Homeಮುಖಪುಟಅದೊಂದು ದೊಡ್ಡ ವಿಷಯವಲ್ಲ: ಮುಸ್ಲಿಂ ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಘಟನೆಗೆ ಶಿಕ್ಷಣ ಸಚಿವ ನಾಗೇಶ್...

ಅದೊಂದು ದೊಡ್ಡ ವಿಷಯವಲ್ಲ: ಮುಸ್ಲಿಂ ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಘಟನೆಗೆ ಶಿಕ್ಷಣ ಸಚಿವ ನಾಗೇಶ್ ಪ್ರತಿಕ್ರಿಯೆ

- Advertisement -
- Advertisement -

ಪ್ರಾಧ್ಯಾಪಕರೊಬ್ಬರು ಮುಸ್ಲಿಂ ವಿದ್ಯಾರ್ಥಿಯೊಬ್ಬರನ್ನು ಕಸಬ್ ಎಂದು ಕರೆದು ಭಯೋತ್ಪಾದಕರಿಗೆ ಹೋಲಿಸುವ ಮೂಲಕ ಇಸ್ಲಾಮೋಫೋಬಿಯಾ ಹರಡಲು ಯತ್ನಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅದೊಂದು ದೊಡ್ಡ ವಿಷಯವಲ್ಲ ಎಂದಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ತರಗತಿಯೊಳಗೆ ಎಲ್ಲಾ ವಿದ್ಯಾರ್ಥಿಗಳ ಎದುರು ಮುಸ್ಲಿಂ ವಿದ್ಯಾರ್ಥಿಯ ಹೆಸರು ಕೇಳಿದಾಕ್ಷಣ ಒಹ್ ನೀನು ಕಸಬ್ ಎಂದು ಸಹಾಯಕ ಪ್ರಾಧ್ಯಾಪಕ ರವೀಂದ್ರನಾಥ್ ಕರೆದಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿಯು ನನ್ನನ್ನು ಹಾಗೆ ಹೇಗೆ ಕರೆಯುತ್ತೀರಿ ಎಂದು ಆಕ್ಷೇಪ ವ್ಯಕ್ತಪಡಿಸಿ ಪ್ರಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಾಧ್ಯಾಪಕರನ್ನು ಅಮಾನತ್ತು ಮಾಡಲಾಗಿತ್ತು.

ಈ ಪ್ರಕರಣದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ ನಾಗೇಶ್, “ಈ ಘಟನೆ ನಡೆದಿರುವುದು ದುರದೃಷ್ಟಕರ. ಪ್ರಾಧ್ಯಾಪಕ ಆ ಹೆಸರನ್ನು ಬಳಸಬಾರದಿತ್ತು. ಆದರೆ ಇದು ಅಷ್ಟು ಗಂಭೀರವಾದ ವಿಷಯ ಎಂದು ನನಗನಿಸುವುದಿಲ್ಲ. ಏಕೆಂದರೆ ನಾವು ಹಲವು ವಿದ್ಯಾರ್ಥಿಳಿಗೆ ಹಲವಾರು ಬಾರಿ ರಾವಣ, ಶಕುನಿ ಎಂದು ಕರೆಯುತ್ತೇವೆ. ಆದರೆ ಅದು ಸಮಸ್ಯೆಯಾಗುವುದಿಲ್ಲ. ಆದರೆ ಒಂದು ನಿರ್ಧಿಷ್ಟ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗೆ ಹೀಗೆ ಕರೆದರೆ ಏಕೆ ದೊಡ್ಡ ಸಮಸ್ಯೆಯಾಗುತ್ತದೆ ನನಗೆ ಗೊತ್ತಿಲ್ಲ” ಎಂದಿದ್ದಾರೆ.

“ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆ ಪ್ರಾಧ್ಯಾಪಕನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಮಾಡಲಾಗಿದೆ. ಅದರೆ ಕೆಲ ಹೆಸರುಗಳು ಏಕೆ ರಾಷ್ಟ್ರೀಯ ಇಶ್ಯೂಗಳಾಗುತ್ತವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ.

