Homeಕರ್ನಾಟಕದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

ದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

- Advertisement -
- Advertisement -

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಪ್ರಕ್ರಿಯೆ ಪ್ರಸ್ತುತ ಒಂದು ಹಂತಕ್ಕೆ ಬಂದಿದೆ; ಈ ವಿಷಯ ಪರಿಹಾರದ ಬಳಿಕ ಹೊಸ ತಲೆಮಾರು ದಲಿತ ಚಳುವಳಿಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಪ್ರೊ. ನಟರಾಜ್ ಹುಳಿಯಾರ್ ಕರೆಕೊಟ್ಟರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನದ ಪ್ರಯುಕ್ತ ನಡೆದ ‘ನಾಗರಿಕ ಹಕ್ಕು ರಕ್ಷಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಬಿ.ಕೃಷ್ಣಪ್ಪ ಅವರು ಟೀಚರ್ ಆಗಿ ಚಳವಳಿ ಹೇಗೆ ನಡೆಸಬೇಕು ಎಂದು ಒಂದು ಮಾದರಿ ಹಾಕಿಕೊಟ್ಟರು. ಕನ್ನಡ ಸಾಹಿತ್ಯದಲ್ಲಿ ದಲಿತ ವಿಮರ್ಶೆ ಹೇಗಿರಬೇಕು? ವಿದ್ಯಾರ್ಥಿಗಳ ನಡುವೆ ಚಳವಳಿ ಹೇಗೆ ಕಟ್ಟಬೇಕು ಎಂದು ಹೇಳಿಕೊಟ್ಟರು. ಇಂದು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣಪ್ಪ ಅವರ ಮಾದರಿ ನಮ್ಮ ಎದುರಿಗಿದೆ. ದಲಿತ ಚಳವಳಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಅವರ ಮಾದರಿ ಹಬ್ಬಿದೆ ಎಂದರು.

ಭದ್ರಾವತಿಯಲ್ಲಿ ವಿಎಸ್ಎನ್ಎಲ್ ಕಾರ್ಖಾನೆಯಲ್ಲಿ ದಲಿತ ನೌಕರರಿಗೆ ಪ್ರತ್ಯೇಕ ಚಹಾ ನೀಡಲಾಗುತ್ತಿತ್ತು. ಪ್ರಬಲ ಜಾತಿ ನೌಕರರೊಬ್ಬರು ಬಂದು ಎಲ್ಲರಿಗೂ ಚಹಾ ನೀಡಬೇಕಾಗಿತ್ತು. ಅದನ್ನು ವಿರೋಧಿಸುವ ಮೂಲಕ  ಹೋರಾಟ ಕಟ್ಟಿದರು. ಅಲ್ಲಿಂದ ಅವರು ಅಸ್ಪೃಶ್ಯತೆ ವಿರೋಧಿ ಹೋರಾಟಕ್ಕೆ ಚಾಲನೆ ಕೊಟ್ಟರು. 70ರ ದಶಕದಲ್ಲಿ ಕೃಷ್ಣಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಕೆಲಸದ ಬಗ್ಗೆ ಹಾಗೂ ರಾಜ್ಯ ಬಜೆಟ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ ಏನೆಲ್ಲಾ ಮಾಡಬೇಕು ಎಂದು ಸಲಹೆ ಕೊಡುತ್ತಿದ್ದರು. ಅಂದು ಕೃಷ್ಣಪ್ಪ ಅವರು ಮಾಡಿದ ಹೋರಾಟದ ಪರಿಣಾಮವಾಗಿ ಸರ್ಕಾರ ಈಗ ದಲಿತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿದೆ ಎಂದು ಹೇಳಿದರು.

