Homeಅಂಕಣಗಳುಮಾರಣಹೋಮದ ಪೂರ್ವ ತಯಾರಿ!

ಮಾರಣಹೋಮದ ಪೂರ್ವ ತಯಾರಿ!

- Advertisement -
- Advertisement -

ಸ್ತ್ರಿದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ ಪಢಾವೋ’ (ಮಗಳನ್ನು ಕಾಪಾಡಿರಿ, ಆಕೆಗೆ ಅಕ್ಷರ ಕಲಿಸಿರಿ) ಎಂಬುದು ಖುದ್ದು ಪ್ರಧಾನಮಂತ್ರಿಯವರೇ ವರ್ಷಗಳ ಹಿಂದೆ ನೀಡಿದ ಘೋಷಣೆ. ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವಾನುದೇವತೆಗಳೂ ರಮಿಸುವರು ಎಂದು ಅಡಿಗಡಿಗೆ ಹೇಳಿಕೊಳ್ಳಲಾಗುತ್ತದೆ. ಮುಸ್ಲಿಮ್ ನಾರಿಯರು, ದಲಿತ ದಮನಿತ ಆದಿವಾಸಿ ನಾರಿಯರು, ಕ್ರೈಸ್ತ ನಾರಿಯರು, ಕಡೆಗೆ ಉಗ್ರ ಹಿಂದುತ್ವವನ್ನು ಒಪ್ಪದಿರುವ ಹಿಂದೂ ನಾರಿಯರು ನಾರಿಯರೇ ಅಲ್ಲವೇ? ಅವರನ್ನು ಹೀನಾಮಾನ ನಿಂದಿಸಲುಬಹುದೇ? ಮುಸಲ್ಮಾನರೂ ಸೇರಿದಂತೆ ಎಲ್ಲ ದೇಶವಾಸಿಗಳ ಡಿ.ಎನ್.ಎ. ಒಂದೇ ಎಂದು ಸರಸಂಘಚಾಲಕರು ನೀಡಿದ ಹೇಳಿಕೆಗೆ ಅರ್ಥವೇನು?

ಪ್ರಧಾನಿಯಾಗಲಿ, ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರೇ ಇರಲಿ, ಮುಸಲ್ಮಾನ ಹೆಣ್ಣುಮಕ್ಕಳ ಡಿಜಿಟಲ್ ಹರಾಜಿನ ಕುರಿತು ಈತನಕ ತುಟಿ ಬಿಚ್ಚಿಲ್ಲ. ಬೆಚ್ಚಿಬೀಳಿಸುವ ಆತಂಕಕಾರಿ ಅರ್ಥಗರ್ಭಿತ ಮೌನವಿದು. ಸಮ್ಮತಿಯಲ್ಲದೆ ಇನ್ನೇನೆಂದು ಅರ್ಥೈಸಬೇಕು?

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈಕಟ್ಟಿ ಕುಳಿತಿದೆ ಕಾನೂನು.

