Homeಚಳವಳಿಲಖಿಂಪುರ್ ಖೇರಿ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ, 50ಕ್ಕೂ ಹೆಚ್ಚು ರೈತರಿಗೆ SIT ಸಮನ್ಸ್

ಲಖಿಂಪುರ್ ಖೇರಿ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ, 50ಕ್ಕೂ ಹೆಚ್ಚು ರೈತರಿಗೆ SIT ಸಮನ್ಸ್

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸ್ಥಳೀಯ ರೈತರ ವಿಚಾರಣೆಯನ್ನು ಆರಂಭಿಸಿದೆ.

ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ನಡೆದ ಹತ್ಯಾಕಾಂಡದ ಬಳಿಕ ನಡೆದ ಹಿಂಸಾಚಾರದ ವೇಳೆ ಮೂವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದರು. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಹೀಗಾಗಿ 50 ಕ್ಕೂ ಹೆಚ್ಚು ರೈತರಿಗೆ ವಿಶೇಷ ತನಿಖಾ ತಂಡವು (SIT) ಸಮನ್ಸ್ ನೀಡಿದ್ದು, ವಿಚಾರಣೆ ಕರೆಸಿಕೊಂಡಿದೆ.

ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಹದಿನೈದು ರೈತರು ಸೋಮವಾರ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಅಡಿಯಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು.

ಇದನ್ನೂ ಓದಿ: ಲಿಖಿಂಪುರ್‌: 2 ನೇ FIR ನಲ್ಲಿ ರೈತರ ಮೇಲೆಯೇ ಆರೋಪ; ರೈತರ ಸಾವಿನ ಬಗ್ಗೆ ಉಲ್ಲೇಖವಿಲ್ಲ!

ಎಸ್‌ಐಟಿ ಅಧಿಕಾರಿಯೊಬ್ಬರು, “ನಾವು ಎರಡು ಎಫ್‌ಐಆರ್‌ಗಳನ್ನೂ ತನಿಖೆ ಮಾಡುತ್ತಿದ್ದೇವೆ. ಎರಡನೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರೈತರನ್ನು ವಿಚಾರಣೆಗೆ ಕರೆಸಲಾಗಿದೆ” ಎಂದು ಹೇಳಿದ್ದಾರೆ. ಪ್ರತಿಯೊಬ್ಬ ರೈತರನ್ನು ಅವರ ವಕೀಲ ಮೊಹಮ್ಮದ್ ಅಮಾನ್ ಸಮ್ಮುಖದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದ ಬಗ್ಗೆ ದಾಖಲಾದ ಎರಡನೇ ಎಫ್‌ಐಆರ್‌‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ರೈತರು ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಎಫ್‌ಐಆರ್‌ನಲ್ಲಿ ರೈತರ ಸಾವಿನ ಬಗ್ಗೆಯಾಗಲೀ, ಘಟನೆ ನಡೆಯುವ ಸಮಯಲ್ಲಿ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಕಾರಿನಲ್ಲಿ ಇದ್ದರು ಎಂದು ಬಗ್ಗೆಯಾಗಲಿ ಉಲ್ಲೇಖವಿಲ್ಲ ಎಂದು ವರದಿಯಾಗಿದೆ. ಬಿಜೆಪಿ ಕಾರ್ಯಕರ್ತ, ರೈತರ ಹತ್ಯೆ ಆರೋಪಿ ಸುಮಿತ್ ಜೈಸ್ವಾಲ್ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಲಿಖಿಂಪುರ್‌ ಖೇರಿ ಹತ್ಯಾಕಾಂಡ ಆರೋಪಿಗಳಾದ ಸುಮಿತ್‌ ಜೈಸ್ವಾಲ್‌, ಶಿಶುಪಾಲ್‌, ನಂದನ್‌ ಸಿಂಗ್ ಬಿಸ್ಟ್‌, ಸತ್ಯ ಪ್ರಕಾಶ್‌ ತ್ರಿಪಾಠಿ ಎಂಬವರನ್ನು ಲಖಿಂಪುರ್‌ ಖೇರಿ ಪೊಲೀಸರು ಹಾಗೂ ಅಪರಾಧ ಬ್ರಾಂಚ್ ಆದ ಸ್ವಾತ್‌‌ ತಂಡದವರು ಸೋಮವಾರ (ಅ.18) ಬಂಧಿಸಿದ್ದಾರೆ. ಸತ್ಯ ಪ್ರಕಾಶ್ ತ್ರಿಪಾಠಿ ಅವರ ಬಳಿ ಇದ್ದ ಪರವಾನಗಿ ಇದ್ದ ಬಂದೂಕು ಹಾಗೂ ಮೂರು ಬುಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್‌ ಕುಮಾರ್‌ ಹೇಳಿಕೆ ನೀಡಿದ್ದಾರೆ.

‌ಅಕ್ಟೋಬರ್‌‌ 3ರಂದು ಮೂರು ವಾಹನಗಳು ಹರಿದು ಒಬ್ಬ ಪತ್ರಕರ್ತ ಹಾಗೂ ನಾಲ್ವರು ರೈತರು ಹತ್ಯೆಯಾಗಿದ್ದರು. ಜೊತೆಗೆ ಭುಗಿಲೆದ್ದ ಪ್ರತಿರೋಧದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರೂ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶೀಶ್‌ನನ್ನು ಅಕ್ಟೋಬರ್‌‌ 9ರಂದು ಬಂಧಿಸಲಾಯಿತು.


ಇದನ್ನೂ ಓದಿ: ಲಖಿಂಪುರ್‌‌ ಖೇರಿ ರೈತರ ಹತ್ಯೆ: ಬಿಜೆಪಿ ಮುಖಂಡ ಸೇರಿ ಮತ್ತೆ ನಾಲ್ವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...