Homeಮುಖಪುಟಪಂಜಾಬ್‌ ಭದ್ರತಾ ಲೋಪ ವಿವಾದ; ಪತ್ರಕರ್ತೆಯೊಬ್ಬರ ಹಲವು ಪ್ರಶ್ನೆಗಳು!

ಪಂಜಾಬ್‌ ಭದ್ರತಾ ಲೋಪ ವಿವಾದ; ಪತ್ರಕರ್ತೆಯೊಬ್ಬರ ಹಲವು ಪ್ರಶ್ನೆಗಳು!

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಬುಧವಾರದಂದು ಪ್ರತಿಭಟನೆಗಳ ಮಧ್ಯೆ ಪಂಜಾಬ್‌‌ ಚುನಾವಣಾ ರ್ಯಾಲಿಯನ್ನು ರದ್ದುಗೊಳಿಸಿ ವಾಪಾಸಾಗಿದ್ದಾರೆ. ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಇದನ್ನು ‘ಭದ್ರತಾ ಲೋಪ’ ಎಂದು ಕರೆದಿದ್ದು, ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ದೂರಿದೆ. ಆದರೆ ಇದನ್ನು ನಿರಾಕರಿಸಿರುವ ಪಂಜಾಬ್‌ ಮುಖ್ಯಮಂತ್ರಿ, ತಮ್ಮ ಸರ್ಕಾರದ ಕಡೆಯಿಂದ ಯಾವುದೇ ಭದ್ರತಾ ಲೋಪ ಆಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಭದ್ರತಾ ಲೋಪದ ಬಗ್ಗೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಒಕ್ಕೂಟ ಸರ್ಕಾರವು ಕಾಂಗ್ರೆಸ್ ಮೇಲೆ ಆರೋಪಿಸುತ್ತಿದ್ದರೆ, ಕಾಂಗ್ರೆಸ್ ತಮ್ಮ ಸರ್ಕಾರದ ಕಡೆಯಿಂದ ಯಾವುದೇ ಲೋಪ ಆಗಿಲ್ಲ ಎಂದು ಪ್ರತಿಪಾದಿಸುತ್ತಿದೆ.

ಇದನ್ನೂ ಓದಿ:Explained: ಹೋಮ್‌‌‌ ಐಸೋಲೇಶನ್‌ ರೋಗಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, ಅದರಲ್ಲಿ ಪ್ರಧಾನಿಯ ಕಾರು ತಡೆದಿದ್ದಾರೆ ಎನ್ನಲಾಗಿರುವ ಫ್ಲೈಓವರ್‌ನಲ್ಲಿ ಬಿಜೆಪಿ ಧ್ವಜ ಹಿಡಿದುಕೊಂಡು, ಪ್ರಧಾನಿಯ ಕಾರಿನ ತೀರಾ ಹತ್ತಿರ ಒಂದಷ್ಟು ಜನರು ಶ್ರೀ ನರೇಂದ್ರ ಮೋದಿ ಜಿಂದಾಬಾದ್ ಎಂದು ಘೋಷಣೆ ಕೂಗುವುದನ್ನು ಕಾಣಬಹುದು.

ಈ ಬಗ್ಗೆಗಿನ ಹಲವಾರು ಪ್ರಶ್ನೆಗಳನ್ನು ಪತ್ರಕರ್ತೆ ಮೀತೂ ಜೈನ್‌ ಪ್ರಶ್ನಿಸಿದ್ದಾರೆ.

