Homeಮುಖಪುಟಮೊದಲ ದಲಿತ ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ

ಮೊದಲ ದಲಿತ ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ

- Advertisement -
- Advertisement -

ಇಂದು ಮಲಯಾಳಂ ಸಿನಿಮಾದ ಮೊದಲ ನಟಿ ಪಿಕೆ ರೋಸಿಯವರ 120ನೇ ಜನ್ಮದಿನವನ್ನು ಗೌರವಿಸುವುದಕ್ಕಾಗಿ ಗೂಗಲ್‌ ತನ್ನ‌ ಡೂಡಲ್ ಗೌರವ ಸೂಚಿಸಿದೆ

ಭಾರತೀಯ ಸಿನಿಮಾ ಚರಿತ್ರೆ ಅಷ್ಟಾಗಿ ಗುರುತಿಸಿಲ್ಲದ ಪಿ‌ಕೆ ರೋಸಿ ಕೇವಲ ಮೊದಲ ಮಲಯಾಳಿ ನಟಿ ಮಾತ್ರವಲ್ಲ, ಮೊದಲ ದಲಿತ ಸಮುದಾಯದ ನಟಿ ಕೂಡ ಎನ್ನುವುದು ಗಮನಿಸಬೇಕಾದ ವಿಷಯ. ಕೇವಲ ದಲಿತ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕಾಗಿಯೇ ಸಿನಿಮಾರಂಗವನ್ನು, ಅಷ್ಟೇಕೆ ತಾನು ಹುಟ್ಟಿ ಬೆಳೆದ ತನ್ನ ಸ್ವಂತ ನೆಲವನ್ನು ಸಹ ಬಿಟ್ಟು ಬದುಕಬೇಕಾಯಿತು.

1903ನೇ ಇಸವಿಯ ಫೆಬ್ರವರಿ 10ರಂದು ಕೇರಳದ ಪುಲಯ ಸಮುದಾಯದ ನಂಡನ್ ಕೊಡಿಲ್ ಪೌಲೋಸ್ ಮತ್ತು ಕುಂಜಿ ದಂಪತಿಗಳ ಮಗಳಾಗಿ ಪಿಕೆ ರೋಸಿ ಜನಿಸಿದರು‌. ದಲಿತ ಅಸ್ಪೃಶ್ಯ ಪುಲಯ ಸಮುದಾಯದ ರೋಸಿ ಕುಟುಂಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ಬಡತನದಲ್ಲಿ ಬದುಕಿದ ರೋಸಿ ಕೃಷಿ ಕೂಲಿಯಾಗಿದ್ದವರು. ಅಭಿನಯದ ಕಡೆ ಆಸಕ್ತಿಯಿದ್ದುದರಿಂದಾಗಿ ಬದುಕು ಕಟ್ಟಿಕೊಳ್ಳಲು ರಂಗಭೂಮಿಯತ್ತ ಆಕರ್ಷಿತರಾಗಿ ಒಂದು ರಂಗತಂಡವನ್ನು ಸೇರಿಕೊಂಡರು. ಆ ಕಾಲದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುವುದು ಅಗೌರವದ ನಡೆಯಾಗಿತ್ತು, ರಂಗನಟಿಯರನ್ನು ಕೀಳಾಗಿ ನೋಡಲಾಗುತ್ತಿತ್ತು. ಸಮಾಜ ಎಷ್ಟೇ ಅಪಮಾನದಿಂದ ನೋಡಿದರು ಅಭಿನಯದ ಕುರಿತ ತಮ್ಮ ಪ್ರೀತಿಯಿಂದಾಗಿ ರೋಸಿ ರಂಗಭೂಮಿಯನ್ನು ತ್ಯಜಿಸಲಿಲ್ಲ.

