Homeಮುಖಪುಟಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ಮೇ 23ಕ್ಕೆ ಸಭೆ ಕರೆದ ಸೋನಿಯಾ ಗಾಂಧಿ: ಫೀಲ್ಡಿಗಿಳಿದ ಮಾಸ್ಟರ್ ನೆಗೋಷಿಯೇಟರ್‍ಗಳು

ವಿರೋಧ ಪಕ್ಷಗಳೆಲ್ಲವೂ ಗೌರವಿಸುವ ಸೋನಿಯಾ ಗಾಂಧಿಯವರೇ ಸಭೆ ಕರೆಯುವ ಮೂಲಕ ಕಾಂಗ್ರೆಸ್ ಜಾಣ ಹೆಜ್ಜೆ ಇರಿಸಿದೆ.

- Advertisement -
- Advertisement -

/ನಾನುಗೌರಿ ಡೆಸ್ಕ್/
ಆಶ್ಚರ್ಯಕರವಾದ ಬೆಳವಣಿಗೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿಯವರು ಮೇ 23ರಂದು ಎಲ್ಲಾ ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ರಾಹುಲ್‍ಗಾಂಧಿಗೆ ವಹಿಸಿಕೊಟ್ಟ ನಂತರವೂ ಸೋನಿಯಾರೇ ಯುಪಿಎ ಅಧ್ಯಕ್ಷೆಯಾಗಿ ಮುಂದುವರೆದಿದ್ದಾರೆ. ಈ ಸಾರಿಯ ಚುನಾವಣೆಯಲ್ಲಿ ದೇಶಾದ್ಯಂತ ಪ್ರಚಾರದ ಕೆಲಸವನ್ನು ರಾಹುಲ್‍ಗಾಂಧಿ ಮಾಡಿದರೆ, ಉತ್ತರ ಪ್ರದೇಶದಲ್ಲಿ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಬಿರುಸಿನ ಪ್ರಚಾರ ನಡೆಸಿದ್ದರು. ರಾಯ್‍ಬರೇಲಿಗೆ ಒಮ್ಮೆ ಹೋಗಿದ್ದು ಬಿಟ್ಟರೆ ಸೋನಿಯಾ ಎಲ್ಲೂ ಕಾಣಿಸದೇ ಇದ್ದುದಕ್ಕೆ ಅನಾರೋಗ್ಯ ಕಾರಣವೆಂದು ಹೇಳಲಾಗಿತ್ತು. ಆದರೆ, ಕಳೆದ 15 ದಿನಗಳಿಂದಲೂ ದೇಶದ ವಿವಿಧ ವಿರೋಧ ಪಕ್ಷಗಳ ನಾಯಕರ ಜೊತೆ ಸೋನಿಯಾ ಸತತವಾಗಿ ಸಂಪರ್ಕದಲ್ಲಿದ್ದರೆಂದು ಎನ್‍ಡಿಟಿವಿ ವರದಿ ಮಾಡಿದೆ.
ಎನ್‍ಡಿಟಿವಿ ವರದಿ
ಇದೀಗ ಮೇ 23ರ ಸಂಜೆಯ ಸಭೆಗೆ ಆಹ್ವಾನಿಸಿ ಸೋನಿಯಾ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಪತ್ರವು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಜೆಡಿಎಸ್‍ನ ಎಚ್.ಡಿ.ದೇವೇಗೌಡ ಮತ್ತು ಜೆಡಿಯುನ ಶರದ್‍ಪವಾರ್ ಅವರಿಗೆ ತಲುಪಿದ್ದು, ಇವರೇ ಅಲ್ಲದೇ ಎಲ್ಲಾ ವಿರೋಧ ಪಕ್ಷಗಳನ್ನೂ ಆಹ್ವಾನಿಸಲಾಗುತ್ತಿದೆಯೆಂದು ವರದಿ ಹೇಳುತ್ತದೆ.

