Homeದಲಿತ್ ಫೈಲ್ಸ್ಮಧ್ಯಪ್ರದೇಶ: ದಲಿತ ಯುವತಿಯ ಕೊಲೆ, ರಸ್ತೆಯಲ್ಲಿ ಶವವಿಟ್ಟು ಬೃಹತ್ ಪ್ರತಿಭಟನೆ

ಮಧ್ಯಪ್ರದೇಶ: ದಲಿತ ಯುವತಿಯ ಕೊಲೆ, ರಸ್ತೆಯಲ್ಲಿ ಶವವಿಟ್ಟು ಬೃಹತ್ ಪ್ರತಿಭಟನೆ

- Advertisement -
- Advertisement -

ದಲಿತ ಯುವತಿಯ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ನ್ಯಾಯಕ್ಕಾಗಿ ಆಗ್ರಹಿಸಿ, ರಸ್ತೆಯಲ್ಲಿ ಮೃತದೇಹವಿಟ್ಟು ಬೃಹತ್‌ ಪ್ರತಿಭಟನೆ ನಡೆಸಿರುವ ಘಟನೆ ಭಾನುವಾರ ಮಧ್ಯಪ್ರದೇಶದ ಶಾಜಾಪುರದ ಮಕ್ಸಿ ಪೊಲೀಸ್ ಠಾಣೆಯ ರೋಜ್ವಾಸ್ ಸರ್ಕಲ್‌ನಲ್ಲಿ ನಡೆದಿದೆ.

ಯುವತಿಯ ಮೃತದೇಹವನ್ನು ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ರೋಜ್ವಾಸ್ ಟೋಲ್ ಪ್ಲಾಜಾ ಬಳಿ ಇಟ್ಟು, ಇಡೀ ರಸ್ತೆಯನ್ನು ವಶಕ್ಕೆ ಪಡೆದಿದ್ದ ಸಾವಿರಾರು ಸಂಖ್ಯೆಯ ಗ್ರಾಮಸ್ಥರು ರಸ್ತೆಯ ಮೇಲೆ ಕುಳಿತು ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಇದರಿಂದ ಟೋಲ್ ಪ್ಲಾಜಾದಲ್ಲಿ ಕಿಲೋ ಮೀಟರ್‌ಗಟ್ಟಲೆ ಉದ್ದದ ಟ್ರಾಫಿಕ್ ಜಾಮ್ ಉಂಟಾಗಿ, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದ ತಕ್ಷಣ ಶಾಜಾಪುರ ಹೆಚ್ಚುವರಿ ಎಸ್ಪಿ ಟಿ.ಎಸ್.ಬಘೇಲ್, ಎಸ್‌ಡಿಒಪಿ ದೀಪಾ ದೊಡ್ವೆ, ತರಾನಾ ಎಸ್‌ಡಿಎಂ ಏಕ್ತಾ ಜೈಸ್ವಾಲ್ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರಿಗೆ ನ್ಯಾಯ ನೀಡುವ ಭರವಸೆ ನೀಡಿದ್ದರು. ಏಳು ದಿನಗಳಲ್ಲಿ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರವೇ ಪ್ರತಿಭಟನಾಕಾರರು ಒಪ್ಪಿದ್ದಾರೆ. ಆದರೂ ಕೂಡ ಸಂಜೆ 5ರ ನಂತರವೂ ಟ್ರಾಫಿಕ್‌ ಜಾಮ್ ಮುಂದುವರಿದಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಉದ್ದನೆಯ ಸರತಿ ಸಾಲು ನಿರ್ಮಾಣವಾಗಿತ್ತು ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಯುವತಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಹತ್ಯೆಯನ್ನು ವಿರೋಧಿಸಿ ಭೀಮ್ ಆರ್ಮಿ ಕಾರ್ಯಕರ್ತರು, ಗ್ರಾಮಸ್ಥರು ಮತ್ತು ಆಕೆಯ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದರು. ಅದೇ ಸಮಯದಲ್ಲಿ, ಮಕ್ಸಿ ಪೊಲೀಸರು ಹೆದ್ದಾರಿ ತಡೆ ನಡೆಸಿದಕ್ಕಾಗಿ 150 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಹಿನ್ನೆಲೆ:

ಉಜ್ಜಯಿನಿ ಜಿಲ್ಲೆಯ ಕನಾರ್ಡಿ ಗ್ರಾಮದಲ್ಲಿ ಕಳೆದ ರಾತ್ರಿ 22 ವರ್ಷದ ಭಗವತಿ ಬಾಯಿ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಪತಿ ಹಮ್ಮಾಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಾಗ ಪತ್ನಿ ಮನೆಯಲ್ಲಿ ಇಲ್ಲದಿರುವುದು ತಿಳಿದು ಬಂದಿದೆ. ಅಕ್ಕಪಕ್ಕದಲ್ಲಿಯೇ ಕಾರ್ಯಕ್ರಮ ನಡೆಯುತ್ತಿದ್ದು, ಆಕೆ ಅಲ್ಲಿಗೆ ಹೋಗಿರಬೇಕು ಎಂದುಕೊಂಡಿದ್ದಾರೆ. ರಾತ್ರಿ ಬಹಳ ಹೊತ್ತಾದರೂ ಪತ್ನಿ ಹಿಂತಿರುಗದಿದ್ದಾಗ ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ. ಹುಡುಕಾಟದಲ್ಲಿ ಯುವತಿಯ ಮೃತದೇಹ ಮನೆ ಸಮೀಪದ ಹೊಲದಲ್ಲಿ ಪತ್ತೆಯಾಗಿದೆ. ಆಕೆಯ ತಲೆಯನ್ನು ಕಲ್ಲುಗಳಿಂದ ಜಜ್ಜಿ ಗುರುತು ಸಿಗದಂತೆ ಮಾಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆಗಾಗಿ ಹಿಂತಿರುಗಿಸಿದ್ದರು. ಆದರೆ,ಅಂತ್ಯಕ್ರಿಯೆಗೆ ಒಪ್ಪದ ಕುಟುಂಬಸ್ತರು ಶವವಿಟ್ಟು ಪ್ರತಿಭಟನೆ ನಡೆಸಿದ್ದರು.

ಈ ಸಂಪೂರ್ಣ ಪ್ರಕರಣದಲ್ಲಿ ತರಾನಾ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈತ ರಾತ್ರಿ ಹತ್ತು ಗಂಟೆಗೆ ಯುವತಿಯೊಂದಿಗೆ ಮಾತನಾಡಿದ್ದು, ಪೊಲೀಸರು ಕರೆತಂದಿದ್ದ ಶ್ವಾನದಳ ಸೀದಾ ಈ ವ್ಯಕ್ತಿಯ ನಿರ್ಮಾಣ ಹಂತದ ಮನೆಗೆ ನುಗ್ಗಿದೆ. ಇದರ ಆಧಾರದ ಮೇಲೆ ಕುಟುಂಬ ಸದಸ್ಯರು ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೂವರು ಯುವಕರು ಸೇರಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ತರಾನಾ ಎಸ್‌ಡಿಎಂ ಏಕ್ತಾ ಜೈಸ್ವಾಲ್ ಮಾತನಾಡಿ, ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ, ತನಿಖೆಯ ನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.

 


ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪರಾಧಿಗೆ ಮರಣದಂಡನೆ ಜಾರಿಗೆ ಸುಪ್ರೀಂ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...