Homeನಿಜವೋ ಸುಳ್ಳೋನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

ನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

ಸ್ವಾತಂತ್ರ್ಯ ಚಳವಳಿಯ ನೇತಾರ ಮಹಾತ್ಮ ಗಾಂಧಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನ ಇಂದು. ಜೆ.ಎನ್.ಯು.ಎಸ್.ಯು ಮಾಜಿ ಅಧ್ಯಕ್ಷರಾದ ಲೋಕೇಶ್ ಮಾಲ್ತಿ ಪ್ರಕಾಶ್ ರವರು ಗೋಡ್ಸೆಯೊಂದಿಗೆ ಒಂದು ಕಾಲ್ಪನಿಕ ಸಂದರ್ಶನ ನಡೆಸಿದ್ದಾರೆ. 

ಭಾರತದಲ್ಲಿ 2014ರಿಂದ ದೇಶಭಕ್ತ ಸರ್ಕಾರ ಬಂದ ಮೇಲೆ, ತಾನು ಮತ್ತು ತನ್ನ ಸಾಹಸಗಳ ಬಗ್ಗೆ ಭಾರತದಲ್ಲಿ ಹೊಸ ಆಸಕ್ತಿ ಹುಟ್ಟಿದೆ ಎಂಬ ಸುದ್ದಿ ಕಳೆದೆರಡು ವರ್ಷಗಳ ಹಿಂದೆ ನಾಥುರಾಮ್ ಗೋಡ್ಸೆಯನ್ನು ತಲುಪಿತು. ಉಲ್ಲಸಿತನಾದ ಗೋಡ್ಸೆ ಭೂಮಿಗೆ ತಲುಪಲು ಟ್ರಾವೆಲ್ ವೀಸಾಕ್ಕೆ ಅರ್ಜಿ ಹಾಕಿದ. ಆದರೆ ಒಪ್ಪಿಗೆ ಪಡೆಯಲು ಹಲವಾರು ಅಡೆತಡೆ ಎದುರಾದವು. ಅದ್ಹೇಗೋ ಅಧಿಕಾರಿಗಳ ‘ರೆಡ್‍ಟೇಪ್’ ಬಾಹು ಯಮಲೋಕಕ್ಕೂ ಚಾಚಿತು.

ಕೈ ಬೆಚ್ಚಗಿಲ್ಲದೇ ಈ ಬಾಬುಗಳು ಗೋಡ್ಸೆ ಫೈಲನ್ನು ಮುಂದಕ್ಕೆ ಹೋಗಲು ಬಿಡಲೇ ಇಲ್ಲ. ಆದರೂ ಅದ್ಹೇಗೋ ಸ್ವಲ್ಪ ಮುಂದಕ್ಕೆ ಚಲಿಸಿದಾಗ ದುಷ್ಟ ಕಾಂಗ್ರೆಸ್ ಉನ್ನತ ಅಧಿಕಾರಿಗೆ ಈ ಗೋಡ್ಸೆ ಭೂಮಿಗೆ ಬರುವುದು ಇಷ್ಟವಾಗಲಿಲ್ಲ. ಗೋಡ್ಸೆ ಸ್ವರ್ಗ ಮತ್ತು ಭೂಮಿಯಲ್ಲಿರುವ ಕೆಲವು ಎಳೆಗಳನ್ನು ಎಳೆದ. ಅಂತಿಮವಾಗಿ ಭೂಮಿಯ ಮೇಲಿನ ಭಯಂಕರ ಹೆಣ್ಣುಮಗಳೊಬ್ಬಳು ಶಾಪ ಕೊಟ್ಟ ಪರಿಣಾಮವಾಗಿ ಆ ಉನ್ನತ ಅಧಿಕಾರಿ ಅಲ್ಲಿಂದ ವರ್ಗಾವಣೆಗೊಂಡ! ಹಾಂ, ಗೋಡ್ಸೆಗೆ ಭಾರತಕ್ಕೆ ಟ್ರಾವೆಲ್ ವೀಸಾ ಸಿಕ್ಕೇ ಬಿಡ್ತು. ಗೋಡ್ಸೆ ಕೇದಾರನಾಥದ ಗುಹೆಯೊಂದರಲ್ಲಿ ‘ಸಮಾಧಿ’ ಸ್ಥಿತಿಗೆ ತೆರಳುವ ಮುನ್ನ ನನಗೆ ಆತನ ಸಂದರ್ಶನ ಮಾಡುವ ಅವಕಾಶ ಸಿಕ್ಕಿತು. ಆ ಸಂದರ್ಶನದ ಕೆಲವು ತುಣುಕುಗಳು ನಿಮಗಾಗಿ:

