ಬೆತ್ತಲಾಗುತ್ತಲೇ ಇದೆ ಬಿಜೆಪಿ ನಾಯಕರ ವಿಕೃತ ‘ಸಂಸ್ಕೃತಿ’: ಆ ವಿಡಿಯೋ ಎತ್ತುತ್ತಿರುವ ಪ್ರಶ್ನೆಗಳು, ಪ್ರತಿರೋಧಗಳು

ಬಿಜೆಪಿ ಇನ್ನೇನು ಸರ್ಕಾರ ರಚಿಸೇ ಬಿಟ್ಟಿತು, ಸಿಎಂ ಆಗಲಿರುವ ಯಡಿಯೂರಪ್ಪನವರು ಅರವಿಂದ ಲಿಂಬಾವಳಿಯವರನ್ನು ಡಿಸಿಎಂ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಹೊತ್ತಿಗೆ ಸರಿಯಾಗಿ ಹೊರಬಿದ್ದ `ನೀಲಿ’ ಸಿಡಿಯೊಂದು ಬಿಜೆಪಿಯೊಳಗಿನ ಮುಸುಕಿನ ಗುದ್ದಾಟದ ಜೊತೆಗೆ `ಪರಿವಾರ’ದೊಳಗಿನ `ಅನೈತಿಕ’ ದ್ವಂದ್ವಗಳನ್ನೂ ಬೆತ್ತಲಾಗಿಸಿದೆ…

ಧರ್ಮ ಮತ್ತು ಸಂಸ್ಕೃತಿಯ ವಿಷಯದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಗಿರುವ ದ್ವಂದ್ವಗಳು ಮತ್ತೆ ಮತ್ತೆ ಬೆತ್ತಲಾಗುತ್ತಲೇ ಇವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಕೃತ ಲೈಂಗಿಕತೆಯ ವಿಡಿಯೋವೊಂದು ಈಗ ಆರೆಸ್ಸೆಸ್ ಮತ್ತು ಬಿಜೆಪಿಯ ‘ಸಲಿಂಗಕಾಮ’ದ ಕುರಿತಾದ ದ್ವಂದ್ವಗಳು ಮತ್ತು ಅವಕಾಶವಾದಿ ನಿಲುವುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮತ್ತೆ ಚಲಾವಣೆಗೆ ತಂದಿದೆ.

ಯುವಕನೊಂದಿಗೆ ರಾಜ್ಯ ಬಿಜೆಪಿಯ ಗಣ್ಯ ನಾಯಕರೊಬ್ಬರು ಲೈಂಗಿಕತೆಯಲ್ಲಿ ತೊಡಗಿರುವ ವಿಡಿಯೋ ಅದು. ಸಲಿಂಗಕಾಮ ಅಪರಾಧವಲ್ಲ ಎಂಬ ಹಿನ್ನೆಲೆಯಲ್ಲಿ ಇದು ಪ್ರಶ್ನಾರ್ಹ ಅಲ್ಲವೇ ಅಲ್ಲ. ಆದರೆ ಈ ಕೃತ್ಯ ಕುರಿತಂತೆ 2018ರಿಂದ ಕೆಲವು ‘ಸಂತ್ರಸ್ತ’ ಯುವಕರು ಪ್ರಚುರ ಪಡಿಸುತ್ತ ಬಂದಿರುವ ವಿಷಯಗಳ ಆಧಾರದಲ್ಲಿ ಹೇಳುವುದಾದರೆ ವಿಡಿಯೋದಲ್ಲಿರುವುದು ಸಹಜ ಲೈಂಗಿಕತೆ ಅಲ್ಲ, ಬದಲಾಗಿ ಅದು ಹಣ ಮತ್ತು ಅಧಿಕಾರ ಸ್ಥಾನ ದುರುಪಯೋಗ ಮಾಡಿಕೊಂಡು ನಡೆಸಿರುವ ವಿಕೃತ ಲೈಂಗಿಕ ಚಟುವಟಿಕೆ ಅನಿಸುತ್ತದೆ.

