Homeಸಿನಿಮಾಕ್ರೀಡೆಟೆನಿಸ್ ಪ್ರೇಮಿಗಳ ಹೃದಯ ಭಾರಗೊಳಿಸಿದ ಫೆಡರರ್ ವಿದಾಯ!

ಟೆನಿಸ್ ಪ್ರೇಮಿಗಳ ಹೃದಯ ಭಾರಗೊಳಿಸಿದ ಫೆಡರರ್ ವಿದಾಯ!

- Advertisement -
- Advertisement -

sa“Dear Roger, my friend and rival. I wish this day would have never come. It’s a sad day for me personally and for sports around the world”(ಪ್ರಿಯ ರೋಜರ್, ನನ್ನ ಗೆಳೆಯ ಮತ್ತು ಪ್ರಬಲ ಪ್ರತಿಸ್ಪರ್ಧಿ. ಈ ದಿನ ಬರಲೇಬಾರದಿತ್ತು. ವೈಯಕ್ತಿಕವಾಗಿ ಮತ್ತು ಜಾಗತಿಕ ಕ್ರೀಡೆಗೆ ಈ ದಿನ ಅತ್ಯಂತ ದುಃಖಭರಿತ ದಿನ).

ಟೆನಿಸ್ ಲೋಕದ ಜೀವಂತ ದಂತಕಥೆ ರೋಜರ್ ಫೆಡರರ್ ಟೆನಿಸ್ ಅಂಗಳಕ್ಕೆ ವಿದಾಯ ಘೋಷಿಸಿದ ಮರುಕ್ಷಣ ಮತ್ತೋರ್ವ ಸಮಕಾಲೀನ ದಿಗ್ಗಜ ರಫೇಲ್ ನಡಾಲ್ ಮಾಡಿದ್ದ ಈ ಒಂದು ಟ್ವೀಟ್ ಫೆಡರರ್ ಅಭಿಮಾನಿಗಳ ಆ ಕ್ಷಣದ ನೋವು ಮತ್ತು ದುಗುಡವನ್ನು ಪ್ರತಿಬಿಂಬಿಸುವಂತಿತ್ತು. ಏಕೆಂದರೆ ವಿಶ್ವದ ಎಲ್ಲ ಟೆನಿಸ್ ಪ್ರಿಯರು ಅಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಂಡಿದ್ದ ಮಾತು ಇದೊಂದೆ, “ಈ ದಿನ ಬರಬಾರದಿತ್ತು!”

ಹೌದು ಈ ದಿನ ಬರಬಾರದಿತ್ತು. ಏಕೆಂದರೆ ಟೆನಿಸ್ ಅಂಗಳದಲ್ಲಿ ಫೆಡರರ್ ಮಾಡಿದ್ದ ಸಾಧನೆ ಮತ್ತು ಟೆನಿಸ್ ಅಂಗಳದ ಆಚೆಗೂ ಅನುಕರಣೆಯಾಗಬಲ್ಲ ಆತನ ವ್ಯಕ್ತಿತ್ವ ಕೋಟಿಕೋಟಿ ಸಂಖ್ಯೆಯ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ಸಂಗತಿಗಳಾಗಿದ್ದವು. ಇದರಾಚೆಗೂ ಟೆನಿಸ್ ಅಷ್ಟೇನು ಪ್ರಸಿದ್ಧಿಯಲ್ಲದ, ಬರೀ ಕ್ರಿಕೆಟನ್ನಷ್ಟೇ ಕೊಂಡಾಡುವ ಭಾರತದಂತಹ ದೇಶಗಳಲ್ಲೂ ಅಪಾರ ಪ್ರಮಾಣದ ಪ್ರೇಕ್ಷಕರನ್ನು ಟೆನಿಸ್ ನೋಡಲೆಂದು ಟಿವಿ ಪರದೆಯ ಮುಂದೆ ಕೂರಿಸಿದ ಹಿರಿಮೆ ಖಚಿತವಾಗಿ ರೋಜರ್ ಫೆಡರರ್ ಅವರಿಗೇ ಸಲ್ಲುತ್ತದೆ. ರೋಜರ್ ಫೆಡರರ್ ಕಾಲವನ್ನು ಟೆನಿಸ್ ಲೋಕದ ಸುವರ್ಣ ಯುಗ ಎಂದು ಟೆನಿಸ್ ವಿಶ್ಲೇಷಕರು ಕೊಂಡಾಡುವುದು ಸಹ ಇದೇ ಕಾರಣಕ್ಕೆ.

ಗಾಡ್ ಆಫ್ ಗ್ರಾಸ್ ಸರ್ಫೇಸ್

1981 ಆಗಸ್ಟ್.8 ರಂದು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ನಗರದಲ್ಲಿ ಹುಟ್ಟಿದ ಫೆಡರರ್‌ನ ತಂದೆ ಸ್ವಿಸ್, ತಾಯಿ ದಕ್ಷಿಣ ಆಫ್ರಿಕಾದವರು. ಫೆಡರರ್ ಹುಟ್ಟು ಕ್ರೀಡಾಪಟು. ಸ್ವಿಸ್ ಮತ್ತು ಆಫ್ರಿಕಾ ಪ್ರಜೆ. ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್ ಪಟುವಾದ ಫೆಡರರ್‌ಗೆ ಕೈ ಮತ್ತು ಕಣ್ಣುಗಳ ಉತ್ತಮ ಸಮನ್ವಯವಿತ್ತು. ಹಾಗಾಗಿ, ಟೆನಿಸ್ ಆತನ ಸಹಜ ಆಯ್ಕೆಯಾಗಿತ್ತು. ಆತ ಟೆನಿಸ್ ಅಂಗಳಕ್ಕೆ ಕಾಲಿಟ್ಟಾಗ ವಯಸ್ಸಿನ್ನೂ ಒಂಭತ್ತು. 1992-93ನೇ ವರ್ಷದಲ್ಲಿ ತನ್ನ ನಗರದ ಟೆನಿಸ್ ಕೋರ್ಟ್‌ಗಳಲ್ಲಿ ’ಬಾಲ್ ಬಾಯ್’ ಆಗಿದ್ದ ಆ ಪುಟಾಣಿ ಹುಡುಗ ಭವಿಷ್ಯದಲ್ಲಿ 20 ಗ್ರ್ಯಾಂಡ್ ಸ್ಲಾಮ್ ಜಯಿಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸುತ್ತಾನೆ, ಟೆನಿಸ್ ಪ್ರೇಮಿಗಳು ಮತ್ತು ಕ್ರೀಡಾ ವಿಶ್ಲೇಷಕರಿಂದ ಗಾಡ್ ಆಫ್ ಗ್ರಾಸ್ ಸರ್ಫೇಸ್ ಎಂಬ ಬಿರುದನ್ನೂ ಪಡೆಯುತ್ತಾನೆ ಎಂದು ಆಗ ಯಾರು ತಾನೆ ಊಹಿಸಿಯಾರು?

ರೋಜರ್ ಫೆಡರರ್‌ನ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಪೈಕಿ ಆತ ತನ್ನ ಮೊದಲ ಪ್ರಶಸ್ತಿಯನ್ನು ಜಯಿಸಿದ್ದೇ ವಿಂಬಲ್ಡನ್‌ನ ಹಸಿರು ಹುಲ್ಲುಹಾಸಿನ ಅಂಗಳದಲ್ಲಿ ಎಂಬುದು ವಿಶೇಷ. ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳ ಪೈಕಿ ಹುಲ್ಲು ಹಾಸು ಹೊಂದಿರುವ ಏಕೈಕ ಟೂರ್ನಿ ವಿಂಬಲ್ಡನ್ ಎಂಬುದು ವಿಶೇಷ.

ಹುಲ್ಲು ಹಾಸಿನ ಅಂಗಳದಲ್ಲಿ ಫೆಡರರ್‌ನನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂಗಳದಲ್ಲಿನ ಗಾಳಿಯ ವೇಗವನ್ನು ಖಚಿತವಾಗಿ ಗುರುತಿಸಿ ಫೆಡರರ್ ಹೊಡೆಯುವ ಸರ್ವ್ ಮತ್ತು ಬ್ಯಾಕ್‌ಹ್ಯಾಂಡ್ ರಿವರ್ಸ್‌ಗಳಿಗೆ ಎದುರಾಳಿಗಳು ಈವರೆಗೆ ಉತ್ತರ ಕಂಡುಕೊಂಡಿಲ್ಲ. ಆತನ ಹಗುರಾದ ಪಾದ ಚಲನೆ (footwork) ಮತ್ತು ಸುಲಲಿತ ಆಟವನ್ನು ನೋಡುವುದೇ ಒಂದು ಸೊಬಗು. ಇನ್ನೂ ಬೇಸ್ ಲೈನ್‌ನಲ್ಲಿ ಪಾಯಿಂಟ್ ಗಿಟ್ಟಿಸುವ ಆತನ ಡ್ರಾಪ್ ಶಾಟ್‌ಗಳ ಬಗ್ಗೆ ಟೆನಿಸ್ ಲೋಕದಲ್ಲಿ ದಂತಕಥೆಗಳೇ ಇವೆ. ವಿಂಬಲ್ಡನ್‌ನಲ್ಲಿ ಆತ ಗೆದ್ದ ಪ್ರಶಸ್ತಿಗಳೇ ಈ ಎಲ್ಲ ಹೊಗಳಿಕೆಗಳಿಗೂ ಸಾಕ್ಷಿ ನುಡಿಯುವಂತಿದೆ. ಏಕೆಂದರೆ ಫೆಡರರ್ ಗೆದ್ದ 20 ಗ್ರ್ಯಾಂಡ್ ಸ್ಲಾಮ್‌ಗಳ ಪೈಕಿ ಅತಿಹೆಚ್ಚು ಪ್ರಶಸ್ತಿಗಳನ್ನು ಬಂದದ್ದು ವಿಂಬಲ್ಡನ್‌ನಿಂದಲೇ. ಕಳೆದ 150 ವರ್ಷಗಳ ಇತಿಹಾಸದಲ್ಲಿ ವಿಂಬಲ್ಡನ್‌ನಲ್ಲಿ ಅತಿಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ದಾಖಲೆಯೂ ಫೆಡರರ್ ಹೆಸರಲ್ಲೇ ಇದೆ.

ಬ್ರಿಟನ್‌ನ ದಂತಕಥೆ ವಿಲಿಯಂ ರೆನ್ಷಾ ಒಟ್ಟಾರೆ 7 ಬಾರಿ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರೆ, ರೋಜರ್ ಫೆಡರರ್ 8 ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದೇ ಕಾರಣಕ್ಕೆ ಫೆಡರರ್‌ನನ್ನು ಗಾಡ್ ಆಫ್ ಗ್ರಾಸ್ ಸರ್ಫೇಸ್ ಎಂದು ಗುರುತಿಸಲಾಗುತ್ತದೆ.

ರೋಮಾಂಚನಗೊಳಿಸಿತ್ತು ಆ ಒಂದು ಸೋಲು

ಈ ಹೊತ್ತಿನಲ್ಲಿ ಎಲ್ಲರೂ ಫೆಡರರ್ ಗೆದ್ದ 20 ಗ್ರಾಂಡ್ ಸ್ಲಾಮ್‌ಗಳನ್ನು ನೆನಪಿಸಿಕೊಂಡರೆ, ಹಲವು ಟೆನಿಸ್ ಪ್ರಿಯರಲ್ಲಿ ಪದೇಪದೆ ನೆನಪಾಗೋದು ಫೆಡರರ್ ಸೋತ 2008ರ ವಿಂಬಲ್ಡನ್ ಫೈನಲ್. ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದ ಆ ಪಂದ್ಯವನ್ನು ಟೆನಿಸ್ ಲೋಕದ ಶ್ರೇಷ್ಠ ಪಂದ್ಯವೆಂದು ಗುರುತಿಸಲಾಗುತ್ತದೆ. ಸುಮಾರು ಐದು ಗಂಟೆಗಳ ಕಾಲ ನಡೆದ 5 ಸೆಟ್‌ಗಳ ಆ ಪಂದ್ಯದಲ್ಲಿ ರಫೇಲ್ ನಡಾಲ್ ಗೆದ್ದರೂ ಫೆಡರರ್ ಸೋಲಲಿಲ್ಲ! ಟೆನಿಸ್ ಕ್ರೀಡೆ ಗೆದ್ದ ದಿನವದು.

ಆ ಪಂದ್ಯದಲ್ಲಿ ಮೊದಲ ಎರಡು ಸೆಟ್‌ಗಳಲ್ಲಿ ಫೆಡರರ್ ವಿರುದ್ಧ 4-6, 4-6 ಅಂತರದಲ್ಲಿ ಸೋಲು ಕಂಡಿದ್ದ ರಫೇಲ್ ನಡಾಲ್ ಮುಂದಿನ ಮೂರೂ ಸೆಟ್‌ಗಳನ್ನು ಟೈ ಬ್ರೇಕ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಗೆದ್ದು ಬೀಗಿದ್ದರು. ಈ ಮೂಲಕ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಆ ಪಂದ್ಯದಲ್ಲಿ ಫೆಡರರ್ ಸೋಲುಂಡಿರಬಹುದು. ಆದರೆ, ಐದೂ ಸೆಟ್‌ಗಳಲ್ಲಿ ಆತ ತೋರಿದ ಹೋರಾಟದ ಕಾರಣಕ್ಕೆ ಆ ಪಂದ್ಯ ಟೆನಿಸ್ ಲೋಕದ ಅತ್ಯಂತ ಮಹತ್ವದ ಪಂದ್ಯಗಳಲ್ಲೊಂದು ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

ಟೆನಿಸ್ ಅಂಗಳದಲ್ಲಿ ರಫೇಲ್ ನಡಾಲ್‌ನ ಬಿರುಸಿನ ಆಟ, ಫೆಡರರ್‌ನ ಸಮಚಿತ್ತತೆ, ಶಾಂತಭಾವ ಮತ್ತು ನೊವಾಕ್ ಜೊಕೊವಿಕ್‌ನ ಹಠ, ಛಲಕ್ಕೆ ಬಹುಶಃ ಮುಂದಿನ ಪೀಳಿಗೆಯವರು ಸಾಕ್ಷಿಯಾಗಲಾರರು. ಈ ಮೂವರನ್ನೂ ಏಕಕಾಲಕ್ಕೆ ನೋಡಿದ ಸೌಭಾಗ್ಯ ನಮ್ಮ ಪೀಳಿಗೆಯದು ಎಂಬುದೇ ಹಲವರಿಗೆ ಹೆಮ್ಮೆಯ ವಿಚಾರವಾಗಿರುವುದೂ ಸುಳ್ಳಲ್ಲ. ಏಕೆಂದರೆ ಕಳೆದ 20 ವರ್ಷದಲ್ಲಿ ಈ ಮೂವರು ಆಟಗಾರರು ಒಟ್ಟಾರೆಯಾಗಿ 62 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸದ್ಯಕ್ಕಂತೂ ಯಾರೂ ಇವರ ಹತ್ತಿರವೂ ಸುಳಿಯಲು ಸಾಧ್ಯವಿಲ್ಲದ ಕಾರಣ ಈ ಮೂವರೂ ಆಟಗಾರರ ದಾಖಲೆ ಇನ್ನೂ ದಶಕಗಳ ಕಾಲ ಹಾಗೆಯೇ ಉಳಿಯಲಿದೆ.

ಫೆಡರರ್ ಎಂದರೆ ಫೀನಿಕ್ಸ್!

ರೋಜರ್ ಫೆಡರರ್‌ನ ಹೋರಾಟದ ಮನೋಭಾವವನ್ನು ಸೂಚಿಸುವ ಹಲವು ಉದಾಹರಣೆಗಳಿವೆ. 2003ರಲ್ಲಿ ವಿಂಬಲ್ಡನ್ ಗೆಲುವಿನೊಂದಿಗೆ ತನ್ನ ಮೊದಲ ಗ್ರ್ಯಾಂಡ್ ಗೆಲುವಿನ ಓಟಕ್ಕೆ ಮುನ್ನುಡಿ ಬರೆದ ಫೆಡರರ್ 2012ರ ವೇಳೆಗೆ ಬರೋಬ್ಬರಿ 17 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದ. ಕೇವಲ 31ನೇ ವಯಸ್ಸಿನಲ್ಲೇ ತನ್ನ ಆರಾಧ್ಯ ದೈವ ಪೀಟ್ ಸಾಂಪ್ರಸ್‌ನನ್ನೂ ಆತ ಹಿಂದಿಕ್ಕಿದ್ದ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಇಲ್ಲಿಂದ ಎಲ್ಲವೂ ಬದಲಾಗತೊಡಗಿತ್ತು. ಟೆನಿಸ್ ಲೋಕದ ಅಗ್ರ ಶ್ರೇಯಾಂಕಿತ ಆಟಗಾರ ಎನಿಸಿಕೊಂಡಿದ್ದರೂ 2012ರಿಂದ ಸತತ ಐದು ವರ್ಷ ಫೆಡರರ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಬರ ಎದುರಿಸಿದ್ದರು.

ಈ ವೇಳೆ ಎಂದಿನಂತೆ ಕ್ರೀಡಾ ವಿಮರ್ಶಕರು ಮತ್ತು ಪತ್ರಕರ್ತರು ಆತನನ್ನು ಯಾವಾಗ ನಿವೃತ್ತಿ, ಇನ್ನು ನಿಮ್ಮ ಆಟ ಮುಗಿಯಿತು ಎಂದು ಕಿಚಾಯಿಸತೊಡಗಿದ್ದರು. ಈ ನಿರಾಸೆಯ ಮಧ್ಯೆ ಒಂದು ಶಸ್ತ್ರಚಿಕಿತ್ಸೆಗೂ ಆತ ಒಳಗಾಗಿದ್ದ. ಪರಿಣಾಮ ಸುಮಾರು 6 ತಿಂಗಳು ಮೈದಾನದಿಂದ ಹೊರಗಿರಬೇಕಾಯಿತು. ನಂತರ ಚೇತರಿಸಿಕೊಂಡು ಆಸ್ಟ್ರೇಲಿಯಾ ಓಪನ್‌ಗೆ ಪ್ರವೇಶಿಸಿದ್ದ ಫೆಡರರ್ 2017 ಮತ್ತು 2018ರಲ್ಲಿ ಸತತ ಎರಡು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದ. ಅದೂ ತನ್ನ 36ನೇ ವಯಸ್ಸಿನಲ್ಲಿ!

ಫೆಡರರದ ದಾಖಲೆಗಳ ಇನ್ನೊಂದು ವಿಶೇಷವೆಂದರೆ, ಇಲ್ಲಿಯವರೆಗೂ ಆರ್ಥರ್ ಆಶ್ ಎಂಬ ಮತ್ತೊಬ್ಬ ಟಿನಿಸ್ ಪ್ರತಿಭೆ, 1973ರಲ್ಲಿ ಎದುರಾಳಿಗಳಿಗೆ ಒಂದೂ ಸೆಟ್ ಬಿಟ್ಟುಕೊಡದೆ ಗೆದ್ದ ನಂತರ ಫೆಡರರ್ 36ನೇ ವಯಸ್ಸಿನಲ್ಲಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸಿದ್ದರು.

24 ವರ್ಷಗಳ ವೃತ್ತಿಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಫೆಡರರ್, ತನ್ನ ಕೇವಲ 21ನೇ ವಯಸ್ಸಿನಲ್ಲೇ 2003ರಲ್ಲಿ ನಡೆದ ವಿಂಬಲ್ಡನ್‌ನಲ್ಲಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು, ಈಗ 41ನೇ ವಯಸ್ಸಿನ ಅಂತ್ಯಕ್ಕೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಕಳೆದ ಸುಮಾರು ಮೂರು ವರ್ಷಗಳಿಂದ ಗಾಯದಿಂದ ಬಳಲುತ್ತಿರುವ ಫೆಡರರ್, ಕೊನೆಯ ಬಾರಿಗೆ 2021ರ ಫ್ರೆಂಚ್ ಓಪನ್‌ನಲ್ಲಿ ಆಡಿದ್ದರು. ಅಲ್ಲೂ ಕೂಡ ಗಾಯದ ಸಮಸ್ಯೆಗೆ ತುತ್ತಾಗಿ ಮೂರನೇ ಸುತ್ತನ್ನು ಗೆದ್ದು, ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದಿನಿಂದ, ನಿರಂತರವಾಗಿ ಕೋರ್ಟ್‌ಗೆ ಮರಳಲು ಪ್ರಯತ್ನಿಸುತ್ತಿದ್ದರಾದರೂ ಈ ಪ್ರಯತ್ನದಲ್ಲಿ ರೋಜರ್ ಯಶಸ್ವಿಯಾಗಲಿಲ್ಲ.

ಫೆಡರರ್ 2018ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದರ ನಂತರ ಅವರು 2019ರ ವಿಂಬಲ್ಡನ್‌ನ ಫೈನಲ್ ತಲುಪಿದರಾದರೂ, ಅಲ್ಲಿ ನೊವಾಕ್ ಜೊಕೊವಿಕ್ ಎದುರಿನ ರೋಚಕ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು.

ಟೆನಿಸ್ ಬದುಕಿಗೆ ಫೆಡರರ್ ವಿದಾಯ!

ಫೆಡರರ್ ಅವರು ತಮ್ಮ ಅಭಿಮಾನಿಗಳಿಗೆ ವೀಡಿಯೊ ಮತ್ತು ನಾಲ್ಕು ಪುಟಗಳ ಭಾವನಾತ್ಮಕ ಹೇಳಿಕೆಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. ನಿರಂತರ ಗಾಯ, ಫಿಟ್ನೆಸ್ ಮತ್ತು ವಯಸ್ಸು ತನ್ನ ಈ ನಿರ್ಧಾರದ ಹಿಂದಿನ ಕಾರಣ ಎಂಬುದನ್ನು ರೋಜರ್ ಉಲ್ಲೇಖಿಸಿದ್ದಾರೆ. “ನನಗೆ ಈಗ 41 ವರ್ಷ ವಯಸ್ಸಾಗಿದ್ದು, ನಾನು 24 ವರ್ಷಗಳ ವೃತ್ತಿಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಆಟವನ್ನು ನಾನು ಯಾವಾಗಲೂ ನನ್ನ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಫೆಡರರ್ ಹೇಳಿಕೊಂಡಿದ್ದಾರೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.


ಇದನ್ನೂ ಓದಿ: ಎರಡು ದಶಕಗಳ ಯಶಸ್ವಿ ಓಟಕ್ಕೆ ಪೂರ್ಣ ವಿರಾಮ ಇಟ್ಟ ಸೆರೆನಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...