ಆಗ ಮಲಯಾಳಂ ಸಿನಿಮಾದ ಪ್ರವರ್ತಕ ನಿರ್ದೇಶಕರಲ್ಲೊಬ್ಬರಾಗಿದ್ದ ಜೆಸಿ ಡೇನಿಯಲ್ ತಾವು ತಯಾರಿಸಬೇಕೆಂದುಕೊಂಡಿದ್ದ ‘ವಿಗಟಕುಮಾರನ್’ ಎನ್ನುವ ಮೂಕಿ ಸಿನಿಮಾಕ್ಕೆ ರೋಸಿಯವರನ್ನು ನಾಯಕನಟಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ದಲಿತ ಸಮುದಾಯದ ರೋಸಿಯವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿದ್ದನ್ನು ಸಂಪ್ರದಾಯಸ್ಥ ಜಾತಿವಾದಿಗಳು ಖಂಡಿಸುತ್ತಾರೆ. ಸಿನಿಮಾರಂಗ ಯಾವತ್ತೂ ಮೇಲ್ಜಾತಿಗಳ ಹಿಡಿತದಲ್ಲೇ ಇರುವುದರಿಂದ ಡೇನಿಯಲ್‌ರಿಗೆ ಈ ಸಿನಿಮಾ ಮುಗಿಸುವುದು ಬಹಳ ಕಷ್ಟವಾಗುತ್ತದೆ. ಕೆಲವು ಮೇಲ್ಜಾತಿಯ ತಂತ್ರಜ್ಞರು ಸಿನಿಮಾದಿಂದ ಹೊರನಡೆಯುತ್ತಾರೆ. ಅನೇಕ ಸವಾಲುಗಳ ನಡುವೆ ಸಿನಿಮಾ ಮುಗಿಸುವ ಡೇನಿಯಲ್ ಸಿನಿಮಾವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಂದು ಘಟನೆ ಎದುರಾಗುತ್ತದೆ.

ಸಿನಿಮಾ‌ ಬಿಡುಗಡೆಗೆ ಮುಂಚೆ ಸಿನಿಮಾದ ಪ್ರೀಮಿಯರ್ ಷೋ ಏರ್ಪಾಡಾಗುತ್ತದೆ. ಇಡೀ ಮಲಯಾಳಂ ಸಿನಿಮಾರಂಗ ಈ ಸಿನಿಮಾದ ವಿರುದ್ಧ ನಿಲ್ಲುತ್ತದೆ. ಡೇನಿಯಲ್‌ರ ಸತತ ಪ್ರಯತ್ನದಿಂದಾಗಿ ಪ್ರೀಮಿಯರ್ ಷೋ ಏರ್ಪಾಡಾಗುತ್ತದೆ. ಅಸ್ಪೃಶ್ಯ ಮಹಿಳೆಯ ಜೊತೆಗೆ ಕೂತು ಸಿನಿಮಾ ನೋಡಲು ನಿರಾಕರಿಸುವ ಸಿನಿಮಾ ಮಂದಿ ಚಿತ್ರ ಪ್ರದರ್ಶನಕ್ಕೆ ರೋಸಿ ಬರಬಾರದು ಎನ್ನುವ ಷರತ್ತನ್ನು ವಿಧಿಸುತ್ತಾರೆ. ತಾವು ನಟಿಸಿದ ಸಿನಿಮಾದ ಪ್ರದರ್ಶನಕ್ಕೆ ತಾವೇ ಹೋಗಲಾಗದ ಕಾರಣಕ್ಕೆ ಚಿತ್ರಮಂದಿರದ ಹೊರಗೆ ಕಾಯಬೇಕಾದ ಪರಿಸ್ಥಿತಿ ರೋಸಿಯವರಿಗೆ ಬರುತ್ತದೆ.

