Homeಮುಖಪುಟಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

- Advertisement -
- Advertisement -

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿನ ಕುರಿತು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತೀವ್ರ ಕಳವಳ ಹಾಗೂ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಮಾಡಿದೆ.  

ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿದ ಆದೇಶದಲ್ಲಿ ಕಾನೂನು ತತ್ವಗಳನ್ನು ಸರಿಯಾಗಿ ಅನ್ವಯಿಸಿಲ್ಲ ಮತ್ತು ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಪೀಠ ಹೇಳಿದೆ.

2021ರ ಕೆ.ಎ ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪನ್ನು ಖಾಲಿದ್‌ಗೆ ಜಾಮೀನು ನಿರಾಕರಿಸಿದ ಪೀಠ ಕಡೆಗಣಿಸಿದೆ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಆಕ್ಷೇಪಿಸಿದ್ದಾರೆ. ನಜೀಬ್ ಪ್ರಕರಣದ ತೀರ್ಪಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯ ಪ್ರಕರಣಗಳಲ್ಲಿ ಸುದೀರ್ಘ ಅವಧಿಯವರೆಗೆ ವಿಚಾರಣೆ ವಿಳಂಬವಾಗುವುದನ್ನು ಜಾಮೀನು ನೀಡಲು ಒಂದು ಪ್ರಮುಖ ಆಧಾರವಾಗಿ ಪರಿಗಣಿಸಲಾಗಿತ್ತು.

2024ರ ‘ಗುರ್ವಿಂದರ್ ಸಿಂಗ್ VS ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ಪೀಠ ನೀಡಿದ್ದ ತೀರ್ಪಿನ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಏಕೆಂದರೆ, ಆ ತೀರ್ಪಿನಲ್ಲಿಯೂ ನಜೀಬ್ ಪ್ರಕರಣದ ತೀರ್ಪನ್ನು ಅನ್ವಯಿಸಿರಲಿಲ್ಲ ಎಂಬುವುದಾಗಿ ತಿಳಿಸಿದೆ ಎಂದು livelaw.in ವಿವರಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಸೈಯದ್ ಇಫ್ತಿಕಾರ್ ಅಂದ್ರಾವಿ ಎಂಬವರಿಗೆ ಜಾಮೀನು ಮಂಜೂರು ಮಾಡುವಾಗ ಈ ಅವಲೋಕನಗಳನ್ನು ಮಾಡಿದೆ. ಮಾದಕ ದ್ರವ್ಯಗಳ ಪೂರೈಕೆಯ ಮೂಲಕ ಭಯೋತ್ಪಾದನೆಗೆ ಧನಸಹಾಯ ನೀಡಿದ ಆರೋಪದ ಮೇಲೆ ಯುಎಪಿಎ ಅಡಿ ಬಂಧಿತರಾದ ಅಂದ್ರಾವಿ, 6 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು.

ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ರ ಅಡಿಯಲ್ಲಿ ಕಠಿಣ ನಿಯಮಗಳಿದ್ದಾಗ್ಯೂ, ಸುದೀರ್ಘ ಅವಧಿಯ ಬಂಧನವು ಸಾಂವಿಧಾನಿಕ ನ್ಯಾಯಾಲಯಗಳು ಜಾಮೀನು ನೀಡಲು ಒಂದು ಪ್ರಮುಖ ಆಧಾರವಾಗಿದೆ ಎಂದು ಕೆ.ಎ ನಜೀಬ್ ಪ್ರಕರಣದ ಮೂವರು ನ್ಯಾಯಾಧೀಶರ ಪೀಠ ಸ್ಪಷ್ಟವಾಗಿ ಹೇಳಿರುವುದನ್ನು ನ್ಯಾಯಮೂರ್ತಿ ಭುಯಾನ್ ಉಲ್ಲೇಖಿಸಿದ್ದಾರೆ. ಗುರ್ವಿಂದರ್ ಸಿಂಗ್ ಮತ್ತು ಗುಲ್ಫಿಶಾ ಫಾತಿಮಾ ಪ್ರಕರಣಗಳಲ್ಲಿ(ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ) ಇಬ್ಬರು ನ್ಯಾಯಾಧೀಶರ ಪೀಠಗಳು ನೀಡಿದ ತೀರ್ಪುಗಳು ಸ್ವಲ್ಪ ಭಿನ್ನವಾದ ನಿಲುವನ್ನು ತಳೆದಿವೆ ಎಂದಿದ್ದಾರೆ.

ಗಮನಾರ್ಹವಾಗಿ, ನ್ಯಾಯಪೀಠವು ‘ಗುರ್ವಿಂದರ್ ಸಿಂಗ್’ ಮತ್ತು ‘ಗುಲ್ಫಿಶಾ ಫಾತಿಮಾ’ ಪ್ರಕರಣಗಳಲ್ಲಿ ತಳೆದ ನಿಲುವುಗಳನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದೆ.