ಕೃಷ್ಣಪ್ಪ ಅವರ ಹೋರಾಟದ ಫಲದಿಂದ ಇಂದು ದಲಿತರ ಭೂಮಿ ಪರಭಾರೆ ಬಗ್ಗೆ ಕಾನೂನಾಗಿದೆ. ಕೃಷ್ಣಪ್ಪ ಅವರ ಗತಕಾಲವನ್ನು ನೆನೆಪಿಸಿಕೊಂಡು ನಾವು ಇಂದು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ದಲಿತ ಚಳವಳಿಗೆ ಸಾಹಿತಿಗಳು, ಬರಹಗಾರರು, ಶಿಕ್ಷಕರು, ರಾಜಕಾರಣಿಗಳು ಸೇರಿದಂತೆ ಎಲ್ಲ ವಲಯದಿಂದ ಪ್ರತಿನಿಧಿಗಳು ಇದ್ದರು. ಇಂದು ದಲಿತ ಚಳವಳಿಗೆ ಅವರೆಲ್ಲರ ಸಂಪರ್ಕ ಕಡಿಮೆಯಾಗಿದೆ. ದಲಿತ ಚಳವಳಿಗೆ ವಿವಿಧ ವಲಯಗಳಿಂದ ಬರುತ್ತಿದ್ದ ಬೆಂಬಲ ಕ್ಷೀಣಿಸಿದೆ. ದಲಿತ ಚಳವಳಿಗೆ ಕೃಷ್ಣಪ್ಪ ಅವರು ಕೊಟ್ಟ ನುಡಿಗಟ್ಟುಗಳು ಈಗಲೂ ನಮ್ಮ ಬಳಿಯಲ್ಲಿ ಇದೆ; ಎಲ್ಲ ವಲಯಗಳ ಬುದ್ದಿಜೀವಿಗಳು ದಲಿತ ಚಳವಳಿ ಜೊತೆಗೆ ಸೇರಬೇಕು. ಏಕೆಂದರೆ, ಅಮೆರಿಕದಲ್ಲಿ ಒಬಾಮ ಎರಡು ಅವಧಿಗೆ ಅಧ್ಯಕ್ಷರಾಗಲೂ ಇದೇ ಕಾರಣ. ಅಲ್ಲಿನ ಸಾಂಸ್ಕೃತಿಕ ಅಧಿಕಾರದಿಂದ ಇದು ಸಾಧ್ಯವಾಯಿತು. ಸಿನಿಮಾ, ಹಾಡುಗಾರರು, ಬರಹಗಾರರು ಸೇರಿದಂತೆ ಎಲ್ಲರೂ ಕಪ್ಪು ಜನರ ಬಗ್ಗೆ ಮಾತನಾಡಿದರು ಎಂದರು.

ನಾವು ಅಂಬೇಡ್ಕರ್‌ವಾದವನ್ನು ಪ್ರಚಾರ ಮಾಡಬೇಕು. ಅಂಬೇಡ್ಕರ್ ಅವರ ವೈಚಾರಿಕತೆ ಸಮಾಜದಲ್ಲಿ ಹಬ್ಬದ ಕಾರಣಕ್ಕೆ ಇಂದು ದೇಶದಲ್ಲಿ ಹಲವೆಡೆ ಕಾಲ್ತುಳಿತ ಆಗುತ್ತಿದೆ. ಅಂಬೇಡ್ಕರ್ ಅವರ ಜಾತಿ ವಿನಾಶದ ಮಾದರಿಯನ್ನು ಮರೆತಿರುವ ನಾವು, ಜಾತಿ ಉಪಜಾತಿಗಳನ್ನು ಪೋಷಿಸಿಕೊಂಡು ಹೋಗುತ್ತಿದ್ದೇವೆ. ಜಾತಿ ಪ್ರಜ್ಞೆಯನ್ನು ನಾವು ನಮ್ಮ ತಲೆಯಿಂದ ಹೋಗಲಾಡಿಸಬೇಕು. ಜಾತಿ ಇಂದು ಎಲ್ಲವನ್ನೂ ನಿಯಂತ್ರಣ ಮಾಡುತ್ತಿದೆ. ಊಳಿಗಮಾನ್ಯ ಜಾತಿ ಹಾಗೂ ಪಕ್ಷಗಳು ದಲಿತ ರಾಜಕಾರಣಿಗಳ ವಿರುದ್ಧ ಮಾತನಾಡಲು ದಲಿತ ರಾಜಕಾರಣಿಗೇ ಸುಪಾರಿ ನೀಡುತ್ತಿವೆ. ಅದಕ್ಕೆ ನಮ್ಮ ಮಾಧ್ಯಮಗಳೂ ಹೆಚ್ಚು ಪ್ರಚಾರ ಕೊಡುತ್ತಿವೆ ಎಂದು ಹೇಳಿದರು.

ದಲಿತ ಚಳವಳಿಯ ಯುಜನರಿಗೆ ನನ್ನದೊಂದು ಸಲಹೆ. ಒಳ ಮೀಸಲಾತಿ ಜಾರಿ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ. ಅದು ಪರಿಹಾರ ಆದ ನಂತರ ಹೊಸ ತಲೆಮಾರು ದಲಿತ ಚಳುವಳಿಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು ಕಿವಿಮಾತು ಹೇಳಿದರು.

