Homeಮುಖಪುಟಗುಜರಾತಿಯೊಬ್ಬ ದೇಶದಾದ್ಯಂತ ಹೋಗಬಹುದಾದರೆ, ಬಂಗಾಳಿ ಯಾಕೆ ಹೋಗಬಾರದು: ಮಮತಾ ಬ್ಯಾನರ್ಜಿ

ಗುಜರಾತಿಯೊಬ್ಬ ದೇಶದಾದ್ಯಂತ ಹೋಗಬಹುದಾದರೆ, ಬಂಗಾಳಿ ಯಾಕೆ ಹೋಗಬಾರದು: ಮಮತಾ ಬ್ಯಾನರ್ಜಿ

- Advertisement -
- Advertisement -

“ಗುಜರಾತಿಯೊಬ್ಬ ದೇಶದಾದ್ಯಂತ ಹೋಗಬಹುದಾದರೆ, ಬಂಗಾಳಿಯೊಬ್ಬ ಯಾಕೆ ಹೋಗಬಾರದು?” ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ಗೋವಾದ ಅಸ್ಸೋನೋರಾದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ನಾನು ಬಂಗಾಳಿ ಎಂದು ನನಗೆ ಹೇಳಲಾಗುತ್ತಿದೆ. ಹಾಗಾದರೆ ಅವರು ಯಾರು? ಅವರು ಗುಜರಾತಿ ಅಲ್ಲವೆ? ಅವರು ಗುಜರಾತಿ ಆಗಿರುವುದರಿಂದ ಅವರು ಇಲ್ಲಿಗೆ ಬರಬಾರದು ಎಂದು ಹೇಳಬಹುದೇ? ಒಬ್ಬ ಬಂಗಾಳಿ ರಾಷ್ಟ್ರಗೀತೆಯನ್ನು ಬರೆಯಬಹುದು; ಆದರೆ, ಒಬ್ಬ ಬಂಗಾಳಿ ಗೋವಾಕ್ಕೆ ಬರಲು ಸಾಧ್ಯವಿಲ್ಲವೇ? ನಾವೆಲ್ಲರೂ ಗಾಂಧೀಜಿಯನ್ನು ಗೌರವಿಸುತ್ತೇವೆ. ಗಾಂಧೀಜಿ ಬೆಂಗಾಲಿಯೋ ಅಥವಾ ಬೆಂಗಾಲಿ ಅಲ್ಲದವರೋ ಅಥವಾ ಗೋವನ್ನರೋ ಅಥವಾ ಯುಪಿಯವರೋ ಎಂದು ನಾವು ಎಂದಾದರೂ ಪ್ರಶ್ನಿಸಿದ್ದೇವೆಯೇ? ರಾಷ್ಟ್ರೀಯ ನಾಯಕರೆಂದರೆ ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವವರು” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಗಂಗಾ ಸ್ವಚ್ಛವಾಗಿಲ್ಲವೆಂದು ತಿಳಿದಿದ್ದರಿಂದಲೇ ಆದಿತ್ಯನಾಥ್‌ ಮೋದಿಯಂತೆ ಸ್ನಾನ ಮಾಡಿಲ್ಲ: ಅಖಿಲೇಶ್ ಯಾದವ್

ಗೋವಾದ ರಾಜಕೀಯಕ್ಕೆ ತಮ್ಮ ಪಕ್ಷದ ಪ್ರವೇಶವನ್ನು ಇತರ ಪಕ್ಷಗಳು ಪ್ರಶ್ನಿಸಿವೆ. ಆದಾಗ್ಯೂ, ಗೋವಾದಲ್ಲಿರುವ ಟಿಎಂಸಿ ನಾಯಕರನ್ನು ರಿಮೋಟ್ ಕಂಟ್ರೋಲ್ ಮಾಡಲು ನಾವು ಗೋವಾಕ್ಕೆ ಬಂದಿಲ್ಲ. ನಾವು ಅವರನ್ನು ಬೆಂಬಲಿಸಲು ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.

“ಅವರು ರಾಷ್ಟ್ರೀಯ ನಾಯಕರಾಗುತ್ತಾರೆಯೇ? ಅವರು ಗೋವಾವನ್ನು ಗುಜರಾತ್‌ನಿಂದ ನಿಯಂತ್ರಿಸುತ್ತಾರೆ. ಗೋವಾವನ್ನು ಗುಜರಾತ್ ಅಥವಾ ದೆಹಲಿಯಿಂದ ಮುನ್ನಡೆಸಬಾದರು. ಗೋವಾದ ಜನರು ಗೋವಾವನ್ನು ಮುನ್ನಡೆಸುತ್ತಾರೆ” ಎಂದು ಅವರು ಹೇಳಿದ್ದಾರೆ.