ಇದಲ್ಲದೇ, ಒರಿಸ್ಸಾದ ನವೀನ್ ಪಟ್ನಾಯಕ್ ಅವರ ಶಾಲಾ ಸಹಪಾಠಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಮಾತಾಡಿದ್ದರೆ, ಯುಪಿಎ ಒಡನಾಡಿ ಶರದ್‍ಪವಾರ್ ಮಾಯಾವತಿಯವರ ಜೊತೆ ಮಾತಾಡಿದ್ದಾರೆ. ಫೆಡರಲ್ ಫ್ರಂಟ್ ರಚನೆಯ ಪ್ರಯತ್ನದಲ್ಲಿರುವ ಕೆ.ಚಂದ್ರಶೇಖರ ರಾವ್‍ರ ಜೊತೆ ಕಾಂಗ್ರೆಸ್‍ನ ಖಜಾಂಚಿ ಅಹ್ಮದ್ ಪಟೇಲ್ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸಂಪರ್ಕದಲ್ಲಿದ್ದಾರೆ.

ಈ ಸಭೆಯ ವಿಚಾರ ಬಹಿರಂಗವಾಗುವುದಕ್ಕೆ ಒಂದು ದಿನ ಮುಂಚೆಯಷ್ಟೇ ಗುಲಾಂ ನಬಿ ಆಜಾದ್ ಒಂದು ಮುಖ್ಯವಾದ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ‘ಕಾಂಗ್ರೆಸ್‍ಗೇ ಪ್ರಧಾನಿ ಪಟ್ಟ ಕೊಡಲೇಬೇಕೆಂದೇನೂ ನಾವು ಬಯಸುವುದಿಲ್ಲ’ ಎಂದು ಗುಲಾಂ ನಬಿ ಹೇಳಿದ್ದಾರೆಂದರೆ, ಸ್ವತಃ ಸೋನಿಯಾಗಾಂಧಿಯವರ ಕುಟುಂಬವೇ ಮಾತಾಡಿದೆ ಎಂದೇ ಅರ್ಥ.


