Homeಮುಖಪುಟ’ಶೂ ನೆಕ್ಕಿದವನ ಹೆಸರನ್ನು ಕೇರಳ ಕಸದ ಬುಟ್ಟಿಗೆ ಎಸೆಯಬೇಕು’: ಗೋಲ್ವಾಲ್ಕರ್ ವಿರುದ್ದ ಕಿಡಿ

’ಶೂ ನೆಕ್ಕಿದವನ ಹೆಸರನ್ನು ಕೇರಳ ಕಸದ ಬುಟ್ಟಿಗೆ ಎಸೆಯಬೇಕು’: ಗೋಲ್ವಾಲ್ಕರ್ ವಿರುದ್ದ ಕಿಡಿ

ವೈಜ್ಞಾನಿಕ ಸಂಸ್ಥೆಗೆ ಆರೆಸ್ಸೆಸ್ ನಾಯಕನ ಹೆಸರಿಡುವ ಕೇಂದ್ರದ ಕ್ರಮಕ್ಕೆ ಕೇರಳದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದೆ

- Advertisement -
- Advertisement -

ತಿರುವನಂತಪುರಂನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ (RGCB) ಯ ಎರಡನೇ ಕ್ಯಾಂಪಸ್‌ಗೆ ಆರೆಸ್ಸೆಸ್ ಮುಖಂಡ ಗೋಲ್ವಾಲ್ಕರ್‌ ಹೆಸರಿಡುವುದಕ್ಕೆ ಕೇರಳದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಖ್ಯಾತ ಮಲಯಾಳಂ ಚಿತ್ರ ನಟ ಹರೀಶ್ ಪೆರಾಡಿ, “ಆ ಶೂ ನೆಕ್ಕಿದವನ ಹೆಸರನ್ನು ಕೇರಳ ಕಸದ ಬುಟ್ಟಿಗೆ ಎಸೆಯಬೇಕು” ಎಂದು ಕಿಡಿಕಾರಿದ್ದಾರೆ.

ಇಂಡಿಯಾ ಇಂಟರ್‌‌ನ್ಯಾಷನಲ್ ಸೈನ್ಸ್ ಫೆಸ್ಟಿವೆಲ್(IISF)ನ ಅಧಿವೇಶನದ ವೀಡಿಯೋ ಸಂದೇಶದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷ್ ವರ್ಧನ್ ಈ ಬಗ್ಗೆ ತಿಳಿಸಿದ್ದು, ಸಂಸ್ಥೆಗೆ ಆರೆಸ್ಸೆಸ್‌‌ನ ಎರಡನೇ ನಾಯಕನಾಗಿದ್ದ ಎಂ.ಎಸ್. ಗೊಲ್ವಾಲ್ಕರ್‌ ಅವರ ಹೆಸರನ್ನು ಇಡುವುದಾಗಿ ಹೇಳಿದ್ದಾರೆ. ಅದನ್ನು ‘ಶ್ರೀ ಗೂರುಜಿ ಮಾಧವ ಸದಾಶಿವ ಗೋಲ್ವಾಲ್ಕರ್ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ್ ಡಿಸೀಸ್ ಇನ್ ಕ್ಯಾನ್ಸರ್ ಮತ್ತು ವೈರಲ್ ಇನ್‌‌ಫೆಕ್ಷನ್’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ವೈಜ್ಞಾನಿಕ ಸಂಸ್ಥೆಗೆ ಆರೆಸ್ಸೆಸ್ ನಾಯಕನ ಹೆಸರಿಡುವ ಕೇಂದ್ರದ ಕ್ರಮಕ್ಕೆ ಕೇರಳದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ಗೆ ಗೋಲ್ವಾಲ್ಕರ್ ಹೆಸರಿಡದಂತೆ ಕೋರಿ ಪತ್ರ ಬರೆದಿದ್ದಾರೆ. ಸಂಸ್ಥೆಗೆ ಅಂತರಾಷ್ಟ್ರೀಯ ಖ್ಯಾತಿಯ ಭಾರತೀಯ ವಿಜ್ಞಾನಿಗಳನ್ನು ಹೆಸರಿಡಬಹುದು ಮತ್ತು ಪ್ರಸ್ತುತ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ಕೋಮುವಾದ ಸಿದ್ಧಾಂತವನ್ನು ಪ್ರತಿಪಾದಿಸಿದ ಗೋಲ್ವಾಲ್ಕರ್ ಅವರಂತಹ ವ್ಯಕ್ತಿಯ ಹೆಸರನ್ನು ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ ಇಡುವುದು ಸೂಕ್ತವಲ್ಲ ಎಂದು ಪಿಣರಾಯಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದು, “ಇಂತಹ ಸಂಸ್ಥೆಯು ಮುಕ್ತ ಚಿಂತನೆಯನ್ನು ಕಟ್ಟಿಕೊಟ್ಟ ವ್ಯಕ್ತಿಗಳ ಇತಿಹಾಸದಿಂದ ಪ್ರೇರಿತವಾಗಬೇಕೇ ಹೊರತು ಕೋಮುವಾದವನ್ನು ಆಧರಿಸಿದ ದ್ವೇಷದ ಸಿದ್ಧಾಂತವನ್ನು ಪ್ರತಿಪಾದಿಸಿದವರದ್ದಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆಗೆ ಆರೆಸ್ಸೆಸ್ ಮುಖಂಡರು ಕೂಡಾ ಕೊರೊನಾ ಹಗರಣದಲ್ಲಿ ಬಾಗಿ: ಡಿ.ಕೆ. ಸುರೇಶ್