“ನಮಗೆ ಬಿಜೆಪಿಯಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್’ ಅಗತ್ಯವಿಲ್ಲ. ನಾವು ಚುನಾವಣೆಯ ಸಮಯ ಬಂದಾಗ ಮಾತ್ರ ಗಂಗಾ ತೀರಕ್ಕೆ ಹೋಗಿ ಪೂಜೆ ಮಾಡುವುದಿಲ್ಲ. ಚುನಾವಣಾ ಸಮಯ ಬಂದಾಗ ಮೋದಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಅವರು ತಪಸ್ಸಿಗಾಗಿ ಉತ್ತರಾಖಂಡದ ದೇವಸ್ಥಾನಕ್ಕೆ ಹೋಗುತ್ತಾರೆ. ಮತದಾನದ ಸಮಯ ಬಂದಾಗ ಅವರೇ ಪುರೋಹಿತ ಆಗುತ್ತಾರೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ:ಮೋದಿ, ಯೋಗಿ ಆದಿತ್ಯನಾಥರೇ ನೀವು ಚರಿತ್ರೆ ಮುಚ್ಚಿಹಾಕಲು ಹೊರಟಿದ್ದೀರಿ: ಬಿಜೆಪಿ ಎಂಎಲ್‌ಸಿ ವಿಶ್ವನಾಥ್‌

“ಅದನ್ನು ಮಾಡುವ ಎಲ್ಲಾ ಸ್ವಾತಂತ್ರ್ಯ ಅವರಿಗಿದೆ. ಆದರೆ ವರ್ಷದ ಉಳಿದ ದಿನಗಳಲ್ಲಿ ಅವರು ಎಲ್ಲಿರುತ್ತಾರೆ? ಯುಪಿ ಸರ್ಕಾರವು ಕೊರೊನಾದಿಂದ ಸಾವನ್ನಪ್ಪಿದ ಮೃತ ದೇಹಗಳನ್ನು ನದಿಗೆ ಎಸೆಯುತ್ತದೆ. ಅವರು ಗಂಗಾ ತಾಯಿಯನ್ನು ಅಶುದ್ಧಗೊಳಿಸಿದ್ದಾರೆ. ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಅವರ ಬಳಿ ಇಲ್ಲ. ನಾವು ಗಂಗೆಯನ್ನು ನಮ್ಮ ತಾಯಿ ಎಂದು ಕರೆಯುತ್ತೇವೆ. ಬಿಜೆಪಿಯವರು ಕೋವಿಡ್ ಮೃತ ದೇಹಗಳನ್ನು ಗಂಗಾ ನದಿಯಲ್ಲಿ ಎಸೆದಿದ್ದಾರೆ. ಇದನ್ನು ಸಹಿಸಲಾಗದು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಾಲ್ವರು ರೈತರು ಮತ್ತು ಪತ್ರಕರ್ತರನ್ನು ಕೊಂದ ಲಖಿಂಪುರ ಖೇರಿ ಘಟನೆಯ ಬಗ್ಗೆ ಎಸ್‌ಐಟಿ ತನಿಖೆಯನ್ನು ಉಲ್ಲೇಸಿದ ಬ್ಯಾನರ್ಜಿ, ಲಖಿಂಪುರ್ ಘಟನೆಯು “ಯೋಜಿತ ಪಿತೂರಿ” ಎಂದು ಎಸ್‌ಐಟಿ ಹೇಳಿದೆ. “ಯುಪಿ ಸಿಎಂ ರಾಜೀನಾಮೆ ನೀಡಬೇಕಲ್ಲವೇ? ಗೃಹ ಸಚಿವರು ರಾಜೀನಾಮೆ ನೀಡಬಾರದೇ? ಪ್ರಧಾನಿಯವರು ಇದರ ಬಗ್ಗೆ ಮಾತನಾಡಬೇಕು?” ಎಂದು ಒತ್ತಾಯಿಸಿದ್ದಾರೆ.

“ಬಿಜೆಪಿಯನ್ನು ಸೋಲಿಸಲು ಬಯಸುವವರು ಮತಗಳನ್ನು ವಿಭಜಿಸಬೇಡಿ, ನಮ್ಮೊಂದಿಗೆ ಸೇರಿಕೊಳ್ಳಿ” ಎಂದು ಮಮತಾ ಮನವಿ ಮಾಡಿದ್ದಾರೆ. 

ಬಿಜೆಪಿ ವಿರುದ್ಧ ಹೋರಾಡುವ ಬಗ್ಗೆ ಗಂಭೀರವಾಗಿರುವ ಯಾವುದೇ ಪಕ್ಷದೊಂದಿಗೆ ಕೆಲಸ ಮಾಡಲು ತಮ್ಮ ಪಕ್ಷವು ಮುಕ್ತವಾಗಿದೆ. “ಕಾಂಗ್ರೆಸ್ ದೊಡ್ಡ ದೊಡ್ಡ ವಿಷಯಗಳನ್ನು ಹೇಳುತ್ತದೆ. ಏಕಾಂಗಿಯಾಗಿ ಹೋರಾಡುತ್ತೇವೆ ಎನ್ನುತ್ತಾರೆ. ಈಗಲೂ ನಮ್ಮೊಂದಿಗೆ ಜಗಳವಾಡುತ್ತಿದ್ದಾರೆ. ಮೊದಲು ಬಿಜೆಪಿ ವಿರುದ್ಧ ಹೋರಾಡಿ ನಂತರ ದೊಡ್ಡದಾಗಿ ಮಾತನಾಡಿ. ಕಾಂಗ್ರೆಸ್‌ ವಿರುದ್ದ ಮಾತನಾಡಲು ಏನೂ ಇಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ:ನರೇಂದ್ರ ಮೋದಿ ಟ್ವಿಟರ್‌‌ ಖಾತೆ ಹ್ಯಾಕ್‌: ಬಿಟ್‌ ಕಾಯಿನ್‌ ಕುರಿತು ನಕಲಿ ಪೋಸ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...