Homeಮುಖಪುಟ‘ತಲೆದಂಡ’ ಮತ್ತು ಮಾಸ್ತಿ: ಗಿರೀಶ್ ಕಾರ್ನಾಡ್‍ರವರ ನಾಟಕದ ಕುರಿತು ಪಿ.ಲಂಕೇಶ್ ಬರೆದಿದ್ದು ಹೀಗೆ.

‘ತಲೆದಂಡ’ ಮತ್ತು ಮಾಸ್ತಿ: ಗಿರೀಶ್ ಕಾರ್ನಾಡ್‍ರವರ ನಾಟಕದ ಕುರಿತು ಪಿ.ಲಂಕೇಶ್ ಬರೆದಿದ್ದು ಹೀಗೆ.

ಕನ್ನಡದಲ್ಲಿ ನೂರು ನಾಟಕ ಬರೆದರೂ ದೊರೆಯದಷ್ಟು ಹಣ ಇಂಗ್ಲಿಷ್ ಕಿರುನಾಟಕದಿಂದ ದೊರೆಯಬಲ್ಲದು. ಆದರೆ ಗಿರೀಶ್ ಅದಕ್ಕೆಲ್ಲ ಆಸೆ ಪಡಲಿಲ್ಲ. ಮತ್ತೆ ಮತ್ತೆ ಕನ್ನಡದಲ್ಲೇ ಬರೆಯುತ್ತಾರೆ.

- Advertisement -
- Advertisement -

ಕನ್ನಡದ ಮೇರು ಲೇಖಕ, ನಾಟಕಕಾರ ಗಿರೀಶ್ ಕಾರ್ನಾಡ್ ನಮ್ಮನ್ನಗಲಿದ್ದಾರೆ. ಇಂಗ್ಲಿಷ್ ಹಿಂದಿಯಲ್ಲೂ ಅತ್ಯುತ್ತಮವಾಗಿ ಬರೆಯಬಲ್ಲವರಾಗಿದ್ದ ಕಾರ್ನಾಡ್, ಕನ್ನಡವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡಿದ್ದರು. ಜ್ಞಾನಪೀಠ ಪುರಸ್ಕೃತರೆಂಬುದಷ್ಟೇ ಅವರ ಹಿರಿಮೆಯಲ್ಲ. ಅವರ ನಾಟಕ ಪ್ರತಿಭೆಯ ಕುರಿತು ಅರಿಯಬೇಕೆಂದರೆ, ಅವರ ತಲೆದಂಡ ನಾಟಕದ ಕುರಿತು ಪಿ.ಲಂಕೇಶ್‍ರವರು 1990ರಲ್ಲಿ ಬರದ ಪುಟ್ಟ ಬರಹ ಓದಬೇಕು. ಪ್ರೊ.ವಿ.ಎಸ್.ಶ್ರೀಧರ್ ಅವರು ಸಂಪಾದಿಸಿರುವ ‘ಸಾಹಿತಿ ಸಾಹಿತ್ಯ ವಿಮರ್ಶೆ’ ಪುಸ್ತಕದಿಂದ ಈ ಬರಹವನ್ನು ಆಯ್ದುಕೊಳ್ಳಲಾಗಿದೆ. 