ಯಾರಿಗೂ ಬಹುಮತ ಬರುವುದಿಲ್ಲವೆಂಬುದು ಬಹುತೇಕ ಖಚಿತ. ಕೆಸಿಆರ್ ಮತ್ತು ನವೀನ್ ಪಟ್ನಾಯಕ್ ಇಬ್ಬರೂ ಕಾಂಗ್ರೆಸ್, ಬಿಜೆಪಿಗಳಿಂದ ಸಮಾನ ದೂರ ಎನ್ನುತ್ತಿದ್ದಾರಾದರೂ, ಎಸ್‍ಪಿ, ಬಿಎಸ್‍ಪಿ ಮತ್ತು ಟಿಎಂಸಿಗಳಿಗೆ ಪ್ರಧಾನ ಗುರಿ ಮೋದಿ-ಷಾಗಳೇ ಆಗಿದ್ದಾರೆ. ಇನ್ನು ಟಿಡಿಪಿಯ ಚಂದ್ರಬಾಬು ಜೊತೆ ಈ ಸಾರಿ ಕಾಂಗ್ರೆಸ್‍ಗೆ ಮೈತ್ರಿ ಇಲ್ಲವಾದರೂ, ಅವರು ಕಾಂಗ್ರೆಸ್ ಜೊತೆಗೆ ಇರುವ ಸುಳಿವು ನೀಡಿದ್ದಾರೆ. ಡಿಎಂಕೆಯ ಸ್ಟಾಲಿನ್ ಅಂತೂ ರಾಹುಲ್‍ಗಾಂಧಿಯ ಹೆಸರನ್ನು ಮೊದಲು ಪ್ರಧಾನಿ ಪಟ್ಟಕ್ಕೆ ಸೂಚಿಸಿದವರು. ಕೆಸಿಆರ್ ‘ಫೆಡರಲ್ ಫ್ರಂಟ್ ಮಾಡೋಣ ಬನ್ನಿ’ ಎಂದಾಗ, ‘ನೀವೇ ಬನ್ನಿ ಯುಪಿಎ ಜೊತೆಗೆ ಸರ್ಕಾರ ಮಾಡೋಣ. ಈ ಸಾರಿ ನೀವು ಹೇಳೋದು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಸ್ಟಾಲಿನ್ ಹೇಳಿದ್ದಾರೆ.
ಇವೆಲ್ಲದರ ಹಿನ್ನೆಲೆಯಲ್ಲಿ ಸೋನಿಯಾರ ಸಭೆಗೆ ಮಹತ್ವ ಬಂದಿದೆ. ಸರ್ಕಾರ ರಚನೆಯಾಗುವುದಾದರೆ, ಕಾಂಗ್ರೆಸ್‍ಗೆ ಮಹತ್ವದ ಪಾತ್ರ ಇರಬೇಕು, ಆದರೆ ರಾಹುಲ್‍ಗಾಂಧಿಯೇ ಪ್ರಧಾನಿಯಾಗಬೇಕೆಂದೇನಿಲ್ಲ ಎಂಬುದು ಅವರ ಇರಾದೆ ಇದ್ದಂತಿದೆ.
ಇದನ್ನೂ ಓದಿ: ಸರ್ಕಾರ ಮಾಡಲು ಒಲವು ತೋರದ ರಾಹುಲ್
ಈ ಮಧ್ಯೆ 30ರಷ್ಟು ಸೀಟುಗಳನ್ನು ಗೆಲ್ಲಲಿರುವ ಮಮತಾ ಬ್ಯಾನರ್ಜಿಯವರ ನಿಲುವಿಗೆ ಹೆಚ್ಚಿನ ಮಹತ್ವ ಇರಲಿದೆ. ಎನ್‍ಡಿಟಿವಿಯಲ್ಲಿ ಪತ್ರಕರ್ತೆ ಸ್ವಾತಿ ಚತುರ್ವೇದಿ ಬರೆದಿರುವ ಲೇಖನದಲ್ಲಿ ಇದರ ಕುರಿತು ಒಂದು ವಿಶೇಷ ಸುಳಿವಿದೆ. ಟಿಎಂಸಿ ನಾಯಕರ ಪ್ರಕಾರ, ‘ಬಿಜೆಪಿಯ ಜೊತೆಗೆ ಹೋಗಲು ಅಂತಹ ಸಮಸ್ಯೆ ಇಲ್ಲ. ಆದರೆ ವಿಷಕಾರಿ ರಾಜಕಾರಣ ಮಾಡುವ ಮೋದಿ-ಷಾ ತೊಲಗಬೇಕು’. ಮೇ 23ರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಮಾಯಾವತಿಯವರು ಭಾಗವಹಿಸುವ ಸಾಧ್ಯತೆ ಇಲ್ಲ. ಅಖಿಲೇಶ್ ಯಾದವ್, ಕೆಸಿಆರ್ ಮತ್ತು ನವೀನ್ ಪಟ್ನಾಯಕ್ ಸಹಾ ಫಲಿತಾಂಶ ಸಂಪೂರ್ಣ ನಿಚ್ಚಳವಾದ ನಂತರವೇ ತಮ್ಮ ಮನದಿಂಗಿತ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಫೆಡರಲ್ ಫ್ರಂಟ್ ರಚನೆಯ ಸಿದ್ಧತೆಯಲ್ಲಿ ಕೆಸಿಆರ್
ಆದರೆ, ಕಾಂಗ್ರೆಸ್ ತನ್ನ ದಾಳವನ್ನು ಉರುಳಿಸಿ ಆಗಿದೆ. ಸೋನಿಯಾಗಾಂಧಿಯವರೇ ಸಭೆ ಕರೆಯಲೂ ಕಾರಣವಿದೆ. ಯುಪಿಎ ಜೊತೆಗಿಲ್ಲದ ಪಕ್ಷಗಳಾಗಲೀ, ಯುಪಿಎ ಭಾಗವಾಗಿರುವ ಪಕ್ಷಗಳೇ ಆಗಲಿ, ಸೋನಿಯಾರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದಾರೆ. ಹಾಗಾಗಿ ಈ ನಡೆಯು ರಾಜಕೀಯ ವಲಯಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...