Homeಕರೋನಾ ತಲ್ಲಣಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುತ್ತಿರುವ ಜಲಪಾತಗಳ ನಡುವೆ ಬಣಗುಡುತ್ತಿರುವ ಮಲೆನಾಡಿನ ಪ್ರವಾಸಿ ತಾಣಗಳು

ಜೋಗ ಜಲಪಾತ, ಚಿಕ್ಕಮಗಳೂರಿನ ಬೆಟ್ಟಗಳ ಸಾಲು, ಕೊಡಗಿನ ಕಾಡು ಬೆಟ್ಟಗಳು ಎಲ್ಲೆಡೆ ಮಳೆಗಾಲದ ಜೂನ್, ಜುಲೈ ತಿಂಗಳಲ್ಲಿ ಪ್ರತಿ ವರ್ಷ ಪ್ರವಾಸಿಗರ ದಂಡು ನೆರೆದಿರುತ್ತಿತ್ತು.

- Advertisement -
- Advertisement -

ಬೆಳಗಾವಿಯಿಂದ ಕೊಡಗಿನ ತುದಿಯವರೆಗೆ ವಾರವಿಡಿ ಇನ್ನಿಲ್ಲದ ಮಳೆ. ಗುಡುಗು, ಸಿಡಿಲು, ಮಳೆ ಬಿಲ್ಲುಗಳ ಜೂಟಾಟ. ಘಟ್ಟದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ನದಿಗಳು ತುಂಬಿಹರಿಯುತ್ತಿವೆ. ಅಣೆಕಟ್ಟೆಗಳಿಗೆ ಒಳ ಹರಿವು ಹೆಚ್ಚಿದೆ. ಕೃಷ್ಣಾ ಕಾವೇರಿ ಕೊಳ್ಳದ ನದಿಗಳೆಲ್ಲ ಕೆಂಪು ಸಮುದ್ರದಂತೆ ರಭಸದಿಂದ ಭೋರ್ಗರೆಯತೊಡಗಿವೆ. ಆದರೆ, ಕೊರೊನಾ ಸಾಂಕ್ರಾಮಿಕದಿಂದ ಮಲೆನಾಡಿನ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.

ಹೌದು, ರಾಜ್ಯದೆಲ್ಲೆಡೆ ರೈತರ ಮೊಗದಲ್ಲಿ ಸಂತಸ ಅರಳಿದೆ. ಹಳ್ಳಿ ಹಳ್ಲಿಯಲ್ಲೂ ಜನರು ಗೊಬ್ಬರ, ಭತ್ತ, ಟ್ರಿಲ್ಲರ್, ನಾಟಿಗಳ ಅವಸರದ ಓಡಾಟದಲ್ಲಿ ಮುಳುಗಿದ್ದಾರೆ. ಜೂನ್ ತಿಂಗಳು ಬಂದರೆ ಎಲ್ಲರಿಗೂ ಆತಂಕ, ಸಂತಸ, ಚಿಂತೆ ಪ್ರಾರಂಭವಾಗಿ ಬಿಡುತ್ತದೆ. ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಸರಿ, ಬರದಿದ್ದರೆ ಏನು ಎತ್ತ ಎಂಬ ನಿರಾಶೆ, ಅನಿಶ್ಚಿತತೆ. ಮುಂಗಾರು ಕೈಕೊಟ್ಟರೆ ವರ್ಷದ ಕೂಳಿನ ಕತೆ ಏನೆಂಬ ಚಿಂತೆ..   ಈ ವರ್ಷ ಜನರಲ್ಲಿ ಯಾವುದೇ ಆತಂಕಗಳಿಲ್ಲ. ಏಕೆಂದರೆ ಮುಂಗಾರು ಸರಿಯಾದ ಸಮಯಕ್ಕೆ ಬಂದಿದೆ, ವರುಣ ಆರ್ಭಟಿಸೊಡಗಿದ್ದಾನೆ. ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಎತ್ತು ಕೋಣಗಳನ್ನು ಗದ್ದೆಗೆ ಹೊಡೆದುಕೊಂಡು ಜನರು ಪದಗಳನ್ನು ಹಾಡುತ್ತಿದ್ದಾರೆ.

