ಮುಂಬೈ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ವಿಚಾರಣೆ ನಾಳೆಗೆ ಮುಂದೂಡಿಕೆ

ಮುಂಬೈ ಡ್ರಗ್ಸ್ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ ಬುಧವಾರವೂ ಜಾಮೀನು ದೊರೆತಿಲ್ಲ. ಜಾಮೀನು ವಿಚಾರಣೆ ನಾಳೆ ಮಧ್ಯಾಹ್ನ 2:30ರ ಬಳಿಕ ನಡೆಯಲಿದೆ.

ಮಾದಕ ದ್ರವ್ಯ ವಿರೋಧಿ ಸಂಸ್ಥೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ನಾಳೆ ಉತ್ತರಿಸಲಿದ್ದಾರೆ. ವಾದವನ್ನು ಮುಕ್ತಾಯಗೊಳಿಸಲು ಒಂದು ಗಂಟೆ ತೆಗೆದುಕೊಳ್ಳುತ್ತೇನೆ ಎಂದು ಅನಿಲ್ ಸಿಂಗ್ ಹೇಳಿದ್ದಾರೆ.

ಆರೋಪಿಗಳ ಪರ ವಕೀಲರಾದ ಅಮಿತ್ ದೇಸಾಯಿ, ಮುಕುಲ್ ರೋಹಟಗಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ವಾದ ಮಂಡಿಸಿದರು. ಆರೋಪಿ ಅರ್ಬಾಜ್ ಮರ್ಚೆಂಟ್ ಪರ ವಾದ ಮಂಡಿಸಿದ ಅಮಿತ್ ದೇಸಾಯಿ, ಬಂಧಿತ ವ್ಯಕ್ತಿಗಳಿಗೆ ಅವರ ಬಂಧನದ ಕಾರಣವನ್ನು ತಿಳಿಸಬೇಕು ಎಂದು ಹೇಳಿದರು.

ಮಂಗಳವಾರ (ಅ.26) ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು. ಮಂಗಳವಾರ ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ‘Black Lives Matters’ ಬೆಂಬಲಿಸಿ ಮಂಡಿಯೂರಿದ ಭಾರತೀಯ ಕ್ರಿಕೆಟಿಗರು: ಮಿಶ್ರ ಪ್ರತಿಕ್ರಿಯೆ

ಆರ್ಯನ್ ಖಾನ್ ಅಕ್ಟೋಬರ್ 8 ರಿಂದ ಜೈಲಿನಲ್ಲಿದ್ದಾರೆ. ಅಕ್ಟೋಬರ್ 2 ರಂದು ಎನ್‌ಸಿಬಿಯಿಂದ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ಡ್ರಗ್ ದಾಳಿಯ ನಂತರ ಅವರನ್ನು ಬಂಧಿಸಲಾಯಿಗಿತ್ತು.

ಆರ್ಯನ್ ಖಾನ್ ಅವರಿಗೆ ಈ ಹಿಂದೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿದೆ. ಕಳೆದ ವಾರ ಅವರಿಗೆ ಜಾಮೀನು ನಿರಾಕರಿಸಿದ ವಿಶೇಷ ಮಾದಕ ದ್ರವ್ಯ ವಿರೋಧಿ ನ್ಯಾಯಾಲಯವು ತನ್ನ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನ ಶೂನಲ್ಲಿ ಚರಸ್ ಅಡಗಿರುವ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಹೇಳಿದೆ.

ಪ್ರಕರಣದಲ್ಲಿ ಆರ್ಯನ್ ಆಖನ್, ಅರ್ಬಾಜ್ ಮರ್ಚೆಂಟ್ ಮತ್ತು ಇತರ 18 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಪ್ರಕರಣದಲ್ಲಿ ಲಂಚದ ಆರೋಪ ಕೂಡ ಕೇಳಿ ಬಂದಿದೆ.

ಆರ್ಯನ್ ಖಾನ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಖಾಸಗಿ ತನಿಖಾಧಿಕಾರಿ ಕೆ.ಪಿ ಗೋಸಾವಿಯ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಳ್ಳುವ ಪ್ರಭಾಕರ್ ಸೈಲ್, ಅಕ್ಟೋಬರ್ 3 ರಂದು ಸ್ಯಾಮ್ ಡಿಸೋಜಾ ಮತ್ತು ಕೆ.ಪಿ ಗೋಸಾವಿ ನಡುವೆ 18 ಕೋಟಿ ರೂಪಾಯಿ ಒಪ್ಪಂದದ ಬಗ್ಗೆ ನಡೆದ ಸಂಭಾಷಣೆಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇದರಲ್ಲಿ 8 ಕೋಟಿ ರೂಪಾಯಿಗಳನ್ನು ಎನ್‌ಸಿಬಿ ಅಧಿಕಾರಿ  ಸಮೀರ್ ವಾಂಖೆಡೆಗೆ ನೀಡಬೇಕಾಗುತ್ತದೆ ಎಂದು ಹೇಳಿದ್ದರು ಎಂದ ಆರೋಪಿಸಿದ್ದಾರೆ.


ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣದ ಸಾಕ್ಷಿ, ಬಿಜೆಪಿ ಕಾರ್ಯಕರ್ತ, ಎನ್‌ಸಿಬಿ ಅಧಿಕಾರಿ ಮಾತುಕತೆಯ ಪೋಟೋಗಳು ವೈರಲ್

LEAVE A REPLY

Please enter your comment!
Please enter your name here