ಶುಕ್ರವಾರ ಪ್ರಶ್ನೆ ಕೇಳಲು ಮುಂದಾದ ವಿದ್ಯಾರ್ಥಿ ತನ್ನ ಹೆಸರನ್ನು ಹೇಳಿದಾಕ್ಷಣ ಪ್ರಾಧ್ಯಾಪಕರು ಓಹ್ ನೀನು ಕಸಬ್ ಎಂದ ಪ್ರಾಧ್ಯಾಪಕನನ್ನು ಆ ವಿದ್ಯಾರ್ಥಿ ತರಾಟೆಗೆ ತೆಗೆದುಕೊಂಡಿದ್ದರು. “ಸರ್ ನೀವು ಹೇಗೆ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತೀರಿ? ಒಂದು ಧರ್ಮವನ್ನು ಹೇಗೆ ಭಯೋತ್ಪಾದನೆಗೆ ತಳುಕು ಹಾಕುತ್ತೀರಿ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪ್ರಾಧ್ಯಾಪಕ ನೀನು ನನ್ನ ಮಗನಿದ್ದಂತೆ ಎಂದಿದ್ದಾರೆ. ನೀವು ನಿಮ್ಮ ಮಗನನ್ನು ಹೀಗೆ ಕರೆಯುತ್ತೀರಾ? ಆತನನ್ನೂ ಭಯೋತ್ಪಾದಕ ಎಂದು ಕರೆಯುತ್ತೀರಾ, ಇಲ್ಲವೆಂದ ಮೇಲೆ ನನ್ನನ್ನು ಹೇಗೆ ಕರೆದಿರಿ? ಅದು ಇಷ್ಟು ಜನರ ಮುಂದೆ ಎಂದು ವಿದ್ಯಾರ್ಥಿ ಮರು ಪ್ರಶ್ನಿಸಿದ್ದಾರೆ.

ಇದು ತಮಾಷೆ ಎಂದಾಗ, ಇಲ್ಲ ಸರ್ ಇದು ತಮಾಷೆಯಲ್ಲ. 26/11 ಭಯೋತ್ಪಾದನಾ ಪ್ರಕರಣವು ತಮಾಷೆಯಲ್ಲ. ಒಬ್ಬ ಮಸ್ಲಿಮನಾಗಿ ನಾನು ಇದನ್ನು ಪ್ರತಿನಿತ್ಯ ಎದುರಿಸುತ್ತಿದ್ದೇನೆ. ಹಾಗಾಗಿ ಇದು ತಮಾಷೆಯ ವಿಷಯವಲ್ಲ. ನೀವು ಪ್ರಾಧ್ಯಾಪಕರು. ನಮಗೆ ಪಾಠ ಮಾಡುತ್ತೀರಿ. ಹೇಗೆ ನನ್ನನ್ನು ಹಾಗೆ ಕರೆಯುವ ಹಾಗಿಲ್ಲ ಎಂದು ವಿದ್ಯಾರ್ಥಿ ವಾದಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ನಂತರ ಪ್ರಾಧ್ಯಾಪಕರು ಕ್ಷಮೆ ಕೇಳುತ್ತೇನೆ ಎಂದಾಗ, ನಿಮ್ಮ ಸಾರಿ ನೀವು ಏನೆಂಬುದನ್ನು ಮತ್ತು ನೀವು ಯೋಚಿಸುವ ವಿಧಾನವನ್ನು ಬದಲಿಸುವುದಿಲ್ಲ ಎಂದು ವಿದ್ಯಾರ್ಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದ ಬಳಿಕ ಮಾತನಾಡಿರುವ ವಿದ್ಯಾರ್ಥಿಯು, “ಜನಾಂಗೀಯ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಸ್ವೀಕರಾರ್ಹನಲ್ಲದ ಭಯೋತ್ಪಾದಕ ಕಸಬ್ ಹೆಸರಿನಿಂದ ನನ್ನನ್ನು ನಾನು ಇಷ್ಟಪಡುವ ಪ್ರಾಧ್ಯಾಪಕರೆ ಕರೆದುದ್ದುದು ಬೇಸರ ತರಿಸಿತು. ಅದಕ್ಕಾಗಿ ಅಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದೆ. ಆನಂತರ ಅವರೊಡನೆ ಮಾತನಾಡಿದ್ದೇನೆ. ಅವರು ಕ್ಷಮೆ ಯಾಚಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ” ಎಂದಿದ್ದಾರೆ.

