Homeಮುಖಪುಟಕವಿತೆಯೆಂಬ ಗುಬ್ಬಿಯ ಮೇಲೆ ಪ್ರಭುತ್ವವೆಂಬ ಹದ್ದಿನ ದಾಳಿ..

ಕವಿತೆಯೆಂಬ ಗುಬ್ಬಿಯ ಮೇಲೆ ಪ್ರಭುತ್ವವೆಂಬ ಹದ್ದಿನ ದಾಳಿ..

- Advertisement -
- Advertisement -

ಪ್ರಭುತ್ವ ಮತ್ತು ಮೂಲಭೂತವಾದ ಎರಡೂ ಅಪಾಯಕಾರಿಗಳೇ ಆಗಿವೆ. ಇವು ಒಂದಕ್ಕೊಂದು ಕೈಜೋಡಿಸಿದರೆ, ಪರಸ್ಪರ ಅಪ್ಪಿಕೊಂಡರೆ ಆಗುವ ಅನಾಹುತಗಳಿಗೆ ಕೊನೆಯೇ ಇಲ್ಲ. ಅದೀಗ ಭಾರತದಲ್ಲಿ ಸಂಭವಿಸುತ್ತಿದೆ. ಪ್ರಭುತ್ವ ಹದ್ದಿನಂತೆ, ಮೂಲಭೂತವಾದ ಡ್ಯಾಗನಂತೆ. ಇವೆರಡೂ ಕೂಡ ರಕ್ಕಸನಂತೆ ಎರಗುವ ಗುಣ ಹೊಂದಿವೆ. ಒಂಟಿ ಸಿಗುವ ಅಥವಾ ಗುಂಪಿನಿಂದ ಚೆಲ್ಲಾಪಿಲ್ಲಿಯಾದ ಪ್ರಾಣಿಗಳು ಬಹುಬೇಗ ಬಲಿಯಾಗುತ್ತವೆ.

ಪ್ರಭುತ್ವವೂ ಕೂಡ ಸಾಮಾನ್ಯರ ಮೇಲೆ ಹಾಗೆಯೇ ಎರಗುತ್ತದೆ. ನಿರುಪದ್ರವಿ ಗುಬ್ಬಿಯ ಮೇಲೆ ಹದ್ದು ಬಂದೆರಗುವಂತೆ ಪ್ರಭುತ್ವ ನಿರುಪ್ರದವಿ ಕವಿಗಳ ಮೇಲೆ ಕ್ರೂರ ದೃಷ್ಟಿ ಬೀರಿದೆ. ಕ್ರೌರ್ಯದ ಹಲ್ಲುಗಳಡಿ ಸಿಕ್ಕಿಸಿಕೊಂಡು ಜಗಿಯತೊಡಗಿದೆ. ಯಕಶ್ಚಿತ್ ಕವಿತೆಯೊಂದು ಪ್ರಭುತ್ವ ನಡೆಸುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಪ್ರಶ್ನಿಸಿತು ಎಂಬ ಕಾರಣಕ್ಕೆ ಕವಿಯನ್ನು ದೇಶದ್ರೋಹಿಯಂತೆ ಬಿಂಬಿಸಿ ಕಾರಾಗೃಹಕ್ಕೆ ಅಟ್ಟಿದೆ.

