ಫೇಸ್ ಬುಕ್‍ನಲ್ಲಿ ಫೇಮಸ್ ಆಗಿರುವ ಕ್ರೀಡಾಪಟು, ಸಿನಿಮಾ ನಟರು ಮತ್ತು ರಾಜಕರಾಣಿಗಳು

ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

0

| ನಾನುಗೌರಿ ಡೆಸ್ಕ್ |

ನಾಯಕರಿಗಿರುವ ಫಾಲೋವರ್ಸ್‍ಗಳ ಸಂಖ್ಯೆಯು ಅವರು ಸಮಾಜದಲ್ಲಿ ಬೀರುವ ಪ್ರಭಾವವನ್ನು ಸಹ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಫೇಸ್ ಬುಕ್‍ನಲ್ಲಿ ಯಾವ ಯಾವ ಸ್ಟಾರ್‍ಗೆ ಎಷ್ಟೆಷ್ಟು ಜನ ಫಾಲೋವರ್ಸ್ ಇದ್ದಾರೆ ಎಂದು ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರಿ.. ಇನ್ನೇಕೆ ತಡ ನೋಡಿಬಿಡಿ. ಕ್ರೀಡೆ, ಸಿನಿಮಾ ಮತ್ತು ರಾಜಕೀಯ ಸೆಲೆಬ್ರೆಟಿಗಳನ್ನು ನೋಡೋಣ.

ಯುವಜನರ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಯ್ಲಿಗೆ ಫೇಸ್ ಬುಕ್ ನಲ್ಲಿ 3 ಕೋಟಿ 71 ಲಕ್ಷ ಬೆಂಬಲಿಗರಿದ್ದರೆ, ಸಚಿನ್ ತೆಂಡೂಲ್ಕರ್‍ಗೆ 2 ಕೋಟಿ 84 ಲಕ್ಷ ಜನ ಫಾಲೋವರ್ಸ್ ಇದ್ದಾರೆ. ಮಹೇಂದ್ರ ಸಿಂಗ್ ಧೋನಿ ಪೇಜ್‍ಗೆ 2 ಕೋಟಿ 4 ಲಕ್ಷ ಲೈಕ್ಸ್ ಇವೆ. ಯುವರಾಜ್ ಸಿಂಗ್‍ಗೆ 1ಕೋಟಿ 45 ಲಕ್ಷ, ವೀರೇಂದರ್ ಸೆಹ್ವಾಗ್‍ಗೆ 1ಕೋಟಿ 43 ಲಕ್ಷ, ರೋಹಿತ್ ಶರ್ಮಾಗೆ 1ಕೋಟಿ 9 ಲಕ್ಷ ಬೆಂಬಲಿಗರಿದ್ದಾರೆ. ಇನ್ನು ಭಾರತದ ಟೆನಿಸ್ ತಾರೆ ಸಾನಿಯ ಮಿರ್ಜಾಗೆ 1ಕೋಟಿ 24 ಲಕ್ಷ ಫಾಲೋವರ್ಸ್ ಇದ್ದರೆ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‍ಗೆ 78ಲಕ್ಷ ಲೈಕ್ಸ್ ಇವೆ.

ಸಿನಿಮಾ ತಾರೆಯರಲ್ಲಿ ಪ್ರಿಯಾಂಕ ಚೋಪ್ರಾಗೆ ಬರೋಬ್ಬರಿ 4ಕೋಟಿ ಫಾಲೋವರ್ಸ್ ಇದ್ದಾರೆ. ಇನ್ನುಳಿದಂತೆ ಸಲ್ಮಾನ್ ಖಾನ್ ಗೆ 3ಕೋಟಿ, 63ಲಕ್ಷ, ದೀಪಿಕಾ ಪಡುಕೋಣೆಗೆ 3ಕೋಟಿ, 42 ಲಕ್ಷ, ಅಮಿತಾಬ್ ಬಚ್ಚನ್‍ಗೆ 3ಕೋಟಿ 2 ಲಕ್ಷ, ಶಾರುಕ್ ಖಾನ್‍ಗೆ 2ಕೋಟಿ 94 ಲಕ್ಷ, ಶ್ರೇಯಾ ಘೋಷಾಲ್‍ಗೆ 2ಕೋಟಿ 77 ಲಕ್ಷ, ಮಾಧುರಿ ದಿಕ್ಷಿತ್‍ಗೆ 2ಕೋಟಿ 57 ಲಕ್ಷ, ಅಮಿರ್ ಖಾನ್‍ಗೆ 1ಕೋಟಿ 55 ಲಕ್ಷ, ಕತ್ರಿನಾ ಕೈಫ್‍ಗೆ 1ಕೋಟಿ 41 ಲಕ್ಷ ಫ್ಯಾನ್ಸ್ ಇದ್ದಾರೆ.