"ಕಡಿಮೆ ಸಂಖ್ಯೆಯ ನ್ಯಾಯಾಧೀಶರ ಪೀಠ ನೀಡಿದ ತೀರ್ಪು, ಹೆಚ್ಚಿನ ಸಂಖ್ಯೆಯ ನ್ಯಾಯಾಧೀಶರ ಪೀಠ ಘೋಷಿಸಿದ ಕಾನೂನಿಗೆ ಬದ್ಧವಾಗಿರುತ್ತದೆ. ನ್ಯಾಯಾಂಗ ಶಿಸ್ತು ಅಂತಹ ಬದ್ಧ ತೀರ್ಪನ್ನು ಪಾಲಿಸಬೇಕೆಂದು ಕಡ್ಡಾಯಗೊಳಿಸುತ್ತದೆ ಅಥವಾ ಅದರ ಬಗ್ಗೆ ಸಂದೇಹವಿದ್ದರೆ, ಅದನ್ನು ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕಾಗುತ್ತದೆ. ಸಣ್ಣ ಪೀಠ ದೊಡ್ಡ ಪೀಠದ ತೀರ್ಪಿನ ಸಾರವನ್ನು (ರೇಷಿಯೋ) ದುರ್ಬಲಗೊಳಿಸಲು, ತಪ್ಪಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಭುಯಾನ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ನ್ಯಾಯಪೀಠವು, ಯುಎಪಿಎ ಅಡಿಯಲ್ಲಿ ಸುದೀರ್ಘ ಅವಧಿಯ ವಿಚಾರಣಾ ಪೂರ್ವ ಬಂಧನವನ್ನು ಸಮರ್ಥಿಸಲು ‘ಎನ್‌ಐಎ VS ಜಹೂರ್ ಅಹಮದ್ ಶಾ ವತಾಲಿ’ (2019) ಪ್ರಕರಣದ ನಜೀಬ್-ಪೂರ್ವ ತೀರ್ಪನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ, ಯುಎಪಿಎ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸುವುದೇ ಒಂದು ಸಾಮಾನ್ಯ ನಿಯಮ ಎಂಬುದಾಗಿ ‘ವತಾಲಿ’ ತೀರ್ಪನ್ನು ಅರ್ಥೈಸಲು ‘ಗುರ್ವಿಂದರ್ ಸಿಂಗ್’ ಪ್ರಕರಣದಲ್ಲಿ ಮಾಡಲಾದ ಪ್ರಯತ್ನವನ್ನು ಒಪ್ಪಿಕೊಳ್ಳುವುದು ಕಷ್ಟಕರವಾಗಿದೆ ಎಂದು ತಿಳಿಸಿದೆ.

‘ಗುರ್ವಿಂದರ್ ಸಿಂಗ್’ ಪ್ರಕರಣದಲ್ಲಿ ರೂಪಿಸಲಾದ ‘ಎರಡು ಹಂತದ’ (ಟೂ-ಪ್ರಾಂಗ್) ಪರೀಕ್ಷೆಯು ಯುಎಪಿಎ ಕಾಯ್ದೆಯಿಂದಾಗಲಿ ಅಥವಾ ‘ಕೆ.ಎ ನಜೀಬ್’ ತೀರ್ಪಿನಿಂದಾಗಲಿ ಬಂದಿದ್ದಲ್ಲ ಎಂದೂ ನ್ಯಾಯಪೀಠವು ಹೇಳಿದೆ. ಈ ಎರಡು ಹಂತದ ಪರೀಕ್ಷೆಯ ಪ್ರಕಾರ, ಆರೋಪಿಯು ತನ್ನ ಮೇಲಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಯಾವುದೇ ಹುರುಳಿಲ್ಲ (prima facie merit) ಎಂದು ಸಾಬೀತುಪಡಿಸಿದರೆ ಮಾತ್ರ ಜಾಮೀನನ್ನು ಪರಿಗಣಿಸಲಾಗುತ್ತದೆ. ಆದರೆ, ಇತರ ಯಾವುದೇ ಅಂಶಗಳನ್ನು ಲೆಕ್ಕಿಸದೆ, ವಿಚಾರಣೆಯಲ್ಲಿ ಸುದೀರ್ಘ ವಿಳಂಬವಾಗಿದ್ದರೆ ಜಾಮೀನನ್ನು ಪರಿಗಣಿಸಬೇಕು ಎಂಬ ‘ನಜೀಬ್’ ಪ್ರಕರಣದ ನಿಲುವಿಗೆ ಇದು ಸ್ಪಷ್ಟವಾಗಿ ವಿರುದ್ಧವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.