ಮೇಲಿನದನ್ನು ಬರೆದು ಬೇಸರವಾಗಿರುವಾಗ ಮೊನ್ನೆ ಆದ ಒಂದು ಸಣ್ಣ ಸಂಗತಿ, ತಮಾಷೆಯ ಸಂಗತಿ ಹೇಳುತ್ತೇನೆ. ನಾನು ಒಬ್ಬನೇ ಕೂತು ಅದೇನೋ ಲೆಕ್ಕಾ ಹಾಕುತ್ತಿದೆ. ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕವನ್ನು ಆಗತಾನೇ ಓದಿ ಮುಗಿಸಿದ್ದೆ. ಗಿರೀಶ್ ಕಾರ್ನಡ್ ಎಂಥ ವಿಚಿತ್ರ ಮನುಷ್ಯರೆಂಬುದು ಅನೇಕರಿಗೆ ಗೊತ್ತಿಲ್ಲ. ಈತ ಮನಸ್ಸು ಮಾಡಿದರೆ ವಿಕ್ರಮ್ ಶೇಟ್, ಸಲ್ಮಾನ್ ರಶ್ದಿ, ನಾಯ್‍ಪಾಲ್ ತರಹದ ಇಂಗ್ಲಿಷ್ ಲೇಖಕರಾಗಿ ಮೆರೆಯಬಹುದಿತ್ತು. ನಮ್ಮಲ್ಲಿ ಇಂಗ್ಲಿಷ್ ಭಾಷೆಯನ್ನು ಅದರೆಲ್ಲ ಚೆಂದದೊಂದಿಗೆ ಬಳಸಬಲ್ಲ ವ್ಯಕ್ತಿ ಗಿರೀಶ್. ಇಂಗ್ಲಿಷ್ ಲೇಖಕರ ಆದಾಯ, ಖ್ಯಾತಿ, ವೈಭವ ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಕನ್ನಡದಲ್ಲಿ ನೂರು ನಾಟಕ ಬರೆದರೂ ದೊರೆಯದಷ್ಟು ಹಣ ಇಂಗ್ಲಿಷ್ ಕಿರುನಾಟಕದಿಂದ ದೊರೆಯಬಲ್ಲದು. ಆದರೆ ಗಿರೀಶ್ ಅದಕ್ಕೆಲ್ಲ ಆಸೆ ಪಡಲಿಲ್ಲ. ಮತ್ತೆ ಮತ್ತೆ ಕನ್ನಡದಲ್ಲೇ ಬರೆಯುತ್ತಾರೆ. ಬರೆಯುತ್ತಾ ಅವರ ಕನ್ನಡ ಶೈಲಿ ಜನಸಾಮಾನ್ಯರ ಮಾತುಗಳನ್ನು, ಸಾಮಾನ್ಯರ ಮಾತಿನ ಗತ್ತು, ಕಮರನ್ನು ಪಡೆಯುತ್ತದೆ. ಅವರ ‘ತಲೆದಂಡ’ ನಾಟಕದಲ್ಲಿನ ಬಸವಣ್ಣ, ಬಿಜ್ಜಳ ರಾಜ, ಮಂತ್ರಿಯ ಗತ್ತನ್ನೆಲ್ಲ ಬಿಟ್ಟು ಎಲ್ಲ ಮನುಷ್ಯರಂತೆ, ಅಗಾಧ ಸಮಸ್ಯೆಗಳ ಎದುರಿಸುವ ದಿಟ್ಟರಂತೆ ಕಂಡುಬರುತ್ತಾರೆ.

ಇಲ್ಲಿಯ ‘ತಲೆದಂಡ’ ವಸ್ತುವಿಗಿಂತಲೂ ಪವಾಡ ಅರ್ಥಪೂರ್ಣವಾಗಿದೆ. ಹನ್ನೆರಡನೆ ಶತಮಾನದ ಕ್ಷೌರಿಕ ಜಾತಿಗೆ ಸೇರಿದ ವ್ಯಕ್ತಿಯೊಬ್ಬ (ಈತ ಜೈನ ಎಂದು ನಾನು ಓದಿದ್ದೆ) ಬಸವಣ್ಣನವರ ಮಾಂತ್ರಿಕ ಸ್ಪರ್ಶದಿಂದ ದೊರೆಯಾಗುವುದೇ ಅಲ್ಲದೆ, ಪವಾಡವೊಂದನ್ನು ಕಾಣುತ್ತಾನೆ-ಜೋಳ ಮುತ್ತಾಗುವ, ಬಸವಣ್ಣನವರು ತಮ್ಮ ಧಾರಾಳವನ್ನು ಚಾಣಾಕ್ಷತೆಯಿಂದ ಮುಚ್ಚಿಹಾಕುವ ಪವಾಡವಲ್ಲ; ಶತಮಾನಗಳಿಂದ ಕೆಳಜಾತಿಯವರು, ಕೀಳುಜನ ಎನ್ನಿಸಿಕೊಂಡಿದ್ದ, ಎಂದುಕೊಂಡಿದ್ದ ಜನ ಮನುಷ್ಯರಾಗುವ, ವಿಚಾರವಂತರಾಗುವ, ಕಲಿಗಳಾಗುವ, ದೊರೆಗಳಾಗುವ ಪವಾಡ.