ಮೀತು ಜೈನ್ ಅವರ ಪ್ರಕಾರ, “ಪ್ರಧಾನ ಮಂತ್ರಿಯ ಯಾವುದೇ ಪ್ರಯಾಣದ ಯೋಜನೆಗಳನ್ನು ವಿಶೇಷ ರಕ್ಷಣಾ ಗುಂಪಿನ (SPG) ಬ್ಲೂಬುಕ್‌ ಪ್ರಕಾರ ನಡೆಯುತ್ತದೆ. ಆಕಸ್ಮಿಕವಾಗಿ ಬದಲಾಗುವ ಮಾರ್ಗ ಸೇರಿದಂತೆ ಪ್ರಧಾನಿ ಸುರಕ್ಷಿತವಾಗಿ ತಲುಪುವವರೆಗಿನ ಎಲ್ಲವನ್ನೂ SPG, ಗುಪ್ತಚರ ವಿಭಾಗ (IB) ಮತ್ತು ರಾಜ್ಯ ಪೊಲೀಸರನ್ನು ಒಳಗೊಂಡ ‘ಸುಧಾರಿತ ಭದ್ರತಾ ಸಂಪರ್ಕ’(ASL) ಚರ್ಚಿಸುತ್ತದೆ. ಒಂದು ವೇಳೆ ಪ್ರಧಾನಿಯನ್ನು ಒಂದು ಸ್ಥಳದಿಂದ ಸ್ಥಳಾಂತರಿಸಬೇಕಾದರೂ ಕೂಡಾ. ಇದರ ನಂತರ ASL ಕನಿಷ್ಠ 200 ಪುಟಗಳ ಕಿರುಪುಸ್ತಕವನ್ನು ಪ್ರಕಟಿಸುತ್ತದೆ”

“ಇದೀಗ ಪ್ರಧಾನ ಮಂತ್ರಿ ಕಚೇರಿ ಮತ್ತು SPG ಉತ್ತರಿಸಬೇಕಾದ ಪ್ರಶ್ನೆಗಳು ಹೀಗಿವೆ. ಹವಾಮಾನವು ಪ್ರತಿಕೂಲವಾಗಿರುತ್ತದೆ ಎಂದು ಮೊದಲೇ ತಿಳಿದಿರಲಿಲ್ಲವೆ?. ಬ್ಲೂಬುಕ್ ಪ್ರಕಾರ ಕನಿಷ್ಠ ಭೇಟಿಗೆ 48 ಗಂಟೆಗಳ ಮುಂಚಿತವಾಗಿ ಭೇಟಿಯ ಇಲಾಖೆಯಿಂದ ಯಾವುದೆ ಆಂತರಿಕ ಮಾಹಿತಿಯನ್ನು ತೆಗೆದುಕೊಳ್ಳಲಾಗಿಲ್ಲವೆ?” ಎಂದು ಮೀತೂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ವೈರಲ್‌ ವಿಡಿಯೊ: ಘರ್ಜಿಸುತ್ತಿರುವ ಸಿಂಹವನ್ನು ಹೊತ್ತೊಯ್ದ ಮಹಿಳೆ!

“ಒಂದು ವೇಳೆ ಹವಾಮಾನವು ಪ್ರತಿಕೂಲವಾಗಿದ್ದರೆ ಮತ್ತು ಪ್ರಧಾನಿ ಭೇಟಿ ನೀಡುವ ಸ್ಥಳಕ್ಕೆ ಹೆಲಿಕಾಪ್ಟರ್‌‌‌‌ ತೆರಳಲು ಸಾಧ್ಯವಾಗದಿದ್ದರೆ, ASL ಪ್ರಕಾರ ಆಕಸ್ಮಿಕ ಮಾರ್ಗವನ್ನು ನಿರ್ಧರಿಸಲಾಗಲಿಲ್ಲವೇ? ಅಥವಾ ಎರಡು ಗಂಟೆಗಳ ಪ್ರಯಾಣವಿರುವ 111 ಕಿ.ಮೀ ದೂರದ ಈ ಆಕಸ್ಮಿಕ ಮಾರ್ಗವನ್ನು, ಪ್ರಧಾನಮಂತ್ರಿಯವರು ಆಯ್ದುಕೊಂಡರೇ?” ಎಂದು ಪ್ರಶ್ನಿಸಲಾಗಿದೆ.