ಪ್ರಶ್ನೆ: ಮಿ. ಗೋಡ್ಸೆ, ಹಲವಾರು ದಶಕಗಳ ನಂತರ ಮತ್ತೆ ಹೆಡ್‍ಲೈನಿನಲ್ಲಿರುವುದು ಹೇಗನಿಸುತ್ತೆ?
ಗೋಡ್ಸೆ: ಸೂಪರ್, ಗ್ರೇಟ್! ಇಂತಹ ಒಂದು ಅವಕಾಶ ಮಾಡಿಕೊಟ್ಟ ಸಾಧ್ವಿಗೆ ಥ್ಯಾಂಕ್ಸ್ ಹೇಳ ಬಯಸುತ್ತೇನೆ. ದೇಶಭಕ್ತರು ಅಧಿಕಾರಕ್ಕೆ ಬಂದಾಗಿನಿಂದ ನನಗೊಂದು ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದೆ. ನಿಮಗೆ ಗೊತ್ತಾ, ಭೂಮಿಯ ಮೇಲೆ ನಿನಗಿಂತ ನನಗೆ ಹೆಚ್ಚು ಭಕ್ತರಿದ್ದಾರೆ ಎಂದು ನಾನು ಹಿಟ್ಲರ್‍ಗೇ ಚಾಲೆಂಜ್ ಮಾಡಿ ಬಂದಿದ್ದೇನೆ. ಅವನು ಇದರಲ್ಲಿ ಸೋತರೆ, ಗೋಮೂತ್ರ ಕುಡಿಯಲೇಬೇಕು. ಗೋಮೂತ್ರವಷ್ಟೇ ನಿನ್ನನ್ನು ನಿಜವಾದ ಆರ್ಯನನ್ನಾಗಿ ಮಾಡಬಲ್ಲದು ಎಂದು ಅವನಿಗೆ ಹೇಳಿದ್ದೇನೆ ಕೂಡ…

ಪ್ರ: ಆದರೆ, ಪ್ರಧಾನಿ ತಮಗೆ ಅಸಂತೋಷವಾಗಿದೆ ಎಂದಿದ್ದಾರೆ, ಅವರು ತಮ್ಮ ಹೃದಯದಿಂದ ಸಾದ್ವಿಯನ್ನು ಕ್ಷಮಿಸಲ್ಲವಂತೆ..
ಗೋಡ್ಸೆ: ಅವರು ಪಿಎಂ. ಅವರು ಬಹಳಷ್ಟು ಜನರನ್ನು ಓಲೈಸಬೇಕಾಗುತ್ತೆ. ಅದು ಡೆಮಾಕ್ರಸಿಯ ಧ್ವನಿ… ನೀವು ಎಲ್ಲರನ್ನು ಸಂತುಷ್ಟಗೊಳಿಸಬೇಕಾಗುತ್ತೆ.

ಪ್ರಶ್ನೆ: ಸಾಧ್ವಿಯನ್ನು ಎಂದೂ ಕ್ಷಮಿಸಲ್ಲ ಅಂದಿದ್ದಾರೆ ಅಂದಮೇಲೆ, ಸಾಧ್ವಿ ಏನೋ ಘನಘೋರ ತಪ್ಪು ಮಾಡಿರಬೇಕಲ್ಲ?
ಗೋಡ್ಸೆ: ಇದು ಎಲೆಕ್ಷನ್ ಟೈಮ್. ಎಲೆಕ್ಷನ್ ಟೈಮ್ ಅಂದರೆ ‘ಜುಮ್ಲಾ ಟೈಮ್’…

ಪ್ರಶ್ನೆ: ಅಂದ್ರೆ ಪಿಎಂ ಸುಮ್ಮನೇ ಒಂದು ‘ಜುಮ್ಲಾ’ ಹೊಡೀತಿದ್ದಾರೆ ವಿನಹ ಸತ್ಯವನ್ನಲ್ಲ?
ಗೋಡ್ಸೆ: ಜನರನ್ನು ಇದು ಸತ್ಯ ಅಂತಾ ನಂಬಿಸ್ತೀವಲ್ಲ, ಅದೇ ಸತ್ಯ…

ಪ್ರಶ್ನೆ: ಕೆಲವು ಜನ ಹೇಳ್ತಾರೆ, ನೀನು ದೇಶಭಕ್ತ ಅಂತಾ. ಅದು ಜುಮ್ಲಾನಾ, ಸತ್ಯವಾ?
ಗೋಡ್ಸೆ: ಅದು ವೀಕ್ಷಕನ (ಅಬ್ಸರ್ವರ್) ಮೇಲೆ ಅವಲಂಬಿತ…

