Homeಮುಖಪುಟದಲಿತರ ಕಥೆಯುಳ್ಳ ‘ಪಾಲಾರ್‌‌’ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಒಪ್ಪದ ಆಡಿಯೊ ಕಂಪನಿಗಳು; ನಿರ್ದೇಶಕರ ಆರೋಪ

ದಲಿತರ ಕಥೆಯುಳ್ಳ ‘ಪಾಲಾರ್‌‌’ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಒಪ್ಪದ ಆಡಿಯೊ ಕಂಪನಿಗಳು; ನಿರ್ದೇಶಕರ ಆರೋಪ

- Advertisement -
- Advertisement -

ದಲಿತರ ನೋವಿನ ಕಥೆಯನ್ನು ಒಳಗೊಂಡ ‘ಪಾಲಾರ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಆಡಿಯೊ ಕಂಪನಿಗಳು ಒಪ್ಪುತ್ತಿಲ್ಲ ಎಂದು ‘ಪಾಲಾರ್‌’ ಸಿನಿಮಾದ ನಿರ್ದೇಶಕ ಜೀವ ನವೀನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಅವರು, ಪಾಲಾರ್‌ ಟ್ರೇಲರ್‌ಗೆ ಸಂಬಂಧಿಸಿದಂತೆ ಆಡಿಯೊ ಕಂಪನಿಗಳು ನೀಡಿರುವ ಪ್ರತಿಕ್ರಿಯೆಗಳನ್ನು (ಹೆಸರು ಬ್ಲರ್‌ ಮಾಡಿ) ಲಗತ್ತಿಸಿದ್ದಾರೆ.

“ಟ್ರೇಲರ್‌ ಚೆನ್ನಾಗಿದೆ. ಆದರೆ ಇದನ್ನು ಪ್ರಕಟಿಸಲು ಆಗುವುದಿಲ್ಲ. ಕ್ಷಮಿಸಿ ನಮ್ಮ ಸಂಸ್ಥೆಯಲ್ಲಿ ನಿಮ್ಮ ಟ್ರೇಲರ್‌ ಬಿಡುಗಡೆ ಮಾಡಲು ಆಗಲ್ಲ. ಹಾಡುಗಳು ಚೆನ್ನಾಗಿವೆ. ಅವುಗಳನ್ನು ಬೇಕಿದ್ದರೆ ಹಾಕ್ತೀವಿ. ಇಲ್ಲವಾದರೆ ಟ್ರೇಲರ್‌‌ನಲ್ಲಿ ಸ್ವಲ್ಪ ಸೀನ್ಸ್ ಚೇಂಜ್ ಮಾಡಿಕೊಂಡು ಬನ್ನಿ” ಎಂದು ಕಂಪನಿಗಳು ಹೇಳುತ್ತಿರುವುದಾಗಿ ನವೀನ್‌ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮ್ಮ ಕಂಪನಿ ಪಾಲಿಸಿ ಪ್ರಕಾರ ‘ಸೆನ್ಸಿಟಿವ್ ಕಂಟೆಂಟ್’ ಸಿನೆಮಾ ತೆಗೆದುಕೊಳ್ಳುವುದಿಲ್ಲ ಎಂದು ಬೆಂಗಳೂರು ಮೂಲದ ಕಂಪೆನಿಯೊಂದು ತಿಳಿಸಿತು. ಇದೇ ರೀತಿಯ ಅಭಿಪ್ರಾಯವನ್ನು ಚೆನ್ನೈ ಮೂಲದ ಕನ್ನಡ ಹಾಡುಗಳ ಕಂಪನಿ ಹೇಳಿತು” ಎಂದಿದ್ದಾರೆ ನಿರ್ದೇಶಕರು. ಒಟ್ಟು ಆರು ಕಂಪನಿಗಳು ಟ್ರೈಲರ್‌ ರಿಜೆಕ್ಟ್‌ ಮಾಡಿದೆ ಎಂದು ದೂರಿದ್ದಾರೆ.