ಈ ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾಲೇಜಿನ ವ್ಯವಸ್ಥಾಪಕ ಮಂಡಳಿಯು, “ಈ ಘಟನೆ ಕುರಿತು ಈಗಾಗಲೇ ವಿಚಾರಣೆ ನಡೆಯುತ್ತಿದೆ ಮತ್ತು ತನಿಖೆ ಮುಗಿಯುವವರೆಗೂ ಸಂಬಂಧಿತ ಪ್ರಾಧ್ಯಾಪಕರು ತರಗತಿ ತೆಗೆದುಕೊಳ್ಳದಂತೆ ಸೂಚಿಸಿದ್ದೇವೆ. ಸಂಸ್ಥೆಯು ಈ ರೀತಿಯ ನಡವಳಿಕೆಯನ್ನು ಕ್ಷಮಿಸುವುದಿಲ್ಲ ಮತ್ತು ಈ ಪ್ರತ್ಯೇಕ ಘಟನೆಯನ್ನು ನಿಗದಿಪಡಿಸಿದ ನೀತಿಗಳಿಗೆ ಅನುಗುಣವಾಗಿ ವಿಚಾರಣೆ ನಡೆಸುತ್ತದೆ. ನಮ್ಮ ಸಂಸ್ಥೆಯು ಕ್ಯಾಂಪಸ್‌ನಲ್ಲಿ ಬಹು ವೈವಿಧ್ಯತೆಯನ್ನು ಹೆಮ್ಮೆಯೆಂದು ಭಾವಿಸುತ್ತದೆ ಮತ್ತು ಜಾತಿ, ಧರ್ಮ, ಲಿಂಗ, ಪ್ರದೇಶಗಳನ್ನು ಲೆಕ್ಕಿಸದೆ ಎಲ್ಲರನ್ನು ಸಮಾನವಾಗಿ ಪರಿಗಣಿಸುವ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ; ಅಸ್ಪೃಶ್ಯತೆ ಪದ ಬಳಕೆ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ನಮ್ಮ ಮಾನ್ಯ ಶಿಕ್ಷಣ ಸಚಿವರನ್ನು ಯಾರು ಏನು ಬೇಕಾದರೂ ಕರೆಯಿರಿ ಅವರು ನೊಂದು ಕೊಳ್ಳುವುದಿಲ್ಲ, ಅವರನ್ನು ರಾವಣ ಅನ್ನಿ, ಶಕುನಿ ಅನ್ನಿ, ಅಥವಾ ಭಯೋತ್ಪಾದಕ ಅನ್ನಿ, ಒಸಮಾ ಬಿನ್ ಲಾಡೆನ್ ಅನ್ನಿ ಅವರು ಬೇಸರ ಪಟ್ಟುಕೊಳ್ಳುವುದಿಲ್ಲ ಏಕೆಂದರೆ ಅದು ಅವರಿಗೆ ದೊಡ್ಡ ವಿಷಯವೇ ಅಲ್ಲ!

  2. ನೀವು ಸಚಿವರಿಗೆ ಸರಿಯಾದ ಪ್ರತಿಕ್ರಿಯೆ ನೀಡಿದ್ದೀರಾ.ಅವರನ್ನ ಮನುವಾದಿ,ಜಾತಿವಾದಿ ,ಪುರೋಹಿತಶಾಹಿ, ನಾಲಾಯಕ್ ಮಂತ್ರಿ ಅಂದರು ಅವರೀಗೆನು ಬೇಸರವಿಲ್ಲಾ ಬಿಡಿ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...