“ಭದ್ರತಾ ಅನುಮತಿಯಿಲ್ಲದೆ ಎರಡು ಗಂಟೆಗಳ ಕಾಲ ಝೀರೋ ಟ್ರಾಫಿಕ್ ಇಲ್ಲದ ಮಾರ್ಗದಲ್ಲಿ ಪ್ರಯಾಣಿಸಲು ಎಸ್‌ಪಿಜಿ ನಿಜವಾಗಿಯೂ ಪ್ರಧಾನಿಗೆ ಅವಕಾಶ ನೀಡಿದೆಯೇ? ಬ್ಲೂಬುಕ್‌ ನಿಯಮಗಳ ಪ್ರಕಾರ, ಸಂಪೂರ್ಣ ಮಾರ್ಗವನ್ನು ಕ್ಲಿಯರ್‌ ಮಾಡಲಾಗಿದೆ ಎಂದು ರಾಜ್ಯ ಪೊಲೀಸರು ಹೇಳುವವರೆಗೂ ಎಸ್‌ಪಿಜಿ ಪ್ರಧಾನಿಯನ್ನು ಕಡೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಎಸ್‌ಪಿಜಿ ರಸ್ತೆ ಮೂಲಕ ಪ್ರಯಾಣಿಸಲು ನಿರ್ಧರಿಸಿದ್ದರೆ, ಅದು ಯೋಜನೆಯ ಪ್ರಕಾರವೇ ಆಗಿರಬೇಕು. ಒಂದು ವೇಳೆ ಯೋಜನೆ ಪ್ರಕಾರ ಎಸ್‌ಪಿಜಿ ನಡೆದಕೊಳ್ಳದೆ ಇದ್ದರೆ ಅದರ ಮುಖ್ಯಸ್ಥರನ್ನು ವಜಾಗೊಳಿಸಬೇಕಾಗುತ್ತದೆ. ಇಲ್ಲವೆಂದರೆ, ರಾಜ್ಯದ ಡಿಜಿಪಿ ಪ್ರಧಾನಿ ತೆರಳುವ ಮಾರ್ಗವನ್ನು ಕ್ಲಿಯರ್‌ ಮಾಡದೆ ಕ್ಲಿಯರೆನ್ಸ್ ಮಾಡಲಾಗಿದೆ ಎಂದು ಎಸ್‌ಪಿಜಿಗೆ ತಪ್ಪು ಮಾಹಿತಿ ನೀಡಿದರೆ, ಎಸ್‌ಪಿಜಿಯನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದ್ದಕ್ಕಾಗಿ ಅವರ ವಿರುದ್ದ ಕ್ರಮಕೈಗೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

“ಬಿಜೆಪಿ ಧ್ವಜಗಳನ್ನು ಬೀಸುತ್ತಾ, ಪ್ರಧಾನಿಯ ಕಾರಿನ ಹತ್ತಿರವೇ ಇದ್ದ ಗುಂಪು, ಪ್ರಧಾನಿಯ ಬೆಂಗಾವಲು ವಾಪಾಸು ಹೊರಟ ನಂತರ ಸ್ಥಳಕ್ಕೆ ಬಂದಿದೆ ಎಂದು ಎಂದು ಬಿಜೆಪಿ ಹೇಳುತ್ತದೆ. ಆದರೆ, ಕ್ಲಿಯರ್‌ ಮಾಡಿದ್ದ ಮಾರ್ಗದಲ್ಲಿ ನಾಗರಿಕರಿಗೆ ಹೇಗೆ ಅವಕಾಶ ನೀಡಲಾಯಿತು? ಅದೂ ಕೂಡಾ ಪ್ರಧಾನಿ ಕಣ್ಣಳತೆ ದೂರದಲ್ಲಿ ಟೆಂಪೋಗಳು ಮತ್ತು ಬಸ್‌ಗಳು ಕೂಡಾ ಗೋಚರಿಸುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಓಮಿಕ್ರಾನ್ ಆತಂಕ: ಅಂತರರಾಜ್ಯ ಗಡಿ ಬಂದ್ ಇಲ್ಲ- ಸಚಿವ ಡಾ.ಅಶ್ವತ್ಥನಾರಾಯಣ