“ನವೀನ್, ಇಷ್ಟೊಂದು ನೇರ ನೇರಾ ಇದೆ ಸಬ್ಜೆಕ್ಟ್  ಇದೆ. ನಮ್ಮ ಟೀಂ ಇದು ಬೇಡ ಅಂತಿದ್ದಾರೆ. ಆದರೆ ಜನರಿಗೆ ಇಷ್ಟ ಆಗುತ್ತೆ. ಬಿಡಿ ಬೇರೆ ಕಡೆ ಹಾಕಿ. ನಮ್ಮ ಮ್ಯಾನೇಜ್‌ಮೆಂಟ್‌ ಯಾರು ಅಂತ ಗೊತ್ತಲ್ವಾ?” ಎಂದು ಬೆಂಗಳೂರು ಮೂಲದ ಕನ್ನಡ ಹಾಡುಗಳ ಕಂಪನಿಯ ಸಿಬ್ಬಂದಿ ತಿಳಿಸಿದರು ಎನ್ನುತ್ತಾರೆ ಅವರು.

“ಆಡಿಯೋ ಚಾನೆಲ್‌ನವರಿಗೆ ಏನು ಬೇಕು? ಮಸಾಲೆ ಬೇಕಾ? ಡಬಲ್ ಮೀನಿಂಗ್ ಡೈಲಾಗ್ ಬೇಕಾ? ಬೆತ್ತಲೆ ಸೀನ್ಸ್ ಬೇಕಾ? ಸಾಂಗ್ಸ್‌ನಲ್ಲಿ ಲಿಪ್ ಲಾಕ್ ಬೇಕಾ? ಒಂದೇಟು ಹೊಡೆದರೆ 1 ಕಿಲೋಮೀಟರ್ ದೂರದಲ್ಲಿ ಹೋಗಿ ಬೀಳೋ ಫೈಟ್ಸ್ ಬೇಕಾ? ಸ್ಟಾರ್ ಕ್ಯಾಸ್ಟ್ ಬೇಕಾ? ಅಥವಾ ನಮ್ಮ ಕ್ಯಾಸ್ಟ್ ಯಾವುದು ಅಂತ ತಿಳ್ಕೊಬೇಕಾ? ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ಇರೋದರಿಂದ ನಾವು ನಿಮಗೆ ಸಣ್ಣವರು ಅದ್ವೇ?” ಎಂದು ಅವರು ಪ್ರಶ್ನಿಸಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ನಿರ್ದೇಶಕ ಜೀವ ನವೀನ್‌, “ಸಿನಿಮಾಕ್ಕಾಗಿಯೇ ಇರುವ ಆಡಿಯೊ ಕಂಪನಿಗಳು ಸಹಾಯ ಮಾಡಿದರೆ ದಲಿತ ಹಿನ್ನೆಲೆಯ ನಿರ್ದೇಶಕರು ಮುಂದೆ ಬರುತ್ತಾರೆ. ಪಾಲಾರ್‌ ರೀತಿಯ ಕಥೆಗಳನ್ನು ತೆರೆಗೆ ತರಬಲ್ಲ ನಿರ್ದೇಶಕರು ಕನ್ನಡದಲ್ಲೇ ಇದ್ದಾರೆ. ಆದರೆ ಈ ರೀತಿಯ ಕಥೆಗಳಿಗೆ ನಿರ್ಮಾಪಕರು ಸಿಗುವುದಿಲ್ಲ. ದಲಿತರ ನೋವುಗಳು ತೆರೆಗೆ ತರಲೆಂದು ನಾವೇ ಬಂಡವಾಳ ಹೂಡಿ ಸಿನಿಮಾ ಮಾಡಿದ್ದೇವೆ. ನಮಗೆ ಅಗತ್ಯ ಪ್ರೋತ್ಸಾಹ ಬೇಕಿದೆ” ಎಂದರು.

“ಈ ಸಿನಿಮಾದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ನೇರವಾಗಿ ಮಾತನಾಡಿದ್ದೇವೆ. ಆದರೆ ಯಾವುದೇ ಸಮುದಾಯಕ್ಕೆ ನೋವುಂಟು ಮಾಡಿಲ್ಲ. ಈ ರೀತಿಯ ಕಂಟೆಂಟ್ ಕನ್ನಡದಲ್ಲಿ ಹೊಸತೆಂದು ಭಯ ಬಿದ್ದಿದ್ದಾರೋ, ಸಂಸ್ಥೆಗೆ ತೊಂದರೆಯಾಗುತ್ತದೆ ಎಂದು ಭಾವಿಸಿದ್ದಾರೋ ಗೊತ್ತಿಲ್ಲ. ದಲಿತ ಕಥನಗಳಿಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಸಿಕ್ಕಿರುವ ಪ್ರೋತ್ಸಾಹ ನಮಗೂ ಬೇಕಿದೆ. ಆಗ ಮಾತ್ರವೇ ಅಸುರನ್‌, ಕರ್ಣನ್‌, ಪಲಾಸ ರೀತಿಯ ಸಿನಿಮಾಗಳು ಇಲ್ಲಿಯೂ ಬರಲಿವೆ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

“ನಾವೇ ನೇರವಾಗಿ ಆಡಿಯೊವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಬಹುದು. ಆದರೆ ನಮ್ಮ ಯೂಟ್ಯೂಬ್ ಚಾನೆಲ್‌ಗಳಿಗೆ ವೀಕ್ಷಕರು ಕಡಿಮೆ ಇರುತ್ತಾರೆ. ಸಿನಿಮಾಕ್ಕಾಗಿಯೇ ಮೀಸಲಾದ ಕಂಪನಿಗಳ ಚಾನೆಲ್‌ಗಳಲ್ಲಿ ಟ್ರೇಲರ್‌ ಬಿಡುಗಡೆಯಾದ್ದಲ್ಲಿ ಹೆಚ್ಚು ಜನರನ್ನು ನಮ್ಮ ಸಿನಿಮಾ ತಲುಪುತ್ತದೆ” ಎಂದು ತಿಳಿಸಿದರು.

ಪಾಲಾರ್‌ ಸಿನಿಮಾ ನಿರ್ದೇಶಕ ಜೀವ ನವೀನ್‌

‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಗಾಯಕಿ ವೈ.ಜಿ.ಉಮಾ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ‘ಪಾಲಾರ್‌’ ತನ್ನ ವಿಶಿಷ್ಟ ಹೆಸರಿನ ಮೂಲಕ ಗಮನ ಸೆಳೆದಿದೆ. ಈ ಟೈಟಲ್‌ನ ವಿಶೇಷತೆಯನ್ನು ವಿವರಿಸಿದ ನಿರ್ದೇಶಕ ನವೀನ್‌, “ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್‌ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿದು ಹೋಗುತ್ತದೆ. ಆ ನಂತರ ತಮಿಳುನಾಡು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ನದಿ ಒಳಗಡೆಯೇ ಇದ್ದಾಗ ಬಿಸಿಯಾಗಿರುತ್ತದೆ. ಆ ಬಿಸಿ ಒಂದು ರೀತಿಯಲ್ಲಿ ರಕ್ತಕ್ಕೆ ಸಮಾನ. ದಲಿತರಲ್ಲೂ ಇದೇ ರೀತಿಯ ಕುದಿತ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬರುತ್ತದೆ. ಒಮ್ಮೆ ಆ ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ಈ ಪಾಲಾರ್‌ ಕಥೆ. ನದಿಗೂ ಮತ್ತು ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಈ ಹೆಸರನ್ನು ಬಳಸಿದ್ದೇವೆ. ಪಾಲಾರ್‌ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಮ್ಮ ಕಥೆ ನಡೆಯುತ್ತದೆ” ಎಂದು ವಿವರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...