ಮನೆಯಲ್ಲಿ ಉಳಿದು ಮಕ್ಕಳನ್ನು ಹೆತ್ತು ಪೋಷಿಸುವ ಪಾತ್ರವನ್ನು ಮಹಿಳೆ ನಿಭಾಯಿಸಬೇಕೆಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥರು ಕೂಡ ಹೇಳುತ್ತಾರೆ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕೆಂಬ ಕರೆಯನ್ನು ವಿಶ್ವಹಿಂದೂ ಪರಿಷತ್ ನೀಡುತ್ತಲೇ ಬಂದಿದೆ. ತೀವ್ರ ಹಿಂದುತ್ವವಾದಿ ನರಸಿಂಘಾನಂದ್ ಹೆಚ್ಚು ಮಕ್ಕಳನ್ನು ಹೆರದಿರುವ ಹಿಂದೂ ಮಹಿಳೆಯರನ್ನು ರಾಕ್ಷಸಿಯರು ಮತ್ತು ನಾಗಿಣಿಯರು ಎಂದು ಜರೆದರು. ಸಾಧು ಸಂತರು ಎರಡೆರಡು ಸಲ ಮದುವೆಯಾಗಿ ’ಶುದ್ಧ ಹಿಂದೂ ಡಿ.ಎನ್.ಎ’ ವೃದ್ಧಿಸಬೇಕು ಎಂದು ಕರೆ ನೀಡಿದರು. ಕುಣಾಲ್ ಶರ್ಮ ಎಂಬ ಈತನ ಶಿಷ್ಯನೊಬ್ಬನು ಬಡತನದ ಹಿನ್ನೆಲೆಯ ಮುಸ್ಲಿಮ್ ಹೆಣ್ಣುಮಕ್ಕಳ ಮೊಬೈಲು ಫೋನು ನಂಬರುಗಳ ಪಟ್ಟಿಯೊಂದನ್ನು ಹೊರಡಿಸಿ ಅವರನ್ನು ರೇಪ್ ಮಾಡುವಂತೆ ಹಿಂದೂ ಗಂಡಸರಿಗೆ ಕರೆ ನೀಡಿದ. ಮುಸ್ಲಿಮ್ ಹುಡುಗಿಯರ ಮದುವೆ ಮಾಡಿಕೊಂಡು ಅವರನ್ನು ಸರ್ಕಾರಿ ಆಸ್ತಿಯೆಂದು ಬಳಸಿರಿ, ಖುದ್ದು ಭೋಗಿಸಿ ಇತರರಿಗೂ ಕೊಡಿಸಿರಿ. ಆಗ ಮಾತ್ರವೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಸರ್ವರಿಗೂ ನ್ಯಾಯ) ಸಿಕ್ಕೀತು ಎಂದು ಸಾಮಾಜಿಕ
ಜಾಲತಾಣಗಳಲ್ಲಿ ಬೊಗಳಿದ್ದ. ಒಂದನ್ನೊಂದು ಮೀರಿಸುವ ಇಂತಹದೇ ಕಾರ್ಕೋಟಕ ನಂಜಿನ ಹೇಳಿಕೆಗಳಿಂದ ಕಿಕ್ಕಿರಿದಿವೆ ಸಾಮಾಜಿಕ ಜಾಲತಾಣಗಳು.

ಇಸ್ಲಾಮ್ ಕ್ಷಿಪ್ರ ವಿಷವೆಂದೂ, ಕ್ರೈಸ್ತ ಧರ್ಮ ನಿಧಾನ ವಿಷವೆಂದೂ ಎರಡನ್ನೂ ಇಳೆಯಿಂದಲೇ ಅಳಿಸಿಹಾಕಬೇಕೆಂದೂ, ತೀವ್ರ ಹಿಂದುತ್ವವಾದಿಗಳು ಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕಿರಿದಿರುವ ಧರ್ಮಾಂಧ ಖಾತೆಗಳು ತಾವು ’ಕಾಲಿಫ್ಲವರ್ ಫಾರ್ಮರ್’ (ಹೂಕೋಸು ರೈತ) ಎಂಬ ಬಣ್ಣನೆ ಹೊಂದಿರುತ್ತಿದ್ದವು. ಈಗಲೂ ಇಂತಹ ಲೆಕ್ಕವಿಲ್ಲದಷ್ಟು ಖಾತೆಗಳು ಕಾಣಸಿಗುತ್ತವೆ. 1989ರ ಭಗಲ್ಪುರ ಕೋಮುಗಲಭೆಗಳಲ್ಲಿ ಒಂದು ಕೋಮಿನವರು ಮತ್ತೊಂದು ಕೋಮಿಗೆ ಸೇರಿದವರನ್ನು ಕೊಂದು ಹೊಲಗಳಲ್ಲಿ ಹುಗಿದು ಮೇಲೆ ಹೂಕೋಸು ಬೆಳೆಯಲಾಗಿತ್ತು. ಹೂಕೋಸು ಕೃಷಿಯ ಈ ಕ್ರೂರ ರೂಪಕ ಇದೀಗ ಪುನಃ ಚಾಲ್ತಿಗೆ ಬಂದಿದೆ.