ಈ ಎರಡು ಹಂತದ ಪರೀಕ್ಷೆಯನ್ನು ಅಳವಡಿಸಿಕೊಳ್ಳುವುದರ ಅಪಾಯವನ್ನು ಎತ್ತಿ ತೋರಿಸುತ್ತಾ, ನ್ಯಾಯಮೂರ್ತಿ ಭುಯಾನ್ ಅವರ ತೀರ್ಪು ಹೀಗೆ ಹೇಳಿದೆ:

"ಒಂದು ವೇಳೆ ಈ ಪರೀಕ್ಷೆಯನ್ನು (ಟೂ-ಪ್ರಾಂಗ್) ಒಪ್ಪಿಕೊಂಡರೆ, ರಾಜ್ಯವು (ಪ್ರಾಸಿಕ್ಯೂಷನ್) ಕೇವಲ ಮೇಲ್ನೋಟದ ಕನಿಷ್ಠ ಅರ್ಹತೆಯನ್ನು ಸಾಬೀತುಪಡಿಸಿದರೆ ಸಾಕು ವಿಚಾರಣೆಯು ವರ್ಷಗಟ್ಟಲೆ ಮುಂದುವರಿಯಬಹುದು. ಇದರ ಪರಿಣಾಮವಾಗಿ, ವಿಚಾರಣಾ ಪೂರ್ವ ಬಂಧನವು ಶಿಕ್ಷೆಯ ನಂತರದ ದಂಡನಾತ್ಮಕ ಸ್ವರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಅಂತಹ ಸಂದರ್ಭದಲ್ಲಿ, ಬಂಧನದ ಅವಧಿಯು ಎಷ್ಟೇ ದೀರ್ಘವಾಗಿದ್ದರೂ ಯಾವುದೇ ನ್ಯಾಯಾಲಯವು ಎಂದಿಗೂ ಜಾಮೀನು ನೀಡುವುದಿಲ್ಲ, ಏಕೆಂದರೆ ಪ್ರಕರಣವು ಮೇಲ್ನೋಟಕ್ಕೆ ಸತ್ಯವಾಗಿರುತ್ತದೆ." 

ಸೆಕ್ಷನ್ 43D(5) ಕೇವಲ ಜಾಮೀನು ನಿರಾಕರಿಸುವ ಏಕೈಕ ಮಾನದಂಡವಾಗಬಾರದು ಮತ್ತು ಇದರಿಂದಾಗಿ ಶೀಘ್ರ ವಿಚಾರಣೆಯ ಸಾಂವಿಧಾನಿಕ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಬಾರದು ಎಂದು ಎಚ್ಚರಿಸುವಾಗ, ‘ನಜೀಬ್’ ತೀರ್ಪು ನಿಖರವಾಗಿ ಇಂತಹ ಪರಿಸ್ಥಿತಿ ಉದ್ಭವಿಸುವುದನ್ನು ತಡೆಯಲು ಪ್ರಯತ್ನಿಸುತ್ತಿತ್ತು ಎಂಬುದು ಅದರ ಸರಳ ಓದಿನಿಂದಲೇ ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

‘ಗುಲ್ಫಿಶಾ ಫಾತಿಮಾ’ ತೀರ್ಪಿಗೆ ಅಸಮ್ಮತಿ

‘ನಜೀಬ್’ ತೀರ್ಪಿನ ತತ್ವವು ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಕ್ಕಾಗಿ ನ್ಯಾಯಪೀಠವು ‘ಗುಲ್ಫಿಶಾ ಫಾತಿಮಾ’ ತೀರ್ಪಿನ ಬಗ್ಗೆಯೂ ತನ್ನ ನಿರ್ದಿಷ್ಟ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ.

‘ಕೆ.ಎ. ನಜೀಬ್’ ತೀರ್ಪು ಎಲ್ಲರನ್ನೂ ಬಾಧಿಸುವ ಕಾನೂನಾಗಿದೆ (binding law) ಮತ್ತು ಇದು ಪೂರ್ವ ನಿರ್ಧರಿತ ತೀರ್ಪಿನ ಗೌರವದ ರಕ್ಷಣೆಗೆ (stare decisis) ಅರ್ಹವಾಗಿದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಇದನ್ನು ವಿಚಾರಣಾ ನ್ಯಾಯಾಲಯವಾಗಲಿ, ಹೈಕೋರ್ಟ್ ಆಗಲಿ ಅಥವಾ ಈ ನ್ಯಾಯಾಲಯದ ಕಡಿಮೆ ಸಂಖ್ಯೆಯ ನ್ಯಾಯಾಧೀಶರ ಪೀಠಗಳಾಗಲಿ ದುರ್ಬಲಗೊಳಿಸಲು, ತಪ್ಪಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಭುಯಾನ್ ಅವರು ಹೇಳಿದ್ದಾರೆ.