ಸದ್ಯ ವಿಡಿಯೋದಲ್ಲಿ ಕಾಣಿಸುತ್ತಿರುವ ಮತ್ತು ಈಗ ಈ ಬಗ್ಗೆ ಯಾವ ಸ್ಪಷ್ಟತೆಯನ್ನು ಧೈರ್ಯದಿಂದ ಹೇಳಲು ಹಿಂಜರಿಯುತ್ತಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ. ಅವರ ಪ್ರಕಾರ, ಇದು ಕಿಡಿಗೇಡಿಗಳು ಸೃಷ್ಟಿಸಿದ ವಿಡಿಯೋ…. morphed video… ಆದರೆ ಇದನ್ನು ಮನದಟ್ಟು ಮಾಡಲು ಅವರು ವಿಫಲರಾಗಿದ್ದಾರೆ. ಸೋಮವಾರ ಸದನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ಅವರು ಭಾವುಕರಾಗಿ ಅತ್ತಂತೆ ಮಾಡಿದರೇ ವಿನ:, ಈ ಬಗ್ಗೆ ತುರ್ತು ತನಿಖೆಯಾಗಲಿ ಸಭಾಧ್ಯಕ್ಷರೇ ಎಂದು ಗಟ್ಟಿಯಾಗಿ ಹೇಳುವ ಅವಕಾಶವನ್ನು ತಪ್ಪಿಸಿಕೊಂಡರು.

ಈ ವಿಡಿಯೋ ಕುರಿತಂತೆ, ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಈ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಚಾರಿತ್ರ್ಯಹರಣಕ್ಕೆ ಈ ಕೆಲಸ ಮಾಡುತ್ತಿವೆ ಎಂದಿದ್ದಾರೆ. ಮುಖ್ಯಮಂತ್ರಿ ಕಚೇರಿಯೇ ಇದರಲ್ಲಿ ಇನವಾಲ್ವ್ ಆಗಿದೆ ಎಂದಿದ್ದಾರೆ ಆದರೆ ಸದನದಲ್ಲಿ ಈ ಸಂಚಿನ ಹಿಂದೆ ಆ ಕಡೆಯವರೂ (ಕಾಂಗ್ರೆಸ್, ಜೆಡಿಎಸ್) ಇರಬಹುದು, ಈ ಕಡೆಯವರೂ (ತಮ್ಮದೇ ಬಿಜೆಪಿ ಪಕ್ಷದವರು) ಇರಬಹುದು ಎಂದರು. ‘ಸಭಾಧ್ಯಕ್ಷರೇ, ಶಿವಲಿಂಗೇಗೌಡರು ಈ ಪ್ರಶ್ನೆ ಎತ್ತಿದ್ದು ಸರಿಯಾಗೇ ಇದೆ. ನನಗಂತೂ ತುಂಬಾ ನೋವಾಗಿದೆ ಎಂದರು…

ಆಗ ಅವರ ಕಣ್ಣುಗಳ ಅಂಚಿನಲ್ಲಿ ನೀರು, ಆದರೆ, ಇವರೇ ಪಾರ್ಟಿಸಿಪೆಂಟ್ ಎಂದು ಓಡಾಡುತ್ತಿರುವ ವಿಡಿಯೋದಲ್ಲಿ ತಾನೂ ವಿವಿಧ ಲೈಂಗಿಕ ಆಟಗಳು ನಡೆಯುತ್ತವೆ. ಇದೆಲ್ಲ ವಿಡಿಯೋ ಆಗಿದ್ದಾದರೂ ಹೇಗೆ? ಒಂದೋ ದೌರ್ಜನ್ಯ ನಡೆಸಿದಾತನ ಕಡೆಯವರು ಆತನ ದೌರ್ಬಲ್ಯ ಬಳಸಿಕೊಂಡು ಈ ವಿಡಿಯೋ ಮಾಡಿರಬೇಕು.. ಇಲ್ಲವೇ ಆ ಪೀಡನೆಗೆ ಒಳಗಾದ ಹುಡುಗರು ಇದನ್ನು ಪ್ಲಾನ್ ಮಾಡಿ ವಿಡಿಯೋ ಮಾಡಿರಬೇಕು…. ಇವೆಲ್ಲ ಬರೀ ಗೆಸ್ ಅಲ್ಲ…