ಪ್ರಭುತ್ವದ ದೌರ್ಜನ್ಯ, ದಬ್ಬಾಳಿಕೆ ಇಂದಿನದೇನೂ ಅಲ್ಲ. ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವವರ ಮೇಲೆ ಕತ್ತಿ ಮಸೆಯುತ್ತಲೇ ಬರುತ್ತಿದೆ. ಕರ್ನಾಟಕದಲ್ಲಿ ಸತ್ಯ ಹೇಳಿದ್ದಕ್ಕಾಗಿ ಪ್ರಭುತ್ವಗಳು ಕೃತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಹಿರಿಯ ಸಂಶೋಧಕರಾಗಿದ್ದ ಎಂ.ಎಂ. ಕಲ್ಬುರ್ಗಿಯವರ ‘ಮಾರ್ಗ’, ಕವಿ ಎಚ್.ಎಸ್.ಶಿವಪ್ರಕಾಶ್ ಬರೆದ ನಾಟಕ ‘ಮಹಾಚೈತ್ರ’, ಪಿ.ವಿ. ನಾರಾಯಣರ ‘ಧರ್ಮಕಾರಣ’, ಲೇಖಕ ಬಂಜಗೆರೆ ಜಯಪ್ರಕಾಶ್ ವಿರಚಿತ ‘ಆನುದೇವ ಹೊರಗಣವನು’ ಕೃತಿಗಳು ಸತ್ಯದ ಬೆಳಕು ಚೆಲ್ಲಿದವು. ಇದೇ ಕಾರಣಕ್ಕೆ ಮೂಲಭೂತವಾದಿ ಶಕ್ತಿಗಳು ಪ್ರಭುತ್ವದ ಮೇಲೆ ಒತ್ತಡ ತಂದು ಜನರ ಓದಿಗೆ ದೊರಕದಂತೆ ನೋಡಿಕೊಂಡವು. ಈ ನಾಲ್ಕು ಕೃತಿಗಳಲ್ಲಿ ಬಸವಣ್ಣ ಮತ್ತು ಚನ್ನಬಸವಣ್ಣನ ಹುಟ್ಟು ಕುರಿತು ಸತ್ಯವನ್ನು ಹೊರಹಾಕಿದ್ದು ಮೂಲಭೂತವಾದ ಶಕ್ತಿಗಳಿಗೆ ಸಹಿಸಲಾಗಲಿಲ್ಲ. ಪ್ರಭುತ್ವದೊಂದಿಗೆ ಕೈಜೋಡಿಸಿ ಕವಿಗಳು, ನಾಟಕಕಾರರನ್ನು ಕಷ್ಟಕ್ಕೆ ಸಿಲುಕಿಸಿದವು.

ಈಗ ಕವಿತೆಯೊಂದು ಪ್ರಭುತ್ವಕ್ಕೆ ಪ್ರಶ್ನೆ ಕೇಳಿದೆ. ಜನರ ಗುರುತನ್ನು ಕೇಳುವ ಪ್ರಭುತ್ವಕ್ಕೆ ತನ್ನ ಗುರುತನ್ನು ಕೇಳಿದರೆ ತಪ್ಪೇನು? ಪ್ರಭುತ್ವದ ತಪ್ಪ ನಡೆಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ದ ಮೂಲಭೂತ ಹಕ್ಕು. ಪ್ರಭುತ್ವದ ಚುಕ್ಕಾಣಿ ಹಿಡಿದವರು ಕೂಡ ನಮ್ಮ ನಡುವಿನಿಂದಲೇ ಹೋಗಿರುವುದು. ನಾವು ಮತ ಚಲಾವಣೆ ಮಾಡದಿದ್ದರೆ ಪ್ರಭುತ್ವದ ಗುಡಿಯಲ್ಲಿ ಕೂರಲು ಆಗುತ್ತಿರಲಿಲ್ಲ ಎಂಬುದನ್ನು ಅವರು ನೆನಪು ಇಟ್ಟುಕೊಳ್ಳಬೇಕು. ಪ್ರಭುತ್ವದ ದಾಖಲೆಗಳು ಮುಖ್ಯವಲ್ಲವೇ? ಪ್ರಭುತ್ವ ಯಾರಿಂದ ಆಯ್ಕೆಗೊಳ್ಳುತ್ತದೋ ಅವರನ್ನೇ ಅನುಮಾನದಿಂದ ನೋಡುವುದಾದರೆ ಸಾಮಾನ್ಯ ಪ್ರಜೆಯೂ ಕೂಡ ಶಂಕೆ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಪ್ರಶ್ನೆ ಮಾಡುವುದರಲ್ಲಿ ತಪ್ಪಿಲ್ಲ. ಹಾಗಂತ ಪ್ರಭುತ್ವವನ್ನು ಪ್ರಶ್ನೆ ಮಾಡಿದ ಎಂಬ ಒಂದೇ ಕಾರಣಕ್ಕೆ ಕವಿಯನ್ನೇ ಜೈಲಿಗಟ್ಟುವುದು ನ್ಯಾಯಸಮ್ಮತವೇ? ಇದು ಪ್ರಭುತ್ವದ ತರವಲ್ಲದ, ಸಹಜವಲ್ಲದ ನಡವಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ.

