Homeಅಂತರಾಷ್ಟ್ರೀಯಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಗಿ ಪರಿಸರ ಪಾಠ ಮಾಡಿ: ಗ್ರೇಟಾ ಭಾಷಣಕ್ಕೆ ಪುಟಿನ್ ಟೀಕೆ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಗಿ ಪರಿಸರ ಪಾಠ ಮಾಡಿ: ಗ್ರೇಟಾ ಭಾಷಣಕ್ಕೆ ಪುಟಿನ್ ಟೀಕೆ

- Advertisement -
- Advertisement -

ವಿಶ್ವಸಂಸ್ಥೆಯಲ್ಲಿ ಪರಿಸರ ಜಾಗೃತಿ ಭಾಷಣ ಮಾಡಿ ವಿಶ್ವದ ಗಮನ ಸೆಳೆದ 16ರ ಪೋರಿ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ಬೇಡಿಕೆಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಟೀಕಿಸಿದ್ದಾರೆ.

ಮಾಸ್ಕೋದಲ್ಲಿ ನಡೆದ ಇಂಧನ ಸಮಾವೇಶದಲ್ಲಿ ಮಾತನಾಡಿದ ವ್ಲಾಡಿಮರ್ ಪುಟಿನ್, ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಬಾಲಕಿ ಗ್ರೇಟಾ ಅವಾಸ್ತವಿಕ ಬೇಡಿಕೆಗಳನ್ನು ಮಂಡಿಸಿದ್ದಾರೆ. ಗ್ರೇಟಾ ಭಾಷಣ ಸಾಕಷ್ಟು ನಿರಾಸೆ ಮೂಡಿಸಿತು. ಭಾಷಣದ ಬಗ್ಗೆ ಯಾವುದೇ ಉತ್ಪ್ರೇಕ್ಷೆ ಮಾಡಬಾರದು ಎಂದರು.

ಇದನ್ನೂ ಓದಿ:ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಕುರಿತು 16ರ ಬಾಲೆ ಗ್ರೇಟಾ ತನ್ಬೆರ್ಗ್‌ ಮಾಡಿದ ಭಾಷಣ..

“ಆಧುನಿಕ ಜಗತ್ತು ಸಂಕೀರ್ಣ ಮತ್ತು ವಿಭಿನ್ನವಾಗಿದೆ ಎಂದು ಯಾರೂ ಗ್ರೇಟಾಗೆ ವಿವರಿಸಿಲ್ಲ. ಆಫ್ರಿಕಾದಲ್ಲಿ ಅಥವಾ ಏಷ್ಯಾದ ಅನೇಕ ದೇಶಗಳಲ್ಲಿನ ಜನರು ಸ್ವೀಡನ್‌ನಂತೆಯೇ ಅದೇ ಸಂಪತ್ತಿನ ಮಟ್ಟದಲ್ಲಿ ಬದುಕಲು ಬಯಸುತ್ತಾರೆ.” ಎಂದು ಪುಟಿನ್ ಹೇಳಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಗಿ ಗ್ರೇಟಾ ಪರಿಸರ ಜಾಗೃತಿ ಪಾಠ ಮಾಡಲಿ. ಅವರು ಬಡತನದಲ್ಲಯೇ ಮುಂದುವರೆಯಬೇಕು ಮತ್ತು ಸ್ವೀಡನ್‌ನಂತ ಆಗಬಾರದೆಂದು ಆಕೆ ಹೇಳಬೇಕಿದೆ. ಬಾಲಕಿಯನ್ನು ಕೆಲ ಗುಂಪುಗಳು ತಮ್ಮ ಸ್ವಾರ್ಥ ಗುರಿ ಸಾಧನೆಗೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದ ಅವರು ಆ ಗುಂಪುಗಳ ಹೆಸರನ್ನು ಉಲ್ಲೇಖಿಸಲಿಲ್ಲ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಥನ್ಬರ್ಗ್ ಸಹ ಗ್ರೇಟಾಳನ್ನು ಅಪಹಾಸ್ಯ ಮಾಡಿದ್ದರು. ಕೆನಡಾದ ಸಂಸತ್ ಸದಸ್ಯ ಮ್ಯಾಕ್ಸಿಮ್ ಬರ್ನಿಯರ್ ಒಂದು ಹೆಜ್ಜೆ ಮುಂದೆ ಹೋಗಿ ಆಕೆ ಅಲಾರಮಿಸ್ಟ್ ಮತ್ತು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ಟೀಕಿಸಿದ್ದರು. “ನಮ್ಮ ಹಕ್ಕೊತ್ತಾಯಗಳನ್ನು ನಿಭಾಯಿಸಲು ಸಾಧ್ಯವಾಗದವರು ಮಾತ್ರ ಮಕ್ಕಳ ಅಪಹಾಸ್ಯ ಮಾಡುತ್ತಾರೆ” ಎಂದು ಥನ್ಬರ್ಗ್ ಪ್ರತಿಕ್ರಿಯೆ ನೀಡಿದ್ದರು.

ಒಂದು ವರ್ಷದ ಹಿಂದೆ ಸ್ವೀಡಿಷ್ ಸಂಸತ್ತಿನ ಹೊರಗೆ ಥನ್‌ಬರ್ಗ್‌ರ ಏಕಾಂತ ಪ್ರತಿಭಟನೆಯಿಂದ ಪ್ರೇರಿತರಾಗಿ, ಹವಾಮಾನ ವೈಪರೀತ್ಯದ ಬಗ್ಗೆ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಲಕ್ಷಾಂತರ ಜನರು ಜಗತ್ತಿನಾದ್ಯಂತ ಇಂದು ಬೀದಿಗಿಳಿದಿದ್ದಾರೆ.

“ನೀವು ನನ್ನ ಕನಸುಗಳನ್ನು ಮತ್ತು ನನ್ನ ಬಾಲ್ಯವನ್ನು ನಿಮ್ಮ ಖಾಲಿ ಮಾತುಗಳಿಂದ ಕದ್ದಿದ್ದೀರಿ” ಎಂದು ಗ್ರೇಟಾ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರು.

ಈ ವಾರದ ಆರಂಭದಲ್ಲಿ, ರಷ್ಯಾದ ಸಂಸತ್ತಿನ ಸದಸ್ಯ ಡುಮಾ ಭಾಷಣ ಮಾಡಲು ಥನ್‌ಬರ್ಗ್‌ರನ್ನು ರಷ್ಯಾಕ್ಕೆ ಆಹ್ವಾನಿಸಿದ್ದರು.

ಸ್ವೀಡನ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾರವರು ವಿಶ್ವಸಂಸ್ಥೆಯಲ್ಲಿ ಮಾಡಿದ್ದ ’ನಿಮಗೆಷ್ಟು ಧೈರ್ಯ?’ ಭಾಷಣಕ್ಕೆ ಲಕ್ಷಾಂಜರ ಜನ ತಲೆ ತೂಗಿದ್ದರು. ಗ್ರೇಟಾಳ ಧೈರ್ಯ, ಆಲೋಚನೆ’ಳು ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯವನ್ನು ಕಸಿದು ಬಿಟ್ಟಿರಿ ಎಂದು ಗ್ರೇಟಾ ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...