Homeಮುಖಪುಟಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು!...

ಸ್ಪೀಕರ್ ಕೊಟ್ಟ ಸಂಡೇ ಶಾಕ್: ಮತ್ತೆ 14 ಶಾಸಕರು ಅನರ್ಹ, ಮಂಕಾಗಿ ಹೋದ ಮುಂಬೈವಾಲಾ ಶಾಸಕರು! ನಾಳೆ ಏನಾಗಲಿದೆ?

- Advertisement -
- Advertisement -

ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ರಮೇಶಕುಮಾರ್ ಅವರು ಇಂದು ರವಿವಾರ ನೀಡಿದ ತೀರ್ಪು ಮತ್ತೆ 14 ಶಾಸಕರಿಗರನ್ನು ತಲ್ಲಣಗೊಳಿಸಿ ಬಿಟ್ಟಿದೆ. ಮುಂಬೈ, ಪೂಣೆಯಲ್ಲಿ ಈಗ ಸುರಿಯುತ್ತಿರುವ ಮಳೆ ನೀಡುತ್ತಿರುವ ತಂಪು ಮತ್ತು ಅಲ್ಲಿನ ಐಷಾರಾಮಿ ಹೊಟೆಲ್‍ಗಳಲ್ಲಿ ಇರುವ ಎ.ಸಿ.ಯ ನಡುವೆಯೂ ಅತೃಪ್ತ ಶಾಸಕರು ಮೈ ಮನಸ್ಸುಗಳೆಲ್ಲ ಬೆವರಿನಿಂದ ಒದ್ದೆಯಾಗಿವೆ.

ಹೇಗೂ ನಮ್ಮ ಸರ್ಕಾರವೇ, ಈ ಅತೃಪ್ತರು ಅನರ್ಹಗೊಂಡ ಕಾರಣಕ್ಕೆ ನಮ್ಮ ಶಾಸಕರಿಗೆ ಸಚಿವಗಿರಿ ಕೊಡಬಹುದು ಎಂದು ಒಳಗಡೆ ಖುಷಿ ಪಡುತ್ತಿರುವ ಬಿಜೆಪಿ, ಇದು ಅನ್ಯಾಯ ಎಂದೆಲ್ಲ ಅತೃಪ್ತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಇಂದಿನ ‘ಸ್ವಾರ್ಥಕ್ಕಾಗಿ ಬೆನ್ನಿಗೆ ಚೂರಿ ಹಾಕುವ’ ಮೋದಿ-ಶಾಗಳ ರಾಜಕೀಯದ ಮುಂದುವರಿಕೆಯ ಸ್ಯಾಂಪಲ್ ಆಗಿದೆ…..

ಮೊನ್ನೆ ಮುಂಬೈಯಿಂದ ಓಡೋಡಿ ಬಂದು ಯಲ್ಲಪುರದ ತಾಲೂಕಾ ಪಂಚಾಯತಿಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ‘ವ್ಯವಹಾರ’ ಮುಗಿಸಿಕೊಂಡು ಮತ್ತೆ ಮುಂಬೈಗೋ. ಪುಣೈಗೋ ಪಲಾಯನ ಮಾಡಿದ ಅಲ್ಲಿನ ಶಾಸಕ ಶಿವರಾಮ್ ಹೆಬ್ಬಾರ್ ನಾಳೆ ಮುಂಜಾನೆ ಯಲ್ಲಾಪುರದ ಯಾವ ಕಚೇರಿಗೆ ಹೋದರೂ ಕವಡೆ ಕಾಸಿನ ಕಿಮ್ಮತ್ತೇ ಇಲ್ಲ!

ಇದು ಸೋಮಶೇಖರ್, ಬೈರತಿ ಬಸವರಾಜು, ವಿಶ್ವನಾಥ್, ಮುನಿರತ್ನ ಇತ್ಯಾದಿ ಎಲ್ಲರಿಗೂ ಅನ್ವಯವೇ! ಸ್ಪೀಕರ್ ರಮೇಶಕುಮಾರ್ ಕೊಟ್ಟ ಶಾಕೇ ಹಾಗಿದೆ. ಬಿಜೆಪಿಯ ಮಾತು ಕೇಳಿಕೊಂಡು ಸರ್ಕಾರ ಬೀಳಿಸಲು ‘ಮಹತ್ತರ’ ಪಾತ್ರ ವಹಿಸಿದ್ದ 17 ಶಾಸಕರಿಗೆ ಇನ್ನು ಕನಿಷ್ಠ 4 ವರ್ಷಗಳ ಕಾಲ ಅವರದೇ ಕ್ಷೇತ್ರಗಳಲ್ಲಿ ಸಾರ್ವಜನಿಕ ಮಾನ್ಯತೆಯೇ ಇಲ್ಲ. ಈಗ ಅವರು ಕರ್ನಾಟಕಕ್ಕೆ ಬರಲೇಬೇಕು. ಬಹುಷ: ಅವರ ಕುಟುಂಬದವರನ್ನು ಬಿಟ್ಟರೆ ಅವರನ್ನು ಸ್ವಾಗತಿಸಲು ಕೆಲವು ಹುಂಬಾತಿಹುಂಬ ಕಾರ್ಯಕರ್ತರನ್ನು ಬಿಟ್ಟರೆ ಮತ್ಯಾರು ಇಲ್ಲಿ ಇರಲ್ಲ.

ನಾಳೆ ಏನಾಗಬಹುದು?
17 ಶಾಸಕರ ಅನರ್ಹತೆಯ ಕಾರಣಕ್ಕೆ ಈಗ ಸದನದ ಸದಸ್ಯರ ಸಂಖ್ಯೆ 207. ಬಹುಮತ ಸಾಬೀತಿಗೆ 104 ಸಂಖ್ಯೆ ಸಾಕು. ಈಗಾಗಲೇ ಬಿಜೆಪಿಗೆ 105 ಶಾಸಕರ ಸಂಖ್ಯೆ ಇರುವುದರಿಂದ ವಿಶ್ವಾಸಮತ ಗೆಲ್ಲಬಹುದು. ಆದರೆ, ಇತ್ತ ಅತೃಪ್ತರಾಗೇ ಉಳಿದುಬಿಟ್ಟ ಶಾಸಕರ (ಇವರೀಗ ಶಾಸಕರೇ ಅಲ್ಲ ಬಿಡಿ..), ಅಲ್ಲ ಮಹಾಮಹಿಮರನ್ನು ಬಿಜೆಪಿ ಸಮಾಧಾನ ಮಾಡಬೇಕು. ಈ ಗದ್ದಲದಲ್ಲಿ ಕುಮಾರಸ್ವಾಮಿ ಬಿಜೆಪಿ ಶಾಸಕರಿಗೆ ಕೈ ಹಾಕಿಬಿಟ್ಟರೆ ಬಿಜೆಪಿ ಸಂಕಟಕ್ಕೆ ಸಿಲುಕುವುದಂತೂ ಸತ್ಯ.

ಆದರೆ, ಒಟ್ಟಿನಲ್ಲಿ ಸ್ಪೀಕರ್ ರಮೇಶಕುಮಾರ್ ಅವರ ನಿರ್ಧಾರ ಸಾಮಾನ್ಯ ಮತದಾರರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಖುಷಿ ಕೊಟ್ಟೇ ಇದೆ. ವಿಚಿತ್ರ ಎಂದರೆ ಬಿಜೆಪಿಗೂ ಒಂದರ್ಥದಲ್ಲಿ ಇದು ಖುಷಿಯ ವಿಷಯವೇ. ಅಂದರೆ ಈಗ ಅನರ್ಹಗೊಂಡವರೆಲ್ಲ ಅಂತರ್ ಪಿಶಾಚಿಗಳು ಅಷ್ಟೇ… ಅವರಿಗಿರುವ ಏಕೈಕ ದಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...