Homeಮುಖಪುಟ'ಬಜೆಟ್‌ನಲ್ಲಿ ತೆಲಂಗಾಣಕ್ಕೆ ಕೊಟ್ಟಿದ್ದು ಶೂನ್ಯ'; ಬ್ಯಾನರ್ ಹಾಕಿಸಿದ ತೆಲಂಗಾಣ ಸರ್ಕಾರ

‘ಬಜೆಟ್‌ನಲ್ಲಿ ತೆಲಂಗಾಣಕ್ಕೆ ಕೊಟ್ಟಿದ್ದು ಶೂನ್ಯ’; ಬ್ಯಾನರ್ ಹಾಕಿಸಿದ ತೆಲಂಗಾಣ ಸರ್ಕಾರ

- Advertisement -
- Advertisement -

ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಈ ಕೇಂದ್ರ ಬಜೆಟ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಕೇಂದ್ರವನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳನ್ನು ಹಾಕಿದೆ.

ಗುರುವಾರ ಹೈದರಾಬಾದ್‌ನಲ್ಲಿ ಮೋದಿ ಮತ್ತು ಕೇಂದ್ರವನ್ನು ಗುರಿಯಾಗಿಸಿಕೊಂಡು, ‘ಕೇಂದ್ರ ಬಜೆಟ್‌ನಲ್ಲಿ ತೆಲಂಗಾಣಕ್ಕೆ ಶೂನ್ಯ ಕೊಟ್ಟಿದೆ’ (TELANGANA GETS ZERO IN UNION BUDGET)  ಎಂಬ ದೊಡ್ಡ ಪೋಸ್ಟರ್‍‌ನ್ನು ಹಾಕಲಾಗಿದೆ. ನಗರದ ಭರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಇದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿ ಹೈದರಾಬಾದ್‌ಗೆ ಬಂದಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ‘ಹಣ ದರೋಡೆ’ ಪೋಸ್ಟರ್‌ಗಳನ್ನು ಹಾಕಿದ್ದರು ಮತ್ತೆ ಆ ಪೋಸ್ಟರ್‍‌ಗಳನ್ನು ಬಿಆರ್‌ಎಸ್ ಕಾರ್ಯಕರ್ತರು ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಮೋದಿ ಅವರ ಸಾರ್ವಜನಿಕ ಸಭೆ ನಡೆಯುವ ಸ್ಥಳದ ಬಳಿ ಗುಲಾಬಿ ಬಣ್ಣದ ಬಲೂನ್‌ಗಳನ್ನು ಹಾಕುವ ಮೂಲಕ ಬಿಆರ್‌ಎಸ್ ಕಾರ್ಯಕರ್ತರು ವಿಶಿಷ್ಟವಾಗಿ ಗಮನಸೆಳೆದಿದ್ದರು.

ಇದನ್ನೂ ಓದಿ: ಬಹುಸಂಖ್ಯಾತ ಭಾರತೀಯರಿಗೆ ಬಗೆದ ದ್ರೋಹ: ಬಜೆಟ್ ಕುರಿತು ಪಿ. ಚಿದಂಬರಂ ಪ್ರತಿಕ್ರಿಯೆ

‘ಹಣ ದರೋಡೆ’ ಅಭಿಯಾನದ ಭಾಗವಾಗಿ, ಬಿಆರ್‌ಎಸ್ ಕಾರ್ಯಕರ್ತರು ಹೋರ್ಡಿಂಗ್‌ಗಳನ್ನು ಹಿಡಿದು ಮೌನವಾಗಿ ಪ್ರತಿಭಟನೆ ನಡೆಸಿದರು. ಇದು ಕಳೆದ ವರ್ಷ ಜುಲೈನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುವ ವೇಳೆ ಅನೇಕರ ಗಮನವನ್ನು ಬೇರೆಡೆಗೆ ಹರಿಸಲು ಮಾಡಿದ ಪ್ಲ್ಯಾನ್ ಆಗಿತ್ತು.

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಅಂತಿಮ ದಿನದಂದು, ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಪಿಎಂ ನರೇಂದ್ರ ಮೋದಿಯವರ ರ್ಯಾಲಿಗೆ ಕೆಲವೇ ಗಂಟೆಗಳ ಮೊದಲು, ಬಿಆರ್‌ಎಸ್ ಘೋಷಣೆಯ ‘ಜೈ ಜೈ ಕೆಸಿಆರ್’ ಎಂದು ಪಿಂಕ್ ಬಲೂನ್‌ಗಳನ್ನು ಸ್ಥಳದ ಹೊರಗೆ ಇರಿಸಲಾಗಿತ್ತು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸ್ಥಳದಿಂದ ಅವು ಗೋಚರಿಸುತ್ತಿದ್ದವು. ಆ ಮೂಲಕ ಸಭೆಗೆ ಬಂದವರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

Hyderabad: Pink 'Jai KCR' balloons fill up sky outside PM Modi's public meet venue

ಕೇಂದ್ರ ಬಜೆಟ್ ಬಿಡುಗಡೆಯಾದ ನಂತರ ಮಾತನಾಡಿದ ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಕಲ್ವಕುಂಟ್ಲ, ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂ.ವರೆಗಿನ ಆದಾಯದ ಮೇಲಿನ ಆದಾಯ ತೆರಿಗೆ ರಿಯಾಯಿತಿ (ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ) ತೆಲಂಗಾಣದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

”ಮೋದಿ ಸರ್ಕಾರದ ವೈಫಲ್ಯವನ್ನು ಈ ಬಜೆಟ್ ದೃಢೀಕರಿಸಿದೆ. ಇದು ಕೆಲವು ರಾಜ್ಯಗಳ ಬಜೆಟ್‌ನಂತೆ ಕಾಣುತ್ತಿದೆ. 10 ಲಕ್ಷದವರೆಗೆ ತೆರಿಗೆ ರಿಯಾಯಿತಿಯನ್ನು ನಾವು ನಿರೀಕ್ಷಿಸಿದ್ದೇವೆ. ಏಕೆಂದರೆ ತೆಲಂಗಾಣದಲ್ಲಿ, ನಾವು ಜನರಿಗೆ ಉತ್ತಮ ಸಂಬಳ ನೀಡುತ್ತೇವೆ ಆದ್ದರಿಂದ ಈ ರಿಯಾಯಿತಿ ನಮಗೆ ಯಾವುದೇ ಪ್ರಯೋಜನವಿಲ್ಲ” ಎಂದು ಅವರು ANI ಗೆ ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...