ಆಪ್ ಬಿಡುಗಡೆ ಮಾಡಿದ 27 ಅಭ್ಯರ್ಥಿಗಳ ಪಟ್ಟಿಯಲ್ಲಿ 21 ಮುಸ್ಲಿಮರಿಗೆ ಟಿಕೆಟ್‌? ಇದು ನಿಜವೇ?

ಫೆಬ್ರವರಿ 08ರಂದು ದೆಹಲಿಯ 70 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಬಾರಿಯೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಭರ್ಜರಿಯಾಗಿ ಗೆಲ್ಲಲ್ಲಿದೆ ಎಂದು ಮಾಧ್ಯಮಗಳು ಮತ್ತು ಜನತೆ ಹೇಳುತ್ತಿದ್ದಾರೆ. ಇಂತಹ ಸಂದರ್ಭ ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ ಮೊದಲ ಸುತ್ತಿನ ಅಭ್ಯರ್ಥಿಗಳ ಪಟ್ಟಿಯಲ್ಲಿ 27ಜನರಲ್ಲಿ 21 ಜನ ಮುಸ್ಲಿಮರು ಎಂಬ ಪೋಸ್ಟ್ ವೈರಲ್ ಆಗಿದೆ.

ಆ ಮೂಲಕ ಕೇಜ್ರವಾಲ್ ಹೋಗಿ ಕೇಜ್ರುದ್ದೀನ್ ಆಗಿದ್ದಾರೆ. ದೆಹಲಿಯನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂಬ ಅಪಪ್ರಚಾರ ಶುರುವಾಗಿದೆ.

ಈ ರೀತಿಯ ಸುಳ್ಳು ಸುದ್ದಿ ಹರಡಿರುವವರು ಇಮ್ರಾನ್ ಹುಸೇನ್ (ಬಲ್ಲಿಮಾರನ್) ಹಾಜಿ ಇಶ್ರಕ್ ಖಾನ್ (ಸೀಲಾಂಪುರ್) ಅಮಾನತುಲ್ಲಾ ಖಾನ್ (ಓಖ್ಲಾ) ಈ ಮೂರು ಹಾಲಿ ಶಾಸಕರನ್ನು ಸಹ ಸೇರಿಸಿ ಗೊಂದಲ ಮೂಡಿಸಿದ್ದಾರೆ. ಅಂದರೆ ಜನ ನಿಜವಿರಬಹುದು ಎಂದು ನಂಬುವ ಹಾಗೆ ಮಾಡಿದ್ದಾರೆ.

ಆದರೆ ಆಪ್ ಸಾಮಾಜಿಕ ತಾಲತಾಣ ಮುಖ್ಯಸ್ಥ ಅಂಕಿಲ್‌ಲಾಲ್ ಮಾತನಾಡಿ ನಾವು ಇನ್ನು ಯಾವುದೇ ಅಭ್ಯರ್ಥಿಗಳ ಲಿಸ್ಟ್ ಬಿಟ್ಟಿಲ್ಲ. ಅದು ಸಂಪೂರ್ಣ ಸಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ ತಪ್ಪು ಭಾವನೆ ಬರಲಿ ಎಂದು ಈ ಫೇಕ್ ಅಭ್ಯರ್ಥಿಗಳ ಪಟ್ಟಿಯನ್ನು ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದು ಆಮ್‌ ಆದ್ಮಿ ಪಕ್ಷದ ಯಶಸ್ಸನ್ನು ಸಹಿಸದ ಕೆಲವು ಮೂರ್ಖರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಇದು ಫಲ ನೀಡುವುದಿಲ್ಲ ಜನ ನಮ್ಮ ಕೈಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆಮ್‌ ಆದ್ಮಿ ಪಕ್ಷವು ಜನವರಿ 14-15ರಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here