Homeಮುಖಪುಟಪಾಕಿಸ್ತಾನದ ಡ್ರೋನ್ ದಾಳಿಯಲ್ಲಿ ಗಾಯಗೊಂಡಿದ್ದ ಪಂಜಾಬ್‌ನ ಮಹಿಳೆ ಸಾವು

ಪಾಕಿಸ್ತಾನದ ಡ್ರೋನ್ ದಾಳಿಯಲ್ಲಿ ಗಾಯಗೊಂಡಿದ್ದ ಪಂಜಾಬ್‌ನ ಮಹಿಳೆ ಸಾವು

- Advertisement -
- Advertisement -

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಶುಕ್ರವಾರದಂದು ಪಾಕಿಸ್ತಾನದ ಡ್ರೋನ್ ಅಪ್ಪಳಿಸಿ ಗಾಯಗೊಂಡಿದ್ದ ಸುಖ್ವಿಂದರ್ ಕೌರ್ ಸೋಮವಾರ ರಾತ್ರಿ ನಿಧನರಾದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ ಎಂದು ಸ್ಕ್ರೋಲ್‌.ಇನ್ ವರದಿ ಮಾಡಿದೆ. ಈ ದಾಳಿಯ ವೇಳೆ ಕೌರ್ ಅವರ ಕುಟುಂಬದ ಇತರ ಇಬ್ಬರು ಸದಸ್ಯರು ಗಾಯಗೊಂಡಿದ್ದರು. ಪಾಕಿಸ್ತಾನದ ಡ್ರೋನ್ ದಾಳಿಯಲ್ಲಿ

ಕೌರ್ ಅವರನ್ನು ಖೈ ಫೆಮೆ ಕಿ ಗ್ರಾಮದಿಂದ ಫಿರೋಜ್‌ಪುರದ ಅನಿಲ್ ಬಾಘಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಶನಿವಾರ ಸ್ಕ್ರೋಲ್.ಇನ್ ವರದಿ ಮಾಡಿತ್ತು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌರಭ್ ಭಾಗಿ, ಗಾಯಗೊಂಡ ಕೌರ್ ಅವರು ಶೇ. 80 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಶನಿವಾರ ಅವರನ್ನು ಲುಧಿಯಾನದ ದಯಾನಂದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸೋಮವಾರ ಸಾವನ್ನಪ್ಪಿದರು ಎಂದು ವರದಿ ಹೇಳಿದೆ.

ಕೌರ್ ಅವರ ಮನೆ ಮೇಲೆ ದಾಳಿ ನಡೆದ ಶುಕ್ರವಾರ ರಾತ್ರಿ, ಪಾಕಿಸ್ತಾನವು ಫಿರೋಜ್‌ಪುರ ಪಟ್ಟಣದ ಸೇನಾ ಕಂಟೋನ್ಮೆಂಟ್ ಅನ್ನು ಗುರಿಯಾಗಿರಿಸಿಕೊಂಡು ಬೆಳಿಗ್ಗೆ ಐದು ಗಂಟೆಯವರೆಗೆ ಡ್ರೋನ್ ದಾಳಿ ನಡೆಸಿತ್ತು ಎಂದು ಇಬ್ಬರು ಭದ್ರತಾ ಅಧಿಕಾರಿಗಳು ಸ್ಕ್ರೋಲ್‌ಗೆ ತಿಳಿಸಿದ್ದಾರೆ. ಈ ವೇಳೆ ಹೆಚ್ಚಿನ ಡ್ರೋನ್‌ಗಳನ್ನು ತಡೆಹಿಡಿಯಲಾಗಿದ್ದರೂ, ಒಂದು ಡ್ರೋನ್ ಖೈ ಫೆಮೆ ಕಿಯಲ್ಲಿ ದಾಳಿ ನಡೆಸಿರಬಹುದು ಎಂದು ತಿಳಿದು ಬಂದಿದೆ.

ಭಾರತ ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಜಮ್ಮು ಕಾಶ್ಮೀರದ ಹೊರಗೆ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ ಮೊದಲ ನಾಗರಿಕ ಕೌರ್ ಆಗಿದ್ದಾರೆ. ಪಾಕಿಸ್ತಾನದ ದಾಳಿಯಲ್ಲಿ 21 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೇ 7 ರಂದು ಪ್ರಾರಂಭವಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಕಾರ್ಯಾಚರಣೆಯಲ್ಲಿ ಏಳು ಭಾರತೀಯ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ನಾಲ್ವರು ಸೇನಾ ಸಿಬ್ಬಂದಿ, ಒಬ್ಬ ವಾಯುಪಡೆಯ ಅಧಿಕಾರಿ ಮತ್ತು ಗಡಿ ಭದ್ರತಾ ಪಡೆಯ ಇಬ್ಬರು ಸೇರಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಮೇ 7 ರಂದು ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ನಡೆಸಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದವು, ಇದರಲ್ಲಿ 26 ಜನರು ಸಾವನ್ನಪ್ಪಿದ್ದರು.

ಜಮ್ಮು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಹಳ್ಳಿಗಳ ಮೇಲೆ ಪದೇ ಪದೇ ಶೆಲ್ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಸೇನೆಯು ಪ್ರತೀಕಾರ ತೀರಿಸಿಕೊಂಡಿತ್ತು. ನಾಲ್ಕು ದಿನಗಳ ಸಂಘರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ಗುಂಡಿನ ದಾಳಿಯನ್ನು ನಿಲ್ಲಿಸಲು ಶನಿವಾರದಂದು ಒಪ್ಪಂದ ಮಾಡಿಕೊಂಡವು. ಪಾಕಿಸ್ತಾನದ ಡ್ರೋನ್ ದಾಳಿಯಲ್ಲಿ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ: ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಪಾಕಿಸ್ತಾನಿಯರ ಸಹೋದರಿ’ ಎಂದ ಬಿಜೆಪಿ ಸಚಿವ

ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಪಾಕಿಸ್ತಾನಿಯರ ಸಹೋದರಿ’ ಎಂದ ಬಿಜೆಪಿ ಸಚಿವ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -