Homeಅಂತರಾಷ್ಟ್ರೀಯಗಾಲ್ವಾನ್ ಘರ್ಷಣೆಯ ಬಗ್ಗೆ ಭಾರತ ನಮಗೆ ಮಾಹಿತಿ ನೀಡಿಲ್ಲ: ಬಾಂಗ್ಲಾದೇಶ

ಗಾಲ್ವಾನ್ ಘರ್ಷಣೆಯ ಬಗ್ಗೆ ಭಾರತ ನಮಗೆ ಮಾಹಿತಿ ನೀಡಿಲ್ಲ: ಬಾಂಗ್ಲಾದೇಶ

ಭಾರತ ಅಥವಾ ಚೀನಾ ಯಾವುದೂ ಕೂಡ ನಮ್ಮ ಬೆಂಬಲ ಕೇಳಿಲ್ಲ. ಅವರಲ್ಲಿ ಯಾರೂ ನಮಗೆ ಏನನ್ನೂ ಹೇಳಿಲ್ಲ ಮತ್ತು ಈ ವಿಷಯದ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -
- Advertisement -

ಲಡಾಖ್‌ನಲ್ಲಿನ ಭಾರತ-ಚೀನಾ ಉದ್ವಿಗ್ನತೆಯ ಬಗ್ಗೆ ಬಾಂಗ್ಲಾದೇಶಕ್ಕೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಭಾರತದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆದರೆ ಗಾಲ್ವಾನ್ ಕಣಿವೆ ಘರ್ಷಣೆಯ ಬಗ್ಗೆ ನವದೆಹಲಿಯು ಯಾವುದೇ ಮೌಖಿಕ ಟಿಪ್ಪಣಿಗಳನ್ನು ಕಳುಹಿಸಿಲ್ಲ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ.

ಭಾರತ-ಚೀನಾ ಗಡಿ ಉದ್ವಿಗ್ನತೆಯ ಬಗ್ಗೆ ಬಾಂಗ್ಲಾದೇಶಕ್ಕೆ ಸಂಪೂರ್ಣವಾಗಿ ವಿವರಿಸಿದೆ. ಈ ವಿಷಯದಲ್ಲಿ ಅವರು ನಮ್ಮೊಂದಿಗಿದ್ದಾರೆ ಎಂಬ ವಿಶ್ವಾಸವಿದೆ ಎಂದು ಭಾರತೀಯ ಅಧಿಕಾರಿ ಹೇಳಿದ್ದಾರೆ.

ದಿ ಢಾಕಾ ಟ್ರಿಬ್ಯೂನ್ ನ ಶುಕ್ರವಾರದ ವರದಿಯ ಪ್ರಕಾರ, ಭಾರತ-ಚೀನಾ ಉದ್ವಿಗ್ನತೆಯನ್ನು, ಪ್ರಧಾನಿ ನರೇಂದ್ರ ಮೋದಿಯವರು ‘ಭಾರತೀಯ ಭೂಪ್ರದೇಶದ ಒಂದು ಇಂಚು ಸಹ ಆಕ್ರಮಿಸಿಕೊಂಡಿಲ್ಲ’ ಎಂಬ ಹೇಳಿಕೆಯನ್ನು ಅಬ್ದುಲ್ ಮೊಮೆನ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಜೂನ್ 15 ರ ಗಾಲ್ವಾನ್ ಘರ್ಷಣೆಯ ಕುರಿತು ಭಾರತ ಸರ್ಕಾರವು ತಮ್ಮ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಯಾವುದೇ ಮೌಖಿಕ ಟಿಪ್ಪಣಿಗಳನ್ನು ನಮಗೆ ಕಳುಹಿಸಲಿಲ್ಲ. ಪರಿಣಾಮವಾಗಿ ನಾವು ಯಾವುದೇ ಹೇಳಿಕೆ ನೀಡಲಿಲ್ಲ ಎಂದು ಅಬ್ದುಲ್ ಮೊಮೆನ್ ಹೇಳಿದ್ದಾರೆ.

ಭಾರತ ಅಥವಾ ಚೀನಾ ಯಾವುದೂ ಕೂಡ ನಮ್ಮ ಬೆಂಬಲ ಕೇಳಿಲ್ಲ. ಅವರಲ್ಲಿ ಯಾರೂ ನಮಗೆ ಏನನ್ನೂ ಹೇಳಿಲ್ಲ ಮತ್ತು ಈ ವಿಷಯದ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯ ಚೀನಾದ ಆಕ್ರಮಣಗಳೊಂದಿಗೆ ಮೇ ತಿಂಗಳಲ್ಲಿ, ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಪ್ರಾರಂಭವಾಯಿತು. ಜೂನ್ 15 ರಂದು ಗಾಲ್ವನ್ ಕಣಿವೆಯಲ್ಲಿ ತೀವ್ರ ಸಂಘರ್ಷ ಉಂಟಾಯಿತು. ಈ ಬಗ್ಗೆ ಇಲ್ಲಿಯವರೆಗೆ, ಯುಎಸ್, ಯುಕೆ, ರಷ್ಯಾ, ಜರ್ಮನಿ ಮುಂತಾದ ದೇಶಗಳಿಗೆ ಭಾರತವು ಪರಿಸ್ಥಿತಿಯನ್ನು ವಿವರಿಸಿದೆ.

ಕಳೆದ ನಾಲ್ಕು ತಿಂಗಳಿನಿಂದ ಬಾಂಗ್ಲಾ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಭೇಟಿಗೆ ಸಮಯ ಕೇಳಿಯೂ ಬಾಂಗ್ಲಾ ಸಮಯ ನೀಡಿಲ್ಲ ಎಂದು ಭಾರತೀಯ ಹೈಕಮಿಷನರ್ ರಿವಾ ಗಂಗೂಲಿ ದಾಸ್ ಹೇಳಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸಹ ಮೊಮೆನ್ ನಿರಾಕರಿಸಿದ್ದಾರೆ.


ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಅಯೋಧ್ಯೆ ಕಾರ್ಯಕ್ರಮ ಬೇಕೆ?; ಬಂಗಾಳಿ ವಿದ್ಯಾರ್ಥಿಗೆ ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...