ಸಿಎಎ ವಿರುದ್ಧ ದನಿಯೆತ್ತಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ…

0

ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತ್ಯ ನಾಡೆಲ್ಲಾ, ಸಿಎಎ ಭಾರತಕ್ಕೆ ಬೇಡವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಸಿಎಎ ವಿರೋಧಿ ನಡೆಯುತ್ತಿರುವ ದೊಡ್ಡ ಪ್ರತಿಭಟನೆಗಳ ಮಧ್ಯೆ ಅವರು “ಈಗ ನಡೆಯುತ್ತಿರುವುದು ದುಃಖಕರವಾದ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ … ಇದು ಕೆಟ್ಟದ್ದಾಗಿದೆ … ಬಾಂಗ್ಲಾದೇಶಿ ವಲಸಿಗನೊಬ್ಬ ಭಾರತಕ್ಕೆ ಬಂದು, ಭಾರತದಲ್ಲಿ ಮುಂದಿನ ಯುನಿಕಾರ್ನ್ ಅನ್ನು ರಚಿಸುವ ಅಥವಾ ಇನ್ಫೋಸಿಸ್‌ನ ಮುಂದಿನ ಸಿಇಒ ಆಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ” ಎಂದು ಸತ್ಯ ನಾಡೆಲ್ಲಾ ಬುಜ್‌ಫೀಡ್‌ ಸಂಪಾದಕ ಬೆನ್ ಸ್ಮಿತ್‌ರವರಿಗೆ ಅಮೆರಿಕದಲ್ಲಿ ನಡೆದ ಮೈಕ್ರೋಸಾಫ್ಟ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ತದನಂತರ ಮೈಕ್ರೋಸಾಫ್ಟ್‌ ಅವರ ಹೇಳಿಕೆಯನ್ನು ಅಧಿಕೃತವಾಗಿ ಟ್ವೀಟ್‌ ಮಾಡಿದೆ. ಅದರಲ್ಲಿ ಅವರು “ಪ್ರತಿಯೊಂದು ದೇಶವು ತನ್ನ ಗಡಿಗಳನ್ನು ವ್ಯಾಖ್ಯಾನಿಸುತ್ತದೆ, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ವಲಸೆ ನೀತಿಯನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವಗಳಲ್ಲಿ, ಜನರು ಮತ್ತು ಅವರ ಸರ್ಕಾರಗಳು ಆ ಮಿತಿಗಳಲ್ಲಿ ಚರ್ಚಿಸಿ ವ್ಯಾಖ್ಯಾನಿಸುತ್ತವೆ. ನನ್ನ ಭಾರತೀಯ ಪರಂಪರೆಯಿಂದ ನಾನು ರೂಪುಗೊಂಡಿದ್ದೇನೆ, ಬಹುಸಾಂಸ್ಕೃತಿಕ ಭಾರತದಲ್ಲಿ ಬೆಳೆದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನನ್ನ ವಲಸೆ ಅನುಭವವಿದೆ. ನನ್ನ ಆಶಯವೆಂದರೆ ವಲಸಿಗನು ಭಾರತದಲ್ಲಿ ಎನ್ನ ಏಳ್ಗೆಯನ್ನು ಬಯಸುವುದು ಅಥವಾ ಭಾರತೀಯ ಸಮಾಜ ಮತ್ತು ಆರ್ಥಿಕತೆಗೆ ಹೆಚ್ಚಿನ ಲಾಭವನ್ನು ನೀಡುವ ಬಹುರಾಷ್ಟ್ರೀಯ ಸಂಸ್ಥೆಯನ್ನು ಮುನ್ನಡೆಸುವುದಾಗಿದೆ” ಎಂದಿದ್ದಾರೆ.

ನಾಡೆಲ್ಲಾ ಅವರ ಅಭಿಪ್ರಾಯವನ್ನು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಬೆಂಬಲಿಸಿದ್ದಾರೆ. “ಸತ್ಯ ನಾಡೆಲ್ಲಾ ಅವರ ಹೇಳಿಕೆಯಿಂದ ನನಗೆ ಖುಷಿಯಾಗಿದೆ. ನಮ್ಮ ಸ್ವಂತ ಐಟಿ ಕಂಪನಿಗಳಲ್ಲಿ ಒಬ್ಬರು ಇದನ್ನು ಮೊದಲು ಹೇಳುವ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿರಬೇಕೆಂದು ನಾನು ಬಯಸುತ್ತೇನೆ. ಅಥವಾ ಈಗಲಾದರು ಅದನ್ನು ಹೇಳಲು ಮುಂದಾಗಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗೂಗಲ್, ಉಬರ್, ಅಮೆಜಾನ್ ಮತ್ತು ಫೇಸ್‌ಬುಕ್‌ನಂತಹ ಟೆಕ್ ದೈತ್ಯರೊಂದಿಗೆ ಕೆಲಸ ಮಾಡುತ್ತಿರುವ 150 ಕ್ಕೂ ಹೆಚ್ಚು ಭಾರತೀಯ ಮೂಲದ ವೃತ್ತಿಪರರ ಗುಂಪು ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಗರಿಕರ ನೋಂದಣಿಯ ವಿರುದ್ಧ ಮುಕ್ತ ಪತ್ರ ಬರೆದಿದ್ದು, ಎರಡೂ ಉಪಕ್ರಮಗಳನ್ನು “ಫ್ಯಾಸಿಸ್ಟ್” ಎಂದು ಕರೆದಿದೆ.

ಆನ್‌ಲೈನ್ ಪಬ್ಲಿಷಿಂಗ್ ಪ್ಲಾಟ್‌ಫಾರ್ಮ್ ಮೀಡಿಯಂನಲ್ಲಿ “ಟೆಕ್ ಅಗೈನ್ಸ್ಟ್ ಫ್ಯಾಸಿಸಂ” ಬರೆದ ಪತ್ರವು ದೊಡ್ಡ ವ್ಯಾಪಾರ ವಹಿವಾಟು ನಾಯಕರಾದ ಸತ್ಯ ನಾಡೆಲ್ಲಾ, ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಕೇಂದ್ರ ಸರ್ಕಾರದ ಕ್ರಮಗಳನ್ನು “ಸಾರ್ವಜನಿಕವಾಗಿ ಖಂಡಿಸಬೇಕು” ಎಂದು ಒತ್ತಾಯಿಸಿದೆ. “ಸಿಎಎ, ಎನ್‌ಆರ್‌ಸಿಯೊಂದಿಗೆ ಸೇರಿ ಆಳವಾದ ಮುಸ್ಲಿಂ ವಿರೋಧಿ ಯೋಜನೆಯಾಗಿದ್ದು, ಇದು ಜಾಗತಿಕ ಅಸಮಾನತೆಯನ್ನು ಉಂಟುಮಾಡುತ್ತದೆ. ಇದು ಭಾರತದ ಆರ್ಥಿಕ ಕುಸಿತ ಮತ್ತು ಹವಾಮಾನ ಬದಲಾವಣೆಯೊಂದಿಗೆ ಕೆಟ್ಟದಾಗಿ ಬೆಳೆಯುತ್ತಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ಸಿಎಎ ಹೇಳಿಕೆಯನ್ನು ಬಿಜೆಪಿ ಸಂಸದ ಮೀನಾಕ್ಷಿ ಲೇಖಿ ಅವರು ‘ಸಾಕ್ಷರರು ಶಿಕ್ಷಣ ಪಡೆಯಬೇಕು’ ಎಂದು ಖಂಡಿಸಿದ್ದಾರೆ.

ಇದು ಸಾಕ್ಷರರು ಹೇಗೆ ಶಿಕ್ಷಣ ಪಡೆಯಬೇಕು ಎಂಬುದಕ್ಕೆ ಪರಿಪೂರ್ಣ ಉದಾಹರಣೆ ಎಂದು ಕರೆದ ಲೇಖಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಸಿಎಎ ಅವಕಾಶಗಳನ್ನು ನೀಡಲು ನಿಖರವಾದ ಕಾರಣವಾಗಿದೆ ಎಂದಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here