Homeಮುಖಪುಟಸಿಜೆಐ ಗವಾಯಿ ಮೇಲೆ ದಾಳಿಗೆ ಯತ್ನ; ವಕೀಲನ ಮನೆ ಹೊರಗೆ ಪ್ರತಿಭಟನೆ

ಸಿಜೆಐ ಗವಾಯಿ ಮೇಲೆ ದಾಳಿಗೆ ಯತ್ನ; ವಕೀಲನ ಮನೆ ಹೊರಗೆ ಪ್ರತಿಭಟನೆ

- Advertisement -
- Advertisement -

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಯತ್ನದ ನಂತರ, ಎಎಪಿ ನಾಯಕ ಸೌರಭ್ ಭಾರದ್ವಾಜ್ ನೇತೃತ್ವದಲ್ಲಿ ದಲಿತ ಗುಂಪುಗಳು ಮತ್ತು ಪಕ್ಷದ ನಾಯಕರು ವಕೀಲ ರಾಕೇಶ್ ಕಿಶೋರ್ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಭಾವಚಿತ್ರ ಹಿಡಿದಿದ್ದ ಪ್ರತಿಭಟನಾಕಾರರು, ಶೂಗಳ ಹಾರದೊಂದಿಗೆ ವಕೀಲನ ವಿರುದ್ಧ ಘೋಷಣೆ ಕೂಗಿದರು. ‘ಜೈ ಭೀಮ್’ ಮತ್ತು ‘ಸಿಜೆಐ ಕಾ ಅಪ್ಮಾನ್ ನಹಿ ಸಹೇಗಾ ಹಿಂದೂಸ್ತಾನ್’ ಎಂದು ಘೋಷಣೆಗಳನ್ನು ಕೂಗುತ್ತಾ ವಕೀಲ ರಾಕೇಶ್ ಕಿಶೋರ್ ವಿಹಾರದ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಕಿಶೋರ್ ವಿರುದ್ಧ ಎಫ್‌ಐಆರ್ ಮತ್ತು ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ವಕೀಲರ ಸಂಘವು ಸುಪ್ರೀಂ ಕೋರ್ಟ್ ಆವರಣದಲ್ಲಿ ಮೆರವಣಿಗೆ ನಡೆಸಿತು.

ಸುಪ್ರೀಂ ಕೋರ್ಟ್ ವಕೀಲನಾದ ರಾಕೇಶ್ ಕಿಶೋರ್, ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದರು. ಶಿರಚ್ಛೇದಿತ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಿದ ಅರ್ಜಿಯನ್ನು ಗವಾಯಿ ಅವರು ವಜಾಗೊಳಿಸಿದ್ದರಿಂದ ಕೋಪಗೊಂಡ ಆತ, “ಸನಾತನ ಧರ್ಮದ ಮೇಲಿನ ಅವಮಾನ ಸಹಿಸುವುದಿಲ್ಲ” ಬಂಧನದ ಸಮಯದಲ್ಲಿ ಕಿರುಚಾಡಿದ್ದ.

ಭಾರತೀಯ ವಕೀಲರ ಮಂಡಳಿಯು ಕಿಶೋರ್ ಅವರ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕೃತ್ಯವನ್ನು ಖಂಡಿಸಿದರು, ಸಿಜೆಐ ಅವರ ಶಾಂತ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು.

“ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಜಿ ಅವರೊಂದಿಗೆ ಮಾತನಾಡಿದೆ. ಇಂದು ಮುಂಜಾನೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವರ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಸ್ಥಳವಿಲ್ಲ. ಇದು ಸಂಪೂರ್ಣವಾಗಿ ಖಂಡನೀಯ. ಅಂತಹ ಪರಿಸ್ಥಿತಿಯನ್ನು ಎದುರಿಸುವಾಗ ನ್ಯಾಯಮೂರ್ತಿ ಗವಾಯಿ ಅವರು ಪ್ರದರ್ಶಿಸಿದ ಶಾಂತತೆಯನ್ನು ನಾನು ಮೆಚ್ಚುತ್ತೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಚೈತನ್ಯವನ್ನು ಬಲಪಡಿಸಲು ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕೋರ್ಟ್ ಸಂಖ್ಯೆ 1 ರಲ್ಲಿ ನಿನ್ನೆ ಬೆಳಿಗ್ಗೆ 11:35 ಕ್ಕೆ 71 ವರ್ಷದ ಕಿಶೋರ್ ಪೀಠದ ಬಳಿ ಬಂದು, ತಮ್ಮ ಕ್ರೀಡಾ ಶೂ ತೆಗೆದು, ಸಿಜೆಐ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರತ್ತ ಎಸೆದ ಘಟನೆ ನಡೆಯಿತು. ಭದ್ರತಾ ಸಿಬ್ಬಂದಿ ಕ್ಷಿಪ್ರವಾಗಿ ಮಧ್ಯಪ್ರವೇಶಿಸಿ, ಕಿಶೋರ್ ಅವರನ್ನು ತಡೆದು, ಘೋಷಣೆಗಳನ್ನು ಕೂಗುತ್ತಲೇ ಅವರನ್ನು ಹೊರಗೆ ಕರೆದೊಯ್ದರು.

ಉಲ್ಲಂಘನೆಯ ಹೊರತಾಗಿಯೂ, ಸಿಜೆಐ ಗವಾಯಿ ಎಲ್ಲರೂ ಅಡಚಣೆಯನ್ನು ‘ನಿರ್ಲಕ್ಷಿಸಬೇಕೆಂದು’ ಹೇಳಿದರು. “ಈ ವಿಷಯಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳುವ ಮೂಲಕ ತಮ್ಮ ದಿನದ ಪ್ರಕರಣಗಳನ್ನು ಮುಂದುವರೆಸಿದರು.

ಮಂಗಳವಾರ, ದಲಿತ ಸಂಘಟನೆಗಳ ಕಾರ್ಯಕರ್ತರು ಮತ್ತು ಎಎಪಿ ಸದಸ್ಯರು ಕಿಶೋರ್ ಅವರ ಮಯೂರ್ ವಿಹಾರ್ ಅಪಾರ್ಟ್ಮೆಂಟ್ ಹೊರಗೆ ಜಮಾಯಿಸಿದರು, ಅಲ್ಲಿ ಪೊಲೀಸರು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಬ್ಯಾರಿಕೇಡ್ ಹಾಕಿದ್ದರು.

ಭಾರತದ ಎರಡನೇ ದಲಿತ ನ್ಯಾಯಾಂಗ ಮುಖ್ಯಸ್ಥರಾದ ಸಿಜೆಐ ಗವಾಯಿ ಅವರಿಗೆ ಒಗ್ಗಟ್ಟಿನಿಂದ ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ನೇತೃತ್ವದಲ್ಲಿ ‘ಹಲ್ಲಾ ಬೋಲ್’ ಮತ್ತು ‘ಜೈ ಭೀಮ್’ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳು ಮತ್ತು ಶೂಗಳ ಸಾಂಕೇತಿಕ ಹಾರಗಳನ್ನು ಹಿಡಿದುಕೊಂಡು ಆಕ್ರೋಶ ಹೊರಹಾಕಿದರು.

ಏಕಕಾಲದಲ್ಲಿ, ಅಖಿಲ ಭಾರತ ವಕೀಲರ ಸಂಘವು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಭಟನೆ ನಡೆಸಿ, ದಾಳಿಯನ್ನು ‘ಸಂವಿಧಾನದ ಮೇಲಿನ ದಾಳಿ’ ಎಂದು ಕರೆಯಿತು. ಕಿಶೋರ್ ವಿರುದ್ಧ ಔಪಚಾರಿಕ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ, ಆತನ ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನು ಮಾಡಿತು.

ಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನವದೆಹಲಿ| ಕೆಂಪು ಕೋಟೆ ಬಳಿ ಕಾರು ಸ್ಫೋಟ; 8 ಸಾವು, ಹಲವರಿಗೆ ಗಾಯ

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 24 ಜನರು...

ಡಿಜಿಟಲ್ ಡ್ಯಾಶ್‌ಬೋರ್ಡ್‌, 24X7 ಆಸ್ಪತ್ರೆ ಬೆಂಬಲ : ಪೋಕ್ಸೋ ಸಂತ್ರಸ್ತರ ಪುನರ್ವಸತಿಗೆ ಮಾದರಿ ಎಸ್‌ಒಪಿ ಬಿಡುಗಡೆ ಮಾಡಿದ ಹೈಕೋರ್ಟ್

ಲೈಂಗಿಕ ದೌರ್ಜನ್ಯಗಳಿಗೆ ಒಳಗಾದ ಅಪ್ರಾಪ್ತರ ರಕ್ಷಣೆ ಮತ್ತು ಪುನರ್ವಸತಿಗೆ ಒಂದು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (Standard Operating Procedure-SOP) ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. "ಹಲವಾರು ಬಾರಿ ಈ ಸಂಬಂಧ ನಿರ್ದೇಶನಗಳನ್ನು...

ತಿರುಪತಿ ಪ್ರವೇಶ ಮಾರ್ಗದಲ್ಲಿ ಮಾಂಸಾಹಾರ ಸೇವನೆ; ಇಬ್ಬರು ನೌಕರರನ್ನು ವಜಾಗೊಳಿಸಿದ ಟಿಟಿಡಿ

ತಿರುಪತಿ ಗಿರಿಯ ದೇವಾಲಯದ ಪ್ರವೇಶ ದ್ವಾರವಾದ ಅಲಿಪಿರಿ ಬಳಿ ಮಾಂಸಾಹಾರ ಸೇವಿಸುತ್ತಿದ್ದಾರೆಂದು ಆರೋಪಿಸಲಾದ ವೀಡಿಯೊ ಕಾಣಿಸಿಕೊಂಡ ನಂತರ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇಬ್ಬರು ಹೊರಗುತ್ತಿಗೆ ನೌಕರರನ್ನು ವಜಾಗೊಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ...

ಬಿಹಾರ ವಿಧಾನಸಭೆ ಚುನಾವಣೆ| ಪ್ರಚಾರಕ್ಕೆ ಅಪ್ರಾಪ್ತ ಮಕ್ಕಳ ಬಳಕೆ; ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಎನ್‌ಸಿಪಿಸಿಆರ್‌ ನೋಟಿಸ್

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕನನ್ನು ವೇದಿಕೆಗೆ ಕರೆತರಲಾಗಿದೆ ಎಂಬ ವರದಿಗಳ ಬಗ್ಗೆ ಭಾರತದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಗಂಭೀರ ಕಳವಳ ವ್ಯಕ್ತಪಡಿಸಿದೆ....

ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಮದ್ಯಪಾನ-ಮೊಬೈಲ್ ಬಳಕೆ; ಹಿರಿಯ ಜೈಲಾಧಿಕಾರಿಗಳ ಅಮಾನತು

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಾನೂನುಬಾಹಿರ ಚಟುವಟಿಕೆಗಳು, ಮೊಬೈಲ್ ಬಳಕೆ, ಮದ್ಯಪಾನ ಮತ್ತು ಹಣ ಕೊಟ್ಟವರಿಗೆ ವಿಐಪಿ ಉಪಚಾರದ ವೀಡಿಯೊಗಳು ವೈರಲ್ ಆದ ನಂತರ ಹಿರಿಯ ಜೈಲು ಅಧಿಕಾರಿಗಳನ್ನು ರಾಜ್ಯ ಸರ್ಕಾರ...