ಸಿರಾಜ್ ಬಿಸರಳ್ಳಿ ಬರೆದದ್ದು ಒಂದೇ ಒಂದು ಕವನ. ಪುಸ್ತಕವನ್ನಲ್ಲ. ಪ್ರಶ್ನಿಸಿದ್ದು ಪ್ರಭುತ್ವವನ್ನು. ಭಾರತವೇ ನಕಲಿ ದಾಖಲೆಗಳ ತವರು ಆಗಿರುವಾಗ ಪ್ರಭುತ್ವದ ದಾಖಲೆಗಳನ್ನು ಕೇಳಿದ್ದು ತಪ್ಪಲ್ಲ. ಪ್ರಭುತ್ವದ ಕೈಕೆಳಗೆ ಮೂಲಭೂತವಾದ ಕೆಲಸ ಮಾಡುತ್ತದೆ. ಅದೇ ಮೂಲಭೂತವಾದ ಪ್ರಭುತ್ವದ ಮೇಲೆ ಒತ್ತಡ ಹೇರಿತು. ಕವಿಗೆ ಸಂಕಟವನ್ನು ತಂದೊಡ್ಡಿತು. ಕವಿ ಒಳಗಿದ್ದಾರೆ. ಕವಿತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಕವಿಯ ದೇಹ ಸರಳುಗಳ ಹಿಂದಿದೆ. ಮನಸ್ಸು ವಿಶ್ವವ್ಯಾಪಿ ಹರಡಿಕೊಳ್ಳುತ್ತಿದೆ. ಕವಿತೆಯ ಧ್ವನಿ ಪ್ರತಿಧ್ವನಿಸುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವ ಮನಸ್ಸುಗಳನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ. ಭಾಷೆ, ಧರ್ಮ, ಜಾತಿ, ಪ್ರದೇಶವನ್ನು ಮೀರಿ ಬೆಳೆಯುತ್ತಿದೆ. ಅದನ್ನು ತಡೆಯಲು ಪ್ರಭುತ್ವದಿಂದ ಸಾಧ್ಯವಿಲ್ಲ. ಪ್ರಶ್ನಿಸುವ ಎಲ್ಲರನ್ನು ಬಂಧಿಸಲು ಸಾಧ್ಯವೇ? ಬಹುಜನರನ್ನು ಬಂಧಿಸುವುದು ಗಾಳಿಯನ್ನು ಹಿಡಿದಿಟ್ಟಂತೆ. ಪ್ರಭುತ್ವ ತನ್ನ ದೇಹ-ಮನಸ್ಸನ್ನು ಬದಲಿಸುತ್ತಲೇ ಹೋದರೆ ಕವಿ ಪ್ರಶ್ನಿಸುತ್ತಲೇ ಇರುತ್ತಾನೆ ಎಂಬುದು ಪ್ರಭುತ್ವಕ್ಕೆ ಅರ್ಥವಾಗಬೇಕು.