ಇದಕ್ಕೆ ರಾಜ್ಯ ಬಿಜೆಪಿಯ ಪ್ರತಿಕ್ರಿಯೆ ಏನು? ಅದಕ್ಕೆ ಸಾಂಕೇತಿಕ ಎಂಬಂತೆ ಸದನದಲ್ಲಿ ತರಾತುರಿಯಲ್ಲಿ ಒಂದೇ ಒಂದು ಸಾಲಿನ ಹೇಳಿಕೆ ಪಟ್ಟಂತ ಹೊರಬಿತ್ತು: ‘ರೀ, ಶಿವಲಿಂಗೇಗೌಡರೇ, ಇದರಲ್ಲಿ ಲಿಂಬಾವಳಿ ಅವರ ತಪ್ಪು ಏನೂ ಇಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ….”

ಶಿವಲಿಂಗೇಗೌಡರೇನೂ ಅರವಿಂದ ಲಿಂಬಾವಳಿಯಂತಹ ‘ಸಭ್ಯಸ್ಥ’ ಜನಪ್ರತಿನಿಧಿ ಇಂತಹ ಹಲ್ಕಟ್ ಕೆಲಸ ಮಾಡಿದ್ದಾರೆ ಎಂದು ಹೇಳಿರಲೇ ಇಲ್ಲ! ಎ.ಟಿ.ರಾಮಸ್ವಾಮಿ ಅವರು ದ್ರೌಪದಿ ವಸ್ತ್ರಾಪಹರಣ ನಡೆವಾಗ ಸುಮ್ಮನಿದ್ದ ‘ಮಹಾಮಹಿಮರ’ ಬಗ್ಗೆ ಪ್ರಸ್ತಾಪಿಸಿದಾಗ, ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡರು, ‘ಸಭಾಧ್ಯಕ್ಷರೇ, ಈ ವಸ್ತ್ರಾಪಹರಣ ಅಂದಕೂಡಲೇ ನೆನಪಾಯ್ತು. ಇಲ್ಲಿ ಯಾವುಯಾವುದೋ ವಿಡಿಯೋ ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಶಾಸಕರ ಮಾನ ಹರಾಜು ಹಾಕ್ತಿದಾರೆ. ನಮ್ಮ ಲಿಂಬಾವಳಿಯವರ ಸೆಕ್ಸ್ ವಿಡಿಯೋ ನೋಡಿದ ಮೇಲೆ ನಮಗೆ ಭಯವಾಗಿದೆ ಸರ್… ಇದು ನಾಳೆ ನಮಗೂ ಬರಬಹುದು’ ಎಂದು ಪ್ರಶ್ನೆ ಎತ್ತಿದರಷ್ಟೇ.

ಆಗೇನಾಯ್ತು? ಮಾತಾಡುವುದಕ್ಕೆ, ಕೂಗುವುದಕ್ಕೆ, ಪ್ರತಿಭಟನೆ ಮಾಡುವುದಕ್ಕೆ, ಅನೈತಿಕ ಹಾಗೂ ಭ್ರಷ್ಟ ಶಾಸಕರನ್ನು ರಕ್ಷಿಸಲಿಕ್ಕೂ ದೊಡ್ಡ ಬಾಯಿ ತೆಗೆದು ರಂಪಾಟ ಎಬ್ಬಿಸುತ್ತಿದ್ದ ಯಡಿಯೂರಪ್ಪನವರು 10-12 ದಿನದಿಂದ ಎಂತಹ ಪ್ರಚೋದನೆ ಇದ್ದರೂ ಉದ್ವೇಗಗೊಳ್ಳದೇ ಇದ್ದವರು, ಥಟಕ್ಕಂತ ಎದ್ದು ನಿಂತು, ‘ಶಿವಲಿಂಗೇಗೌಡರೇ ಈ ವಿಷಯ ಇಲ್ಲಿಗೇ ನಿಲ್ಲಿಸಿಬಿಡಿ. ಲಿಂಬಾವಳಿ ತಪ್ಪೇನೂ ಇಲ್ಲ’ ಎಂದು ಫರ್ಮಾನು ಹೊರಿಸುವವರಂತೆ ಸಿಂಗಲ್ ಲೈನ್ ‘ರೂಲಿಂಗ್’ ಕೊಟ್ಟುಬಿಟ್ಟರು.