ಮಹಿಳೆಯರು ದೇಶದ ಅತಿ ದೊಡ್ಡ ಅಲ್ಪಸಂಖ್ಯಾತರು : ಸುಪ್ರೀಂ ಕೋರ್ಟ್ ಟಿಪ್ಪಣಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಒದಗಿಸುವ ಸಂವಿಧಾನ (ನೂರ ಆರನೇ ತಿದ್ದುಪಡಿ) ಕಾಯ್ದೆ 2023 (ನಾರಿ ಶಕ್ತಿ ವಂದನ ಅಧಿನಿಯಂ)ರ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಗೆ...

ಎಲ್.ಕೆ ಅಡ್ವಾಣಿಯನ್ನು ಹಾಡಿ ಹೊಗಳಿದ ಶಶಿ ತರೂರ್ : ಅಂತರ ಕಾಯ್ದುಕೊಂಡ ಕಾಂಗ್ರೆಸ್

ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರನ್ನು 'ನಿಜವಾದ ಮುತ್ಸದ್ದಿ' ಎಂದು ಬಣ್ಣಿಸಿದ ಪಕ್ಷದ ಸಂಸದ ಶಶಿ ತರೂರ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ಕಾಂಗ್ರೆಸ್ ಅಂತರ...

ಮಧ್ಯಪ್ರದೇಶ| ‘ನನ್ನ ಜೊತೆ ಮದ್ಯಪಾನ ಮಾಡುವ ಹಕ್ಕು ನಿನಗಿಲ್ಲ..’; ಎಂದು ದಲಿತ ಯುವಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜಾತಿ ಆಧಾರಿತ ಹಿಂಸಾಚಾರದ ಒಂದು ಆತಂಕಕಾರಿ ಪ್ರಕರಣ ವರದಿಯಾಗಿದ್ದು, ಇಬ್ಬರು ಸ್ನೇಹಿತರ ನಡುವೆ ಕುಡಿದು ನಡೆದ ಜಗಳ ಚಾಕುವಿನಿಂದ ಹಲ್ಲೆಗೆ ಇರಿದ ಹಂತಕ್ಕೆ ತಲುಪಿದೆ. ಪೊಲೀಸರ ಪ್ರಕಾರ, ಮಹಾವೀರ್ ಕಾಲೋನಿಯ ನಿವಾಸಿಗಳಾದ...

‘ಆರ್‌ಎಸ್‌ಎಸ್ ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷ’: ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು: 'ಇತಿಹಾಸವು ಆರ್‌ಎಸ್‌ಎಸ್ ದೇಶಕ್ಕೆ ಬಗೆದ ದ್ರೋಹದ ಉದಾಹರಣೆಗಳಿಂದ ತುಂಬಿಕೊಂಡಿದೆ. ಇಡೀ ಬಿಜೆಪಿ ವ್ಯವಸ್ಥೆ ಎಷ್ಟೇ ಪ್ರಯತ್ನಿಸಿದ್ದರೂ ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಚರಿತ್ರೆಯನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಆರ್‌ಎಸ್‌ಎಸ್‌ ನೋಂದಣಿ ಮಾಡಿಕೊಂಡಿಲ್ಲ ಏಕೆ? ಒತ್ತಡಕ್ಕೆ ಮಣಿದು ಉತ್ತರ ಕೊಟ್ಟ ಭಾಗವತ್

ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್‌) ನೋಂದಣಿ ಏಕೆ ಮಾಡಿಕೊಂಡಿಲ್ಲ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ಇತ್ತೀಚೆಗೆ ಕಾವು ಪಡೆದುಕೊಂಡಿವೆ. ಪರಿಣಾಮ, ಸಾಮಾನ್ಯ ಜನರೂ ಕೂಡ ಆರ್‌ಎಸ್‌ಎಸ್‌ ಭಾರತೀಯ ಕಾನೂನಿನಡಿ ನೋಂದಣಿ...