ಪ್ರಶ್ನೆ: ಅಂದರೆ ಹಾಗೇ ಹೇಳತಿರೋ ವ್ಯಕ್ತಿ ಮೇಲಲ್ಲ…
ಗೋಡ್ಸೆ: ಅದು ಆತನ ಪಾಲಿಗೆ ಜುಮ್ಲಾ. ಆತನಿಗೆ ಗೊತ್ತು ತಾನೊಂದು ಜುಮ್ಲಾ ಹೊಡಿತಿದ್ದೀನಿ ಅಂತಾ. ಆದರೆ ಅದನ್ನು ಸತ್ಯ ಅಂತಾ ಸ್ವೀಕರಿಸ್ತಾರೆ ಅಂತಾನೂ ಆತನಿಗೆ ಗೊತ್ತಿರುತ್ತೆ. ಅದೇ ಜುಮ್ಲಾದ ಶಕ್ತಿ. ಅದು ಪಿಎಂ ತಮ್ಮ ಹೃದಯದಿಂದ ( ಅದಕ್ಕೂ ಹೃದಯ ಬೇಕು) ಯಾರನ್ನೋ ಕ್ಷಮಿಸುತ್ತಿದ್ದಾರೆ ಅನ್ನೋ ಬಿಂಬವೂ ಹೌದು, ಪಿಎಂ ತನ್ನ ಹೃದಯದಿಂದ ಕ್ಷಮಿಸಲ್ಲ ಅನ್ನುವ ಸತ್ಯವೂ ಹೌದು…

ಪ್ರಶ್ನೆ: ನಿನ್ನ ಬಗ್ಗೆ ನಿನಗೆ ಏನು ಅನಿಸುತ್ತೆ? ನೀನು ದೇಶಭಕ್ತನಾ?
ಗೋಡ್ಸೆ: ನಾನೊಬ್ಬ ಜುಮ್ಲಾ, ನಾನೊಂದು ಜುಮ್ಲಾ…

ಪ್ರಶ್ನೆ: ಅಂದರೆ ಇದೆಲ್ಲ ಒಂದು ಸುಳ್ಳಿನ ಕಂತೆ?
ಗೋಡ್ಸೆ: ಅದು ಸುಳ್ಳಿನ ಕಂತೆಯಲ್ಲ, ಅದು ‘ಫೀಲ್ ಗುಡ್’ ಭಾವ.. ಜುಮ್ಲಾದಿಂದ ನಿನಗೆ ಒಂದು ಆಹ್ಲಾದಕರ ಭಾವ ಆವರಿಸುತ್ತೆ, ಅದೇ ಜುಮ್ಲಾದ ಉದ್ದೇಶವೂ ಕೂಡ. ಅಚ್ಛೇ ದಿನ್ ಅಂದರೆ ಅದೇ…ಪಕೋಡಾ ಮಾರ್ತಾ ಮಾರ್ತಾ, ಗಾಡಿ ತೊಳಿತಾ ತೊಳಿತಾ ಅಥವಾ ಚಾ ಮಾರ್ತಾ ಮಾರ್ತಾ ನಿನಗೆ ‘ಫೀಲ್ ಗುಡ್’ ಎಂಬ ಸಂತೋಷದ ಭಾವ ಉಂಟಾಗುತ್ತೆ. ಕೊಲ್ಲೋ ಮೂಲಕವೂ ನೀನು ‘ಫೀಲ್‍ಗುಡ್’ ಆನಂದ ಪಡಿಬಹುದು. ಒಳ್ಳೆಯ ಭಾವನೆಗಳಿಗಿಂತ ಈ ‘ಫಿಲ್‍ಗುಡ್’ನ ಸೆನ್ಸೆಷನ್ ಇದೆಯಲ್ಲ, ಇದು ಬಹಳ ಬಹಳ ದೊಡ್ಡದು. ನಾನಿಲ್ಲಿ ಶಬ್ದಗಳ ಆಟ ಆಡ್ತಿಲ್ಲ. ಭಾರತೀಯ ಫಿಲಾಸಫಿಯಲ್ಲಿ ಎಲ್ಲವೂ ಮಾಯೆಯೇ. ಅದರರ್ಥ ಇಡೀ ವಿಶ್ವವೇ ಒಂದು ನಹಾನ್ ಜುಮ್ಲಾ. ನೀನು ಈಗಾಗಲೇ ಜುಮ್ಲಾಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದೀಯಾ. ಒಂದಿಷ್ಟು ಜುಮ್ಲಾ ಸೇರಿಸಿದ್ದಕ್ಕೆ ನನ್ನನ್ನು ಏಕೆ ದೂಷಣೆ ಮಾಡ್ತೀಯಾ? ಒಂದೇ ದಾರಿ ಅಂದರೆ ನ್ಯಾಯ ಪಡೆಯುವುದಲ್ಲ ಮುಕ್ತಿ ಪಡೆಯುವುದು. ಅದೊಂದು ಮರೀಚಿಕೆ.