ಕೃಷಿಯ ಕತೆ ಹಾಗಾದರೆ ಮಳೆಗಾಲದಲ್ಲಿ ಮಲೆನಾಡಿನ ಚಿತ್ರವೇ ಬೇರೆ. ದಿನವಿಡೀ ಬಿಡುವಿರದೇ  ಸುರಿಯುವ ಜಡಿ ಮಳೆ. ಬೇಸಿಗೆಯ ಬಿರು ಬಿಸಿಲಿಗೆ  ಬತ್ತಿ ಬಸವಳಿದು ಒಣಗಿದ್ದ ಹಳ್ಳ ಕೊಳ್ಲಗಳೆಲ್ಲ ಮರು ಹುಟ್ಟು ಪಡೆದು ಧುಮ್ಮಿಕ್ಕುವ ಕಲರವ. ಪ್ರಕೃತಿ ಹಚ್ಚ ಹಸಿರಾಗಿ ನಳ ನಳಿಸುವ ಸಂಭೃಮ. ನಡುವೆ ಮಾರು ಮಾರಿಗೆ ಬೆಟ್ಟದಿಂದ ಧುಮ್ಮಿಕ್ಕುವ ಝರಿಗಳು. ರಭಸದಿಂದ ಭೋರ್ಗರೆಯುವ ಜಲಪಾತಗಳು. ಮಲೆನಾಡಿನ ಮಳೆಗಾಲವೇ ಹಾಗೆ..! ದೇಶದ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಜಿಟಿ ಜಿಟಿ ಮಳೆಯ ನಡುವೆ ಆ ಬೆಟ್ಟದಿಂದ ಈ ಗುಡ್ಡದಿಂದ ಇಳಿಯುವ ಜಲಧಾರೆಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಪ್ರವಾಸಿಗರ ದಂಡು ಮುಗಿ ಬೀಳುತ್ತದೆ. ಮಲೆನಾಡಿನ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೊಟೇಲು, ಲಾಡ್ಜು, ಟೀ, ತಿಂಡಿ ತಿನಿಸು ಮಾರುವವರು, ಬಾಡಿಗೆ ವಾಹನ ನಡೆಸುವವರು ಎಲ್ಲರ ಬದುಕು ಈ ಮಳೆಗಾಲದ ಮೇಲೆಯೇ ನಿಂತಿದೆ.

ಇದನ್ನೂ ಓದಿ : ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಮಳೆ : ಮುಳುಗಡೆ ಭೀತಿಯಲ್ಲಿ ಬೆಳಗಾವಿ ಜಿಲ್ಲೆಯ ಗ್ರಾಮಗಳು