ಅರವತ್ತು ಲಕ್ಷ ಯಹೂದಿಗಳ ನರಮೇಧ ಸರಣಿಗೆ ಮುನ್ನ ಜರ್ಮನಿ ಇಂತಹುದೇ ದ್ವೇಷದ ಕೃಷಿ ಜರ್ಮನಿಯಲ್ಲಿ ನಡೆದಿತ್ತು. ಶ್ರೇಷ್ಠ ಜರ್ಮನ್ ಜನಾಂಗೀಯ ಶುದ್ಧಿಯ ವ್ಯಸನದ ಬಲೆಗೆ ಸಿಲುಕಿದ್ದ ಹಿಟ್ಲರ್. ಅವನ ನಾಜೀವಾದವು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿತ್ತು.

ಜರ್ಮನರ ಆರ್ಯಜನಾಂಗೀಯ ’ಶುದ್ಧ ಶ್ರೇಷ್ಠ ರಕ್ತ’ವನ್ನು ಯಹೂದಿಗಳ ’ಕೀಳು ರಕ್ತ’ದಿಂದ ಕಲುಷಿತವಾಗದಂತೆ ’ಸಂರಕ್ಷಿಸುವುದು’ ನಾಜೀವಾದದ ಗುರಿಯಾಗಿತ್ತು.

ಒಬ್ಬ ಮನುಷ್ಯನ ರಕ್ತ ಶ್ರೇಷ್ಠ ಅಥವಾ ಮತ್ತೊಬ್ಬನದು ಕನಿಷ್ಠ ಎಂಬ ವಾದಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಹಿಟ್ಲರ್ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಜರ್ಮನ್ ರಕ್ತ ಹೊಂದಿರುವವರಿಗೆ ಮಾತ್ರವೇ ಜರ್ಮನ್ ನಾಗರಿಕತೆ ಮೀಸಲು. ಹೀಗಾಗಿ ಅನ್ಯ ಜನಾಂಗವಾಗಿದ್ದ ಯಹೂದಿಗಳು ಜರ್ಮನ್ ನಾಗರಿಕತೆಗೆ ಅರ್ಹರಲ್ಲ ಎಂದು ಸಾರಲಾಯಿತು. ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಯಹೂದಿಗಳು ಮತ್ತು ಜರ್ಮನರ ನಡುವೆ ವಿವಾಹ ಮತ್ತು ವಿವಾಹೇತರ ಸಂಬಂಧವನ್ನು ನಿಷೇಧಿಸಲಾಯಿತು.

ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಸ್ಥಾನಮಾನಗಳಿಗೆ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕುಗಳನ್ನು ಯಹೂದಿಗಳಿಗೆ ನಿರಾಕರಿಸಲಾಯಿತು. ಅವರು ರಾಜ್ಯವಿಲ್ಲದ ಪ್ರಜೆಗಳಾದರು. ಪಾಸ್‌ಪೋರ್ಟುಗಳು ವೀಸಾಗಳನ್ನೂ ಅವರು ಹೊಂದುವಂತಿರಲಿಲ್ಲ. ಅಂತಿಮವಾಗಿ ಯಹೂದಿಗಳ ಮಾರಣಹೋಮಕ್ಕೆ ನಡೆಸಲಾದ ಪೂರ್ವಭಾವಿ ತಯಾರಿಯಾಗಿತ್ತು ಇದು.

ಹೆಚ್ಚುಹೆಚ್ಚು ಮಕ್ಕಳನ್ನು ಹೆರುವ ಮೂಲಕ ಶುದ್ಧ ಆರ್ಯ ಜರ್ಮನ್ ಜನಾಂಗದ ಸಂಖ್ಯೆಯನ್ನು ವೃದ್ಧಿಸಬೇಕೆಂದು ಜರ್ಮನ್ ಮಹಿಳೆಯರ ಮೇಲೆ ಅತೀವ ಒತ್ತಡ ಹೇರಲಾಯಿತು. ಸ್ತ್ರೀವಾದಿ ಆಂದೋಲನವನ್ನು ಹೀಗಳೆಯಲಾಯಿತು. ಮಹಿಳೆಯು ಕೇವಲ ಮಕ್ಕಳ ಹೆರುವ ಯಂತ್ರವಾಗಿ ಮನೆಯ ನಾಲ್ಕು ಗೋಡೆಗಳ ಉಳಿಯಬೇಕೆಂದು ನಿರೀಕ್ಷಿಸಲಾಯಿತು. ಹೆರಲು ಅಸಮರ್ಥರಾದ ಹೆಂಡತಿಯರಿಗೆ ವಿಚ್ಛೇದನ ನೀಡಿ ಯುವತಿಯರನ್ನು ವರಿಸಿ ಮಕ್ಕಳ ಹುಟ್ಟಿಸುವಂತೆ ಜರ್ಮನ್ ಪುರುಷರನ್ನು ಪ್ರೋತ್ಸಾಹಿಸಲಾಯಿತು.

