Homeಮುಖಪುಟಟ್ವಿಟ್ಟರ್‌ ಬಳಕೆದಾರರಿಗೆ ಸಿಹಿ ಸುದ್ದಿ: ಟ್ವೀಟ್‌ಗಳ ಓದುವಿಕೆ ಮಿತಿ ಹೆಚ್ಚಿಸುವ ಭರವಸೆ ನೀಡಿದ ಎಲಾನ್ ಮಸ್ಕ್‌

ಟ್ವಿಟ್ಟರ್‌ ಬಳಕೆದಾರರಿಗೆ ಸಿಹಿ ಸುದ್ದಿ: ಟ್ವೀಟ್‌ಗಳ ಓದುವಿಕೆ ಮಿತಿ ಹೆಚ್ಚಿಸುವ ಭರವಸೆ ನೀಡಿದ ಎಲಾನ್ ಮಸ್ಕ್‌

- Advertisement -
- Advertisement -

ಟ್ವಿಟ್ಟರ್‌ ಬಳಕೆದಾರರಿಗೆ ನಿನ್ನೆಯಷ್ಟೇ ಶಾಕ್ ನೀಡಿದ್ದ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್‌ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ದೈನಂದಿನ ಟ್ವೀಟ್‌ಗಳ ಓದುವಿಕೆ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಮಾಲೀಕ ಎಲಾನ್ ಮಸ್ಕ್‌ ತಿಳಿಸಿದ್ದಾರೆ.

”ಟ್ವಿಟ್ಟರ್‌ನಿಂದ ಪರಿಶೀಲಿಸಿದ ಖಾತೆ (Twitter Verified Accounts) ಹೊಂದಿರುವವರು ನಿತ್ಯ 6,000 ಪೋಸ್ಟ್‌ ಮಾತ್ರ ವೀಕ್ಷಿಸಲು ಅಥವಾ ಓದಲು ಅವಕಾಶವಿದೆ. ಪರಿಶೀಲನೆಯಾಗದ ಖಾತೆದಾರರು ನಿತ್ಯ 600 ಮಾತ್ರ ವೀಕ್ಷಿಸಿ ಓದಲು ಅವಕಾಶವಿದೆ. ಅದೇ ರೀತಿ ಹೊಸದಾಗಿ ಖಾತೆ ಆರಂಭಿಸಿ ಪರಿಶೀಲನೆಯಾಗದ ಖಾತೆದಾರರು 300 ಪೋಸ್ಟ್‌ಗಳ ವೀಕ್ಷಣೆಗೆ ಮಿತಿ ಹೇರಲಾಗಿದೆ” ಎಂದು ಶನಿವಾರ ಎಲಾನ್ ಮಸ್ಕ್‌ ಹೇಳಿದ್ದರು.

ಎಲಾನ್ ಮಸ್ಕ್‌ ಅವರು, ಭಾನುವಾರ ಮತ್ತೊಂದು ಟ್ವಿಟ್ ಮಾಡಿದ್ದು, ಟ್ವಿಟ್ಟರ್ ಬಳಕೆದಾರರ ದೈನಂದಿನ ಟ್ವಿಟರ್‌ಗಳ ಓದುವಿಕೆ ಮಿತಿಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

”ಪರಿಶೀಲಿಸಿದ ಖಾತೆ (Twitter Verified Accounts) ಮಿತಿಯನ್ನು 8,000, ವೆರಿಫೈ ಆಗದ ಖಾತೆಗಳಿಗೆ 500 ಮತ್ತು ವರಿಫೈ ಆಗದ ಹೊಸ ಖಾತೆಗಳ ಮಿತಿ 400ಕ್ಕೆ ಹೆಚ್ಚಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಇದಾದ ಕೆಲವು ಗಂಟೆಗಳ ನಂತರ ಮತ್ತೊಂದು ಟ್ವಿಟ್ ಮಾಡಿರುವ ಅವರು, ”ಈಗ 10k, 1k & 0.5k”ಎಂದು ಪೋಸ್ಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...