Homeಕರೋನಾ ತಲ್ಲಣಅಧಿಕಾರಿಗಳ ಒತ್ತಡ: ಅಂಗನವಾಡಿ ಕಾರ್ಯಕರ್ತೆ ಅಸಹಜ ಸಾವು

ಅಧಿಕಾರಿಗಳ ಒತ್ತಡ: ಅಂಗನವಾಡಿ ಕಾರ್ಯಕರ್ತೆ ಅಸಹಜ ಸಾವು

- Advertisement -
- Advertisement -

ತುಮಕೂರು(ಆಗಸ್ಟ್ 26): ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಂಗನವಾಡಿಯಲ್ಲೆ ಅಸಹಜವಾಗಿ ಸಾವಿಗೀಡಾಗಿದ್ದು ಅಧಿಕಾರಿಗಳ ಒತ್ತಡವೆ ಇದಕ್ಕೆ ಕಾರಣ ಎಂದು ದೂರಲಾಗಿದೆ.

ಸೂಪರ್ ವೈಸರ್ ಕರೆ ಮಾಡಿದ 10 ನಿಮಿಷದಲ್ಲಿ ಅಂಗನವಾಡಿಯಲ್ಲೇ ನೇಣು ಬಿಗಿಡುಕೊಂಡು ಆತ್ಮಕಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ

ಆತ್ಮಹತ್ಯೆ ಮಾಡಿರುವವರನ್ನು ತಿಪಟೂರು ತಾಲೂಕು ಕರಡಾಳುಸಂತೆ ಅಂಗನವಾಡಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುಳ (40) ಎಂದು ಗುರುತಿಸಲಾಗಿದೆ. ಇವರು ದಿಢೀರನೇ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಾಸಿಕ ಸಭೆಯ ವರದಿ ಪಡೆಯುವ ಸಂಬಂಧ ಸೂಪರ್ ವೈಸರ್ ಅಂಗನವಾಡಿ ಕಾರ್ಯಕರ್ತೆಗೆ ಕರೆ ಮಾಡಿದ ಕೆಲವೇ ನಿಮಿಷ ಗಳಲ್ಲಿ ಆತ್ಮಹತ್ಯೆಯ ಸುದ್ದಿ ಹೊರಬಿದ್ದಿದೆ.

ಕೊರೊನ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಡಾ.ನಾಗೇಂದ್ರ ಅವರು ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದರು. ಈಗ ಅಂಗನವಾಡಿ ಕಾರ್ಯಕರ್ತೆ ಮಂಜುಳ ಕೂಡ ಅಧಿಕಾರಿಯ ಒತ್ತಡದಿಂದ ಮನನೊಂದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿಯಮದಂತೆ ಪ್ರತಿ ಸೋಮವಾರ ಗ್ರಾಮದ ಪ್ರತಿ ಮಗುವಿಗೆ ಎರಡು ಮೊಟ್ಟೆ, ಗರ್ಭಿಣಿಯರಿಗೆ 6 ಮೊಟ್ಟೆ ಕೊಡಬೇಕು. ಆದರೆ ಮಂಜುಳ ಅವರು ತೀವ್ರ ಅನಾರೋಗ್ಯ ಕಾರಣದಿಂದ ಸೋಮವಾರ ಮೊಟ್ಟೆ ವಿತರಿಸಿರಲಿಲ್ಲ. ಬದಲಿಗೆ ಆಗಸ್ಟ್ 26 ರ ಬುಧವಾರ ಬೆಳಗ್ಗೆ ತಮ್ಮ ಮಗ ಮತ್ತು ಸಹಾಯಕರೊಬ್ಬರನ್ನು ಕಳಿಸಿ ಮೊಟ್ಟೆ ತರಿಸಿ ಎಲ್ಲರಿಗೂ ವಿತರಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾನ್ವೆಂಟುಗಳಿಗೂ ಸವಾಲೆಸೆದ ಅಂಗನವಾಡಿ ಕಾರ್ಯಕರ್ತೆ ಬಿ.ವಸಂತ

ಈ ವಿಷಯವಾಗಿ ಸೂಪರ್ ವೈಸರ್ ಬೆಳಗ್ಗೆ 11.50 ರ ಸುಮಾರಿಗೆ ಮಂಜುಳ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು, ಅವರನ್ನು ಬೈದರು ಎಂದು ಹೇಳಲಾಗುತ್ತಿದೆ. ಮಂಜುಳ ಅವರು ತನ್ನ ತಾಯಿ ತೀರಿಕೊಂಡ ಒತ್ತಡದಲ್ಲಿದ್ದು, ತಾನೂ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವಿಷಯವನ್ನು ಸೂಪರ್ ವೈಸರ್ ಲೀಲಾಬಾಯಿ ಅವರಿಗೆ ತಿಳಿಸಿದರೂ ಕೇಳಲಿಲ್ಲ ಎಂದು ಹೇಳಲಾಗಿದೆ.

ಮಂಜುಳ ಕೊರೊನ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಾಸಾಶನ ಸೇರಿದಂತೆ ಹಲವು ಸರ್ವೇ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಕುಟುಂಬದ ಜವಾಬ್ದಾರಿಯನ್ನು ಇವರೇ ನಿರ್ಹಸುತ್ತಿದ್ದರು ಎನ್ನಲಾಗಿದದ್ದು, ಬಡ ಕುಟುಂಬದ ಮಂಜುಳ ಪತಿ, ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಸಾಕ್ಷ್ಯ ನಾಶದ ಹಿನ್ನೆಲೆಯಲ್ಲಿ ಸಿಡಿಪಿಓ ಮತ್ತು ಸೂಪರ್ ವೈಸರ್ ಲೀಲಾಬಾಯಿ ಅವರನ್ನು ಅಮಾನತುಪಡಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಒತ್ತಾಯಿಸಿದೆ.

ಜೀವ ಅಮೂಲ್ಯವಾಗಿದೆ, ಯಾವುದೆ ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ಶಾಲಾ ಮಕ್ಕಳಿಗೆ ಪಡಿತರ ಹಾಗೂ ಹಣ ವರ್ಗಾಯಿಸುವಂತೆ ಬಿಹಾರ ಸರ್ಕಾರದ ಆದೇಶ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...