Homeಮುಖಪುಟರಾಮಮಂದಿರ ಉದ್ಘಾಟನೆಯಂದು ಸಂವಿಧಾನದ ಪೀಠಿಕೆ ಹಂಚಿಕೊಂಡ ನಟ, ನಟಿಯರು

ರಾಮಮಂದಿರ ಉದ್ಘಾಟನೆಯಂದು ಸಂವಿಧಾನದ ಪೀಠಿಕೆ ಹಂಚಿಕೊಂಡ ನಟ, ನಟಿಯರು

- Advertisement -
- Advertisement -

ಸಾವಿಂಧಾನಿಕ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ದಿನ ಭಾರತೀಯ ಚಿತ್ರರಂಗದ ಹಲವು ನಟ, ನಟಿಯರು ಸಂವಿಧಾನದ ಪೀಠಿಕೆಯನ್ನು ಹಂಚಿಕೊಂಡಿದ್ದರು.

ಆರಂಭದಲ್ಲಿ ಮಲಯಾಳಂ ನಟರಾದ ಪಾರ್ವತಿ ತಿರುವೋತು, ರೀಮಾ ಕಲ್ಲಿಂಗಲ್, ಕಣಿ ಕುಸೃತಿ, ದಿವ್ಯ ಪ್ರಭಾ, ನಿರ್ದೇಶಕರಾದ ಜಿಯೋ ಬೇಬಿ, ಆಶಿಕ್ ಅಬು, ಕಮಲ್ ಕೆಎಂ ಮತ್ತು ಗಾಯಕ ಸೂರಜ್ ಸಂತೋಷ್ ಸಂವಿಧಾನದ ಪೀಠಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಧರ್ಮಾಧಾರಿತ ರಾಜಕಾರಣವನ್ನು ಖಂಡಿಸಿದ್ದರು.

ಅದೇ ದಿನ ಹಿಂದಿ ಸಿನಿಮಾ ರಂಗದ ಖ್ಯಾತ ನಟಿ ಸುಶ್ಮಿತಾ ಸೇನ್, ಕನ್ನಡದ ಪ್ರತಿಭಾವಂತ ನಟಿ ಶೃತಿ ಹರಿಹರನ್ ಕೂಡ ಸಂವಿಧಾನ ಪೀಠಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಭಾರತದ ಜಾತ್ಯಾತೀತತೆಯನ್ನು ಬೆಂಬಲಿಸಿದ್ದರು.

#Motherland ಎಂಬ ಹ್ಯಾಶ್ ಟ್ಯಾಗ್ ಬಳಸಿ ಅತುಲ್ ಮೊಂಗಿಯಾ ಪೋಸ್ಟ್‌ ಮಾಡಿದ್ದ ಸಂವಿಧಾನದ ಪೀಠಿಕೆಯ ಚಿತ್ರ ಹೊಂದಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ಸುಶ್ಮಿತಾ ಸೇನ್ ಮರು ಪೋಸ್ಟ್ ಮಾಡಿದ್ದರು.

“ರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ರಾಜಕೀಯಗೊಳಿಸುವುದನ್ನು ನೋಡುತ್ತಾ ಸುಮ್ಮನೆ ಕೂರಲಾಗದು” ಎಂಬರ್ಥದಲ್ಲಿ ನಟಿ ಶ್ರುತಿ ಹರಿಹರನ್ ಕೂಡ ಸಂವಿಧಾನ ಪೀಠಿಕೆಯನ್ನು ಹಂಚಿಕೊಂಡಿದ್ದರು.

‘ಈ ಸಮಯದಲ್ಲಿ ಸಂವಿಧಾನವನ್ನು ನೆನಪಿಸಿಕೊಳ್ಳುವುದು ಏಕೆ ಮುಖ್ಯ?’ ಎಂಬ ಪ್ರಶ್ನೆಯೊಂದಿಗೆ ಅದಕ್ಕೆ ಉತ್ತರವನ್ನೂ ಶ್ರುತಿ ಬರೆದುಕೊಂಡಿದ್ದರು.

“ಈ ಸನ್ನಿವೇಶದಲ್ಲಿ ಯಾವುದು ಉತ್ತಮವೋ ಅದರಲ್ಲೇ ಸಾಗುವುದು ಉತ್ತಮ ಎಂಬ ನಂಬಿಕೆ ನನ್ನದು. ಹೀಗಾಗಿ ಈ ಸಂದರ್ಭದಲ್ಲಿ ಸಂವಿಧಾನವನ್ನು ನೆನೆಯುವುದು ನನಗೆ ಅತ್ಯಗತ್ಯ ಎಂದೆನಿಸಿದೆ. ಯಾಕೆಂದೆ ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕು. ಯಾವುದೇ ನಿರ್ದಿಷ್ಟ ಧರ್ಮವನ್ನು ಪೋಷಿಸುವುದು ಅಥವಾ ಅದರ ವಿರುದ್ಧ ತಾರತಮ್ಯ ಮಾಡುವುದನ್ನೂ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ, ಇಂದು ಧರ್ಮವನ್ನು ರಾಜಕೀಯಗೊಳಿಸಲಾಗುತ್ತಿದೆ. ಇದನ್ನು ನೋಡಿಯೂ ಸುಮ್ಮನೆ ಕೂತು, ಗಮನಿಸುವುದೂ ಸರಿಯಲ್ಲ” ಎಂದು ಶ್ರುತಿ ಹೇಳಿದ್ದರು.

‘ಎರಡನೆಯದಾಗಿ – ಜೈ ಶ್ರೀ ರಾಮ್!

“ಹೀಗೆ ಹೇಳುವುದರಲ್ಲಿ ಯಾವುದೇ ತೊಂದರೆಗಳಿಲ್ಲ. ರಾಮನ ಗುಣಗಳಿಂದ ಯಾರು ತಾನೆ ಪ್ರೇರಿತರಾಗುವುದಿಲ್ಲ? ಹನುಮಂತನು ರಾಮ ತನ್ನಲ್ಲಿದ್ದಾನೆ ಎನ್ನುವುದನ್ನು ತೋರಿಸಲು ಎದೆಯನ್ನೇ ಸೀಳಿದ್ದು ಕಾಕತಾಳೀಯವಲ್ಲ ಎಂದು ನಾನು ಭಾವಿಸುತ್ತೇನೆ. ಬಹುಶಃ ರಾಮನನ್ನು ನಮ್ಮೊಳಗೆ ನಾವು ಹುಡುಕಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ರಾಮಾಯಣದೊಳಗೆ ಇದನ್ನು ಹಾಕಲಾಗಿದೆಯೇ?” ಎಂದು ಶ್ರುತಿ ಬರೆದುಕೊಂಡಿದ್ದರು.

ಇದನ್ನೂ ಓದಿ : ರಾಮಮಂದಿರ ಉದ್ಘಾಟನೆ: ಸಂವಿಧಾನದ ಪೀಠಿಕೆ ಹಂಚಿಕೊಂಡ ಮಲಯಾಳಂ ಚಿತ್ರರಂಗದ ದಿಗ್ಗಜರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....