ನ್ಯಾಯಪೀಠವು, ಯುಎಪಿಎಯ ಸೆಕ್ಷನ್ 43D(5) ರ ಕಠಿಣ ನಿಯಮಗಳು ಜಾಮೀನು ಪಡೆಯುವುದನ್ನು ಬಹುಪಾಲು ಅಸಾಧ್ಯವಾಗಿಸಿವೆ ಮತ್ತು ಇದು ವಿಚಾರಣಾ ಪೂರ್ವ ಸುದೀರ್ಘ ಬಂಧನಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ನಿರ್ದಿಷ್ಟವಾಗಿ ಗಮನಿಸಿ ‘ಕೆ.ಎ. ನಜೀಬ್’ ತೀರ್ಪನ್ನು ನೀಡಲಾಗಿತ್ತು ಎಂಬುವುದನ್ನು ಉಲ್ಲೇಖಿಸಿದೆ.

ಸಂವಿಧಾನದ ವಿಧಿ 21ರ ಅಡಿಯಲ್ಲಿ ಖಾತರಿಪಡಿಸಲಾದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಗೆ ಕಾರಣವಾಗುವ ಇಂತಹ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿಯೇ, ವಿಚಾರಣೆಯ ವಿಳಂಬದಿಂದ ಉಂಟಾಗುವ ಸುದೀರ್ಘ ಬಂಧನವನ್ನು ಜಾಮೀನು ನೀಡಲು ಒಂದು ಪ್ರಮುಖ ಆಧಾರವಾಗಿ ‘ಕೆ.ಎ. ನಜೀಬ್’ ತೀರ್ಪಿನಲ್ಲಿ ಗುರುತಿಸಲಾಗಿತ್ತು ಎಂದು ಪೀಠವು ತಿಳಿಸಿದೆ.

ದೊಡ್ಡ ಪೀಠಗಳು ರೂಪಿಸಿದ ಪೂರ್ವಾಪರ ತೀರ್ಪುಗಳನ್ನು (precedents) ಬಹಿರಂಗವಾಗಿ ವಿರೋಧಿಸದೇ, ಸಣ್ಣ ಪೀಠಗಳು ಅವುಗಳ ಆಶಯವನ್ನು ಒಳಹೊರತಾಗಿ “ದುರ್ಬಲಗೊಳಿಸುವ” (hollowing out) ಪ್ರವೃತ್ತಿಯ ಬಗ್ಗೆ ನ್ಯಾಯಪೀಠವು ನಿರ್ದಿಷ್ಟವಾಗಿ ತನ್ನ ಅಸಮ್ಮತಿಯನ್ನು ದಾಖಲಿಸಿದೆ.

ಗಮನಾರ್ಹವಾಗಿ, ‘ಗುರ್ವಿಂದರ್ ಸಿಂಗ್’ ಮತ್ತು ‘ಗುಲ್ಫಿಶಾ ಫಾತಿಮಾ’ ಎರಡೂ ಪ್ರಕರಣಗಳ ತೀರ್ಪುಗಳನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರೇ ಬರೆದಿದ್ದರು.

ಯುಎಪಿಎ ಪ್ರಕರಣಗಳಲ್ಲೂ ಜಾಮೀನೇ ನಿಯಮ

ಯುಎಪಿಎ ಅಡಿಯ ಪ್ರಕರಣಗಳಲ್ಲೂ ‘ಜಾಮೀನು ನೀಡುವುದೇ ನಿಯಮ, ಜೈಲಿಗೆ ಕಳುಹಿಸುವುದು ಅಪವಾದ’ ಎಂಬುವುದು ಜಾರಿಯಲ್ಲಿರುತ್ತದೆ ಎಂದು ನ್ಯಾಯಪೀಠ ಪುನರುಚ್ಚರಿಸಿದೆ. ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ರ ಶಾಸನಬದ್ಧ ನಿಷೇಧವು ಸಂವಿಧಾನದ ವಿಧಿಯ (ವಿಧಿ 21ರ) ಖಾತರಿಗೆ ಒಳಪಟ್ಟಿರಬೇಕಾಗುತ್ತದೆ.

ಆದ್ದರಿಂದ, ಯುಎಪಿಎ ಅಡಿಯಲ್ಲೂ ಸಹ ಜಾಮೀನು ನೀಡುವುದು ನಿಯಮ ಮತ್ತು ಜೈಲಿಗೆ ಕಳುಹಿಸುವುದು ಅಪವಾದ ಎಂದು ಹೇಳಲು ನಮಗೆ ಯಾವುದೇ ರೀತಿಯ ಸಂಶಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.







 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

Test

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...