ನಂತರ ಏನಾಯ್ತು? ಝೀರೋ ಟ್ರಾಫಿಕ್ ಬಗ್ಗೆ ತಲೆ ಕೆಡಿಸಿಕೊಂಡು ಕೆಂಡಮಂಡಲ ಆಗುವ ಸ್ಪೀಕರ್ ಸಾಹೇಬರು ಹೇಳಿದರು: ‘ಲಿಂಬಾವಳಿ ಅವರೇ ನಿಮ್ಮ ದು:ಖ ನಮಗೆ ಅರ್ಥವಾಗುತ್ತದೆ… ಕೂಲ್ ಡೌನ್’ ಅನ್ನುತ್ತಾರೆ.
ಈಗಲೂ ಕಾಲ ಮಿಂಚಿಲ್ಲ, ಈ ಇಡೀ ಪ್ರಕರಣದ ಬಗ್ಗೆ ತನಿಖೆಗೆ ಏಕೆ ಆದೇಶಿಸಬಾರದು? ‘ಅಮಾಯಕ’ ಲಿಂಬಾವಳಿಯವರನ್ನು ಕಾಪಾಡಲು ಇದೊಂದೇ ಮಾರ್ಗ ಅಲ್ಲವೇ?

ದ್ವಂದ್ವ, ಚಟ, ಹಲ್ಕಟ್ಟತನ, ಭೋಳೆತನ…
ದೇಶ, ಧರ್ಮ, ಸಂಸ್ಕೃತಿ ಎಂದೆಲ್ಲ ಹಾರಾಡುತ್ತಲೇ ಈ ನೆಲದ ಸಹಜ ಮತ್ತು ನೈಸರ್ಗಿಕ ಲೈಂಗಿಕ ಕ್ರಿಯೆಗಳನ್ನೆಲ್ಲ ‘ಪಾಶ್ಚಿಮಾತ್ಯ’ ಕಲ್ಚರ್ ಎಂದೆಲ್ಲ ಲೇವಡಿ ಮಾಡುತ್ತ ಬಂದಿರುವ ಆರೆಸ್ಸೆಸ್ ಎಂಬ ಸಂಘಟನೆ ಮತ್ತು ಅದರ ರಾಜಕೀಯ ಮುಖ ಬಿಜೆಪಿಗೆ ಆರ್ಟಿಕಲ್ 377 (ಸಲಿಂಗಕಾಮ ಅಪರಾಧ, ಅಸಹಜ ಎನ್ನುವ ಬ್ರಿಟಿಷ್ ಕಾಯ್ದೆ) ಅನ್ನು ರದ್ದುಪಡಿಸಿದಾಗ ದ್ವಂದ್ವ ನೀತಿ ಪ್ರದರ್ಶನ ಮಾಡಿತ್ತು.

ಆಗ ಸಚಿವರಾಗಿದ್ದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಈ ಕುರಿತು ಆಕ್ಷೇಪ ವ್ಯಕ್ತ ಮಾಡಿದ್ದರು. ಮುಂದೆ ಸುಪ್ರಿಂಕೋರ್ಟ್ ಈ ಬಗ್ಗೆ ಕೇಂದ್ರದ ಸಲಹೆ ಕೇಳಿದಾಗ, ‘ಸಲಿಂಗಕಾಮ ಇತ್ಯಾದಿ ಎಲ್ಲ ನಮ್ಮ ದೇಶದ ಧರ್ಮಕ್ಕೆ, ಸಂಸ್ಕೃತಿಗೆ ವಿರುದ್ಧವಾದುದು…’ ಎಂದು ಅಫಿಡವಿಟ್ ಸಲ್ಲಿಸಿ ಉಗಿಸಿಕೊಂಡಿತ್ತು.