“ಅದಲ್ಲದೆ, ಪ್ರಧಾನಿಯ ಬೆಂಗಾವಲಿನಲ್ಲಿ ವಾರ್ನಿಂಗ್‌ ಕಾರು ಮತ್ತು ಮತ್ತು ಪೈಲಟ್ ಕಾರು ಒಳಗೊಂಡಿದೆ. ಇದು ಪ್ರಧಾನಿಗಿಂದ ಮೊದಲು ಚಲಿಸುತ್ತದೆ. ಈ ಕಾರು ಮಾರ್ಗದಲ್ಲಿ ಜನಸಂದಣಿಯನ್ನು ಗಮನಿಸಿ ಬೆಂಗಾವಲು ಪಡೆಯನ್ನು ಎಚ್ಚರಿಸಬಹುದಿತ್ತಲ್ಲವೇ?. ಹಾಗಾದರೆ 20 ಮೀಟರ್ ಅಂತರದಲ್ಲಿ ಪ್ರತಿಭಟನಾಕಾರರ ಹತ್ತಿರವೇ ಬೆಂಗಾವಲು ಹೇಗೆ ನಿಲ್ಲಲು ಸಾಧ್ಯ? ಎಸ್‌ಪಿಜಿ 20 ನಿಮಿಷ ಕಾಯುವ ಬದಲು ತಕ್ಷಣವೇ ವಾಪಸ್ ತೆರಳಬೇಕಿತ್ತಲ್ಲವೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ನರೇಂದ್ರ ಮೋದಿ ಅವರು ANI ಜೊತೆಗೆ ಮಾತನಾಡುತ್ತಾ, ಜೀವಂತವಾಗಿ ಹಿಂತಿರುಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ವೇಳೆ ಪ್ರಧಾನಿಯ ಜೀವಕ್ಕೆ ಅಪಾಯವಿದ್ದರೆ, ಅದಕ್ಕೆ ಉತ್ತರಿಸಬೇಕಾದವರು, ಅವರಿಗೆ ಆಂತರಿಕ ರಕ್ಷಣೆಯನ್ನು ಒದಗಿಸುವ ಎಸ್‌ಪಿಜಿ” ಎಂದು ಪತ್ರಕರ್ತೆ ಮೀತೂ ಜೈನ್ ಹೇಳಿದ್ದಾರೆ.

ಈ ನಡುವೆ ಪಂಜಾನ್ ಮುಖ್ಯಮಂತ್ರಿ ಚರನ್‌ಜಿತ್‌ ಚನ್ನಿ ಅವರು ಪತ್ರಿಕಾಗೋಷ್ಠಿ ನಡೆಸಿ, ರಾಜ್ಯ ಸರ್ಕಾರದಿಂದ ಯಾವುದೆ ಲೋಪ ಆಗಿಲ್ಲ, ಪ್ರಧಾನಿಯ ಕಾರ್ಯಕ್ರಮದಲ್ಲಿ ರಸ್ತೆ ಮಾರ್ಗದಲ್ಲಿ ಭೇಟಿಮಾಡುವ ಉಲ್ಲೇಖ ಇರಲಿಲ್ಲ. ಸಧ್ಯದಲ್ಲೇ ಚುನಾವಣೆಯಿದೆ ಮತ್ತು ಜನರು ರಸ್ತೆಗಳನ್ನು ನಿರ್ಬಂಧಿಸುವುದು ಸಾಮಾನ್ಯವಾಗಿದೆ. ಇಲ್ಲಿ ಯಾವುದೇ ದಾಳಿಯೂ ನಡೆದಿಲ್ಲ, ಬೆದರಿಕೆಯೂ ಇಲ್ಲ. ಪ್ರಧಾನಿಗೆ ಅಪಾಯವಿದೆ ಎಂದು ಹೇಳುವುದು ತಪ್ಪು’’ ಎಂದು ಹೇಳಿದ್ದಾರೆ.

“ಅವರು ಅರ್ಧ ದಾರಿಯಲ್ಲೇ ಹೊರಡಬೇಕಾಯಿತು ಎಂಬುವುದಕ್ಕೆ ನಾವು ವಿಷಾದಿಸುತ್ತೇವೆ. ಅವರ ಜೀವಕ್ಕೆ ಬೆಲೆಕಟ್ಟಲಾವುದಿಲ್ಲ. ಪ್ರತಿಭಟನಾಕಾರರನ್ನು ರಸ್ತೆಯಿಂದ ತೆರವುಗೊಳಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಾ ತಿಳಿಸಿದ್ದರು. ಹೀಗಾಗಿ, ಪ್ರತಿಭಟನಾಕಾರರನ್ನು ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬೆಳಿಗ್ಗೆ 3 ಗಂಟೆಯವರೆಗೆ ಕೆಲಸ ಮಾಡಿದ್ದೇವೆ” ಎಂದು ಚನ್ನಿ ಹೇಳಿದ್ದಾರೆ. ಏನೇ ಲೋಪ ನಡೆದಿದ್ದರೂ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...