಾಲಿ ಇರುವ ಕಳಂಕಿತ ಎಂಪಿ, ಎಂಎಲ್‌ಎಗಳನ್ನು ಹೊರದೂಡಬೇಕೆಂದೂ, ಕಳಂಕಿತ ಮಾಜಿ ಎಂಪಿಗಳು, ಎಂಎಲ್‌ಎಗಳ ಮೇಲೂ ಕ್ರಿಮಿನಲ್ ಕೇಸುಗಳನ್ನು ಹಾಕಬೇಕೆಂದೂ ಆಜ್ಞೆ ಮಾಡಬೇಕು. ಇಂತಹ ಒತ್ತಡ ನ್ಯಾಯಾಲಯದಿಂದ ಬರದಿದ್ದರೆ ಈ ಭಂಡಸರ್ಕಾರ ತನ್ನ ದುರ್ನೀತಿಯನ್ನು ಮುಂದುವರೆಸುತ್ತಲೇ ಹೋಗುತ್ತದೆ.


ಇದನ್ನೂ ಓದಿ: ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...