ಈಗಲೂ ಈ ಧರ್ಮ ರಕ್ಷಕರ ನಿಲುವು ಏನು ಗೊತ್ತೇ: ಸಲಿಂಗ ಕಾಮ ಓಕೆ.. ಆದರೆ ಅದಕ್ಕೆ ಸಮಾಜದ ಮಾನ್ಯತೆ ಬೇಡ… ಈ ಕಾರಣಕ್ಕಾಗಿಯೇ ಆರೆಸ್ಸೆಸ್‍ನಲ್ಲಿ ಹೊಸಬರನ್ನು ತಮ್ಮ ತೀಟೆಗೆ ಅವಿವಾಹಿತ ಮಧ್ಯ ವಯಸ್ಕರು ಮತ್ತು ಮುದುಕರು ಬಳಸಿಕೊಳ್ಳುತ್ತಿದ್ದಾರೆಂಬ ಅನುಮಾನ ಬರಲು ಎಲ್ಲಾ ಕಾರಣಗಳಿವೆ. ಈ ಕಾರಣಕ್ಕೇ ಕಳೆದ ತಿಂಗಳು, ಇಂತಹ ಅತ್ಯಾಚಾರಕ್ಕೆ ಒಳಗಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡೆನೇ ಎಂಬ ಪ್ರಶ್ನೆಯೂ ಸಾರ್ವಜನಿಕವಾಗಿ ಎದ್ದಿದೆ.

ಇದು ತನಿಖೆಯ ಕಡೆಗೆ ಏಕೆ ಸಾಗುವುದಿಲ್ಲ?

ಯಾರಿಗೂ ಅನ್ಯಾಯ ಆಗಬಾರದು ಎಂದು ಹೇಳುತ್ತಲೇ ಇರುವ ಸ್ಪೀಕರ್ ಅವರು ಆತುರಕ್ಕೆ ಒಳಪಟ್ಟು ವ್ಯಕ್ತಪಡಿಸುವ ಸಿಟ್ಟು ಅಥವಾ ಭಾವೋದ್ವೇಗಕ್ಕೆ ಒಳಗಾಗಿ ತೋರಿಸುವ ಅನುಕಂಪವನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕಾಗಿದೆ.

