ಹೈಕೋರ್ಟ್‌ ನ್ಯಾಯಾಧೀಶರ ವಿರುದ್ದ ಮಾನಹಾನಿ ಪೋಸ್ಟ್‌‌‌; ಮತ್ತೆ ಇಬ್ಬರನ್ನು ಬಂಧಿಸಿದ CBI | Naanu gauri

ಅಧೀನ ನ್ಯಾಯಾಲಯದ ನ್ಯಾಯಾಧೀಶರು ಬೆದರಿಕೆಗಳ ಬಗ್ಗೆ ದೂರು ನೀಡಿದಾಗ ತನಿಖಾ ಸಂಸ್ಥೆಗಳು ಪ್ರತಿಕ್ರಿಯಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶರು ಹೇಳಿದ ಕೆಲವು ದಿನಗಳ ನಂತರ, ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಮಾನಹಾನಿಕರ ಪೋಸ್ಟ್‌ ಮಾಡಿದ ಇಬ್ಬರನ್ನು ಸಿಬಿಐ ಬಂಧಿಸಿದೆ.

ಒಟ್ಟಾರೆಯಾಗಿ, ಪ್ರಕರಣದಲ್ಲಿ ನ್ಯಾಯಾಧೀಶರನ್ನು ಅವಹೇಳನ ಮಾಡಿದ ಆರೋಪದಲ್ಲಿ ಐದು ಜನರನ್ನು ಇದುವರೆಗೂ ಬಂಧಿಸಲಾಗಿದೆ. ಪ್ರಕರಣದ ಮೊದಲ ಬಂಧನವನ್ನು ಕಳೆದ ತಿಂಗಳು ಜುಲೈ 9 ರಂದು ಸಿಬಿಐ ಮಾಡಿತ್ತು.

ಇದನ್ನೂ ಓದಿ: ಜಾರ್ಖಂಡ್ ನ್ಯಾಯಾಧೀಶರಿಗೆ ಆಟೋದಿಂದ ಗುದ್ದಿ ಸಾಯಿಸಿದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ಸೆರೆ

ನ್ಯಾಯಾಧೀಶರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದ ಆರೋಪಿಗಳು ನ್ಯಾಯಾಧೀಶರು ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣದ ನೋಂದಣಿಯ ನಂತರ, ಸಿಬಿಐ ಎಫ್ಐಆರ್‌ನಲ್ಲಿ ಹೆಸರಿಸಲಾದ 16 ಆರೋಪಿಗಳ ಪೈಕಿ 13 ಆರೋಪಿಗಳನ್ನು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಪತ್ತೆ ಮಾಡಿದ್ದು, ಉಳಿದ ಮೂವರು ವಿದೇಶದಲ್ಲಿರುವುದು ಪತ್ತೆಯಾಗಿದೆ. ಸಿಬಿಐ ಇದುವರೆಗೆ 13 ಆರೋಪಿಗಳಲ್ಲಿ 11 ಜನರನ್ನು ವಿಚಾರಣೆ ನಡೆದಿದ್ದು, ಅವರಲ್ಲಿ 5 ಜನರನ್ನು ಬಂಧಿಸಿದೆ.

ಇತ್ತೀಚೆಗೆ ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶರ ಹತ್ಯೆ ಪ್ರಕರಣವನ್ನು ನ್ಯಾಯಾಲಯ ಸ್ವಯಂ ಕೈಗೆತ್ತಿಕೊಂಡಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಶುಕ್ರವಾರ ತನಿಖಾ ಸಂಸ್ಥೆಗಳ ವಿರುದ್ಧ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಜಾಮೀನು ನೀಡದ ನ್ಯಾಯಾಧೀಶನ ಬರ್ಬರ ಕೊಲೆ: ಸುಮೊಟೋ ಪ್ರಕರಣದ ದಾಖಲಿಸಿದ ಸುಪ್ರೀಂ

“ಸಿಬಿಐ ಏನನ್ನೂ ಮಾಡಿಲ್ಲ. ನಾವು ಸಿಬಿಐ ಧೋರಣೆಯಲ್ಲಿ ಸ್ವಲ್ಪ ಬದಲಾವಣೆಯನ್ನು ನಿರೀಕ್ಷಿಸಿದ್ದೆವು ಆದರೆ ಯಾವುದೇ ಬದಲಾವಣೆಯಿಲ್ಲ. ಕ್ಷಮಿಸಿ, ಇದು ಪರಿಸ್ಥಿತಿ” ಎಂದು ರಮಣ ಅವರು ಹೇಳಿದ್ದರು.

ಜುಲೈ 28 ರಂದು ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ (49) ಅವರು ಬೆಳಗಿನ ಜಾವ ಜಾಗಿಂಗ್‌ ಮಾಡುತ್ತಿದ್ದಾಗ ಆಟೋ ಡಿಕ್ಕಿ ಹೊಡೆದು ಕೊಲ್ಲಲ್ಪಟ್ಟರು. ಪ್ರಕರಣವು ಮೊದಲಿಗೆ ಹಿಟ್ ಅಂಡ್ ರನ್ ಎಂದು ಹೇಳಲಾಗಿತ್ತು, ಆದರೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ವೈರಲ್ ಆದ ನಂತರ ಪ್ರಕರಣವು ಇನ್ನೊಂದು ಮಗ್ಗುಲಿಗೆ ಹೊರಳಿತು.

ಉತ್ತಮ್ ಆನಂದ್‌ ಅವರು ಧನ್ಬಾದ್‌ನ ಅನೇಕ ಮಾಫಿಯಾ ಹತ್ಯಾ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದರು, ಅದರಲ್ಲಿ ಅವರು ಇಬ್ಬರು ದರೋಡೆಕೋರರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದರು.

ಇದನ್ನೂ ಓದಿ: ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆಗಳು ‘ಗಂಭೀರ’: ಸುಪ್ರೀಂಕೋರ್ಟ್‌‌

LEAVE A REPLY

Please enter your comment!
Please enter your name here