ಕೋಮುವಾದವನ್ನು ಉತ್ತೇಜಿಸಿರುವುದರ ಹೊರತಾಗಿ ಗೋಲ್ವಾಲ್ಕರ್‌ಗೂ ವಿಜ್ಞಾನಕ್ಕೂ ಏನು ಸಂಬಂಧವಿದೆ ಎಂದು ಸಂಸದ ಶಶಿ ತರೂರ್ ಕೇಳಿದ್ದು, “ಧರ್ಮವು ವಿಜ್ಞಾನದಲ್ಲಿ ಪ್ರಾಬಲ್ಯ ಸಾಧಿಸಬೇಕು” ಎಂಬ ಉಲ್ಲೇಖಕ್ಕಾಗಿ ಹಿಟ್ಲರ್ ಅಭಿಮಾನಿ ಗೋಲ್ವಾಲ್ಕರ್ ಅವರನ್ನು ನೆನಪಿಸಿಕೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಗೋಲ್ವಾಲ್ಕರ್ ಅತಿದೊಡ್ಡ ಕೋಮುವಾದಿ ಮತ್ತು ಅವರ ನಾಮಕರಣ ಕ್ರಮವನ್ನು ವಿರೋಧಿಸುವುದಾಗಿ ಸಿಪಿಐ (ಎಂ) ಪೊಲಿಟ್‌ಬ್ಯುರೊ ಸದಸ್ಯ ಎಂ.ಎ. ಬೇಬಿ ಹೇಳಿದ್ದು, “ಕೇರಳದ ಪ್ರಜಾಪ್ರಭುತ್ವ ಸಮುದಾಯವು ಈ ಕ್ರಮವನ್ನು ವಿರೋಧಿಸಬೇಕು. ಗಾಂಧೀಜಿಯವರ ಹತ್ಯೆಯ ಸಮಯದಲ್ಲಿ ಈ ಆರೆಸ್ಸೆಸ್ ಮುಖ್ಯಸ್ಥ ಭಾರತದಲ್ಲಿ ಕೋಮು ದ್ವೇಷದ ಹರಡುವಿಕೆಗೆ ಕಾರಣವಾಗಿದ್ದರು. 1940 ರಿಂದ 1970 ರವರೆಗೆ ಗೋಲ್ವಾಲ್ಕರ್ ಮುಖ್ಯಸ್ಥರಾಗಿದ್ದಾಗ, ಆರೆಸ್ಸೆಸ್ ಭಾರತ ಕಂಡ ಅತಿದೊಡ್ಡ ಕೋಮು ಗಲಭೆಗಳನ್ನು ನಡೆಸಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಣ್ಣ ಕೈಗಾರಿಕೆಗೆ ಘೋಷಿಸಿದ ಸಾಲ ಯೋಜನೆಯ ಅನುಷ್ಠಾನ ವಿಳಂಬ: ಆರೆಸ್ಸೆಸ್ ಅಂಗಸಂಸ್ಥೆ ಆರೋಪ

ಎರಡನೇ ಕ್ಯಾಂಪಸ್ ತಂತ್ರಜ್ಞಾನ ನಾವೀನ್ಯತೆಯ ಕೇಂದ್ರವಾಗಲಿದ್ದು, ಇದು ಕೋಶ ಆಧಾರಿತ ಚಿಕಿತ್ಸಾ ಸಂಶೋಧನೆಗೆ ಅತ್ಯಾಧುನಿಕ ಸೌಲಭ್ಯ ಒದಗಿಸಲಿದೆ. ಕ್ಯಾನ್ಸರ್ ಔಷಧಗಳು, ಇಮ್ಯುನೊಥೆರಪಿ ಸಂಶೋಧನೆ, ಸ್ಟೆಮ್ ಸೆಲ್ ಕಸಿ, ಜೀನ್ ಥೆರಪಿ ಮತ್ತು ಸೂಕ್ಷ್ಮಜೀವಿಯ ಕ್ಯಾನ್ಸರ್ ಪತ್ತೆ ಮತ್ತು ವಿಶ್ಲೇಷಣೆ ಕುರಿತು ಸಂಶೋಧನೆಗಳು ಇಲ್ಲಿ ನಡೆಯಲಿದೆ.

ಇದನ್ನೂ ಓದಿ: ಆಪರೇಷನ್ ಕಮಲದಲ್ಲಿ ಶುರುವಾಯ್ತು ಕೃಷ್ಣ ಗಾರುಡಿ: ಒಕ್ಕಲಿಗ ವರ್ಸಸ್ ಒಕ್ಕಲಿಗೆ! ಇದು ಆರೆಸ್ಸೆಸ್ಸಿನ ಹೊಸ ದಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...