ಝೀರೋ ಟ್ರಾಫಿಕ್ ಬಗ್ಗೆ ತಲೆ ಕೆಡಿಸಿಕೊಂಡ ಸ್ಪೀಕರ್ ಸಾಹೇಬರು ಗೃಹ ಸಚಿವರ ಮೇಲೆ ಎರ್ರಾಬಿರ್ರಿ ಕೂಗಾಡುತ್ತಾರೆ. ಆದರೆ ಅವರೇ ಹತ್ತು ನಿಮಿಷದವರೆಗೆ ಮುಂದೂಡಿದ ಕಲಾಪ ಒಂದೂವರೆ-ಎರಡು ತಾಸು ನಂತರ ಆರಂಭವಾದಾಗ, ‘ಝೀರೊ ಟ್ರಾಫಿಕ್ ಬಗ್ಗೆ ನಾವು ತಪ್ಪಾಗಿ ಭಾವಿಸಿದ್ವಿ. ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಎರಡು ವಿಡಿಯೋ ಕೊಟ್ಟಿದ್ದಾರೆ. ಅದರಲ್ಲಿ ಅತೃಪ್ತ ಶಾಸಕರನ್ನು ಕರೆತಂದ ಬಸ್ ನಾಲ್ಕು ಸಿಗ್ನಲ್‍ಗಳಲ್ಲಿ ನಿಂತಿದೆ… ಅಲ್ಲಿ ಯಾರೂ ಝೀರೋ ಟ್ರಾಫಿಕ್ ಮಾಡಿ ಅಂತ ಆದೇಶ ಮಾಡಿಲ್ಲ. ಈ ಮಾಧ್ಯಮ ನಂಬಿಕೊಂಡು ರಾಜ್ಯಪಾಲರೇ ಅಂತಹ ಆದೇಶ ಮಾಡಿದ್ದಾರೆ ಎಂಬ ಸಂಗತಿ ಹಬ್ಬಿದೆ. ನಾವೂ ಅದನ್ನ ನಂಬಿಬಿಟ್ಟೆವು..’ ಎನ್ನುವ ಸ್ಪೀಕರರು, ‘ಸಾರಿ ಗೃಹ ಸಚಿವರೇ’ ಎಂಬ ಮಾತು ಹೇಳಬಹುದಿತ್ತಲ್ಲ? ಝೀರೋ ಟ್ರಾಫಿಕ್ ವಿಷಯ ಬಂದಾಗ, ಬಡವರು, ರೋಗಿಗಳು ಅರ್ಜೆಂಟಿನಲ್ಲಿ ಇರುವಾಗ ಇಂತಹ ವ್ಯವಸ್ಥೆ ಕಲ್ಪಿಸುತ್ತೀರಾ ಎನ್ನುವ ಸ್ಪೀಕರ್ ಸಾಹೇಬರು, ಅದೇ ಸೆಕ್ಸ್ ವಿಡಿಯೋ ಬಗ್ಗೆ ಪ್ರಸ್ತಾಪವಾದಾಗ ಅಲ್ಲಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಅನುಕಂಪದ ಮಾತಾಡಿದರೇ ಹೊರತು, ಚರ್ಚೆಯನ್ನು ತನಿಖೆಯ ಕಡೆಗೆ ತೆಗೆದುಕೊಂಡು ಹೋಗಲಿಲ್ಲ.

ಸ್ಪೀಕರ್ ಇಂತಹ ತನಿಖೆಗೆ ಆದೇಶಿಸುವ ಅಧಿಕಾರ ಹೊಂದಿಲ್ಲದಿರಬಹುದು. ಆದರೆ, ಆರೋಪಿ ಶಾಸಕ ವಿಪಕ್ಷ ಮತ್ತು ತಮ್ಮದೇ ಪಕ್ಷದ ಸದಸ್ಯರು ಈ ಸಂಚು ಮಾಡಿದ್ದಾರೆ ಎಂದು ಆರೋಪಿಸಿದಾಗಲೂ ಇವರೆಲ್ಲ ಆ ವಿಷಯವನ್ನು ಅಲ್ಲಿಗೇ ಮುಗಿಸಿಬಿಟ್ಟರಲ್ಲ?

