ಹಜ್-2022 ಪ್ರಕ್ರಿಯೆ ಭಾರತದಲ್ಲಿ ಸಂಪೂರ್ಣ ಡಿಜಿಟಲ್: ಸಚಿವ ನಖ್ವಿ | Naanu gauri
PC: REUTERS

ಭಾರತದಲ್ಲಿ ‘ಹಜ್-2022’ ರ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ ಎಂದು ಒಕ್ಕೂಟ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಹಜ್ ಹೌಸ್‌ನಲ್ಲಿ ಆನ್‌ಲೈನ್ ಬುಕಿಂಗ್ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂಬೈನಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ.

ಹಜ್‌ ಯಾತ್ರೆಗೆ ಇಂಡೋನೇಷ್ಯಾದ ನಂತರ ಭಾರತವು ಅತಿ ಹೆಚ್ಚು ಯಾತ್ರಿಕರನ್ನು ಕಳುಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಕೊರೊನಾ ಮತ್ತು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸೌದಿ ಅರೇಬಿಯಾ ಸರ್ಕಾರ ಹೇರಿದ್ದ ನಿರ್ಬಂಧದಿಂದಾಗಿ ಭಾರತೀಯ ಯಾತ್ರಿಕರು 2020 ಮತ್ತು 2021 ರಲ್ಲಿ ಹಜ್‌ಗೆ ತೆರಳಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಹಜ್‌ ಯಾತ್ರೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳನ್ನು ಅಮೀರ್‌ ಖಾನ್‌‌‌ ಭೇಟಿಯಾಗಿಲ್ಲ.

ಹಜ್-2022 ಅನ್ನು ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿದ ನಂತರ ಘೋಷಿಸಲಾಗುವುದು. ಈ ವರ್ಷದ ಹಜ್ ಪರಿಶೀಲನಾ ಸಭೆಯು ಅಕ್ಟೋಬರ್ 21 ರಂದು ನವದೆಹಲಿಯಲ್ಲಿ ನಡೆಯಲಿದೆ. ಅಲ್ಪಸಂಖ್ಯಾತ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಸೌದಿ ಅರೇಬಿಯಾದ ಭಾರತದ ರಾಯಭಾರಿ, ಜಿದ್ದಾದ ಭಾರತದ ಕಾನ್ಸುಲ್ ಜನರಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಶನಿವಾರ ಸಚಿವ ನಖ್ವಿ ಅವರು ಭಾರತದ ಹಜ್ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಹಜ್-2022 ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ.

ಯಾತ್ರಿಗಳು ಕೊರೊನಾ ಪ್ರೋಟೋಕಾಲ್‌ಗಳು, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿಶೇಷ ತರಬೇತಿಯನ್ನು ಪಡೆಯುತ್ತಾರೆ. ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಇದರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಖ್ವಿ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಈ ಗೋಹತ್ಯೆಯನ್ನು ತಡೆಯುತ್ತಿರುವುದು ಶ್ರೀನಗರದ ಕಾಶ್ಮೀರಿ ಪಂಡಿತ್ ಅಲ್ಲ, ಮುಸ್ಲಿಂ ಯುವಕ!

LEAVE A REPLY

Please enter your comment!
Please enter your name here