ಇದನ್ನೂ ಓದಿ: ‘ಪ್ಯಾನ್‌ ಇಂಡಿಯಾ’ ಆಚೆಗಿನ ಚಿತ್ರ ಜಗತ್ತು: 2022ರಲ್ಲಿ ತೆರೆಕಂಡ ಹತ್ತು ಸದಭಿರುಚಿಯ ಸಿನಿಮಾಗಳು

ಚಿತ್ರ ಶುರುವಾದ ಮೇಲೆ ಚಿತ್ರಮಂದಿರದಲ್ಲಿ ಗದ್ದಲವಾಗುತ್ತದೆ. ಕಾರಣ ರೋಸಿ ನಟಿಸಿದ್ದ ಪಾತ್ರ ನಾಯರ್ ಸಮುದಾಯದ ಹೆಣ್ಣಿನ ಪಾತ್ರ‌. ಚಿತ್ರದ ಒಂದು ದೃಶ್ಯದಲ್ಲಿ ಮಲ್ಲಿಗೆ ಹೂವನ್ನು ಮುಡಿದಿರುವ ನಾಯಕಿಯ ಹತ್ತಿರಕ್ಕೆ ಬರುವ ನಾಯಕ ಆಕೆಯ ಮುಡಿಯಲ್ಲಿರುವ ಮಲ್ಲಿಗೆ ಹೂವನ್ನು ಮೂಸಿ ಸಂಭ್ರಮಿಸುತ್ತಾನೆ. ಅಸ್ಪೃಶ್ಯ ದಲಿತ ಸಮುದಾಯದ ಹೆಣ್ಣೊಬ್ಬಳು ನಾಯರ್ ಮಹಿಳೆಯ ಪಾತ್ರ ಮಾಡಿದ್ದಲ್ಲದೆ, ಮೇಲ್ಜಾತಿಯ ಪಾತ್ರವೊಂದು ಆಕೆಯನ್ನು ಕಾಮಿಸುವಂತೆ ಚಿತ್ರಿಸಿದ ಕಾರಣಕ್ಕೆ ಜನ ಸಿಟ್ಟಿಗೆದ್ದು ನಿರ್ದೇಶಕ ಡೇನಿಯಲ್‌ರ ಮೇಲೆ ಹಲ್ಲೆ ಮಾಡುತ್ತಾರೆ. ರೋಸಿಯವರನ್ನು ಹುಡುಕಿಕೊಂಡು ಹೋದ ಹಲ್ಲೆಕೋರರು ಆಕೆಯ ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ತಮ್ಮ ಜೀವ ಉಳಿಸಿಕೊಳ್ಳಲು ದಾರಿಯಲ್ಲಿ ಸಿಕ್ಕ ಲಾರಿಯನ್ನು ಹತ್ತಿಕೊಂಡು ಆವತ್ತು ತ್ರಿವೆಂಡ್ರಂ ಅನ್ನು ಬಿಟ್ಟು ಹೋದ ರೋಸಿ ಕೊನೆಯವರೆಗೂ ತಮ್ಮ ಊರಿಗೆ ಮರಳಲೇ‌ ಇಲ್ಲ. ರೋಸಿ ನಟಿಸಿರುವ ಸಿನಿಮಾ ಎನ್ನುವ ಕಾರಣಕ್ಕೆ ಈ ಸಿನಿಮಾವನ್ನು ಬಾಯ್ಕಾಟ್ ಮಾಡಿದ್ದಕ್ಕಾಗಿ ಚಿತ್ರದ ನಿರ್ಮಾಪಕ ಡೇನಿಯಲ್ ದಿವಾಳಿಯಾಗುತ್ತಾರೆ. ಮಲಯಾಳಂ ಸಿನಿಮಾರಂಗಕ್ಕೆ ರೋಸಿಯವರ ಮೇಲೆ ಎಷ್ಟು ಸಿಟ್ಟಿರುತ್ತದೆ ಎಂದರೆ ಅವರ ಕೊನೆಗಾಲದವರೆಗೂ ತಮ್ಮ ಐಡೆಂಟಿಟಿಯನ್ನು ಮುಚ್ಚಿಟ್ಟೆ ಬದುಕುತ್ತಾರೆ. ತಾವು ನಟಿ ಎನ್ನುವುದನ್ನು ಹೇಳಿಕೊಳ್ಳಲಾಗದೆ ಜೀವಮಾನವಿಡಿ ನರಳುತ್ತಾರೆ.