…ಈ ನಾಟಕ ಓದುತ್ತಿದ್ದಾಗ ನನ್ನನ್ನು ನೋಡಿಕೊಳ್ಳುವ ಹುಡುಗ ನನ್ನ ಕೋಣೆಗೆ ಬಂದು ಹೇಳಿದ: “ಸಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ರು ಬಂದಿದ್ದಾರೆ!”
“ಆ?  ಏನಂದೆ?” ಅಂದೆ.
“ಮಾಸ್ತಿ ವೆಂಕಟೇಶ ಅಯ್ಯಂಗಾರ್ರು ನಿಮ್ಮನ್ನು ನೋಡಲು ಬಂದಿದ್ದಾರೆ.”
“ಛೆ, ಮತ್ತೆ ಕೇಳಿಕೊಂಡು ಬಾ-ಅವರಿರಲಾರರು” ಅಂದೆ. ಆತ ಹೋದ. ಮರುಕ್ಷಣ ಬಂದು ಹೇಳಿದ, “ಹೌದು ಸಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ರಂತೆ” ಅಂದ.
ನಾನು ನಕ್ಕೆ, ‘ತಲೆದಂಡ’ದ ಗುಂಗಿನಲ್ಲಿದ್ದ ನಾನು ಎದ್ದು, “ಸ್ವಲ್ಪ ಇರಲು ಹೇಳು” ಎಂದು ಯೋಚಿಸಿದೆ. ಅವರು ಬರಲು ಸಾಧ್ಯವೇ ಇಲ್ಲ. ಆದರೆ ಆ ಹೆಸರನ್ನು ಪೂರ್ತಿ ಬೇರೆಯವರು ಇಟ್ಟುಕೊಳ್ಳುವುದೂ ಸಾಧ್ಯವಿಲ್ಲ. “ಆಕಸ್ಮಾತ್ ಅವರೇ ಬಂದಿದ್ದರೆ?” ಎಂದು ಕೇಳಿಕೊಂಡು ನಕ್ಕೆ. ‘ತಲೆದಂಡ’ದ ಗುಂಗು ತೀವ್ರವಾಯಿತು. ಅನೇಕಾನೇಕ ದೆವ್ವದ, ಅತೀಂದ್ರಿಯ ಕತೆಗಳನ್ನು ಬರೆದ ಮಾಸ್ತಿ ಬಂದೇಬಿಟ್ಟಿದ್ದರೆ? ನಕ್ಕೆ, ಒಂದು ಕ್ಷಣ ಯೋಚಿಸಿದೆ. ಬಾಗಿಲು ತೆರೆದುಕೊಂಡು ಬಂದೇಬಿಟ್ಟರೆ ಗತಿಯೇನೆಂದು ನಾನೇ ಬಾಗಿಲು ತೆರೆದು ನೋಡಿದೆ..,. ಅಲ್ಲಿ..,. ಮಾಸ್ತಿಯವರ ಮೂರನೇ ಅಳಿಯ ಶೇಷಾದ್ರಿ ನಿಂತಿದ್ದರು!
“ಛೆ, ಇದೇನ್ರಿ.,. ಮಾಸ್ತಿ ಅಂತ ನೀವು ಹೇಳಿಕೊಳ್ಳೋದೆ?” ಅಂದೆ.
“ಹಾಗೆ ಹೇಳದಿದ್ದರೆ ನೀವು ನೋಡದಕ್ಕೆ ನಿರಾಕರಿಸ್ತೀರಿ ಅಂತ ಹಾಗಂದೆ” ಅಂದರು.
ಕ್ಷಣದ ತಳಮಳ ತಿಳಿಸಿದೆ. ಅವರು ದೊಡ್ಡದಾಗಿ ನಕ್ಕು. “ನೀವು ಅಂಥದ್ದನ್ನೆಲ್ಲ ನಂಬುವುದಿಲ್ಲವಲ್ಲ?” ಅಂದರು.
“ಒಂದು ಕ್ಷಣ ನಂಬಿಕೆ ಸುಳ್ಳಾದರೆ ಗತಿಯೇನು ಹೇಳಿ?” ಅಂದೆ. ಶೇಷಾದ್ರಿ ದೊಡ್ಡದಾಗಿ ನಕ್ಕು ತಮ್ಮ ಕಷ್ಟ ಹೇಳಿಕೊಳ್ಳತೊಡಗಿದರು.
ನಿಮಗೀಗ ಎಷ್ಟು ವಯಸ್ಸು? ಅಂದೆ. ಎಪ್ಪತ್ತಿರಬಹುದೆ? ಎಪ್ಪತ್ತೈದು?
“ನೀವು ಸತ್ಯಕ್ಕೆ ಹತ್ತಿರ ಇದ್ದೀರಿ” ಎಂದರು. ನಿಗೂಢವಾಗಿ-
‘ತಲೆದಂಡ’ದ ಗುಂಗಿನಲ್ಲಿದ್ದ ನಾನು, ಹನ್ನೆರಡನೆ ಶತಮಾನದ ಬಸವಣ್ಣ, ಅಲ್ಲಮರ ಉಯ್ಯಾಲೆಯಲ್ಲಿದ್ದ ನಾನು ಮಾಸ್ತಿಯವರವರೆಗೆ ಹೀಜಿಕೊಂಡಿದ್ದೆ. ಎದುರು ಕೂತು ಮಾತಾಡುತ್ತಿದ್ದ ಮಾಸ್ತಿಯವರ ಅಳಿಯ ಶೇಷಾದ್ರಿಯವರ ಒಂದು ಮಾತೂ ನನ್ನನ್ನು ತಲುಪಲಿಲ್ಲ.
ಡಿಸೆಂಬರ್ 2, 1990

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...