ಸುಪ್ರಸಿದ್ದ ಜೋಗ ಜಲಪಾತ, ಚಿಕ್ಕಮಗಳೂರಿನ ಬೆಟ್ಟಗಳ ಸಾಲು, ಕೊಡಗಿನ ಕಾಡು ಬೆಟ್ಟಗಳು ಎಲ್ಲೆಡೆ ಮಳೆಗಾಲದ ಜೂನ್ ಜುಲೈ ತಿಂಗಳಲ್ಲಿ ಪ್ರತಿ ವರ್ಷ ಪ್ರವಾಸಿಗರ ಜನ ಜಾತ್ರೆ ನೆರೆಯುತ್ತಿತ್ತು. ಆದರೆ ಈ ವರ್ಷ ಕೊರೊನಾ ಕಾರಣದಿಂದ ಮಲೆನಾಡಿನ ಯಾವ ಪ್ರವಾಸಿ ತಾಣಗಳೂ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿಲ್ಲ. ಎಲ್ಲೆಡೆ ಸಂಚಾರ ನಿರ್ಬಂಧವಿದೆ. ವಾರಾಂತ್ಯದ ರಜೆ ಕಳೆಯಲು ಬರುತ್ತಿದ್ದ ಐಟಿ ಉದ್ಯೋಗಿಗಳೂ ಈ ವರ್ಷ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಮಲೆನಾಡಿನ ಪ್ರವಾಸಿ ತಾಣಗಳು ಜನರಿಲ್ಲದೇ ಬಣಗುಡುವಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಫಾಲ್ಸ್, ತೀರ್ಥಕೆರೆ ಫಾಲ್ಸ್, ಸಗೀರ್ ಫಾಲ್ಸ್‌, ಸಿರಿಮನೆ ಫಾಲ್ಸ್, ಕಲ್ಲತ್ತಿಗರಿ ಫಾಲ್ಸ್, ಶಂಕರ್ ಫಾಲ್ಸ್ ಸೇರಿದಂತೆ ಜಿಲ್ಲೆಯ ದಶದಿಕ್ಕುಗಳಲ್ಲೂ ಜಲಪಾತಗಳು ಮೈದುಂಬಿ ಧುಮುಕುತ್ತಿವೆ. ಚಿಕ್ಕಮಗಳೂರು-ಮಂಗಳೂರು ಮಾರ್ಗದ ಚಾರ್ಮಡಿ ಘಾಟಿಯ ಫಾಲ್ಸ್‌ಗಳು ನೋಡುಗರ ಕಣ್ಣು ಕೋರೈಸುವಂತೆ ಧುಮ್ಮಿಕ್ಕುತ್ತಿವೆ. ಯಾವಾಗಲೂ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ಚಾರ್ಮಾಡಿಯ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿದೆ.

ಚಾರ್ಮಾಡಿ ಘಾಟ್‌ನಲ್ಲಿ ರಸ್ತೆ ಬದಿಯ ಜಲಪಾತ

ಉತ್ತರ ಕನ್ನಡ, ಶಿವಮೊಗ್ಗ, ಕೊಡಗಿನಲ್ಲೂ ಇದೇ ಕತೆ.  ಸಸ್ಯ ಸಂಪದ್ಭರಿತವಾದ ಉತ್ತರ ಕನ್ನಡ ಜಿಲ್ಲೆ ತನ್ನ ಕಾಡಿನ ಗರ್ಭದಲ್ಲಿ ನೂರಾರು ಪ್ರಾಕೃತಿಕ ಕೌತುಕವನ್ನು ಅಡಗಿಸಿಟ್ಟುಕೊಂಡಿದೆ. ಇಲ್ಲಿನ ಕಾಡು ಕಣಿವೆಗಳಲ್ಲಿ ಪ್ರತಿ ವರ್ಷವೂ ಒಂದೊಂದು ಹೊಸ ಜಲಪಾತ ಸಂಶೋಧನೆಯಾಗುತ್ತದೆ. ಜನಾಕರ್ಷಣೆಯ ತಾಣವಾಗಿ ಮಾರ್ಪಡುತ್ತಿದೆ. ಮಾಗೋಡ್ ಫಾಲ್ಸ್‌, ಉಂಚಳ್ಳಿ ಫಾಲ್ಸ್, ಶಿರ್ಲೆ ಫಾಲ್ಸ್, ಸಾತೊಡ್ಡಿ ಫಾಲ್ಸ್, ಶಿವಗಂಗಾ ಫಾಲ್ಸ್, ವಾಗಳ್ಳಿ ಫಾಲ್ಸ್ ಹೀಗೆ ಹಲವು ಫಾಲ್ಸ್‌ಗಳಿವೆ. ಪಕ್ಕದಲ್ಲಿ ಜೋಗ, ಕಾಳಿ ಅಘನಾಶಿನಿ, ಬೇಡ್ತಿ, ಶರಾವತಿಯ ಕಣಿವೆಯಲ್ಲಿ ಹೇಳ ಹೆಸರಿಲ್ಲದ ಮಳೆಗಾಲದಲ್ಲಿ ಮಾತ್ರ ಕಾಣುವ ಅಪರೂಪದ ಇನ್ನೆಷ್ಟೊ ಅದ್ಭುತ ಜಲಪಾತಗಳು. ಇವನ್ನೆಲ್ಲ ನೋಡಲು ಸದ್ಯ ಯಾವ ಪ್ರವಾಸಿಗರಿಗೂ ಅವಕಾಶವಿಲ್ಲ.