ದಲಿತರು ಇವತ್ತಿಗೂ ಸಿನಿಮಾರಂಗದಲ್ಲಿ survive ಆಗಬೇಕಾದರೆ ತಮ್ಮ ಐಡೆಂಟಿಟಿಯನ್ನು ಅಡಗಿಸಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ದಲಿತರ ಈ Invisibilityಗೆ ಮೊದಲ ಸಂಕೇತವಾಗಿ ಪಿಕೆ ರೋಸಿಯವರು ಇತಿಹಾಸದಲ್ಲಿ ಉಳಿದಿದ್ದಾರೆ.

ಭಾರತೀಯ ಸಿನಿಮಾರಂಗದ ಆರಂಭದ ದಿನಗಳಲ್ಲೆ ರೋಸಿಯವರು ಸಿನಿಮಾರಂಗವನ್ನು ಪ್ರವೇಶಿಸಿದರೂ ತಮ್ಮ ಜಾತಿಯ ಕಾರಣಕ್ಕೆ ಶಾಶ್ವತವಾಗಿ ಅಂಚಿಗೆ ತಳ್ಳಲ್ಪಟ್ಟರು. ಅವರ ಬದುಕನ್ನು, ಭಾರತೀಯ ಸಿನಿಮಾದಲ್ಲಿ ದಲಿತರ ಬದುಕಿನ ಆರಂಭದ ಬಿಂದು ಎಂದು ‘Dalit Cinema in India’ ಎನ್ನುವ ತಮ್ಮ ಲೇಖನದಲ್ಲಿ ದಲಿತ ಸಮುದಾಯದ ಮಾರ್ಗಪ್ರವರ್ತಕ ಲೇಖಕ ಪ ರಂಜಿತ್ ದಾಖಲಿಸುತ್ತಾರೆ. ಅಲ್ಲದೆ ತಮ್ಮ Neelam Cultural Centerನ ಮೂಲಕ ಪ್ರತಿವರ್ಷ ಆಚರಿಸುವ Dalit History Monthನ ಭಾಗವಾಗಿ ಕಳೆದ ವರ್ಷ ಪಿಕೆ ರೋಸಿಯವರ ನೆನಪಿನಲ್ಲಿ ದಲಿತ ಸಿನಿಮಾ ಹಬ್ಬವನ್ನು ಆಯೋಜಿಸುವ ಮೂಲಕ ಗೌರವಿಸಿದ್ದರು.

ಇವತ್ತು ನಾಗರಾಜ್ ಮಂಜುಳೆ, ಪ ರಂಜಿತ್, ಮಾರಿ ಸೆಲ್ವರಾಜ್, ನೀರಜ್ ಗಾಯ್‌ವಾನ್ ಮುಂತಾದವರು ತಮ್ಮ ಸಿನಿಮಾಗಳ ಮೂಲಕ ದಲಿತ ಸಂವೇದನೆಯನ್ನು ಭಾರತೀಯ ಸಿನಿಮಾರಂಗದಲ್ಲಿ ಮೂಡಿಸಿದ್ದಾರೆ. ದಲಿತ ಸಿನಿಮಾ ಎನ್ನುವುದು ಮುಖ್ಯವಾಹಿನಿಯ ಸಿನಿಮಾ ಆಗಬಹುದು, ದಲಿತರ ವಸ್ತುವನ್ನಿಟ್ಟುಕೊಂಡ ಸಿನಿಮಾಗಳಲ್ಲಿ ರಜನಿಕಾಂತ್ ತರದ ಸ್ಟಾರ್ ನಟರು ಕೂಡ ನಟಿಸಬಹುದು ಅನ್ನುವಷ್ಟರ ಮಟ್ಟಿಗೆ ಮಾನ್ಯತೆ, ಯಶಸ್ಸು ದಲಿತ ಸಿನಿಮಾಗಳಿಗೆ ಸಿಕ್ಕಿದೆ. ಆದರೆ ದಲಿತ ವಸ್ತುಗಳನ್ನು ಇಟ್ಟುಕೊಂಡು ದಲಿತ ನಿರ್ದೇಶಕರೇ ಮಾಡುವ ಸಿನಿಮಾಗಳಲ್ಲಿ ಸ್ತ್ರೀಪಾತ್ರಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ದಲಿತ ಮಹಿಳೆಯರ‌ ಪ್ರಾತಿನಿಧ್ಯದ ಪ್ರಶ್ನೆಯನ್ನು ದಲಿತ ಮಹಿಳೆಯರು ಬಹಳ ಗಂಭೀರವಾಗಿ ಎತ್ತಿದ್ದಾರೆ.