ಸಿದ್ಧಾಂತಗಳಿಗೆ ಮಾತ್ರ ಜಗತ್ತು ಬದಲಿಸುವ ಶಕ್ತಿ ಇದೆ

ಯಾವ ಬಾಂಬು-ಬಂದೂಕಿಗೂ ಜಗತ್ತನ್ನು ಬದಲಾಯಿಸುವ ಶಕ್ತಿ ಇಲ್ಲ. ಗಟ್ಟಿ ಸಿದ್ಧಾಂತಗಳಿಗೆ ಮಾತ್ರ ಆ ಶಕ್ತಿ ಇದೆ ಎಂದು ಚಿಂತಕರು ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯರ್ಶಿಗಳಾದ ಡಾ. ಎನ್.ವೆಂಕಟೇಶಯ್ಯ ಪ್ರತಿಪಾದಿಸಿದರು.

ಅಂಬೇಡ್ಕರ್‌ವಾದ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ದಲಿತ ಚಳವಳಿಗೆ ಈಗ 51 ವರ್ಷ ತುಂಬುತ್ತಿದೆ. ಜಗತ್ತನ್ನು ಬದಲಾಯಿಸುವ ಶಕ್ತಿ ಗಟ್ಟಿ ಸಿದ್ಧಾಂತಗಳಿಗೆ ಮಾತ್ರ ಇದೆ. ಯಾವುದೇ ಬಾಂಬು-ಬಂದೂಕುಗಳಿಗೆ ಅಲ್ಲ. ಸಿದ್ಧಾಂತವು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಸಿದ್ಧಾಂತವು ಸಮಾಜದ ಬದಲಾವಣೆಗೆ ಸದಾ ಶ್ರಮಿಸುತ್ತದೆ; ಇಲ್ಲದಿದ್ದರೆ ಆ ಸಿದ್ದಾಂತ ಜೀವಂತ ಇರುವುದಿಲ್ಲ ಎಂದರು.

ಕೃಷ್ಣಪ್ಪ ಅವರ ಹೋರಾಟದ ಮಾರ್ಗಗಳು ಭೂಮಿ, ವಸತಿ ಶಾಲೆ, ಮೂಢನಂಬಿಕೆ ಮತ್ತು ಅಸ್ಪೃಶ್ಯತೆ ವಿರೊಧಿಯಾಗಿತ್ತು. ಅವರು ಪ್ರಮುಖವಾಗಿ ನಾಲ್ಕೈದು ಹೋರಾಟಗಳನ್ನು ರೂಪಿಸಿದರು. 70ರ ದಶಕದಲ್ಲಿ ಅವರು ನಡೆಸಿದ ಭೂಮಿ ಹೋರಾಟದಿಂದ ಇಂದು ಲಕ್ಷಾಂತರ ಜನ ಭೂ ಹಿಡುವಳಿದಾರರಾಗಿದ್ದಾರೆ; ಅದರಲ್ಲಿ ಬಹುತೇಕರು ದಲಿತರಿದ್ದಾರೆ. ‘ಹೆಂಡ ಬೇಡ, ವಸತಿ ಶಾಲೆ ಕೊಡಿ’ ಎಂಬ ಚಳವಳಿಯಿಂದ ಇಂದು ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 8.35 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಈ ಶಾಲೆಗಳಲ್ಲಿ ಫಲಿತಾಂಶ ಕೂಡ ಉತ್ತಮವಾಗಿದೆ. ವಸತಿ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಐಎಎಸ್-ಐಪಿಎಸ್ ಆಗಿದ್ದಾರೆ. ಶೇ.98ರಷ್ಟು ಮಕ್ಕಳು ಪ್ರತಿವರ್ಷ ಉತ್ತೀರ್ಣರಾಗುತ್ತಿದ್ದಾರೆ. ದಲಿತ ಚಳವಳಿ ಮತ್ತು ಕೃಷ್ಣಪ್ಪ ಅವರ ಮುಂದಾಲೋಚನೆಗಳೇ ಇದಕ್ಕೆಲ್ಲಾ ಕಾರಣ. ಅಂದರೆ ಒಂದು ಗಟ್ಟಿ ಸಿದ್ಧಾಂತದಿಂದ ಮಾತ್ರ ಇದೆಲ್ಲ ಸಾಧ್ಯ” ಎಂದರು.

ಹಾವೇರಿ| ಪೌರ ಕಾರ್ಮಿಕರ ಮೇಲೆ ಹಲ್ಲೆ: ಆರೋಪಿಗಳ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...