ಪ್ರಶ್ನೆ: ಜನರಿಗೆ ಮೋಕ್ಷಕ್ಕಿಂತ ನ್ಯಾಯದ ಅಗತ್ಯ ಬಹಳ ಇದೆಯಲ್ಲ?
ಗೋಡ್ಸೆ: ಜನರಿಗೆ ತಮಗೇನೂ ಬೇಕಂತನೇ ಗೊತ್ತಿಲ್ಲ. ನನಗೆ ಜುಮ್ಲಾಗಳೇ ಬೇಕು ಅಂತಾ ಯಾವನಾದರೂ ಹೇಳಿದ್ದಾನಾ? ಇಲ್ಲ, ಆದರೆ ದೇಶಭಕ್ತ ಪಾರ್ಟಿಗೆ ಗೊತ್ತು, ಎಲ್ಲರಿಗೂ ಜುಮ್ಲಾ ಬೇಕು ಅಂತಾ. ಅದಕ್ಕೇ ಅವರು ಯಥೇಚ್ಛವಾಗಿ ಜುಮ್ಲಾಗಳನ್ನು ಒದಗಿಸ್ತಾ ಇದ್ದಾರೆ…7 ದಶಕಗಳಿಂದ ಜಾತ್ಯತೀತ ಸರ್ಕಾರಗಳು ಜನರನ್ನು ಈ ಹಸಿವಿನಿಂದ ಕಾಡಿದವು. ದೇಶಭಕ್ತ ಸರ್ಕಾರವು ಅವರ ಖಾಲಿ ಹೊಟ್ಟಗಳನ್ನು ಜುಮ್ಲಾಗಳಿಂದ ಭರ್ತಿ ಮಾಡಿತು.

ಪ್ರಶ್ನೆ: ನೀನು ಅಲ್ಲಿ ಮೇಲೆ ಮೋಡಗಳಲ್ಲಿ ಇರ್ತೀಯಾ. ಯಾವುದಾದರೂ ಸ್ಯಾಟ್‍ಲೈಟ್ ನಿನ್ನ ಇರುವಿಕೆಯನ್ನ ಪತ್ತೆ ಮಾಡಿದೆಯಾ?
ಗೋಡ್ಸೆ: ಇಲ್ಲವೇ ಇಲ್ಲ, ಸಾಧ್ಯಾನೇ ಇಲ್ಲ. ಮೋಡಗಳಲ್ಲಿ ಬದುಕುವುದರ ಅನುಕೂಲ ಅಂದ್ರೆನೇ ಅದು. ಸ್ಯಾಟ್‍ಲೈಟ್ಸ್ ಮತ್ತು ರೆಡಾರ್‍ಗಳು ಎಂದೂ ನಿನ್ನ ಪತ್ತೆ ಹಚ್ಚಕಾಗಲ್ಲ. ಅದಕ್ಕೇ ಟ್ರಂಪ್‍ಗೆ ಆಕಾಶದಲ್ಲಿ ನನ್ನ ಚಲನವಲನ ಗೊತ್ತಾಗದ ರೀತಿಯಲ್ಲಿ ನಾನು ಭಾರತದಲ್ಲಿ ಬಂದಿಳಿದೆ.
ಇದರ ನಂತರ ಗೋಡ್ಸೆ ತನ್ನ ‘ಸಮಾಧಿ’ಯತ್ತ ಹೊರಟ…


ಇದನ್ನೂ ಓದಿ: ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಗೋಡ್ಸೆ ಅವರನ್ನ ಭಯೋತ್ಪಾದಕ ಅಂತ ಕರೆಯುವುದಾದರೆ ,ಭಗತ್ ಸಿಂಗ್ ಅವರನ್ನು ನೇಣು ಕುಣಿಕೆ ತಪ್ಪಿಸಲು ಆಗದವರನ್ನ ,ಸುಭಾಷ್ ಚಂದ್ರಭೋಸ್ ಅವರ ಮೇಲೆ ಗೂಢಾಚಾರಿಕೆ ಮಾಡಲು ನೆರವಾದ ಸೋಕಾಲ್ಡ್ ಒಂದು ಕುಟುಂಬ ರಾಜಕಾರಣದ ಪರಿವಾರದವರನ್ನ ,ಚೀನಾದೊಂದಿಗೆ ಹಿಂದಿನಿಂದಲೂ ಸಹಾಯ ಪಡೆಯುತ್ತಿರುವ ಈಗಲೂ ನೆರವು ಪಡೆದು ಚೀನಾದ ಪರ ನಿಲ್ಲೋ ಭಾರತದ ಕಮ್ಯೂನಿಸ್ಟ್ ರನ್ನ ಯಾವ ಭಯೋತ್ಪಾದನೆ ಯವರು ಎಂದು ಕರೆಯಬಹುದು.

LEAVE A REPLY

Please enter your comment!
Please enter your name here

- Advertisment -

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....