ಪ ರಂಜಿತ್ ತರದ ಮಾರ್ಗ ಪ್ರವರ್ತಕ ಸಿನಿಮಾ‌ ನಿರ್ದೇಶಕರ ಸಿನಿಮಾಗಳಲ್ಲಿಯೂ ಕೂಡ ದಲಿತ ಮಹಿಳೆಯರ ಪಾತ್ರಗಳನ್ನು ಮೇಲ್ಜಾತಿಗಳಿಂದ ಬಂದ, ಶ್ವೇತವರ್ಣದ ನಟಿಯರೇ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಆ ಪಾತ್ರಗಳ ಜೊತೆಗೆ ನಮ್ಮನ್ನು ಸಮೀಕರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಿಮರ್ಶೆಯನ್ನು ಕಿರುಬ ಮುನಿಸ್ವಾಮಿ ತರದ ಹೊಸತಲೆಮಾರಿನ ಚಿಂತಕಿಯರು ಎತ್ತಿದ್ದಾರೆ. ದಲಿತ ವಸ್ತುವಿನ ಸಿನಿಮಾಗಳು authentic ಅನ್ನಿಸಿಕೊಳ್ಳಬೇಕಾದರೆ ದಲಿತ ನಿರ್ದೇಶಕರೇ ಬರಬೇಕಾಯಿತು. ಇದೇ ರೀತಿ ದಲಿತ ಹೆಣ್ಣುಮಕ್ಕಳೆ ದಲಿತ ಪಾತ್ರಗಳನ್ನು ನಿರ್ವಹಿಸುವ ಕಾಲ ಬೇಗ ಬರಲಿ ಎಂದು ಆಶಿಸಬೇಕಾಗುತ್ತದೆ.

ನೂರು ವರ್ಷಕ್ಕೂ ಮೀರಿ ಸಿನಿಮಾ‌‌ ಇತಿಹಾಸವಿರುವ ದೇಶದಲ್ಲಿ ದಲಿತ ಮಹಿಳೆಯರು ಇವತ್ತಿಗೂ ಸಿನಿಮಾ ರಂಗದಲ್ಲಿ ಅದೃಶ್ಯರಾಗಿಯೇ ಉಳಿದಿರುವಾಗ ಪಿಕೆ ರೋಸಿಯವರು ಶತಮಾನದ ಹಿಂದೆಯೇ ಚಿತ್ರರಂಗಕ್ಕೆ ಬಂದು ಜಾತಿವ್ಯವಸ್ಥೆಗೆ ಸವಾಲು ಹಾಕ್ಕಿದ್ದು ಆ ಕಾರಣಕ್ಕಾಗಿಯೇ ತಮ್ಮ ಜೀವಮಾನದುದ್ದಕ್ಕೂ ಅಜ್ಞಾತವಾಗಿಯೇ ಉಳಿದಿದ್ದು ಯಾವತ್ತೂ ದಲಿತ ಸಮುದಾಯ ಮರೆಯಬಾರದ ವಿಷಯ.

ತಾವು ಅದೃಶ್ಯರಾದರೂ ಒಂದು ಮಾದರಿಯಾಗಿ ಇತಿಹಾಸದಲ್ಲಿ ಉಳಿದುಹೋಗಿರುವ ಪಿಕೆ ರೋಸಿಯವರಿಗೆ ಅವರ ನೂರಾ ಇಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜೈ ಭೀಮ್.

ಕೃಪೆ: ಈ ದಿನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...