ಸಂತ್ರಸ್ತ ಎನ್ನಲಾದ ಯುವಕನೊಬ್ಬ ಬಿಜೆಪಿ ನಾಯಕ ಈಶ್ವರಪ್ಪ ಅವರೊಂದಿಗೆ ಮಾತಾಡಿದ ಆಡಿಯೋ 2018ರ ವಿಧಾನಸಭಾ ಚುನಾವಣೆಯಲ್ಲೇ ಬಹಿರಂಗವಾಗಿತ್ತು. ಅದರಲ್ಲಿ ಆತ ನೇರವಾಗಿ ಏಕವಚನದಲ್ಲಿ ಆರೋಪ ಮಾಡುತ್ತ ಈಶ್ವರಪ್ಪರಿಗೆ ಹೇಳುತ್ತಾನೆ: ಸರ್ ಅವ್ನು ಲಿಂಬಾವಳಿ ಇದ್ದಾನಲ್ಲ ಸರ್ ಅವ್ನಿಗೆ ಒಮ್ಮೇಲೆ ಐದಾರು ಹುಡುಗರು ಬೇಕು… ಅವ್ನು ಹುಕ್ಕಾ ಹೊಡೆಯುತ್ತ ಎಣ್ಣೆ ಹೊಡೆಯುತ್ತ ಎಂಜಾಯ್ ಮಾಡ್ತಾನೆ… ಅವನ ಏಜೆಂಟ್ ಒಬ್ಬ ನಮಗೆ ಕೆಲಸ ಕೊಡಿಸುವುದಾಗಿ ಅಲ್ಲಿಗೆ ಕರೆದೊಯ್ದ ಸರ್… ಮೋಸ ಹೋದ ನಾವು ಪ್ಲಾನ್ ಮಾಡಿ ಈ ವಿಡಿಯೋ ಮಾಡಿದ್ವಿ… ಆರ್.ಅಶೋಕ್, ತೇಜಸ್ವಿನಿ ಅವರಿಗೆ ಈ ದುರಾಚಾರದ ಬಗ್ಗೆ ಹೇಳಿಕೊಂಡಿವಿ ….. ಈಗ ನಿಮ್ಮ ಮುಂದೆ ಇದನ್ನ ಹೇಳ್ತಾ ಇದ್ದೀವಿ…’ ಎನ್ನುತ್ತಾನೆ… ತಮ್ಮ ಪಕ್ಷದವರೇ ಇಬ್ಬರು ಈ ಸಂಚು ಮಾಡಿರಬಹುದು ಎಂದು ಸೋಮವಾರ (ಡೆಕ್ಕನ್ ಹೆರಾಲ್ಡ್ ವರದಿ) ಕೆಲವು ವರದಿಗಾರರ ಮುಂದೆ ಹೇಳಿದ್ದಾರೆ. ಹಾಗಾದರೆ ಅವರು ಅಶೋಕ್ ಮತ್ತು ಈಶ್ವರಪ್ಪನವರೇ ಇರಬೇಕಲ್ಲ? ಅಥವಾ ತೇಜಸ್ವಿನಿಯೂ ಇರಬಹುದಾ ಎಂಬ ಸಹಜ ಪ್ರಶ್ನೆ ಏಳುತ್ತವೆ ಅಷ್ಟೇ…

‘ಮಂತ್ರಿ ಇದ್ದಾಗಲೇ ಇಂತಹ ಹಲ್ಕಾ ಕೆಲಸ ಮಾಡ್ತಿದ್ದ…’

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಕ್ಷತಾ ಕೆ.ಪಿ., ಹಾವೇರಿ, ಈ ವಿಡಿಯೋ ಕುರಿತಾಗಿ ಮಾತಾಡಿದ್ದಾರೆ:
‘ಛೀ, ಅವ್ನು ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ (ಆರೋಗ್ಯ ಸಚಿವ) ಇದ್ದಾಗ್ಲೇ ಅವನ ಈ ಹಲ್ಕಟ್ ವಿಕೃತಿ ಬಗ್ಗೆ ನಮಗೆ ಗೊತ್ತಿತ್ತು. ಆಗ ಇದರ ವಿರುದ್ಧ ಧ್ವನಿ ಎತ್ತಲು ಸೂಕ್ತ ಸ್ಪೇಸ್ ಇರಲಿಲ್ಲ. ನಾವು ಹೇಳಿದರೆ ಸಮಾಜ ಮತ್ತು ಮೀಡಿಯಾ ನಮ್ಮನ್ನೇ ಗೇಲಿ ಮಾಡುತ್ತಿತ್ತೇನೋ? …

ಈಗ ವೈರಲ್ ಆಗಿರೋ ಲಿಂಬಾವಳಿಯ ವಿಡಿಯೋ ನಾನು ನೋಡಿದ್ದೇನೆ. ಸಲಿಂಗಕಾಮ ಎಂಬ ಪದಕ್ಕೆ ಅಲ್ಲಿ ಆಸ್ಪದವೇ ಇಲ್ಲ. ಅದು ವಿಕೃತ ಕಾಮ… ಹಣ, ಅಧಿಕಾರ ಮತ್ತು ಧರ್ಮದ ಅಮಲುಗಳ ಶಕ್ತಿ ಇರುವ ಕಾರಣಕ್ಕಾಗಿ ಈ ಮನುಷ್ಯ ಬಹು ಹಿಂದಿನಿಂದಲೂ ಬೆಂಗಳೂರಿಗೆ ಕೆಲಸ ಅರಸಿ ಬರುವ ಯುವಕರನ್ನು ಈ ರೀತಿ ಯಾಮಾರಿಸುತ್ತಲೇ ಬಂದಿದ್ದಾನೆ…. ಅದರ ವಿವರ ನಮಗೆಲ್ಲ ಗೊತ್ತಿದೆ… ಅವನದು ವಿಕೃತ ಕಾಮವಷ್ಟೇ…..