ಬೆಂಗಳೂರಿನಲ್ಲಿ ಪ್ರಮಥರ ಗಣಮೇಳದಲ್ಲಿ ರಾಜಕೀಯ ನಾಯಕರೊಬ್ಬರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಬಿಜ್ಜಳ ಇದ್ದಂತೆ. ಮುರುಘಾ ಮಠದ ಅಧ್ಯಕ್ಷರಾದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳು ಸಾಕ್ಷಾತ್ ಬಸವಣ್ಣ ಇದ್ದಂತೆ ಎಂದರು. ಆ ಮುಖಂಡರ ಮನಸ್ಸಿಗೆ ಹಾಗೆ ಅನ್ನಿಸಿರಬಹುದು. ಇಲ್ಲಿರುವ ಪ್ರಶ್ನೆಯೆಂದರೆ. ಹನ್ನೆರಡನೇ ಶತಮಾನದ ಬಿಜ್ಜಳನ ಕಾಲದಲ್ಲಿ ಬಸವಣ್ಣನಿಗೆ ರಾಜಪ್ರಭುತ್ವವನ್ನು ಪ್ರಶ್ನಿಸುವ ಅಧಿಕಾರ ನೀಡಿದ್ದ. ಶರಣರು ಮುಕ್ತ ವಚನಗಳನ್ನು ಹೇಳಬಹುದಿತ್ತು., ಈಗಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೋಲಿಸಿದರೆ ಅಂದು ನೂರಕ್ಕೆ ನೂರರಷ್ಟು ಮುಕ್ತ ವಾತಾವರಣವಿತ್ತು. ಮೂಲಭೂತವಾದಿ ಮನಸ್ಸುಗಳು ಬಿಜ್ಜಳನ ಮೇಲೆ ಒತ್ತಡ ತಂದರೂ ಅದಕ್ಕೆ ಬಿಜ್ಜಳ ಮಣಿಯಲಿಲ್ಲ. ಶರಣರು ಸ್ವತಂತ್ರರು. ಆದರೆ ಈಗಿನ ಬಿಜ್ಜಳ (ಯಡಿಯೂರಪ್ಪ ) ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ. ಸಿರಾಜ್ ಬಿಸರಳ್ಳಿ ಕವನ ಕೇಳಿಸಿಕೊಂಡ ಮೂಲಭೂತವಾದಿಯೊಬ್ಬ ಪ್ರಭುತ್ವದ ಮೇಲೆ ಒತ್ತಡ ಹೇರುತ್ತಿದ್ದಂತೆ ಬಂಧನ ಮಾಡಲಾಗಿದೆ. ಆಧುನಿಕ ಬಸವಣ್ಣನೆಂದು ಆ ಮುಖಂಡರಿಂದ ಕರೆಸಿಕೊಂಡಿರುವ ಮುರುಘಾ ಮಠದ ಪೀಠಾಧ್ಯಕ್ಷರಿಗೆ ಪ್ರಭುತ್ವವನ್ನು ಪ್ರಶ್ನಿಸಿ ಎದುರು ಹಾಕಿಕೊಳ್ಳುವ ಶಕ್ತಿ ಇದೆಯೇ? ಖಂಡಿತ ಇಲ್ಲ.

ಪ್ರಭುತ್ವದ ದಂಡಿಸುವ ಕೆಲಸಕ್ಕೆ ಕವಿ ನಲುಗಿಹೋಗಿದ್ದಾನೆ. ಧರ್ಮದ ಆಧಾರದ ಮೇಲೆಯೇ ದೂರುಗಳು ದಾಖಲಾಗುತ್ತಿವೆ. ಮೂಲಭೂತವಾದಿಗಳು ಮತ್ತು ಪ್ರಭುತ್ವ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಬೆದರಿಸುವ ಕೆಲಸಗಳು ನಡೆಯುತ್ತಿರುವಂತೆ ಕಾಣುತ್ತಿದೆ. ಜೆ.ಎನ್.ಯು ವಿವಿಯಲ್ಲಿ ಉಮರ್ ಖಾಲಿದ್, (ನಜೀಬ್ ಏನಾಗಿದ್ದಾನೋ ಗೊತ್ತಿಲ್ಲ) ಕವಿತೆ ಬರೆದದ್ದಕ್ಕಾಗಿ ಸಿರಾಜ್, ರಾಜಾ ಭಕ್ಷಿ, ಎನ್.ಆರ್.ಸಿ ವಿರುದ್ದ ಹೋರಾಟ ಮಾಡಿದ್ದಕ್ಕಾಗಿ ಡಾ.ಕಾಫೀಲ್ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ. ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶಿಸಿದ್ದಕ್ಕಾಗಿ ಶಾಲೆಯ ಮಕ್ಕಳ ವಿರುದ್ದ, ಅವರ ಪೋಷಕರ ವಿರುದ್ಧ, ಮುಖ್ಯೋಪಾಧ್ಯಾಯರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸುವ ಮತ್ತು ಬಂಧಿಸುವ ಮೂಲಕ ಪ್ರಶ್ನಿಸುವ ಹಾಗೂ ಪ್ರತಿಭಟಿಸುವವರನ್ನು ಭಯದಲ್ಲಿ ಇಡಲು ಪ್ರಭುತ್ವ ಯತ್ನಿಸುತ್ತಲೇ ಇದೆ. ಇದು ಸಮಾಜದಲ್ಲಿ ಪ್ರತಿರೋಧವನ್ನು ಹೆಚ್ಚು ಮಾಡುತ್ತದೆಯೇ ಹೊರತು ದ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಇದನ್ನು ಪ್ರಭುತ್ವ ಅರ್ಥಮಾಡಿಕೊಂಡರೆ ಒಳಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...