Homeಚಳವಳಿಶಾಸಕ ಚೌಟಾಲ ನೇತೃತ್ವದಲ್ಲಿ ಗಾಜಿಪುರ್‌ ಗಡಿಯತ್ತ ನುಗ್ಗಿ ಬರುತ್ತಿರುವ ರೈತರ ದಂಡು

ಶಾಸಕ ಚೌಟಾಲ ನೇತೃತ್ವದಲ್ಲಿ ಗಾಜಿಪುರ್‌ ಗಡಿಯತ್ತ ನುಗ್ಗಿ ಬರುತ್ತಿರುವ ರೈತರ ದಂಡು

ಜನವರಿ 17 ರಂದು ಕರಾಳ ಕಾನೂನುಗಳನ್ನು ವಿರೋಧಿಸಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜನವರಿ 17 ರಂದು ರಾಜಿನಾಮೆ ನೀಡಿದ್ದ ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕ್‌ದಳ (ಐಎನ್‌ಎಲ್‌ಡಿ)ಪಕ್ಷದ ಶಾಸಕ ಅಭಯ್ ಸಿಂಗ್ ಚೌಟಾಲ ಸಾವಿರಾರು ರೈತರೊಂದಿಗೆ ಗಾಜಿಪುರ ಗಡಿಯನ್ನು ತಲುಪಿದ್ದಾರೆ.

ಚೌಟಾಲ ಅವರು ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಶನಿವಾರ (ಇಂದು) ಕಾರುಗಳ ಗುಂಪುಗಳು ಚಲಿಸುತ್ತಿರುವ ಸಿನಿಮೀಯ ವಿಡಿಯೋವೊಂದನ್ನು ಟ್ವಿಟ್ಟರ್‌‌ನಲ್ಲಿ ಹಾಕಿದ್ದು, “ಸ್ವಲ್ಪ ಸಮಯದಲ್ಲೇ ಸಾವಿರಾರು ರೈತರೊಂದಿಗೆ ಗಾಜಿಪುರ ಗಡಿಯನ್ನು ತಲುಪಿಲಿದ್ದೇವೆ. ಸರ್ಕಾರದ ಪ್ರತಿ ಪಿತೂರಿಯನ್ನು ಮುರಿದು ಅವರಿಗೆ ಉತ್ತರಿಸಲಿದ್ದೇವೆ” ಎಂದು ಹೇಳಿದ್ದಾರೆ.

ಚೌಟಾಲ ಟ್ವೀಟ್ಟರ್‌‌ನಲ್ಲಿ ಹಾಕಿರುವ ವೀಡಿಯೋ ಸಿನಿಮೀಯ ರೀತಿಯದ್ದಾಗಿದ್ದು, ಹಲವಾರು ಕಾರುಗಳಲ್ಲಿ ಅವರು ಗಾಜಿಪುರ್‌ಗೆ ತೆರಳಿದ್ದಾರೆ. ಹಲವರು ಅವರನ್ನು ಅಭಿನಂಧಿಸಿದ್ದಾರೆ.

ಇದನ್ನೂ ಓದಿ: ಮೋದಿ ಗೋಡ್ಸೆ ದಿನ ಆಚರಿಸಬಹುದು ಅಷ್ಟೆ: ರೈತ ಮುಖಂಡ ಬಡಗಲಪುರ ನಾಗೇಂದ್ರ

ಜನವರಿ 17 ರಂದು ಅವರು, “ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು! ಸರ್ಕಾರ ಜಾರಿಗೆ ತಂದಿರುವ ಈ ಕರಾಳ ಕಾನೂನುಗಳ ವಿರುದ್ಧ ನಾನು ರಾಜೀನಾಮೆ ನೀಡಿದ್ದೇನೆ. ಪ್ರತಿಪಕ್ಷದಲ್ಲಿ ಕುಳಿತಿರುವ ಇತರ ಎಲ್ಲ ನಾಯಕರು ಮತ್ತು ರೈತರ ಮಕ್ಕಳು ಎನಿಸಿಕೊಂಡವರು ರೈತನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಟ್ವಿಟ್ಟರ್‌‌ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ರಾಜಿನಾಮೆ ನೀಡುತ್ತಿರುವ ವಿಡಿಯೋವನ್ನು ಕೂಡಾ ಹಾಕಿಕೊಂಡಿದ್ದರು.

ಬಿಕೆಯು ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಪ್ರತಿಭಟಿಸುತ್ತಿರುವ ಹೋರಾಟಗಾರರನ್ನು ಹೊರಹಾಕಲು ಗುರುವಾರ ರಾತ್ರಿ ಭಾರಿ ಪೊಲೀಸ್ ನಿಯೋಜನೆ ಮಾಡಿದ್ದು ರೈತರ ಭಾವನೆಗಳನ್ನು ಕೆರಳಿಸಿದೆ. ಅದರಲ್ಲೂ ವಿಶೇಷವಾಗಿ ಜಾಟ್ ಸಮುದಾಯದ ರೈತರು ಆಕ್ರೋಶಗೊಂಡಿದ್ದಾರೆ. ಶುಕ್ರವಾರದಿಂದ ಗಾಜಿಪುರ್‌ ಗಡಿಗಳಲ್ಲಿ ಭಾರಿ ರೈತರು ಜಮಾವಣೆಯಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೇರಳ, ಗೋವಾದ ಬೀಫ್ ಗೋಮಾತೆಯಲ್ಲವೆ: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಸಭಾ ಮರ್ಯಾದೆ ಉಲ್ಲಂಘಿಸಿದ ಸುವರ್ಣ ನ್ಯೂಸ್ ಪತ್ರಕರ್ತೆ. ರೈತರಿಂದ ಗೋದಿ ಮೀಡಿಯಾ ಎಂದು ಛೀಮಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...