ಸೆಕ್ಷನ್ 377ಅನ್ನು ಸುಪ್ರಿಂಕೋರ್ಟ್ ತೆಗೆದು ಹಾಕಿದಾಗ, ಹಲವಾರು ಆರೆಸ್ಸೆಸ್ ಜನ ಸಂಭ್ರಮಪಟ್ಟರಂತೆ! ಆದರೆ ಅದರ ಮುಖಂಡರ ಪ್ರಕಾರ ಸಲಿಂಗಕಾಮಕ್ಕೆ ಮಾನ್ಯತೆ ಕೊಡಬಾರದಂತೆ! ಸಲಿಂಗಿಗಳು ಮದುವೆ ಆಗಬಾರದಂತೆ! ಅದು ಈ ದೇಶದ ಸಂಸ್ಕೃತಿಗೆ. ಧರ್ಮಕ್ಕೆ ವಿರುದ್ಧವಂತೆ!….

ರೀ, ಯಾವ ಧರ್ಮ, ಸಂಸ್ಕೃತಿ ಬಗ್ಗೆ ಈ ವಿಕೃತರೆಲ್ಲ ಮಾತಾಡ್ತಾ ಇದ್ದಾರೀ? ಅವರ ಸಂಘಟನೆಯಲ್ಲಿ ಅವಿವಾಹಿತ ಸದಸ್ಯರೆಲ್ಲ ಅಮಾಯಕ ಹೊಸಬರನ್ನು ತಮ್ಮ ಲೈಂಗಿಕ ತೀಟೆಗೆ (ಹಸಿವಿಗೆ) ಬಳಸಿಕೊಳ್ಳುತ್ತಾರೆ, ಆ ಕಾರಣಕ್ಕೇ ಅವರು 377 ರದ್ದಾಗ ಪಟಾಕಿ ಹೊಡೆದು ಸಂಭ್ರಮ ಪಟ್ಟರಷ್ಟೇ. ಆದರೆ, ಸಲಿಂಗ ಕಾಮ ಎನ್ನುವುದು ಕೇವಲ ಸಂಭೋಗದ ವಿಷಯವಲ್ಲ, ಅದು ವ್ಯಕ್ತಿಗಳ ನಡುವಿನ ಒಲವು, ನಂಬಿಕೆ, ಪ್ರೀತಿ ಮತ್ತು ವಿಶ್ವಾಸಗಳ ದ್ಯೋತಕ ಎಂಬುದು ಈ ಅಡ್ನಾಡಿಗಳಿಗೆ (ದ್ವಂದ್ವ ನಿಲುವಿನವರಿಗೆ) ಅರ್ಥ ಆಗಲ್ಲ….. ಲಿಂಬಾವಳಿ ಅವರಿಗೆ ಸಂಬಂಧಿಸಿದ ಸೆಕ್ಸ್ ವಿಡಿಯೋ ಬಗ್ಗೆ ತನಿಖೆಯಾಗಲೇ ಬೇಕು… ಅದರಿಂದ ಇನ್ನಷ್ಟು ಇಂತಹ ಲೈಂಗಿಕ ಅತ್ಯಾಚಾರಗಳು ಬಯಲಾಗುತ್ತವೆ… ನಕಲಿ ದೇಶಭಕ್ತರ ಮುಖವಾಡಗಳು ಕಳಚುತ್ತವೆ…..
ಜೈ ಭೀಮ್, ಜೈ ಸಂವಿಧಾನ, ಲಾಲ್ ಸಲಾಂ, ನಾನೂ ಗೌರಿ……’

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

LEAVE A REPLY

Please enter your comment!
Please enter your name here