Homeಮುಖಪುಟಸಂಪುಟ ವಿಸ್ತರಣೆ ವಿಳಂಬ :ಪ್ರಕಟಗೊಳ್ಳದ ಸರ್ಕಾರದ ಹೊಸ ಡೈರಿಗಳು

ಸಂಪುಟ ವಿಸ್ತರಣೆ ವಿಳಂಬ :ಪ್ರಕಟಗೊಳ್ಳದ ಸರ್ಕಾರದ ಹೊಸ ಡೈರಿಗಳು

- Advertisement -
- Advertisement -

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬಂದಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ವಾರ, ತಿಂಗಳು, ಅರ್ಧ ವರ್ಷ ಕಳೆದರೂ ಅದ್ಯಾಕೋ ಹೊಂದಾಣಿಕೆಯಾಗುತ್ತಿಲ್ಲ. ಇದೇ ಕಾರಣಕ್ಕೆ ಹೊಸ ವರ್ಷಕ್ಕೆ ಮುದ್ರಣಗೊಳ್ಳಬೇಕಿದ್ದ ಡೈರಿಗಳು ಇನ್ನೂ ಪ್ರಕಟವಾಗಿಲ್ಲ. ಸಂಪುಟ ವಿಸ್ತರಣೆಯಾಗುತ್ತಿಲ್ಲ. ಡೈರಿಗಳ ಮುದ್ರಣಕ್ಕೂ ಯೋಗ ಕೂಡಿ ಬಂದಿಲ್ಲ.

ಪ್ರತಿ ವರ್ಷ ಜನವರಿ ಮೊದಲ ವಾರದಲ್ಲೇ ಸರ್ಕಾರ ಡೈರಿಗಳನ್ನು ಮುದ್ರಣ ಮಾಡಿ ಹಂಚಿಕೆ ಮಾಡುತ್ತಿತ್ತು. ಎಲ್ಲಾ ಅಧಿಕಾರಿಗಳ ಕೈಯಲ್ಲಿ ಹೊಸ ಡೈರಿಗಳು ರಾರಾಜಿಸುತ್ತಿದ್ದವು. ಹೊಸ ಡೈರಿಗಳಲ್ಲೇ ಕಾರ್ಯಕ್ರಮದ ದಿನಾಂಕ, ಸ್ಥಳ ಮೊದಲಾದುವುಗಳನ್ನು ಗುರುತು ಹಾಕಿಕೊಳ್ಳುತ್ತಿದ್ದರು. ವಿವಿಧ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸರ್ಕಾರಿ ನೌಕರರು ಹೊಸ ಡೈರಿಗಳನ್ನು ಪಡೆದು ಖುಷಿಯಾಗಿರುತ್ತಿದ್ದರು.

ಆದರೆ ಈ ಬಾರಿ ಹೊಸ ವರ್ಷದ ಆರಂಭದಲ್ಲೇ ಮುದ್ರಣಗೊಳ್ಳಬೇಕಿದ್ದ ಡೈರಿಗಳು ಇನ್ನೂ ಪ್ರಕಟಗೊಂಡಿಲ್ಲ. ಏಕೆಂದರೆ ಆ ಡೈರಿಗಳಲ್ಲಿ ಸಚಿವರ ಕುರಿತು ಸಮಗ್ರ ಮಾಹಿತಿ ಇರಬೇಕಿದೆ. ಸಂಪುಟ ವಿಸ್ತರಣೆ ಆಗದೇ ಸಚಿವರ ಹೆಸರುಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಸಚಿವ ಸಂಪುಟ ವಿಸ್ತರಣೆ ಬೇಗ ಮುಗಿದುಹೋಗುತ್ತದೆ ಎಂದು ನಂಬಿದ್ದ ಮುಖ್ಯಮಂತ್ರಿಗಳಿಗೆ ಇದೀಗ ಬೇಸರ ತಂದಿರುವುದಂತೂ ಸತ್ಯ. ಜನವರಿ ತಿಂಗಳು ಮುಗಿದು ಫೆಬ್ರವರಿ ಮೊದಲ ವಾರವಾದರೂ ಡೈರಿ ಪ್ರಕಟ ಗೊಳ್ಳದೇ ಇರಲು ಸಚಿವ ಸಂಪುಟ ವಿಸ್ತರಣೆಯ ವಿಳಂಬವೇ ಕಾರಣ ಎಂದು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಾರದೆ ಡೈರಿಯೂ ಪ್ರಕಟಗೊಳ್ಳುವುದಿಲ್ಲ ಎಂಬ ಕುಹಕದ ಮಾತುಗಳು ಕೇಳಿಬರತೊಡಗಿವೆ. ಡೈರಿ ಮುದ್ರಣಕ್ಕೆ ಸಿದ್ದ ಮಾಡಿಟ್ಟುಕೊಂಡಿದ್ದರೂ ಮುಖ್ಯಮಂತ್ರಿಗಳ ಗ್ರೀನ್ ಸಿಗ್ನಲ್ ಸಿಗದೆ ಮುದ್ರಕರು ಆದೇಶಕ್ಕಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗುತ್ತಿದೆ.

ಈಗ ಸಚಿವ ಸಂಪುಟ ಪೂರ್ಣ ಗೊಂಡಿಲ್ಲ. ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಫೆಬ್ರವರಿ 6ರಂದು ಅವಕಾಶ ನೀಡಿದ್ದು ಅಂದು ವಿಸ್ತರಣೆಯಾಗುವುದೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಒಂದೊಮ್ಮೆ ಫೆಬ್ರವರಿ 5ರಂದು ಸಂಪುಟ ವಿಸ್ತರಣೆಯಾದರೆ ಮುಂದಿನ ವಾರದಲ್ಲಿ ಅಧಿಕಾರಿಗಳಿಗೆ ಡೈರಿಗಳು ಸಿಗಬಹುದು. ಇಲ್ಲವಾದರೆ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...