ಆಕ್ಷೇಪಾರ್ಹ ಕಾರ್ಯಕ್ರಮ ನಡೆಸಿದ ಅರ್ನಾಬ್: ರಿಪಬ್ಲಿಕ್ ಟಿವಿಗೆ 20,000 ಪೌಂಡ್ ದಂಡ ವಿಧಿಸಿದ ಬ್ರಿಟನ್!

ರಿಪಬ್ಲಿಕ್ ಟಿವಿಯು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಮತ್ತು ದ್ವೇಷ ಹರಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ ಎಂದು ಬ್ರಿಟನ್‌ನ ಸಂವಹನ ನಿಯಂತ್ರಣ ಕಚೇರಿಯು ಅರ್ನಾಬ್‌ ಗೋಸ್ವಾಮಿಗೆ 20,000 ಪೌಂಡ್‌ ದಂಡ ವಿಧಿಸಿದೆ.

ಆಕ್ರಮಣಕಾರಿ, ಆಕ್ಷೇಪಾರ್ಹ, ಒಂದು ಗುಂಪು ಅಥವಾ ಸಮುದಾಯದ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡಿದ ಪ್ರಕರಣದಡಿ ಈ ದಂಡವನ್ನು ವಿಧಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಇದನ್ನೂ ಓದಿ: ಅರ್ನಾಬ್, ಕಂಗನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಶಿವಸೇನೆ ಶಾಸಕನ ಮನೆ ಮೇಲೆ ಇ.ಡಿ ದಾಳಿ!

2019 ಸೆಪ್ಟಂಬರ್ 6 ರಂದು “ಪೂಚ್ ತಾ ಹೈ ಭಾರತ್” ಎನ್ನುವ ಕಾರ್ಯಕ್ರಮದಲ್ಲಿ ಅರ್ನಾಬ್‌ ಗೋಸ್ವಾಮಿ ಮತ್ತು ಅಂದಿನ ಚರ್ಚೆಯ ಪ್ಯಾನೆಲ್‌ನಲ್ಲಿದ್ದವರು ಆಕ್ಷೇಪಾರ್ಹ ಚರ್ಚೆಯನ್ನು ನಡೆಸಿದ್ದಾರೆ ಎಂದು ವರದಿಯು ತಿಳಿಸಿದೆ.

ಚಂದ್ರಯಾನ-2ರ ಕುರಿತು ಕಾರ್ಯಕ್ರಮ ನಡೆಸುವ ವೇಳೆ ಪಾಕಿಸ್ತಾನ ಕುರಿತಂತೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆಂದು ದಂಡ ವಿಧಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅರ್ನಾಬ್‌ ಗೋಸ್ವಾಮಿ, “ಅವರ ವಿಜ್ಞಾನಿಗಳು, ಅವರ ಡಾಕ್ಟರ್‌ಗಳು, ಅವರ ನಾಯಕರು, ಅವರ ರಾಜಕೀಯ ಮುಖಂಡರು ಎಲ್ಲರೂ ಭಯೋತ್ಪಾದಕರು. ಅವರ ಕ್ರೀಡಾಪಟುಗಳು ಕೂಡಾ ಭಯೋತ್ಪಾದಕರು. ಪಾಕಿಸ್ತಾನದಲ್ಲಿರುವ ಪ್ರತಿಯೊಂದು ಮಕ್ಕಳು ಕೂಡಾ ಭಯೋತ್ಪಾದಕರು” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಆತನ ಚಾನೆಲ್ ನೋಡುವುದೇ ಇಲ್ಲ: ಅರ್ನಾಬ್‌ಗೆ ಜಾಮೀನು ನೀಡಿದ ನ್ಯಾಯಮೂರ್ತಿ ಹೇಳಿಕೆ!

ಅಲ್ಲದೇ ಪ್ಯಾನೆಲ್‌ನಲ್ಲಿದ್ದ ಇತರರು ಕೂಡಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಕಾರಣದಿಂದಾಗಿ ರಿಪಬ್ಲಿಕ್ ಟಿವಿ ಮುಖ್ಯಸ್ಥರ ವಿರುದ್ಧ ಬ್ರಿಟನ್‌ನ ಸಂವಹನ ನಿಯಂತ್ರಣ ಕಚೇರಿಯು 20,000 ಪೌಂಡ್ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ. ಇದು ಭಾರತದ ಕರೆನ್ಸಿಯಲ್ಲಿ ಸುಮಾರು 19 ಲಕ್ಷವಾಗುತ್ತದೆ.

ಭಾರತದಲ್ಲಿಯೂ ಸಹ ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಗೋಸ್ವಾಮಿಯ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವೊಂದರಲ್ಲಿ ಇತ್ತೀಚೆಗೆ ಬಂಧನಕ್ಕೂ ಒಳಗಾಗಿದ್ದರು.


ಇದನ್ನೂ ಓದಿ: ನಾನೊಬ್ಬ ಪತ್ರಕರ್ತೆ, ಹಾಗಾಗಿ ಅರ್ನಾಬ್ ಪರ ನಿಲ್ಲುವುದಿಲ್ಲ!- ಅರ್ಫಾ ಖಾನಮ್ ಶೇರ್ವಾನಿ

LEAVE A REPLY

Please enter your comment!
Please enter your name here