Homeಕರ್ನಾಟಕದಲಿತ ಚಳವಳಿಯಲ್ಲಿ ಬಿ.ಕೃಷ್ಣಪ್ಪ ನಮ್ಮ ಕೈಹಿಡಿದು ನಡೆಸಿದರು: ಮಾವಳ್ಳಿ ಶಂಕರ್

ದಲಿತ ಚಳವಳಿಯಲ್ಲಿ ಬಿ.ಕೃಷ್ಣಪ್ಪ ನಮ್ಮ ಕೈಹಿಡಿದು ನಡೆಸಿದರು: ಮಾವಳ್ಳಿ ಶಂಕರ್

- Advertisement -
- Advertisement -

ಬಿ.ಕೃಷ್ಣಪ್ಪ ಅವರು ಹಾಡುತ್ತಿದ್ದ ಹೋರಾಟದ ಹಾಡುಗಳ ಮೂಲಕ ನಾವು ಚಳವಳಿಯ ಭಾಗವಾದವರು. ಅವರ ಕನಸು ಮತ್ತು ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡೆವು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಅವರ 87 ವರ್ಷದ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ನಿಧನದ ಬಳಿಕ ದೇಶದ ದಲಿತ ಸಮುದಾಯಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು. ಅದರ ನಂತರ ಮಹಾರಾಷ್ಟ್ರದಲ್ಲಿ 1972ರ ದಶಕದಲ್ಲಿ ‘ದಲಿತ್ ಪ್ಯಾಂಥರ್ಸ್‌’ ಆರಂಭವಾಗಿತ್ತು. ಅದು ವ್ಯಕ್ತಿಗತವಾಗಿದ್ದರಿಂದ ಕ್ರಮೇಣ ಅದರ ವೇಗ ಕ್ಷೀಣಿಸಿತು. ಆದರೆ, ಕರ್ನಾಟಕದಲ್ಲಿ ದಲಿತ ಚಳಚಳಿ ಎಲ್ಲರನ್ನು ಒಳಗೊಂಡಿತ್ತು, ಎಲ್ಲರನ್ನು ಪೊರೆಯುವ ತಾಯ್ತನ ದಲಿತ ಸಂಘರ್ಷ ಸಮಿತಿಗೆ ಇತ್ತು” ಎಂದರು.

“ದಸಂಸ ಎಲ್ಲ ಜಾತಿಯ ನೊಂದವರನ್ನು ತನ್ನ ಒಡಲೊಳಗೆ ಇಟ್ಟುಕೊಂಡಿತ್ತು, ಅಂತಹ ತಾಯ್ತನದಿಂದ ಎಲ್ಲರನ್ನೂ ಪೊರೆದ ದೊಡ್ಡ ಚಳವಳಿಯೇ ದಲಿತ ಸಂಘರ್ಷ ಸಮಿತಿ. ಬಿ.ಕೃಷ್ಣಪ್ಪ, ಸಿದ್ದಲಿಂಗಯ್ಯ, ದೇವನೂರ ಮಹಾದೇವ ಸೇರಿದಂತೆ ಅನೇಮಕ ಕವಿಗಳು, ಕಲಾವಿದರು, ಹಾಡುಗಾರರು ಈ ಚಳವಳಿಯನ್ನು ಮುನ್ನಡೆಸಿದರು. ಯಾರೂ ಕೂಡ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯೋಚನೆ ಮಾಡಿದವರಲ್ಲ; ಅಂಬೇಡ್ಕರ್ ಚಿಂತನೆ ಹಡರುವುದು ಮಾತ್ರ ಅವರ ಗುರಿಯಾಗಿತ್ತು; ದಲಿತರ ಮೇಲೆಲಿನ ದೌರ್ಜನ್ಯ ತಡೆಯುವುದಾಗಿತ್ತು. ಆದರೆ, ದೌರ್ಜನ ಇಂದಿಗೂ ನಿಂತಿಲ್ಲ” ಎಂದು ಹೇಳಿದರು.

“ಕೃಷ್ಣಪ್ಪ ಅವರು ದಲಿತ ಚಳವಳಿಯಲ್ಲಿದ್ದಾಗ ಮಾವಳ್ಳಿ ಕೇಂದ್ರ ಸ್ಥಾನವಾಗಿತ್ತು. ಬಿಕೆ ಅವರ ಜೊತೆಗೆ ಸಿದ್ದಲಿಂಗಯ್ಯ, ದೇವನೂರು ಮಹಾದೇವ, ತ್ಯಾಗಿ ಸೇರಿದಂತೆ ಅನೇಕರು ಮಾವಳ್ಳಿಯ ಸತ್ಯಮ್ಮನ ಗುಡಿಯಲ್ಲಿ ಕೂರುತ್ತಿದ್ದರು. ಕೃಷ್ಣಪ್ಪ ಅವರು ಅದ್ಭುತವಾಗಿ ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಬಿಕೆ ಹಾಡುಗಳ ಮೂಲಕ ನಾವು ದಲಿತ ಚಳವಳಿಯ ಭಾಗವಾದವರು. ಅವರ ಕನಸು ಮತ್ತು ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡೆವು. ಗದಗಿಗೆ (ಸಾವನ್ನಪ್ಪಿದ ಸ್ಥಳ) ಹೊರಡುವ ಹಿಂದಿನ ದಿನ ಅವರನ್ನು ನಾನು ಬೆಂಗಳೂರಿನಿಂದ ಬಸ್‌ ಹತ್ತಿಸಿದೆ. ದಲಿತ ಚಳವಳಿಯ ಆರಂಭದ ದಿನದಿಂದಲೂ ಅವರ ಕೊನೆಯ ದಿನದವರೆಗೆ ನಮ್ಮನ್ನು ಕೈಹಿಡಿದು ನಡೆಸಿದರು” ಎಂದರು.

