ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚಕ್ರಪಾನಿ “1,700 ಕ್ಕೂ ಹೆಚ್ಚು ಜನರನ್ನು ಕೊಂದ ಕೊರೊನ ವೈರಸ್ ಕೇವಲ ವೈರಸ್ ಅಲ್ಲ. ಅದು ಮಾಂಸಾಹಾರಿಗಳನ್ನು ಶಿಕ್ಷಿಸುವ ಅವತಾರ” ಎಂದು ಹೇಳುವ ಮೂಲಕ ನಗೆಪಾಟಲೀಗೀಡಾಗಿದ್ದಾರೆ.
ಕೊರೊನ ವೈರಸ್ ಅಲ್ಲ. ಅದು ಬಡ ಜೀವಿಗಳ ರಕ್ಷಣೆಗಾಗಿ ಬಂದ ಅವತಾರ ಎಂದು ಚಕ್ರಪಾನಿ ಹೇಳಿದ್ದಾರೆ. ಅದು ಮಾಂಸ ತಿನ್ನುವವರಿಗೆ ಮರಣ ಮತ್ತು ಶಿಕ್ಷೆಯ ಸಂದೇಶವನ್ನು ನೀಡಲು ಬಂದಿದೆ. ಅದು ಚೀನೀಯರಿಗೆ ಪ್ರಾಣಿಗಳನ್ನು ಕೊಲ್ಲಬಾರದು ಮತ್ತು ಸಸ್ಯಾಹಾರಿಗಳಾಗಬೇಕು ಎಂಬ ಪಾಠವನ್ನು ಕಲಿಸುತ್ತಿದೆ ಎಂದು ಹಿಂದೂ ಮಹಾಸಭಾ ನಾಯಕ ಹೇಳಿದ್ದಾರೆ.
ಕೊರೊನ ವೈರಸ್ ಹರಡುವುದನ್ನು ತಪ್ಪಿಸಲು ಚಕ್ರಪಾಣಿಯವರು ಒಂದು ಪರಿಹಾರವನ್ನು ಸಹ ಸೂಚಿಸಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕೂಡಲೇ “ಕೊರೊನ ವೈರಸ್ ವಿಗ್ರಹವನ್ನು ರಚಿಸಬೇಕು ಮತ್ತು ಅದರ ಕ್ಷಮೆ ಕೋರಬೇಕು”. ಆಗ ಅದರ “ಅವತಾರ” ದ ಕೋಪವನ್ನು ಶಾಂತಗೊಳಿಸುತ್ತದೆ ಎಂದು ಹೇಳಿದ್ದಾರೆ.
ತನ್ನ ಸಿದ್ಧಾಂತದ ಪ್ರಕಾರ ಭಾರತೀಯರು ವೈರಸ್‌ಗೆ ಹೆದರಬೇಕಾಗಿಲ್ಲ ಎಂದು ಚಕ್ರಪಾನಿ ಹೇಳಿದ್ದಾರೆ. ದೇವರ ಆರಾಧನೆ ಮತ್ತು ಗೋರಕ್ಷಣೆಯನ್ನು ನಂಬುವ ಭಾರತೀಯರು ವೈರಸ್‌ನಿಂದ ಪ್ರತಿರಕ್ಷಿತರಾಗಿದ್ದಾರೆ ಎಂದು ಅವರು ಹೇಳಿದರು.