ಕೊರೊನಾ ಸಾಂಕ್ರಾಮಿಕ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿರುವ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಜನರ ಪರಿಸ್ಥಿತಿಯನ್ನು ಕೇಳುವವರೂ ಯಾರೂ ಇಲ್ಲ. ಭೋರ್ಗರೆಯುವ ಜಲಪಾತಗಳ ಮುಂದಿನ ಖಾಲಿತನದಲ್ಲಿ ಇವರೆಲ್ಲರ ಹಸಿವು ಸಂಕಟ ಮಡುಗಟ್ಟುತ್ತಿದೆ.

ವಿಶ್ವ ವಿಖ್ಯಾತ ಜೋಗ ಜಲಪಾತದ ಸುತ್ತಮುತ್ತ ಪ್ರವಾಸಿಗರನ್ನೇ ನಂಬಿ ಸರಿಸುಮಾರು 500 ಕುಟುಂಬಗಳು ಜೀವನ ನಡೆಸುತ್ತಿವೆ. ಜೀವನೋಪಾಯಕ್ಕಾಗಿ,  ಹೋಮ್‌ ಸ್ಟೇ, ಲಾಡ್ಜು, ಟೀ ಅಂಗಡಿ, ಹೊಟೇಲ್, ಜೀಪು ಕಾರು ಬಾಡಿಗೆ, ಫೊಟೋಗ್ರಫಿ, ಅಡ್ವೆಂಚರ್ ಟೂರಿಸ್ಟ್ ಗೈಡ್‌, ಟ್ರಕ್ಕಿಂಗ್‌ ಪಾರ್ಟನರ್‌ ಹೀಗೆ ಇಲ್ಲಿನ ಜನರು  ಬೆಂಗಳೂರಿನಿಂದ ಬರುವ ಪ್ರವಾಸಿಗರನ್ನೇ ನಂಬಿ ಕುಳಿತಿದ್ದಾರೆ.

ಮುಂಗಾರಿಗೆ ಜೀವಪಡೆದ ರೈಲು ಮಾರ್ಗದ ಪಕ್ಕದ ಸಾಲು ಸಾಲು ಜಲಪಾತಗಳು

ಈ ವರ್ಷ ಮುಂಗಾರು ಕೈಹಿಡಿದಿದೆ. ಆದರೆ ಕೊರೊನಾ ಕೈಕೊಟ್ಟಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್, ಶಿವಮೊಗ್ಗದ ಆಗುಂಬೆ, ಕೊಡಚಾದ್ರಿ, ಸಕಲೇಶಪುರ, ಮಡಿಕೇರಿ, ವಿರಾಜಪೇಟೆ, ಸುಬ್ರಹ್ಮಣ್ಯದ ಸುತ್ತ ಮುತ್ತದ  ಜಲಪಾತಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಪ್ರವಾಸಿಗರು ಮಾತ್ರ ಎಲ್ಲಿಗೂ ಹೋಗುವಂತಿಲ್ಲ. ಒಟ್ಟಿನಲ್ಲಿ ಸಾಂಕ್ರಾಮಿಕದಿಂದಾಗಿ ಈ ವರ್ಷ ಮಲೆನಾಡಿನಲ್ಲಿ ಮುಂಗಾರಿನ ಕಲರವವಿಲ್ಲ. ಪ್ರತಿವರ್ಷದಂತೆ ಮುಂಗಾರು ಈ ವರ್ಷವೂ ಮಲೆನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಮೆರಗು ನೀಡಿದೆ. ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು ನಗರಗಳು ಪ್ರವಾಸಿಗರಿಲ್ಲದೇ ನೀರವ ಮೌನದಲ್ಲಿ ಮುಳುಗಿವೆ.


ಇದನ್ನೂ ಓದಿ : ತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...