ರಾಜಕೀಯ ವ್ಯಕ್ತಿಗಳಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೇಸ್ ಬುಕ್ ನಲ್ಲಿ 4 ಕೋಟಿ 39 ಲಕ್ಷ ಫಾಲೋವರ್ಸ್ ಇದ್ದಾರೆ. ಅಮಿತ್ ಶಾಗೆ 1ಕೋಟಿ 44 ಲಕ್ಷ, ದೇವೇಂದ್ರ ಫಡ್ನಾವಿಸ್ 92 ಲಕ್ಷ, ಅರವಿಂದ್ ಕೇಜ್ರಿವಾಲ್‍ಗೆ 71 ಲಕ್ಷ, ಗೌತಮ್ ಗಂಭೀರ್ 69 ಲಕ್ಷ, ಅಖಿಲೇಶ್ ಯಾದವ್ 68 ಲಕ್ಷ, ರಾಜ್‍ನಾಥ್ ಸಿಂಗ್ 68 ಲಕ್ಷ, ಕಮಲ್ ಹಾಸನ್ 35 ಲಕ್ಷ, ಮಮತಾ ಬ್ಯಾನರ್ಜಿ 30 ಲಕ್ಷ, ರಾಹುಲ್ ಗಾಂಧಿ 28 ಲಕ್ಷ, ಅಸಾದ್ದೀನ್ ಒವೈಸಿಗೆ 26 ಲಕ್ಷ, ಎಂ.ಕೆ ಸ್ಟ್ಯಾಲಿನ್ 20 ಲಕ್ಷ, ಚಂದ್ರಬಾಬು ನಾಯ್ಡು 18 ಲಕ್ಷ, ಜಗನ್ ಮೋಹನ್ ರೆಡ್ಡಿ 17 ಲಕ್ಷ, ನವೀನ್ ಪಟ್ನಾಯಕ್ 14 ಲಕ್ಷ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

ಕರ್ನಾಟಕಕ್ಕೆ ಬರುವುದಾದರೆ ಪ್ರಕಾಶ್ ರಾಜ್‍ರವರಿಗೆ 44 ಲಕ್ಷ, ಯಡಿಯೂರಪ್ಪನವರಿಗೆ 17 ಲಕ್ಷ, ರಮ್ಯ ದಿವ್ಯ ಸ್ಪಂದನರವರಿಗೆ 15 ಲಕ್ಷ, ಡಿ.ಕೆ ಶಿವಕುಮಾರ್‍ಗೆ 5 ಲಕ್ಷ, ಎಚ್.ಡಿ ಕುಮಾರಸ್ವಾಮಿರವರಿಗೆ 2 ಲಕ್ಷ, ಸಿದ್ದರಾಮಯ್ಯನವರಿಗೆ 2 ಲಕ್ಷ, ಎಚ್.ಡಿ ದೇವೇಗೌಡರಿಗೆ 1 ಲಕ್ಷ ಅಭಿಮಾನಿಗಳಿದ್ದಾರೆ.

ಸಿನಿಮಾ ನಟರಲ್ಲಿ ಹರಿಪ್ರಿಯಾಗೆ 21 ಲಕ್ಷ, ದರ್ಶನ್ ತೂಗುದೀಪ್‍ಗೆ 12 ಲಕ್ಷ, ರಾಧಿಕ ಪಂಡಿತ್‍ಗೆ 9 ಲಕ್ಷ, ಯಶ್‍ಗೆ 7ಲಕ್ಷ, ಪುನೀತ್ ರಾಜ್‍ಕುಮಾರ್‍ರವರಿಗೆ 7 ಲಕ್ಷ, ಸುದೀಪ್‍ರವರ ಫ್ಯಾನ್ಸ್ ಅಸೋಷಿಯೇಷನ್ ಪೇಜ್ ಗೆ 14 ಲಕ್ಷ ಫಾಲೋವರ್ಸ್ ಇದ್ದಾರೆ.

ಇದರಲ್ಲಿ ಕೆಲವು ರಾಜಕಾರಣಿಗಳು ದುಡ್ಡು ಕೊಟ್ಟು ಕೆಲವು ಪೇಜ್‍ಗಳನ್ನು ಖರೀದಿಸಿ ನಂತರ ಅವರ ಹೆಸರಾಗಿ ಮಾರ್ಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮತ್ತೆ ಕೆಲವು ರಾಜಕಾರಣಿಗಳು ಸಾಕಷ್ಟು ದುಡ್ಡು ಖರ್ಚು ಮಾಡಿ ತಮ್ಮ ಪೇಜ್ ಅನ್ನು ಪ್ರಮೋಷನ್ ಮಾಡಿಸಿರುತ್ತಾರೆ. ಹಾಗೆಯೇ ಟ್ವಿಟ್ಟರ್‍ನಲ್ಲಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವವರಲ್ಲಿ ಶೇ.60 ರಷ್ಟ್ಟು ಫೇಕ್ ಅಕೌಂಟ್‍ಗಳೇ ಇವೆ ನ್ಯೂಇಂಡಿಯನ್ ಎಕ್ಸ್‍ಪ್ರೆಸ್, ಡೈಲಿಯೊ, ಎಸ್.ಬಿ.ಎಸ್ ಮುಂತಾದ ನಿಯತಕಾಲಿಕಗಳು ವರದಿ ಮಾಡಿವೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here