ಸಿಎಂ ಮೋಹನ್ ಯಾದವ್ ನೇತೃತ್ವದ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವರಾದ ಕುನ್ವರ್ ವಿಜಯ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಪ್ರಚೋದನಕಾರಿ ಹೇಳಿಕೆಯೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹೆಸರಿಸದೆ, ಸಚಿವರು ಕೋಮುವಾದಿ ಮತ್ತು ಅವಹೇಳನಕಾರಿ ಧಾಟಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳಲು “ಅವರ ಸಮುದಾಯದ ಸಹೋದರಿಯನ್ನೆ” ಪಾಕಿಸ್ತಾನವನ್ನು ಎದುರಿಸಲು ಕಳುಹಿಸುವ ಮೂಲಕ ಸಾಂಕೇತಿಕ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉದ್ದೇಶಿಸಿ ಹೇಳಲಾಗ ಈ ಉಲ್ಲೇಖದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ..
“ಪಾಕಿಸ್ತಾನಿಗಳು ನಮ್ಮ ದೇಶದಿಂದ ಜನರನ್ನು ಕೊಂದಿದ್ದರು. ಭಯೋತ್ಪಾದಕರು ‘ಮೋದಿಗೆ ನಾವು ಹಿಂದೂಗಳನ್ನು ಕೊಂದು ಅವರನ್ನು ವಿವಸ್ತ್ರಗೊಳಿಸಿದ್ದೇವೆ ಎಂದು ಹೇಳಿ’ ಎಂದು ಹೇಳಿದರು. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರಿಗೆ ಪಾಠ ಕಲಿಸಲು ತಮ್ಮ ಸಹೋದರಿಯನ್ನು ಸೇನಾ ವಿಮಾನದಲ್ಲಿ ಕಳುಹಿಸಿದ್ದಾರೆ” ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
“ನಮ್ಮ ಸಹೋದರಿಯರ ಸಿಂಧೂರ ಅಳಿಸಿದವರನ್ನು ನಾವು ಅವರ ಸಹೋದರಿಯನ್ನೆ ಅವರನ್ನು ಹೊಡೆಯಲು ಕಳುಹಿಸಿದ್ದೇವೆ. ಮೋದಿಯವರಿಗೆ ಅವರ ಬಟ್ಟೆಗಳನ್ನು ಬಿಚ್ಚಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಅವರ ಜಾತಿ ಮತ್ತು ಸಮುದಾಯದಿಂದ ಅವರ ಸಹೋದರಿಯನ್ನು ಸೇಡು ತೀರಿಸಿಕೊಳ್ಳಲು ಮತ್ತು ಅವರ ಮೇಲೆ ಹಲ್ಲೆ ಮಾಡಲು ಕಳುಹಿಸಿದರು” ಎಂದು ಅವರು ಹೇಳಿದ್ದಾರೆ.
“56 ಇಂಚಿನ ಎದೆ” ಹೊಂದಿರುವ ವ್ಯಕ್ತಿ ಮಾತ್ರ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ ಸಚಿವ, ಪ್ರಧಾನಿಯ ನಾಯಕತ್ವವನ್ನು ಶ್ಲಾಘಿಸಿದ್ದಾರೆ. “ಮೋದಿ ಅವರನ್ನು ಧೂಳಿಪಟ ಮಾಡುವುದಾಗಿ ಹೇಳಿದರು. ಭಯೋತ್ಪಾದಕರು ಅವರ ಮನೆಗಳಲ್ಲಿ ಕುಳಿತಿದ್ದರು ಮತ್ತು ಅವರ ಮೇಳೆ ದಾಳಿ ಮಾಡಲಾಯಿತು. ನರೇಂದ್ರ ಮೋದಿ ನಮ್ಮ ಪ್ರಧಾನಿ ಮತ್ತು ಅವರ ನಾಯಕತ್ವದಲ್ಲಿ ನಾವು ಸುರಕ್ಷಿತರಾಗಿದ್ದೇವೆ ಎಂದು ನಮಗೆ ಹೆಮ್ಮೆ ಇದೆ” ಎಂದು ಅವರು ಹೇಳಿದ್ದಾರೆ.
ಸಚಿವರ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿವೆ, ಅನೇಕರು ಅವರನ್ನು ಸಂವೇದನಾಶೀಲರಲ್ಲದ, ಕೋಮುವಾದಿ ವ್ಯಕ್ತಿ ಎಂದು ಹೇಳಿದ್ದು, ಅವರ ಸಶಸ್ತ್ರ ಪಡೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯ ಅಥವಾ ಕೋಮು ಹೇಳಿಕೆಗಳನ್ನು ನೀಡಲು ಸೇನಾ ಅಧಿಕಾರಿಯ ಗುರುತನ್ನು ಬಳಸುವುದು ಸೂಕ್ತವಲ್ಲ. ಇದು ಭಾರತದ ರಕ್ಷಣಾ ಪಡೆಗಳ ವೃತ್ತಿಪರತೆಯನ್ನು ಹಾಳು ಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಲಗಿದೆ.
ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಪಾಕಿಸ್ತಾನಿಯರ ಸಹೋದರಿ’ ಎಂದ ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ ಕುನ್ವರ್ ವಿಜಯ್ ಶಾ
ಪೂರ್ತಿ ಸುದ್ದಿ ಓದಿ➣➣ https://t.co/sIHNXDYyfH… #NaanuGauri #OperationSindoor #indianarmy #ColonelSofiaQureshi #SofiaaQureshi #ColonelQureshi #ColonelSofia pic.twitter.com/KWDoGlekdn
— Naanu Gauri (@naanugauri) May 13, 2025
ಕರ್ನಲ್ ಸೋಫಿಯಾ ಖುರೇಷಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