ಜರ್ಮನಿಯಲ್ಲಿ ದಫನ್ ಆದದ್ದು ಹಿಟ್ಲರನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

“Birth, Sex and Abuse: Women`s Vioces Under Nazi Rule’’ ಎಂಬ ಹೆಸರಿನ
ಹೊತ್ತಿಗೆಯೊಂದಿದೆ. ಹೊಟ್ಟೆ ತೊಳಸಿ ಬರುವ ಭಯಾನಕ ಅತ್ಯಾಚಾರಗಳ ವಿವರಗಳಿಂದ ಅದು ತುಂಬಿಹೋಗಿದೆ. ಓದುವುದು ಕಡುಕಠಿಣ. ಡಾ.ಬೀವರ್ಲೀ ಛಾಮರ್ಸ್ ಎಂಬಾಕೆ ಈ ಪುಸ್ತಕದ ಲೇಖಕಿ.

ಯಾತನಾ ಶಿಬಿರಗಳಲ್ಲಿ ಯಹೂದಿ ಮಹಿಳೆಯರ ಮೇಲೆ ನಾಜೀಗಳು ನಡೆಸುವ ಅತ್ಯಾಚಾರಗಳನ್ನೂ, ಅಮಾನುಷ ವೈದ್ಯಕೀಯ ಪ್ರಯೋಗಗಳನ್ನೂ, ಅವರನ್ನು ಸೂಳೆಗಾರಿಕೆಗೆ ಬಳಸಿ ಕೊಲ್ಲುವುದನ್ನೂ ಇಲ್ಲಿ ದಾಖಲಿಸಲಾಗಿದೆ. ಕೌಸರ್ ಬೀಬಿಯ ಬಸಿರನ್ನು ಖಡ್ಗದಿಂದ ಬಗೆದು ಭ್ರೂಣವನ್ನು ಎತ್ತಿ ಹಿಡಿದ ಪೈಶಾಚಿಕತೆಯ ಪೂರ್ವನಿದರ್ಶನಗಳು ಇಲ್ಲಿ ಹೇರಳ.

ಕೋಮು ದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷಲಕ್ಷ ಹೆಣ್ಣು ದೇಹಗಳು ಕದನ ಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ಬುಲ್ಲೀಬಾಯಿ ಸುಲ್ಲೀಡೀಲ್ಸ್ ಹರಾಜಿನ ಅಧಮ ಕೃತ್ಯದ ಹಿಂದೆ ಈ ಬಗೆಯ ಗಂಡಾಳಿಕೆಯೂ ಹೆಡೆಯಾಡಿದೆ.

ಅಪಾಯಕಾರಿ ವ್ಯಾಧಿಯ ನಿಚ್ಚಳ ಲಕ್ಷಣಗಳು ಸಮಕಾಲೀನ ಭಾರತದಲ್ಲಿ ಭುಸುಗುಟ್ಟಿವೆ. ಸೌಹಾರ್ದ ಸಾಮರಸ್ಯದ ಬಹುಮುಖೀ ಸಂಸ್ಕೃತಿಯ ಸಾಮಾಜಿಕ ಹಂದರವನ್ನು ಛಿದ್ರಗೊಳಿಸಿ ದೇಶವನ್ನು ದುರ್ಬಲಗೊಳಿಸುವ ರೋಗದ ಚಿಹ್ನೆಗಳಿವು.

ಈ ರೋಗ ಬಡಿದಿದ್ದ ಜರ್ಮನಿಯು ಕಂಡ ನೀಚಾತಿನೀಚ ನರಮೇಧಗಳ ತಾಜಾ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಹಗಲು ಕಂಡ ಈ ಭಾವಿಗೆ ರಾತ್ರಿ ಬೀಳತೊಡಗಿದೆ ಭಾರತ.


ಇದನ್ನೂ ಓದಿ: ’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...