“ತಮ್ಮ ಜೀವನವನ್ನು ದಲಿತ ಚಳವಳಿಗೆ ಮೀಸಲಿಟ್ಟಿದ್ದ ಅನೇಕ ಹೋರಾಟಗಾರರನ್ನು ಇಂದು ನಾವು ಕಳೆದುಕೊಂಡಿದ್ದೇವೆ. ನಮ್ಮ ಹಿರಿಯರನ್ನು ನಾವು ನೆನೆಪಿಸಿಕೊಳ್ಳುವ ಜೊತೆಗೆ ಅವರ ಚಿಂತನೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

“ಮೂರು ದಶಕಗಳ ಕಾಲ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದಸಂಸ ನಿರಂತರವಾಗಿ ಮಾತನಾಡುತ್ತಿತ್ತು. ಇದರಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್‌ಇ) ಸೆಲ್ ಆರಂಭವಾಯಿತು. ನಮಗೆ ಅಧಿಕಾರ ಇಲ್ಲ, ನಮ್ಮಿಂದ ಎಫ್‌ಐಆರ್‌ ಹಾಕಲು ಸಾಧ್ಯವಿಲ್ಲ ಎಂದು ಎಂದು ಅಲ್ಲಿನ ಎಸ್‌ಪಿ-ಡಿಸಿಪಿಗಳು ಹೇಳುತ್ತಿದ್ದರು. ಅವರಿಗೆ ಅಧಿಕಾರ ಕೊಡಿ ಎಂದು ನಾವು ಹಲವು ಭಾರಿ ಒತ್ತಾಯಿಸಿದ್ದೇವೆ. ದಲಿತ ಚಳವಳಿ ಎತ್ತಿದ ಪ್ರಶ್ನೆಗೆ ಡಿಸಿಆರ್‌ಇ (ವಿಶೇಷ ಪೊಲೀಸ್ ಠಾಣೆ) ಸೆಲ್ ಆರಂಭಿಸುವ ಮೂಲಕ ಮಹದೇವಪ್ಪ ಇಂದು ಉತ್ತರಿಸಿದ್ದಾರೆ. ದಲಿತ ಸಮುದಾಯದ ರಕ್ಷಣೆಗೆ ದೇಶದಲ್ಲೇ ಅತ್ಯಂತ ವ್ಯವಸ್ಥಿತಿ ಪೊಲೀಸ್ ಠಾಣೆ ಅರಂಭಿಸಿರುವುದು ಕರ್ನಾಟಕ ಸರ್ಕಾರ ಮಾತ್ರ; 32 ಡಿಸಿಆರ್‌ಇ ಸೆಲ್ ಪೊಲೀಸ್ ಠಾಣೆಗಳನ್ನು ಸರ್ಕಾರ ಆರಂಭಿಸಿದೆ. ದಸಂಸದ ಬೇಡಿಕೆಯನ್ನು ಜಾರಿ ಮಾಡುವ ಇಚ್ಛಾಶಕ್ತಿ ಈವರೆಗೆ ಯಾರಿಗೂ ಇರಲಿಲ್ಲ, ಅದನ್ನು ಜಾರಿಗೆ ತಂದ ಮಹದೇವಪ್ಪ ಅವರನ್ನು ನಾವು ಅಭಿನಂದಿಸಲೇಬೇಕು” ಎಂದು ಪ್ರಶಂಸಿದರು.

“ದಲಿತರಿಗೆ ಭೂಮಿ ಇದ್ದಿದ್ದರೆ ಅವರ ಮೇಲಿನ ದೌರ್ಜನ್ಯಗಳು ಕಡಿಮೆ ಆಗುತ್ತಿದ್ದವು; ಭೂಮಿ ಎಂಬುದು ಒಂದು ಸಾಧನವಾಗಿದೆ. ದಲಿತ ಚಳವಳಿ ಆರಂಭಿಸಿದ ಪಿಟಿಎಸ್‌ಎಲ್‌ ಮೂಲಕ ಒಂದಷ್ಟು ಭೂಮಿ ಸಿಕ್ಕಿದೆ. ಅದನ್ನೂ ಪ್ರಬಲ ಜಾತಿಗಳು ವಿರೋಧಿಸಿವೆ. ಪಿಟಿಸಿಎಲ್‌ ಕಾಯ್ದೆಯನ್ನು ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪ್ರಯತ್ನವಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ. ಲಕ್ಷಲಕ್ಷ ದರಕಾಸ್ತು ಭೂಮಿ ಅರ್ಜಿಗಳು ಕೊಳೆಯುತ್ತಾ ಬಿದ್ದಿವೆ. ಈ ಬಗ್ಗೆ ಯಾವ ಶಾಸಕರೂ ಮಂತ್ರಿಗಳು ಸಭೆ ನಡೆಸುತ್ತಿಲ್ಲ. ಅರಣ್ಯ ಇಲಾಖೆ ದಲಿತರ ಭೂಮಿಗಳನ್ನು ಬಲವಂತವಾಗಿ ಕಿತ್ತುಕೊಂಡು ಸಾಮಾಜಿಕ ಅರಣ್ಯ ಮಾಡುತ್ತಿವೆ. ಅದನ್ನು ಕೇಳಿದವರನ್ನು ಹಿಡಿದು ಜೈಲಿಗೆ ಹಾಕುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

ದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...