Homeಕರ್ನಾಟಕಮೃಗಾಲಯಗಳು, ರಕ್ಷಣಾ ಕೇಂದ್ರಗಳು ಪ್ರಾಣಿಗಳಿಗೆ ಜೈಲುಗಳಾಗುತ್ತಿವೆ: ತಜ್ಞರು

ಮೃಗಾಲಯಗಳು, ರಕ್ಷಣಾ ಕೇಂದ್ರಗಳು ಪ್ರಾಣಿಗಳಿಗೆ ಜೈಲುಗಳಾಗುತ್ತಿವೆ: ತಜ್ಞರು

- Advertisement -
- Advertisement -

ರಾಜ್ಯದ ಮೃಗಾಲಯಗಳು ಮತ್ತು ಪ್ರಾಣಿ ರಕ್ಷಣಾ ಕೇಂದ್ರಗಳು ಪ್ರಾಣಿಗಳಿಗೆ ಜೈಲುಗಳಾಗುತ್ತಿವೆ. ರಕ್ಷಣಾ ಕೇಂದ್ರಗಳಲ್ಲಿ ಪ್ರಾಣಿಗಳು ಶಾಶ್ವತ ಖೈದಿಗಳಾಗುವುದನ್ನು ಕಡಿಮೆ ಮಾಡಲು ಸರಿಯಾದ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪ್ರಾಣಿ ಸಂರಕ್ಷಣಾಕಾರರು ಒತ್ತಾಯಿಸಿದ್ದಾರೆ.

ಮಾಂಸಾಹಾರಿ ಪ್ರಾಣಿಗಳಿಗೆ ಈ ಪ್ರಾಣಿ ರಕ್ಷಣಾ ಕೇಂದ್ರಗಳಲ್ಲಿ ನೀಡುವ ವಸತಿ ಸೌಕರ್ಯಗಳ ಬಗ್ಗೆ ತಾರತಮ್ಯವಿದೆ. ಹೊರ ಭಾಗಗಳಿಂದ ರಕ್ಷಿಸಲಾಗುವ ಎಲ್ಲಾ ಹುಲಿಗಳನ್ನು ಮೈಸೂರು ರಕ್ಷಣಾ ಕೇಂದ್ರಕ್ಕೆ ಮತ್ತು ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗುತ್ತದೆ. ಹೀಗಾಗಿ, ಬನ್ನೇರುಘಟ್ಟ ರಕ್ಷಣಾ ಕೇಂದ್ರದಲ್ಲಿ 35 ಚಿರತೆಗಳಿದ್ದರೆ, ಮೈಸೂರು ರಕ್ಷಣಾ ಕೇಂದ್ರದಲ್ಲಿ ಸುಮಾರು 8 ರಿಂದ 10 ಹುಲಿಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವೇ ದಿನಗಳಲ್ಲಿ ಬೆಂಗಳೂರಿನ ವಿವಿಧೆಡೆಯಿಂದ ಮೂರು ಚಿರತೆಗಳನ್ನು ರಕ್ಷಿಸಲಾಗಿದೆ. ಅಕ್ಟೋಬರ್ 21 ರಂದು ಗಾಯಗೊಂಡಿದ್ದ ಹುಲಿಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಮೈಸೂರು ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಮೈಸೂರು ರಕ್ಷಣಾ ಕೇಂದ್ರದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಸಿಕ್ಕ ಗಾಯಗೊಂಡ ಹುಲಿಯನ್ನು ಬನ್ನೇರುಘಟ್ಟ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅನಾಮಧೇಯ ಪಶುವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಜುಮ್ಮೆನಿಸುವ ದೃಶ್ಯ: ತಮ್ಮ ಜೀವ ಲೆಕ್ಕಿಸದೆ ಸಿನಿಮೀಯ ರೀತಿಯಲ್ಲಿ ತಾಯಿ-ಮಗುವನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

“ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ನಿಯಮಗಳ ಪ್ರಕಾರ, ರಕ್ಷಿಸಿದ ಕಾಡು ಪ್ರಾಣಿಗಳನ್ನು ಮೃಗಾಲಯಗಳಲ್ಲಿ ಪ್ರದರ್ಶನಕ್ಕೆ ಇಡುವಂತಿಲ್ಲ. ಅವುಗಳನ್ನು ಬೋನ್‌ಗಳಲ್ಲಿ ಇಟ್ಟರೆ, ಈ ಪ್ರಾಣಿಗಳು ತಮ್ಮ ಜೀವನದುದ್ದಕ್ಕೂ ಕೈದಿಗಳಂತೆ ಸೆರೆಯಲ್ಲಿ ಉಳಿಯುತ್ತವೆ. ರೈತರು ತಮ್ಮ ಭತ್ತ, ಕಬ್ಬು ಮತ್ತು ಇತರ ಗದ್ದೆಗಳಲ್ಲಿ ಚಿರತೆಗಳ ಕೊರಗುತ್ತಿರುವುದನ್ನು ಗಮನಿಸಿದ್ದಾರೆ. ಆದರೆ, ಅವುಗಳನ್ನು ಅವುಗಳ ತಾಯಿ ಬಿಟ್ಟು ಹೋಗಿರಬೇಕು ಎಂದು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಮರಿಗಳು ಬೇಟೆಯಾಡಲು ಅಥವಾ ಉತ್ತಮ ಸುರಕ್ಷಿತ ಸ್ಥಳವನ್ನು ಹುಡುಕಲು ಯತ್ನಿಸುತ್ತಿರುವಾಗ, ಮನುಷ್ಯರು ಅವುಗಳನ್ನು ಮೃಗಾಲಯಗಳಿಗೆ ತಲುಪಿಸುತ್ತಿದ್ದಾರೆ. ಹೀಗಾಗಿ, ಅವುಗಳನ್ನು ಕಾಡಿನಲ್ಲಿ ಬಿಡಲಾಗುವುದಿಲ್ಲ. ಅಂತಹ ಮರಿಗಳು ಬದುಕುಳಿಯುವುದಿಲ್ಲ. ಹಾಗಾಗಿ ಅವು ಕೂಡ ರಕ್ಷಣಾ ಕೇಂದ್ರದಲ್ಲಿ ಉಳಿಯುತ್ತವೆ” ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶುವೈದ್ಯರ ಪ್ರೋಟೋಕಾಲ್ ಪ್ರಕಾರ, ಕೋರೆಹಲ್ಲುಗಳು ಅಥವಾ ಉಗುರುಗಳು ಮುರಿದುಹೋದ, ತೀವ್ರವಾಗಿ ಗಾಯಗೊಂಡ, ಬೇಟೆಯಾಡಲು ಸಾಧ್ಯವಾಗದಂತಹ ಪ್ರಾಣಿಗಳನ್ನು ಮಾತ್ರ ಸೆರೆಹಿಡಿದು ರಕ್ಷಣಾ ಕೇಂದ್ರಗಳಲ್ಲಿ ಇರಿಸಬೇಕು.

“ಸೆರೆಯಲ್ಲಿರುವ 50% ರಷ್ಟು ಪ್ರಾಣಿಗಳನ್ನು ಮೃಗಾಲಯಗಳಿಂದ ಬಿಡುಗಡೆ ಮಾಡಲು ಯೋಗ್ಯವಾಗಿವೆ. ಆದರೆ, ಸೆರೆಯಲ್ಲಿ ಉಳಿದಿವೆ. ಆದ್ದರಿಂದ, ಅವುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರವು ಕಠಿಣ ರಕ್ಷಣಾ ಮತ್ತು ಪುನರ್ವಸತಿ ನಿಯಮಗಳನ್ನು ರೂಪಿಸಬೇಕು” ಎಂದು ಹಿರಿಯ ಅರಣ್ಯ ಇಲಾಖೆಯ ಪಶುವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ: ಇರುವ ಮನೆಗಳ ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಹಂಚುವುದು ಯಾವ ನ್ಯಾಯ?: ಬಿಡಿಎ ವಿರುದ್ಧ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...